ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಈ ಬಜೆಟ್ ಹಿನ್ನೆಲೆಯಿಂದಾಗಿ ಹಲವಾರು ವಸ್ತುಗಳು ದುಬಾರಿಯಾಗಿದೆ. ಆದರೆ ಅದಕ್ಕೂ ಮುಖ್ಯವಾಗಿ ಈ ಹೊಸ ಹಣಕಾಸು ವರ್ಷದಲ್ಲಿ ಇತರೆ ಹಲವು ವಸ್ತುಗಳು ಕೂಡಾ ದುಬಾರಿಯಾಗಿದೆ.
ಛತ್ರಿ ಮೇಲಿನ ಸುಂಕ, ಆಮದು ವಸ್ತುಗಳ ಮೇಲೆ ಸುಂಕ ಏರಿಕೆ, ಅನ್ ಬ್ಲೆಂಡೆಡ್ ಇಂಧನ ಮೊದಲಾದವುಗಳ ಬೆಲೆ ಇಂದಿನಿಂದ ಏರಿಕೆ ಆಗಲಿದೆ. ಈ ನಡುವೆ ಈಗಾಗಲೇ ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಏರಿಕೆ ಆಗಿದೆ. ಎಲ್‌ಪಿಜಿ ಬೆಲೆಯು ಏರಿಕೆ ಕಂಡಿದೆ.
ಆಮದು ಮಾಡಲಾದ ವಸ್ತುಗಳು, ಛತ್ರಿಗಳು ಮತ್ತು ಮಿಶ್ರಣ ಮಾಡದ ಇಂಧನದ ಜೊತೆಗೆ ಏಪ್ರಿಲ್‌ನಿಂದ ಬಜೆಟ್ ಜಾರಿಗೆ ಬಂದಾಗ ಬೆಲೆಯಲ್ಲಿ ಏರಿಕೆಯಾಗಲಿದೆ. ಇನ್ನು ಹಲವಾರು ವಸ್ತುಗಳು ಇಂದಿನಿಂದ ದುಬಾರಿಯಾಗಲಿದೆ. ಹಾಗೆಯೇ ಕೆಲವು ಅಗ್ಗವಾಗಲಿದೆ. ಅವು ಯಾವುದು ಎಂದು ತಿಳಿಯಲು ಮುಂದೆ ಓದಿ....
ಅಗತ್ಯ ಔಷಧಿ ದುಬಾರಿ!
ದೇಶದಲ್ಲಿ ಈ ಹೊಸ ಹಣಕಾಸು ವರ್ಷದಲ್ಲಿ ಅಗತ್ಯ ಔಷಧಿಗಳ ಬೆಲೆಯು ಏರಿಕೆ ಕಂಡಿದೆ. 800 ಕ್ಕೂ ಹೆಚ್ಚು ಔಷಧಿಗಳ ಬೆಲೆಯನ್ನು ಏರಿಕೆ ಮಾಡಲಾಗುತ್ತದೆ. ನೋವು ನಿವಾರಕ ಔಷಧಿಗಳು, ಆಂಟಿಅಲರ್ಜಿಕ್ಸ್, ಆಂಟಿಬಯೋಟಿಕ್, ಆಂಟಿಕಾನ್ವಲ್ಸೆಂಟ್‌ಗಳು, ಹೃದಯರಕ್ತನಾಳದ, ವಿಟಮಿನ್ ಮತ್ತು ಖನಿಜಗಳಂತಹ ಔಷಧಿಗಳ ಬೆಲೆಗಳು ಏಪ್ರಿಲ್ 1ರಿಂದ ಏರಿಕೆ ಕಾಣಲಿದೆ.
