ಈ ಯೋಚನೆ ಹೆಸರು ಎಷ್ಟು ಸರಳವೋ, ಹೂಡಿಕೆಗೆ ಅಷ್ಟೇ ಸುಂದರ! ನಿವೃತ್ತಿ ನಂತರ ಮುಂದೇನು ಎನ್ನುವರು ಈ ಸುದ್ದಿಯನ್ನು ಒಮ್ಮೆ ಓದಿ. ಹೌದು, ಕೆಲಸದಿಂದ ನಿವೃತ್ತಿರಾಗಿ ಮನೆಯಲ್ಲಿ ಇತತರಿಗೆ ಅವಲಂಭನೆಯಾಗಿ ಬದುಕುವುದು ಹೇಗೆ ಎಂದು ಯೋಜನೆ ಮಾಡುತ್ತಿದ್ದೀರಾ? ಹಾಗಿದ್ದರೆ, ನೀವು ದುಡಿಯುವ ಸಮಯದಲ್ಲಿ ಈ ಯೋಜನೆಯಲ್ಲಿ ಒಂದು ಬಾರಿ ಹೂಡಿಕೆ ಮಾಡಿದ್ರೆ, ನಿವೃತ್ತಿ ಬಳಿಕ ತಿಂಗಳಿಗೆ 12 ಸಾವಿರ ಪೆನ್ಷನ್ ಹಣ ಪಡೆಯಬಹುದು. ಯಾವುದು ಈ ಯೋಜನೆ? ಏನೆಲ್ಲಾ ಅರ್ಹತೆಗಳು ಇರಬೇಕು? ಎಂಬಿತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಹೌದು, ಭಾರತೀಯ ಜೀವ ವಿಮಾ ನಿಗಮ (LIC) ಎಲ್ಲರಿಗೂ ಗೊತ್ತು.. ಈಗಾಗಲೇ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಜನರಿಗೆ ಹಲವು ಯೋಜನೆಗಳನ್ನ ನೀಡಿದೆ. ಇದರ ಜೊತೆಗೆ ನಿವೃತ್ತಿ ಸಮಯದಲ್ಲೂ ಸಹಯವಾಗಲಿ ಎನ್ನುವ ಉದ್ದೇಶದಿಂದ ಎಲ್‌ಐಸಿಯಿಂದ ಪಿಂಚಣಿಯಂತಹ ಯೋಜನೆಗಳನ್ನ ಜನರಿಗೆ ಪರಿಚಯ ಮಾಡ್ತಿದೆ.ನೀವು ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.

ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಯೋಜನೆಯು ನಿವೃತ್ತಿಯಾದವರಿಗೆ ಎಲ್ಐಸಿ ಸರಳ ಪಿಂಚಣಿ ಯೋಜನೆಯೆಂಬ ಯೋಜನೆಯನ್ನ ಆರಂಭಿಸಿದೆ. ನೀವು ಈ ಯೋಜನೆಯಲ್ಲಿ ಒಂದು ಸಲ ಹೂಡಿಕೆ ಮಾಡಿದ್ದರೆ ನಿಮ್ಮ ನಿವೃತ್ತಿಯ ಸಮಯದಲ್ಲಿ ತಿಂಗಳಿಗೆ 12 ಸಾವಿರ ರೂಪಾಯಿಗಳನ್ನು ಪಡೆದುಕೊಳ್ಳಬಹುದು. ಇದರಲ್ಲಿ ಯಾವುದೇ ರೀತಿಯ ಅಪಾಯವಿರುವುದಿಲ್ಲ.
ಎಲ್ಐಸಿ ಸರಳ ಪಿಂಚಣಿ ಯೋಜನೆಯು ಒಂದ ಪ್ರಸಿದ್ಧ ಯೋಜನೆಯಾಗಿದ್ದು, ನಿವೃತ್ತಿ ನಂತರ ನಿಮ್ಮ ಹಣದ ಕೊರತೆಯನ್ನ ಈ ಯೋಜನೆ ಪೂರೈಸುತ್ತದೆ. ಇದರಲ್ಲಿ ನೀವು ಒಂದು ಬಾರಿ ಮಾತ್ರ ಹೂಡಿಕೆ ಮಾಡಲು ಮಾತ್ರ ಅವಕಾಶವಿರುತ್ತದೆ. ಒಂದೇ ಒಮದು ಬಾರಿ ನಿಮ್ಮ ಹಣವನ್ನು ಹೂಡಿಕೆ ಮಾಡಿದ್ದರೆ ಜೀವನಪೂರ್ತಿ ಪಿಂಚಣಿ ಪಡೆಯಬಹುದು.
