For Quick Alerts
ALLOW NOTIFICATIONS  
For Daily Alerts

ಇಪಿಎಫ್‌: ನೀವು ಹೀಗೆ ಮಾಡದಿದ್ದರೆ ಹಣ ಪಡೆಯಲು ಸಾಧ್ಯವಿಲ್ಲ!

|

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಉದ್ಯೋಗಿಗಳಿಗೆ ಪಿಎಫ್ ಹಣವನ್ನು ನಿರ್ವಹಣೆ ಮಾಡುತ್ತದೆ. ಎಲ್ಲಾ ನೌಕರರ ವೇತನದ ಒಂದು ನಿರ್ದಿಷ್ಟ ಭಾಗವನ್ನು ಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ. ನಿವೃತ್ತಿಯ ನಂತರ ನೀವು ಈ ಎಲ್ಲಾ ಹಣವನ್ನು ಹಿಂಪಡೆಯಬಹುದು.

 

ನಿಮ್ಮ ವೇತನದ ಒಂದು ಭಾಗದ ಹಣದ ಠೇವಣಿ ಜೊತೆಗೆ ನೀವು ಬಡ್ಡಿಯನ್ನು ಸಹ ಪಡೆಯುತ್ತೀರಿ. ಆದರೆ ಈ ಖಾತೆ ನಿರ್ವಹಣೆ ಕುರಿತಾಗಿ ಕೆಲವು ಪ್ರಮುಖ ವಿಷಯಗಳನ್ನು ನೀವು ತಿಳಿದುಕೊಳ್ಳಬೇಕು. ಇಲ್ಲದಿದ್ದರೆ ನಿಮ್ಮ ಸ್ವಂತ ಪಿಎಫ್ ಹಣವನ್ನು ಖಾತೆಯಿಂದ ಹಿಂಪಡೆಯಲು ನಿಮಗೆ ಕಷ್ಟವಾಗುತ್ತದೆ.

ಪ್ಯಾನ್ ಕಾರ್ಡ್ ಲಿಂಕ್ ಮಾಡಿ

ಪ್ಯಾನ್ ಕಾರ್ಡ್ ಲಿಂಕ್ ಮಾಡಿ

ಇಪಿಎಫ್‌ಒ ಇತ್ತೀಚೆಗೆ ಪಿಎಫ್ ಖಾತೆದಾರರಿಗೆ ತುರ್ತು ಕಾರ್ಯವನ್ನು ಇತ್ಯರ್ಥಪಡಿಸುವಂತೆ ಕೇಳಿಕೊಂಡಿತ್ತು. ಇದು ಪ್ಯಾನ್ ಕಾರ್ಡ್ ಅನ್ನು ಪಿಎಫ್ ಖಾತೆಗೆ ಲಿಂಕ್ ಮಾಡುವುದಾಗಿದೆ. ನಿಮ್ಮ ಪ್ಯಾನ್ ಅನ್ನು ಪಿಎಫ್ ಖಾತೆಗೆ ಲಿಂಕ್ ಮಾಡಿದ್ದರೆ ಉತ್ತಮ, ಇಲ್ಲದಿದ್ರೆ ಸಾಧ್ಯವಾದಷ್ಟು ಬೇಗ ಲಿಂಕ್‌ ಮಾಡಿ.

ಪಿಎಫ್ ಖಾತೆಗೆ ಪ್ಯಾನ್ ಲಿಂಕ್‌ ಮಾಡದಿದ್ರೆ ಏನಾಗಲಿದೆ?

ಪಿಎಫ್ ಖಾತೆಗೆ ಪ್ಯಾನ್ ಲಿಂಕ್‌ ಮಾಡದಿದ್ರೆ ಏನಾಗಲಿದೆ?

ನೀವು ಪ್ಯಾನ್ ಅನ್ನು ಪಿಎಫ್ ಖಾತೆಗೆ ಲಿಂಕ್ ಮಾಡದಿದ್ದರೆ ಎರಡು ಪ್ರಮುಖ ನಷ್ಟಗಳನ್ನು ಅನುಭವಿಸಬಹುದು. ಇವುಗಳಲ್ಲಿ ಮೊದಲನೆಯದು, ನೀವು ಪಿಎಫ್ ಹಿಂಪಡೆಯಲು ಅರ್ಜಿ ಸಲ್ಲಿಸಿದಾಗ, ಅದರ ಮೇಲೆ ಗರಿಷ್ಠ ತೆರಿಗೆ ಟಿಡಿಎಸ್ ಅನ್ನು ಕಡಿತಗೊಳಿಸಲಾಗುತ್ತದೆ. ಪ್ಯಾನ್ ಕಾರ್ಡ್ ಲಿಂಕ್ ಮಾಡಿದ್ದರೆ ಇದನ್ನು ತಪ್ಪಿಸಬಹುದು. ಎರಡನೆಯದಾಗಿ, ನೀವು ಹಣವನ್ನು ಪಡೆಯುವಲ್ಲಿ ತೊಂದರೆ ಎದುರಿಸಬೇಕಾಗುತ್ತದೆ. ಪಿಎಫ್ ಖಾತೆಯು ಐದು ವರ್ಷಕ್ಕಿಂತ ಕಡಿಮೆ ಮತ್ತು ಖಾತೆಯಲ್ಲಿ ಠೇವಣಿ ಇರಿಸಿದ ಜನರು 50,000 ರೂ. ಹೆಚ್ಚಿದ್ದರೆ ಆಗ ಆ ಹಣಕ್ಕೆ ತೆರಿಗೆ ವಿಧಿಸಲಾಗುತ್ತದೆ.

