ಎಲ್‌ಐಸಿ ಜೀವನ್‌ ಉಮಾಂಗ್‌ ಪಾಲಿಸಿಯ ಈ ಲಾಭ ನೀವು ತಿಳಿದಿರಲೇಬೇಕು..

ಜೀವ ವಿಮಾ ನಿಗಮವು (ಎಲ್‌ಐಸಿ) ಸಾರ್ವಜನಿಕ ವಲಯದ ವಿಮಾದಾರರು ಆಗಿದ್ದು, ಟರ್ಮ್ ಪಾಲಿಸಿಗಳನ್ನು ಒದಗಿಸುತ್ತದೆ. ಹಾಗೆಯೇ ನಾವು ಹೂಡಿಕೆ ಮಾಡಿದ ಹಣ ವಾಪಾಸ್‌ ಲಭಿಸುವಂತಹ ಯೋಜನೆಗಳು, ಹಲವಾರು ಲಾಭದಾಯಕ ಯೋಜನೆಗಳನ್ನು ಹೊಂದಿದೆ. ಆದರೆ ಇವೆಲ್ಲದರ ನಡುವೆ ಜೀವನ್ ಉಮಂಗ್ ಒಂದು ರೀತಿಯ ಉತ್ತಮ ಯೋಜನೆಯಾಗಿದೆ. ಯಾಕೆಂದರೆ ಇದು ಜೀವನ ಪೂರ್ಣ ಇರುವಂತಹ ಪಾಲಿಸಿ ಆಗಿದೆ.

ಎಲ್‌ಐಸಿ ಸಾಮಾನ್ಯವಾಗಿ ಸಾವಿನ ಬಳಿಕ ಕುಟುಂಬಕ್ಕೆ ಧನ ಸಹಾಯ ಮಾಡುವಂತಹ ಯೋಜನೆಗಳನ್ನು ಹೊಂದಿದೆ. ಹಾಘೆಯೇ ಮೆಚ್ಯೂರಿಟಿ ಬೆನಿಫಿಟ್‌ಗಳನ್ನು ಕೂಡಾ ಹೊಂದಿದೆ. ಆದರೆ ಜೀವನ್ ಉಮಾಂಗ್ ಯೋಜನೆ ಚಂದಾದಾರರು ಬದುಕಿರುವವರೆಗೂ ಲಾಭವನ್ನು ನೀಡುತ್ತದೆ. ಈ ಯೋಜನೆಗೆ ಯಾರೂ ಕೂಡಾ ಅರ್ಜಿ ಸಲ್ಲಿಸಬಹುದು. ಇದರ ಕನಿಷ್ಠ ವಯಸ್ಸು 90 ದಿನಗಳು ಆಗಿದೆ. ಅಂದರೆ ಪೋಷಕರು ನವಜಾತ ಶಿಶುವಿಗೆ ಈ ಯೋಜನೆಯನ್ನು ಮಾಡಿಕೊಳ್ಳಬಹುದು.

ಇನ್ನು ಈ ಪಾಲಿಸಿಯ ಗರಿಷ್ಢ ವಯಸ್ಸು 40-55 ನಡುವೆ ಇದೆ. ಇದು ಪಾಲಿಸಿಯ ಟರ್ಮ್ ಮೇಲೆ ಅವಲಂಭಿತವಾಗಿರುತ್ತದೆ. ಪಾಲಿಸಿ ಟರ್ಮ್ 15, 20, 25, 30 ವರ್ಷಗಳವರೆಗೆ ಇರಬಹುದು. ಪಾಲಿಸಿಯ ಕೊನೆಯ ಗರಿಷ್ಠ ವಯಸ್ಸು 70 ವರ್ಷಗಳು ಆಗಿರಬೇಕು. ಅಂದರೆ ಒಬ್ಬ ವ್ಯಕ್ತಿಯು 55 ವರ್ಷ ವಯಸ್ಸಿನವನಾಗಿದ್ದರೆ, ಆತ 15 ವರ್ಷಗಳ ಪಾಲಿಸಿ ಅವಧಿಗೆ ಅರ್ಜಿ ಸಲ್ಲಿಸಬಹುದು

