ಇನ್ಮುಂದೆ Aadhaar ದುರುಪಯೋಗ ಆಗಲ್ಲ; ಈಗಲೇ ಆನ್‌ಲೈನ್‌ನಲ್ಲಿ ಬಯೋಮೆಟ್ರಿಕ್ ಲಾಕ್ ಮಾಡಿ

ಆಧಾರ್ ಜೀವನದ ಒಂದು ಪ್ರಮುಖ ದಾಖಲೆ ಎಂದರೆ ತಪ್ಪಿಲ್ಲ. ಆದರೂ, ಆಧಾರ್ (Aadhaar) ದುರುಪಯೋಗಕ್ಕೆ ಒಳಗಾಗುತ್ತದೆ. ಕೆಲವು ವಂಚಕರು ಆಧಾರ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ.ಹಾಗಾಗಿ, ನಿಮ್ಮ ಆಧಾರ್ ಅನ್ನು ಅಪರಿಚಿತರು ಬಳಸದಂತೆ ಸುಲಭವಾಗಿ ಲಾಕ್ ಮಾಡಬಹುದು. ನಾವಿಂದು ಈ ಲೇಖನದಲ್ಲಿ ಆಧಾರ್ ಅನ್ನು ಲಾಕ್ (Aadhaar Biometric Lock) ಮಾಡಲು ಕೆಲವು ವಿಧಾನಗಳನ್ನು ತಿಳಿಸಿದ್ದೇವೆ. ಆ ಮಾರ್ಗಗಳು ಯಾವುವು? ಆನ್‌ಲೈನ್‌ನಲ್ಲಿ ಆಧಾರ್ ಬಯೋಮೆಟ್ರಿಕ್ಸ್ ಲಾಕ್ ಮಾಡುವುದು ಹೇಗೆ? mAadhaar ಆಪ್‌ನಲ್ಲಿ ಲಾಕ್ ಮಾಡುವುದು ಹೇಗೆ? ಎಂಬಿತ್ಯಾದಿ ವಿವರನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ...

ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ಬಯೋಮೆಟ್ರಿಕ್ ವಿವರಗಳನ್ನು ಒಳಗೊಂಡಿದೆ. ಇದನ್ನು ಮೋಸ ಮಾಡಲು ಬಳಸಬಹುದು. ಹೀಗಾಗಿ, ಆಧಾರ್ ಕಾರ್ಡ್ ಅನ್ನು ಲಾಕ್ ಮಾಡುವುದು ಅಗತ್ಯವಾಗಿದೆ. ನಿಮ್ಮ ಆಧಾರ್ ಬಯೋಮೆಟ್ರಿಕ್ ವಿವರಗಳನ್ನು ಲಾಕ್ ಮಾಡಿದರೆ,ನಿಮಗೆ ಹೆಚ್ಚುವರಿ ಭದ್ರತೆ ಸಿಗುತ್ತದೆ.

ಇನ್ಮುಂದೆ Aadhaar ದುರುಪಯೋಗ ಆಗಲ್ಲ; ಬಯೋಮೆಟ್ರಿಕ್ ಲಾಕ್ ಮಾಡಿ

ಆಧಾರ್ ಕಾರ್ಡ್ ಲಾಕ್ ಮಾಡುವ ಮೂಲಕ,ನಿಮ್ಮ ಪ್ರಿಂಟ್ ಮತ್ತು ಐರಿಸ್ ಸ್ಕ್ಯಾನ್ ಅನ್ನು ನಿಮ್ಮ ಅನುಮತಿಯಿಲ್ಲದೆ ಪರಿಶೀಲಿಸಬಹುದು. ಆನ್‌ಲೈನ್‌ನಲ್ಲಿ ಸುಲಭವಾಗಿ ಆಧಾರ್ ಲಾಕ್ ಮಾಡಬಹುದು. ನೀವು UIDAI ಪೋರ್ಟಲ್ ಅಥವಾ mAadhaar ಆಪ್‌ ಮೂಲಕ ಸುಲಭವಾಗಿ ಬಯೋಮೆಟ್ರಿಕ್ಸ್ ಅನ್ನು ಲಾಕ್ ಅಥವಾ ಅನ್‌ಲಾಕ್ ಮಾಡಬಹುದು.