ಈ ಯೋಜನೆಯು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI)ದ ನಿಯಮಗಳು ಮತ್ತು ಮಾರ್ಗಸೂಚಿಗಳ ಅಡಿಯಲ್ಲಿ ಜಾರಿಗೊಳಿಸಲಾಗಿದೆ. ಇದು ನಿಮ್ಮಗೆ ಪಿಂಚಣಿ ಆಯ್ಕೆಗಳನ್ನು ಹೆಚ್ಚಿಸುವುದು ಮತ್ತು ಸರಳಗೊಳಿಸುವುದು ಮತ್ತು ವಿಮಾದಾರರಲ್ಲಿ ಏಕರೂಪತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಒಳಗೊಂಡಿದೆ.
ಸರಳ್ ಪಿಂಚಣಿ ಯೋಜನೆಯ ಪ್ರಮುಖ ಲಕ್ಷಣಗಳು
ಎಲ್ಐಸಿಯ ಸರಳ ಪಿಂಚಣಿ ಯೋಜನೆಯು ಒಂದೇ ಪ್ರೀಮಿಯಂ, ಲಿಂಕ್ ಮಾಡದ, ಭಾಗವಹಿಸದ ಮತ್ತು ತಕ್ಷಣದ ವರ್ಷಾಶನ ಪಾಲಿಸಿಯಾಗಿದೆ. ಈ ಪಾಲಿಸಿಯಲ್ಲಿ, ಹೂಡಿಕೆದಾರರು ಒಂದು ದೊಡ್ಡ ಮೊತ್ತವನ್ನು ಪಾವತಿಸುತ್ತಾರೆ ಮತ್ತು ನಂತರ ಜೀವನ ಪೂರ್ತಿ ನಿಯಮಿತ ಪಿಂಚಣಿ ಪಾವತಿಗಳನ್ನು ಪಡೆಯುತ್ತಾರೆ. ಇದಲ್ಲದೆ, ವರ್ಷಾಶನ ಪಾವತಿಯ ಆಯ್ಕೆಗಳು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಗಳ ಪಾಲಸಿಗಳನ್ನು ಒಳಗೊಂಡಿರುತ್ತವೆ. ಒಂದು ದೊಡ್ಡ ಮೊತ್ತದ ಹೂಡಿಕೆ ಮಾಡುವ ಮೂಲಕ, ನೀವು ವರ್ಷಾಶನವನ್ನು ಖರೀದಿಸಬಹುದು.
ಮರಣದ ನಂತರ ನಾಮಿನಿಗೆ ಖರೀದಿ ಬೆಲೆಯನ್ನು ಹಿಂತಿರುಗಿಸುವ ಏಕ ಜೀವಿತಾವಧಿ ವರ್ಷಾಶನ. ಖರೀದಿ ಬೆಲೆಯ ಹಿಂತಿರುಗಿಸುವಿಕೆಯೊಂದಿಗೆ ಜಂಟಿ ಜೀವಿತಾವಧಿಯ ಕೊನೆಯ ಬದುಕುಳಿದವರ ವರ್ಷಾಶನದಲ್ಲೂ ಕೂಡ ಹೂಡಿಕೆಯನ್ನು ಮಾಡಬಹುದು.
12000 ಪಿಂಚಣಿ ಪಡೆಯುವುದು ಹೇಗೆ?
ಎಲ್ಐಸಿಯ ಸರಳ ಪಿಂಚಣಿ ಯೋಜನೆಯಲ್ಲಿ, ನೀವು ವಾರ್ಷಿಕವಾಗಿ ಕನಿಷ್ಠ 12 ಸಾವಿರ ರೂ. ಹೂಡಿಕೆ ಮಾಡಬೇಕು. ಇದಕ್ಕೆ ಯಾವುದೇ ಗರಿಷ್ಠ ಮಿತಿಯಿಲ್ಲ. ನೀವು ಎಷ್ಟು ಬೇಕಾದರೂ ಇದರಲ್ಲಿ ಹೂಡಿಕೆ ಮಾಡಬಹುದು. ಈ ಪಾಲಿಸಿ ಯೋಜನೆಯಡಿಯಲ್ಲಿ, ಯಾವ ವ್ಯಕ್ತಿ ಕೂಡ ಒಮ್ಮೆ ಪ್ರೀಮಿಯಂ ಪಾವತಿಸುವ ಮೂಲಕ ವಾರ್ಷಿಕ, ಅರ್ಧ-ವಾರ್ಷಿಕ, ತ್ರೈಮಾಸಿಕ ಮತ್ತು ಮಾಸಿಕ ಪಿಂಚಣಿಗಳ ಸಂಪೂರ್ಣ ಪ್ರಯೋಜನವನ್ನು ನೀವು ಪಡೆಯಬಹುದು. ಎಲ್ಐಸಿ ಕ್ಯಾಲ್ಕುಲೇಟರ್ ಪ್ರಕಾರ, ನೀವೇನದ್ರು 42 ವರ್ಷ ವಯಸ್ಸಿನ ವ್ಯಕ್ತಿಯಾಗಿದ್ದರೆ ನೀವು 30 ಲಕ್ಷ ರೂ.ಗಳನ್ನು ವರ್ಷಾಶನವನ್ನು ಖರೀದಿಸಿ, ಈ ಮೂಲಕ ನೀವು ಪ್ರತಿ ತಿಂಗಳು 12,388 ರೂ. ಪಿಂಚಣಿ ಪಡೆಯಬಹುದು.