ಆನ್‌ಲೈನ್ ಮೂಲಕ ಲಿಂಕ್‌ ಮಾಡಿ
 

ಆನ್‌ಲೈನ್ ಮೂಲಕ ಲಿಂಕ್‌ ಮಾಡಿ

*ಇಪಿಎಫ್‌ಒ ಯುಎಎನ್ ಖಾತೆದಾರನು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ https://unifiedportal-mem.epfindia.gov.in/memberinterface/.
* ಈ ವೆಬ್‌ಸೈಟ್‌ಗೆ ಭೇಟಿ ನೀಡಿದ ಬಳಿಕ ನಿಮ್ಮ ಯುಎಎನ್ ಮತ್ತು ಪಾಸ್‌ವರ್ಡ್‌ ಅನ್ನು ನಮೂದಿಸಿ.
* ನಂತರ ಕ್ಯಾಪ್ಚಾ ಕೋಡ್ ನಮೂದಿಸಿ ಮತ್ತು 'ಸೈನ್-ಇನ್' ಬಟನ್ ಕ್ಲಿಕ್ ಮಾಡಿ.
* ಅದರ ನಂತರ ಮುಖ್ಯ ಮೆನುವಿನಿಂದ 'ನಿರ್ವಹಿಸು' ಆಯ್ಕೆಯನ್ನು ಹುಡುಕಿ ಮತ್ತು 'ಕೆವೈಸಿ' ಕ್ಲಿಕ್ ಮಾಡಿ.
* ನಿಮ್ಮನ್ನು 'KYC ಸೇರಿಸಿ' ಎಂಬ ಹೊಸ ಪೇಜ್‌ಗೆ ತೆರೆಯುವುದು, ಅಲ್ಲಿ ನೀವು 'ಡಾಕ್ಯುಮೆಂಟ್ ಪ್ರಕಾರ' ಅಡಿಯಲ್ಲಿ ದಾಖಲೆಗಳ ಪಟ್ಟಿಯನ್ನು ಪಡೆಯುತ್ತೀರಿ. ಇಲ್ಲಿ ನೀವು ಪ್ಯಾನ್ ಆಯ್ಕೆ ಮಾಡಬೇಕು.
* ನಿಮ್ಮ ಪ್ಯಾನ್ ಸಂಖ್ಯೆ ಮತ್ತು ಪ್ಯಾನ್‌ನಲ್ಲಿ ಮುದ್ರಿಸಲಾದ ಹೆಸರನ್ನು ನಮೂದಿಸಿ. ಅಂತಿಮವಾಗಿ 'ಸೇವ್' ಬಟನ್ ಕ್ಲಿಕ್ ಮಾಡಿ.

ಆಫ್‌ಲೈನ್ ಮೂಲಕವೂ ಮಾಡಬಹುದು

ಆಫ್‌ಲೈನ್ ಮೂಲಕವೂ ಮಾಡಬಹುದು

ಹತ್ತಿರದ ಇಪಿಎಫ್‌ಒ ಶಾಖೆಗೆ ಹೋಗಿ ಇಪಿಎಫ್-ಪ್ಯಾನ್ ಲಿಂಕ್ ಮಾಡುವ ಫಾರ್ಮ್ ಅನ್ನು ಕೇಳಿ. ನಿಮ್ಮ ಪ್ಯಾನ್ ಸಂಖ್ಯೆ ಮತ್ತು ಯುಎಎನ್ ಸಂಖ್ಯೆಯನ್ನು ಎಚ್ಚರಿಕೆಯಿಂದ ಫಾರ್ಮ್‌ನಲ್ಲಿ ಭರ್ತಿ ಮಾಡಿ ಮತ್ತು ನಿಮ್ಮ ಹೆಸರಿನಂತಹ ಇತರ ವಿವರಗಳನ್ನು ಸಹ ನಮೂದಿಸಿ.

ನಿಮ್ಮ ಪ್ಯಾನ್ ಕಾರ್ಡ್ ಮತ್ತು ಯುಎಎನ್‌ನ ಸ್ವಯಂ ದೃಢೀಕರಿಸಿದ ಪ್ರತಿ ಜೊತೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕು. ಪರಿಶೀಲಿಸಿದ ನಂತರ, ನಿಮ್ಮ ಪ್ಯಾನ್ ಅನ್ನು ಇಪಿಎಫ್ ಖಾತೆಯೊಂದಿಗೆ ಲಿಂಕ್ ಮಾಡಲಾಗುತ್ತದೆ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯಲ್ಲಿ ನಿಮ್ಮ ಪ್ಯಾನ್ ಅನ್ನು ಇಪಿಎಫ್ ಖಾತೆಗೆ ಲಿಂಕ್ ಮಾಡುವ ಸ್ಥಿತಿಯ ಬಗ್ಗೆ ನಿಮಗೆ ತಿಳಿಸಲಾಗುವುದು.

 

English summary

Link Pan Card With EPF: It Helps You To Save Tax

Here the details of how to link pan card into Your EPF account and how to get benefit
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X