ಕ್ರಿಪ್ಟೋಕರೆನ್ಸಿ ತೆರಿಗೆ
ದೇಶದಲ್ಲಿ ಸರ್ಕಾರವು ಕ್ರಿಪ್ಟೋಕರೆನ್ಸಿ ಮೇಲೆ ನಿಯಂತ್ರಣ ಹೇರಲು ಕಾಯ್ದೆಯನ್ನು ಜಾರಿಗೆ ತರುವ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಸಿದ್ಧತೆಯನ್ನು ನಡೆಸುತ್ತಿದೆ ಎಂದು ಕೂಡಾ ವರದಿಗಳು ಉಲ್ಲೇಖ ಮಾಡಿದೆ. ಆದರೆ ಈ ನಡುವೆ ಕ್ರಿಪ್ಟೋಕರೆನ್ಸಿಯಂಥ ವರ್ಚುವಲ್ ಡಿಜಿಟಲ್ ಅಸೆಟ್ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಈಗಾಗಲೇ ನಿರ್ಧಾರ ಮಾಡಿದೆ. ಭಾರತದಲ್ಲಿ ಕ್ರಿಪ್ಟೋ ಆಸ್ತಿ ತೆರಿಗೆಯು ಏಪ್ರಿಲ್ 1 ರಿಂದ ಪ್ರಾರಂಭವಾಗುವ ಹಣಕಾಸು ವರ್ಷದಲ್ಲಿ ಆರಂಭವಾಗಲಿದೆ. ಯಾವುದೇ ವರ್ಚುವಲ್ ಡಿಜಿಟಲ್ ಅಸೆಟ್ ವರ್ಗಾವಣೆಗೆ ಶೇ.30ರ ತೆರಿಗೆ ಕಡಿತಗೊಳ್ಳಲಿದೆ.
ಕಾರು ಖರೀದಿ ಮಾಡಲು ಬಯಸುವವರಿಗೆ ಕಹಿಸುದ್ದಿ
ಕಾರುಗಳ ಬೆಲೆಯು ಕೂಡಾ ಏಪ್ರಿಲ್ 1 ರಿಂದ ಹೆಚ್ಚಳವಾಗಲಿದೆ. ಟಾಟಾ ಮೋಟಾರ್ಸ್ ತನ್ನ ವಾಹನಗಳ ಬೆಲೆಯನ್ನು ಶೇಕಡ 2-2.5 ರಷ್ಟು ಏರಿಕೆ ಮಾಡಲು ತೀರ್ಮಾಣ ಮಾಡಿದೆ. ಈ ನಡುವೆ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕೂಡಾ ತನ್ನ ಉತ್ಪನ್ನಗಳ ಬೆಲೆಯನ್ನು ಶೇಕಡ 4ರಷ್ಟು ಹೆಚ್ಚಿಸಿದೆ. ಇದಲ್ಲದೇ ಮರ್ಸಿಡಿಸ್ ಬೆಂಜ್ ಇಂಡಿಯಾ ಕೂಡಾ ಕಾರುಗಳ ಬೆಲೆಯನ್ನು ಏರಿಕೆ ಮಾಡಿದೆ. ಬಿಎಂಡಬ್ಲ್ಯೂ ತನ್ನ ಎಲ್ಲಾ ಕಾರುಗಳ ಬೆಲೆಯನ್ನು ಏಪ್ರಿಲ್ 1 ರಿಂದ ಶೇಕಡಾ 3.5 ರಷ್ಟು ಏರಿಕೆ ಮಾಡಿದೆ.
ಕೇಂದ್ರ ಬಜೆಟ್: ದುಬಾರಿ ಯಾವುದೆಲ್ಲಾ?
* ಛತ್ರಿ
* ಆಭರಣ
* ಲೌಡ್‌ಸ್ಪೀಕರ್‌ಗಳು
* ಹೆಡ್‌ಫೋನ್‌ಗಳು ಮತ್ತು ಇಯರ್‌ಫೋನ್‌ಗಳು
* ಸ್ಮಾರ್ಟ್ ಮೀಟರ್
* ಸೋಲರ್ ಸೆಲ್
* ಸೋಲರ್ ಮೋಡಲ್
* ಎಕ್ಸ್-ರೇ ಯಂತ್ರಗಳು
* ಎಲೆಕ್ಟ್ರಾನಿಕ್ ಆಟಿಕೆಗಳ ಭಾಗಗಳು
* ಔಷಧ


Click it and Unblock the Notifications