ಆನ್‌ಲೈನ್‌ನಲ್ಲಿ ಆಧಾರ್ ಬಯೋಮೆಟ್ರಿಕ್ಸ್ ಲಾಕ್ ಮಾಡಲು ಹೀಗೆ ಮಾಡಿ ನೀವು ಆಧಾರ್ ಬಯೋಮೆಟ್ರಿಕ್ಸ್ ಲಾಕ್ ಮಾಡಲು, ಮೊದಲು ಆಧಾರ್ ವರ್ಚುವಲ್ ಐಡಿ ಕ್ರಿಯೇಟ್ ಮಾಡಬೇಕು. ನೀವು UIDAI ಅಧಿಕೃತ ವೆಬ್‌ಸೈಟ್‌ಗೆ ಲಾಗಿನ್ ಆಗಿ 'VID ಜನರೇಟರ್' ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.

ಹಂತ 1: ಮೊದಲು UIDAI ನನ್ನ ಆಧಾರ್ ಪೋರ್ಟಲ್‌ಗೆ ಭೇಟಿ ನೀಡಿ
ಹಂತ 2: ಬಳಿಕ ಕೆಳಗೆ ಸ್ಕ್ರಾಲ್ ಮಾಡಿ. ಅಲ್ಲಿ 'ಲಾಕ್ / ಅನ್‌ಲಾಕ್ ಆಧಾರ್' ಆಯ್ಕೆಯ ಮೇಲೆ ಕ್ಲಿಕ್ಕಿಸಿ
ಹಂತ 3: ಇದಾದ ನಂತರ ನೀವು 'ಮುಂದಿನ' ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು
ಹಂತ 4: ಆಧಾರ್ ವರ್ಚುವಲ್ ಐಡಿ (ವಿಐಡಿ), ಪೂರ್ಣ ಹೆಸರು, ಪಿನ್ ಕೋಡ್ ನಮೂದಿಸಿ
ಹಂತ 5: ಹಾಗೆಯೇ ಕ್ಯಾಪ್ಚಾ ಕೋಡ್ ಸಹ ನಮೂದಿಸಿ
ಹಂತ 6: ಬಳಿಕ ಓಟಿಪಿ (OTP) ಪರಿಶೀಲಿಸಿ. ಬಳಿಕ ನಿಮ್ಮ ಆಧಾರ್ ಬಯೋಮೆಟ್ರಿಕ್ಸ್ ಲಾಕ್ ಆಗುತ್ತದೆ.
ಹಂತ 7: ಈ ಭದ್ರತಾ ಕಾರ್ಯವು ನಿಮ್ಮ ಆಧಾರ್ ವಿವರಗಳನ್ನು ಸುರಕ್ಷಿತವಾಗಿರಿಸುತ್ತದೆ. ಇದರೊಂದಿಗೆ ಹೆಚ್ಚುವರಿ ರಕ್ಷಣೆ ನೀಡುತ್ತದೆ. mAadhaar ಆಪ್‌ ಮೂಲಕ ಆಧಾರ್ ಬಯೋಮೆಟ್ರಿಕ್ಸ್ ಲಾಕ್ ಮಾಡುವ ಸರಳ ವಿಧಾನ ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್ ಮೂಲಕ mAadhaar ಆಪ್ ಡೌನ್‌ಲೋಡ್ ಮಾಡಬೇಕು ಬಳಿಕ ನಿಮ್ಮ ಮೊಬೈಲ್ ನಂಬರ್ ಮೂಲಕ ಆಪ್‌ಗೆ ಲಾಗಿನ್ ಆಗಬೇಕು ಇದಾದ ನಂತರ 'ನನ್ನ ಆಧಾರ್' ಐಕಾನ್ ಮೇಲೆ ಕ್ಲಿಕ್ ಮಾಡಬೇಕು ನಿಮ್ಮ ಆಧಾರ್ ನಂಬರ್ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ ಇದಾದ ಬಳಿಕ ಓಟಿಪಿ (OTP) ಪರಿಶೀಲನೆ ಪೂರ್ಣಗೊಳಿಸಿ ನಿಮ್ಮ ಆಧಾರ್ ಬಯೋಮೆಟ್ರಿಕ್ಸ್ ಲಾಕ್ ಮಾಡಲು'ಬಯೋಮೆಟ್ರಿಕ್ ಲಾಕ್' ಆಯ್ಕೆ ಆರಿಸಿಕೊಳ್ಳಿ ಒಮ್ಮೆ ಆನ್ ಮಾಡಿದ ಬಳಿಕ ಈ ವೈಶಿಷ್ಟ್ಯವು ನಿಮ್ಮ ಫಿಂಗರ್‌ಪ್ರಿಂಟ್, ಐರಿಸ್ ಮತ್ತು ಮುಖದ ಡೇಟಾವನ್ನು ಅನಗತ್ಯ ಪ್ರವೇಶದಿಂದ ರಕ್ಷಿಸುತ್ತದೆ.