 ಜೀವನ್ ಉಮಾಂಗ್ ಯೋಜನೆಯ ಪ್ರಯೋಜನ ತಿಳಿಯಿರಿ

ಜೀವನ್ ಉಮಾಂಗ್ ಯೋಜನೆಯ ಪ್ರಯೋಜನ ತಿಳಿಯಿರಿ

ಜೀವನ್ ಉಮಾಂಗ್ ದೀರ್ಘಾವಧಿ ಯೋಜನೆ ಆಗಿದ್ದು, ಯೋಜನೆ ಆದಾಯ ಹಾಗೂ ರಕ್ಷಣೆ ಎರಡನ್ನೂ ನೀಡುತ್ತದೆ. ಇದು ಸಂಪೂರ್ಣ ಜೀವ ಖಾತ್ರಿ ಯೋಜನೆಯಾಗಿದೆ. ಪಾಲಿಸಿಯ ಮುಕ್ತಾಯದ ಅವಧಿಯು 100 ವರ್ಷಗಳು ಆಗಿದೆ. ಮೂರು ವರ್ಷಗಳವರೆಗೆ ಪಾಲಿಸಿಯ ಪ್ರಿಮಿಯಂ ಅನ್ನು ಪಾವತಿ ಮಾಡಿದರೆ ಯಾವುದೇ ಸಂದರ್ಭದಲ್ಲಿ ಪಾಲಿಸಿಯನ್ನು ಸರೆಂಡರ್‌ ಮಾಡಬಹುದು. ಹಾಗೆಯೇ ಈ ಪಾಲಿಸಿಯ ಅಡಿಯಲ್ಲಿ ಸಾಲವನ್ನು ಕೂಡಾ ಪಡೆಯಬಹುದು. ಸಾಲವನ್ನು ಪಾಲಿಸಿದಾರರು ಪ್ರೀಮಿಯಂ ಪಾವತಿ ಮಾಡುವ ಸಂದರ್ಭದಲ್ಲಿ ಪಡೆದರೆ ಗರಿಷ್ಠ ಸಾಲದ ಸರೆಂಡರ್‌ ಮೌಲ್ಯವು ಶೇ 90ರ ವರೆಗೆ ಇರುತ್ತದೆ. ಕನಿಷ್ಠ ಮೂಲ ವಿಮಾ ಮೊತ್ತ 2,00,000 ರೂಪಾಯಿ ಆಗಿದೆ. ಗರಿಷ್ಠ ಇಷ್ಟೇ ವಿಮಾ ಮೊತ್ತ ಪಾವತಿ ಮಾಡಬೇಕು ಎಂದು ಯಾವುದೇ ನಿಯಮವಿಲ್ಲ.

 ಸರ್ವೈವಲ್ ಪ್ರಾಫಿಟ್‌ ನೀಡುತ್ತದೆ ಈ ಜೀವನ್ ಉಮಾಂಗ್ ಯೋಜನೆ

ಸರ್ವೈವಲ್ ಪ್ರಾಫಿಟ್‌ ನೀಡುತ್ತದೆ ಈ ಜೀವನ್ ಉಮಾಂಗ್ ಯೋಜನೆ

ಈ ಜೀವನ್ ಉಮಾಂಗ್ ಯೋಜನೆಯು ಸರ್ವೈವಲ್ ಪ್ರಾಫಿಟ್‌ ಅನ್ನು ಕೂಡಾ ನೀಡುತ್ತದೆ. ನಾವು ಪ್ರೀಮಿಯಂ-ಪಾವತಿಸುವ ಅವಧಿ ಅಂತ್ಯದವರೆಗಿನ ಎಲ್ಲಾ ಪ್ರೀಮಿಯಂ ಅನ್ನು ಪಾವತಿ ಮಾಡಿದರೆ ಪ್ರತಿ ವರ್ಷವೂ ಮೂಲಭೂತ ವಿಮಾ ಮೊತ್ತವು ಶೇ. 8 ಕ್ಕೆ ಸಮನಾದ ಸರ್ವೈವಲ್ ಪ್ರಯೋಜನವನ್ನು ನಮಗೆ ಪಾವತಿ ಮಾಡಲಾಗು‌ತ್ತದೆ. ಇನ್ನು ಪ್ರೀಮಿಯಂ ಪಾವತಿ ಮಾಡುವ ಕೊನೆಯಲ್ಲಿ ಸರ್ವೈವಲ್‌ ಲಾಭದ ಮೊದಲ ಪಾವತಿಯನ್ನು ಮಾಡಲಾಗುತ್ತದೆ.

 ಜೀವನ್ ಉಮಾಂಗ್‌ ಪ್ರೀಮಿಯಂ ಆಯ್ಕೆ ಹೇಗೆ?

ಜೀವನ್ ಉಮಾಂಗ್‌ ಪ್ರೀಮಿಯಂ ಆಯ್ಕೆ ಹೇಗೆ?