LIC ಸರಳ ಪಿಂಚಣಿ ಯೋಜನೆಗೆ ಅರ್ಹತೆಗಳು
ಈ ಯೋಜನೆಯಲ್ಲಿ ಕನಿಷ್ಠ ಪ್ರವೇಶ ವಯಸ್ಸು 40 ವರ್ಷಗಳು ಮತ್ತು ಗರಿಷ್ಠ ಪ್ರವೇಶ ವಯಸ್ಸು 80 ವರ್ಷಗಳು. ಈ ಯೋಜನೆಯಲ್ಲಿ ಒಂಟಿ ವ್ಯಕ್ತಿಗಳು ಅಥವಾ ದಂಪತಿಗಳು ಒಟ್ಟಿಗೆ ಹೂಡಿಕೆ ಮಾಡಬಹುದು. ಈ ಯೋಜನೆಯು ನಿಮ್ಮ ವೃದ್ಧಾಪ್ಯದಲ್ಲಿ ನಿಮಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ ಮತ್ತು ನಿಮಗೆ ಸ್ಥಿರವಾದ ಆದಾಯವನ್ನು ನೀಡುತ್ತದೆ.
LIC ಸರಳ್ ಪಿಂಚಣಿ ಯೋಜನೆ ಪ್ರಯೋಜನಗಳು
- ಪಾಲಿಸಿ ಪ್ರಾರಂಭವಾದ 6 ತಿಂಗಳ ನಂತರ ಸರೆಂಡರ್ ಆಯ್ಕೆ ಲಭ್ಯವಿದೆ.
- ಪಾಲಿಸಿದಾರನ ಮರಣದ ಸಂದರ್ಭದಲ್ಲಿ, ಹೂಡಿಕೆಯ ಮೊತ್ತವನ್ನು ನಾಮಿನಿಗೆ ಹಿಂತಿರುಗಿಸಲಾಗುತ್ತದೆ.
- ಪಾಲಿಸಿ ಪ್ರಾರಂಭವಾದ 6 ತಿಂಗಳ ನಂತರ ಸಾಲ ಸೌಲಭ್ಯ ಲಭ್ಯವಿದೆ.
- LIC ಸರಳ ಪಿಂಚಣಿ ಯೋಜನೆಯಲ್ಲಿ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಹೂಡಿಕೆ ಮಾಡಬಹುದು.
ಸಾಲವನ್ನೂ ಕೂಡ ತೆಗೆದುಕೊಳ್ಳಬಹುದು
ನೀವು www.licindia.in ಗೆ ಭೇಟಿ ನೀಡಿ LICಯ ಈ ಯೋಜನೆಯನ್ನು ಪಡೆಯಬಹುದು. ಈ ಪಾಲಿಸಿಯ ಅಡಿಯಲ್ಲಿ 6 ತಿಂಗಳು ಪೂರ್ಣಗೊಂಡಿದ್ದರೆ, ಅಗತ್ಯವಿದ್ದರೆ ನೀವು ಅಷ್ಟಕ್ಕೆ ನಿಲ್ಲಿಸಬಹುದು. ಅಲ್ಲದೆ, ಈ ಯೋಜನೆಯಡಿ ನೀವು ಸಾಲವನ್ನು ತೆಗೆದುಕೊಳ್ಳಬಹುದು. ಆದಾಗ್ಯೂ, ನಿಮ್ಮ ಸಾಲದ ಮೊತ್ತ ನಿಮ್ಮ ಹೂಡಿಕೆಯ ಮೇಲೆ ಅವಲಂಬಿತವಾಗಿರುತ್ತದೆ.


Click it and Unblock the Notifications