ಎಸ್‌ಎಂಎಸ್‌ ಮೂಲಕ ಬಯೋಮೆಟ್ರಿಕ್ಸ್ ಲಾಕ್ ಮಾಡಬಹುದು!ನಿಮ್ಮ ಆಧಾರ್ ಬಯೋಮೆಟ್ರಿಕ್ಸ್ ಅನ್ನು ಲಾಕ್ ಮಾಡಲು ನೀವು ಬಯಸಿದರೆ,ಇಂಟರ್ನೆಟ್ ಪ್ರವೇಶವಿಲ್ಲದಿದ್ದರೆ SMS ಬಳಸಿಕೊಂಡು ಬಯೋಮೆಟ್ರಿಕ್ಸ್ ಅನ್ನು ಸುಲಭವಾಗಿ ಲಾಕ್ ಮಾಡಬಹುದು.

ನಿಮ್ಮ ಆಧಾರ್ ಲಿಂಕ್ ಮಾಡಲಾದ ಮೊಬೈಲ್ ನಂಬರ್ ಮೂಲಕ (GETOTP (ಸ್ಪೇಸ್) ಆಧಾರ್‌ನ ಕೊನೆಯ 4 ಅಂಕೆಗಳು) 1947 ಸಂಖ್ಯೆಗೆ ಮೆಸೇಜ್ ಕಳುಹಿಸಿ ಬಳಿಕ ಎಸ್‌ಎಂಎಸ್ (SMS) ಮೂಲಕ ಓಟಿಪಿ ಪರಿಶೀಲಿಸಿ ನಿಮ್ಮ ಫೋನ್ ನಂಬರ್ ಬಹು ಆಧಾರ್ ಸಂಖ್ಯೆಗಳಿಗೆ ಲಿಂಕ್ ಆಗಿದ್ದರೆ, ಕೊನೆಯ 4 ಅಂಕೆಗಳ ಬದಲಿಗೆ ಕೊನೆಯ 8 ಅಂಕೆಗಳನ್ನು ಬಳಸಿ ಹೀಗೆ ಮಾಡಿದರೆ ನಿಮ್ಮ ಬಯೋಮೆಟ್ರಿಕ್ಸ್ ಲಾಕ್ ಆಗುತ್ತದೆ ಒಟ್ಟಾರೆ, ನಿಮ್ಮ ಫಿಂಗರ್‌ಪ್ರಿಂಟ್, ಐರಿಸ್ ಸ್ಕ್ಯಾನ್ ಮತ್ತು ಫೇಸ್ ಡೇಟಾವನ್ನು ದುರುಪಯೋಗದಿಂದ ರಕ್ಷಿಸಲು ಆಧಾರ್ ಬಯೋಮೆಟ್ರಿಕ್ ಲಾಕ್ ಪರಿಚಯಿಸಲಾಗಿದೆ. ಇದು ಭದ್ರತಾ ವೈಶಿಷ್ಟ್ಯವಾಗಿದೆ.

ಈ ಲಾಕ್ ಅನ್ನು ಸಕ್ರಿಯಗೊಳಿಸುವುದರಿಂದ, ನಿಮ್ಮ ಅನುಮತಿಯಿಲ್ಲದೆ ಯಾರೂ ಐಡಿ ಪರಿಶೀಲನೆ, ಹಣಕಾಸಿನ ವಹಿವಾಟುಗಳನ್ನು ಮಾಡಲು ಅಥವಾ ಸಿಮ್ ಕಾರ್ಡ್ ನೀಡಲು ಸಾಧ್ಯವಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+