2,00,000 ಯೋಜನೆ: ವಯಸ್ಸು 40, ಅವಧಿ 59, 1 ನೇ ವಾರ್ಷಿಕ ಪ್ರೀಮಿಯಂ (ತೆರಿಗೆ ಶೇಕಡ 4.5) 11,486 ರೂಪಾಯಿ, 2 ನೇ ವರ್ಷದಿಂದ ಪ್ರೀಮಿಯಂ (ತೆರಿಗೆ ಶೇಕಡ 2.25) 11238, 60-100 ವರ್ಷದಿಂದ ಅಥವಾ ಜೀವಿತಾವಧಿವರೆಗೆ ವಾರ್ಷಿಕ ಅಂದಾಜು ಆದಾಯ 16,000, 100 ನೇ ವಯಸ್ಸಿನಲ್ಲಿ ಒಟ್ಟು ಅಂದಾಜು ಆದಾಯ 1781000
5,00,000 ಯೋಜನೆ: ವಯಸ್ಸು 40, ಅವಧಿ 59, 1 ನೇ ವಾರ್ಷಿಕ ಪ್ರೀಮಿಯಂ (ತೆರಿಗೆ ಶೇಕಡ 4.5) 28,060 ರೂಪಾಯಿ, 2 ನೇ ವರ್ಷದಿಂದ ಪ್ರೀಮಿಯಂ (ತೆರಿಗೆ ಶೇಕಡ 2.25) 27456, 60-100 ವರ್ಷದಿಂದ ಅಥವಾ ಜೀವಿತಾವಧಿವರೆಗೆ ವಾರ್ಷಿಕ ಅಂದಾಜು ಆದಾಯ 40000, 100 ನೇ ವಯಸ್ಸಿನಲ್ಲಿ ಒಟ್ಟು ಅಂದಾಜು ಆದಾಯ 4452500
10,00,000 ಯೋಜನೆ: ವಯಸ್ಸು 40, ಅವಧಿ 59, 1 ನೇ ವಾರ್ಷಿಕ ಪ್ರೀಮಿಯಂ (ತೆರಿಗೆ ಶೇಕಡ 4.5) 55598 ರೂಪಾಯಿ, 2 ನೇ ವರ್ಷದಿಂದ ಪ್ರೀಮಿಯಂ (ತೆರಿಗೆ ಶೇಕಡ 2.25) 54401, 60-100 ವರ್ಷದಿಂದ ಅಥವಾ ಜೀವಿತಾವಧಿವರೆಗೆ ವಾರ್ಷಿಕ ಅಂದಾಜು ಆದಾಯ 80000, 100 ನೇ ವಯಸ್ಸಿನಲ್ಲಿ ಒಟ್ಟು ಅಂದಾಜು ಆದಾಯ 89,05,000
2000000 ಯೋಜನೆ: ವಯಸ್ಸು 40, ಅವಧಿ 59, 1 ನೇ ವಾರ್ಷಿಕ ಪ್ರೀಮಿಯಂ (ತೆರಿಗೆ ಶೇಕಡ 4.5) 1,11,196 ರೂಪಾಯಿ, 2 ನೇ ವರ್ಷದಿಂದ ಪ್ರೀಮಿಯಂ (ತೆರಿಗೆ ಶೇಕಡ 2.25) 1,08,802 60-100 ವರ್ಷದಿಂದ ಅಥವಾ ಜೀವಿತಾವಧಿವರೆಗೆ ವಾರ್ಷಿಕ ಅಂದಾಜು ಆದಾಯ 1,60,000, 100 ನೇ ವಯಸ್ಸಿನಲ್ಲಿ ಒಟ್ಟು ಅಂದಾಜು ಆದಾಯ 17810000

 

 

 ಒಂದು ವೇಳೆ ಪಾಲಿಸಿದಾರರು ಸಾವನ್ನಪ್ಪಿದರೆ

ಒಂದು ವೇಳೆ ಪಾಲಿಸಿದಾರರು ಸಾವನ್ನಪ್ಪಿದರೆ

ಹೆಚ್ಚುವರಿ ಪ್ರೀಮಿಯಂನೊಂದಿಗೆ ಯೋಜನೆಯಲ್ಲಿ 5 ಹೆಚ್ಚುವರಿ ನಾಮಿನಿ ಆಯ್ಕೆಗಳಿವೆ. ಅವುಗಳೆಂದರೆ ಆಕಸ್ಮಿಕ ಸಾವು ಮತ್ತು ಅಂಗವೈಕಲ್ಯ ಲಾಭ ಪಡೆಯುವ ನಾಮಿನಿ, ಆಕಸ್ಮಿಕ ಲಾಭ ನಾಮಿನಿ, ಹೊಸ ಟರ್ಮ್ ಅಶ್ಯೂರೆನ್ಸ್ ರೈಡರ್, ಹೊಸ ನಿರ್ಣಾಯಕ ಅನಾರೋಗ್ಯ ಲಾಭ ರೈಡರ್, ಮತ್ತು ಪ್ರೀಮಿಯಂ ಮನ್ನಾ ಲಾಭದ ರೈಡರ್. ಒಂದು ವೇಳೆ ಪಾಲಿಸಿದಾರರು ಮೊದಲ ಐದು ಪಾಲಿಸಿ ವರ್ಷಗಳಲ್ಲಿ ನಾಮಿನಿಗೆ ಸಮ್​ ಅಶ್ಯೂರ್ಡ್​ ವಿಮಾ ಮೊತ್ತವನ್ನು ಪಾವತಿ ಮಾಡಲಾಗುತ್ತದೆ. ಮರಣದ ನಂತರ ಐದು ಪಾಲಿಸಿ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಆದರೆ ಮುಕ್ತಾಯದ ದಿನಾಂಕಕ್ಕಿಂತ ಮುಂಚಿತವಾಗಿ, ಸಮ್​ ಅಶ್ಯೂರ್ಡ್​ ಮೊತ್ತ ಮತ್ತು ಲಾಯಲ್ಟಿ ಸೇರ್ಪಡೆಗಳನ್ನು ಪಾವತಿಸಲಾಗುತ್ತದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+