ಭಾರತೀಯ ಜೀವ ವಿಮಾ ನಿಗಮದ ಬಹು ನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೇ 4 ರಿಂದ ಆರಂಭ ಆಗಲಿದೆ. ಕಳೆದ ತಿಂಗಳು, ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ಯು ಎಲ್‌ಐಸಿಯ ಆರಂಭಿಕ ಸಾರ್ವಜನಿಕ ಕೊಡುಗೆ ಪ್ರಸ್ತಾಪವನ್ನು ಅನುಮೋದಿಸಿತು.
ಕಂಪನಿಯು ಮಾರುಕಟ್ಟೆ ನಿಯಂತ್ರಕಕ್ಕೆ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ ಅನ್ನು ಸಲ್ಲಿಸಿದೆ. ಈ ಎಲ್ಐಸಿ ಐಪಿಒ ಮೇ 9 ರಂದು ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ. ಪರಿಷ್ಕೃತ ಡಿಆರ್‌ಎಚ್‌ಪಿಯನ್ನು ಕಳೆದ ವಾರ ಮಾರುಕಟ್ಟೆ ನಿಯಂತ್ರಕರಿಗೆ ಸಲ್ಲಿಸಲಾಗಿದೆ.
ಈ ವಿಮಾ ಸಂಸ್ಥೆಯಲ್ಲಿ ಸಂಪೂರ್ಣ ಪಾಲುದಾರಿಕೆಯನ್ನು ಹೊಂದಿರುವ ಸರ್ಕಾರವು ಸುಮಾರು 22 ಕೋಟಿ ಷೇರುಗಳನ್ನು ಮಾರಾಟ ಮಾಡುವ ಮೂಲಕ 21,000 ಕೋಟಿ ರೂಪಾಯಿಗಳನ್ನು ಸಂಗ್ರಹಿಸಲು ಯೋಜಿಸಿದೆ. ಅಂದರೆ ಸರ್ಕಾರವು ಎಲ್‌ಐಸಿಯ ಸುಮಾರು ಶೇಕಡ 3.5 ಪಾಲನ್ನು ಮಾರಾಟ ಮಾಡಲು ಮುಂದಾಗಿದೆ. ಸರ್ಕಾರ ಖಾಸಗೀಕರಣಕ್ಕೆ ದಾರಿ ಮಾಡಿಕೊಡುತ್ತಿದೆ ಎಂಬ ವಿರೋಧಗಳ ನಡುವೆಯೂ ಈಗ ಎಲ್‌ಐಸಿ ಐಪಿಒಗೆ ಸಜ್ಜಾಗಿದೆ. ಪ್ರಮುಖ ಅಪ್‌ಡೇಟ್ಸ್ ಇಲ್ಲಿದೆ ಮುಂದೆ ಓದಿ..

ಎಲ್ಐಸಿ ಐಪಿಒ: ಪ್ರಮುಖ ಅಪ್‌ಡೇಟ್ಸ್
* ಎಲ್‌ಐಸಿಯ ಐಪಿಒ 4 ಮೇ ನಿಂದ 9 ಮೇ ವರೆಗೆ ಇರಲಿದೆ
* ವಿಮಾ ಸಂಸ್ಥೆಯ ಸಂಪೂರ್ಣ ಪಾಲುದಾರಿಕೆಯನ್ನು ಹೊಂದಿರುವ ಸರ್ಕಾರವು 3.5 ಶೇಕಡಾವನ್ನು ಮಾರಾಟ ಮಾಡಲು ಯೋಜಿಸಿದೆ.
* ಮಾರುಕಟ್ಟೆ ಸ್ಥಿತಿಯ ಪರಿಶೀಲನೆ ನಡೆಸಿ ಎಲ್‌ಐಸಿ ಐಪಿಒ ಗಾತ್ರವನ್ನು 5 ಶೇಕಡಾದಿಂದ 3.5 ಶೇಕಡಾಕ್ಕೆ ಕಡಿತಗೊಳಿಸಿದೆ. ಎಲ್‌ಐಸಿಯ ಐಪಿಒ ಗಾತ್ರವನ್ನು ಡಿಆರ್‌ಎಚ್‌ಪಿ ಪ್ರಸ್ತಾಪಿಸಿರುವ ಶೇ.5ರಿಂದ ಶೇ.3.5ಕ್ಕೆ ಇಳಿಸುವ ಪ್ರಸ್ತಾವನೆಯನ್ನು ಶನಿವಾರ ನಡೆದ ಮಂಡಳಿಯ ಸಭೆಯಲ್ಲಿ ಮಂಡಿಸಿ ಅಂಗೀಕರಿಸಲಾಯಿತು.
* ಪಾಲಿಸಿದಾರರು ಮತ್ತು ಉದ್ಯೋಗಿಗಳಿಗೆ ಮೀಸಲಾತಿಗಳು ಮತ್ತು ರಿಯಾಯಿತಿಗಳು, ವಿತರಣೆ ದಿನಾಂಕಗಳು ಮತ್ತು ವಿತರಣೆಯ ಬೆಲೆ ಬುಧವಾರದ ವೇಳೆಗೆ ತಿಳಿಯುತ್ತದೆ ಎಂದು ಪಿಟಿಐ ವರದಿ ಮಾಡಿದೆ.
* ಎಲ್‌ಐಸಿ ಐಪಿಒ ಹೂಡಿಕೆದಾರರಿಂದ 13,000 ಕೋಟಿ ರೂಪಾಯಿ ಮೌಲ್ಯದ ಹೂಡಿಕೆಯ ಭರವಸೆ ಸ್ವೀಕರಿಸಿದೆ.
* ಎಲ್‌ಐಸಿ 6 ಟ್ರಿಲಿಯನ್ ರೂಪಾಯಿ ಮೌಲ್ಯದ್ದಾಗಿದೆ. ಇದು ಸರ್ಕಾರದ ಪರಿಷ್ಕೃತ ಅಂದಾಜಿನ ಪ್ರಕಾರ 5.39 ಟ್ರಿಲಿಯನ್‌ನ ಮೂಲ ಮೌಲ್ಯದ ಕೇವಲ 1.1 ಪಟ್ಟು ಹೆಚ್ಚಾಗಿದೆ.
* ಸೋಮವಾರ ಸೆಬಿಗೆ ಸರ್ಕಾರವು ಸಲ್ಲಿಸಿದ ನವೀಕರಿಸಿದ ಐಪಿಒ ದಾಖಲೆಗಳಲ್ಲಿ ಮೌಲ್ಯವನ್ನು ಪರಿಷ್ಕರಿಸಬಹುದು.
* ಸರ್ಕಾರವು ಆರಂಭದಲ್ಲಿ ಮಾರ್ಚ್ 31 ಕ್ಕೆ ಕೊನೆಗೊಂಡ ಕಳೆದ ಹಣಕಾಸು ವರ್ಷದಲ್ಲಿ ಎಲ್‌ಐಸಿ ಐಪಿಒ ಅನ್ನು ಆರಂಭ ಮಾಡಲು ಮುಂದಾಗಿತ್ತು. ಆದರೆ ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದಾಗಿ ಎಲ್‌ಐಸಿ ಐಪಿಒ ವಿಳಂಭವಾಗಿದೆ.


Click it and Unblock the Notifications