ಹಬ್ಬದ ಸೀಸನ್‌ಗೂ ಮುನ್ನ ಸರ್ಕಾರಿ ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ವಾಣಿಜ್ಯ ಎಲ್‌ಪಿಜಿಯ ರಿಟೇಲ್ ದರವನ್ನು ಪರಿಷ್ಕರಣೆ ಮಾಡಿದೆ. ಈ ಬೆಲೆ ಏರಿಕೆಯು ನವೆಂಬರ್ ಒಂದರಿಂದ ಅಂದರೆ ಇಂದಿನಿಂದ ಜಾರಿಗೆ ಬರುತ್ತದೆ.
19 ಕಿಲೋಗ್ರಾಂ ಸಿಲಿಂಡರ್‌ಗಳ ದರವು ಪ್ರಮುಖ ನಾಲ್ಕು ಮಹಾನಗರಗಳಲ್ಲಿ 101.5 ರೂಪಾಯಿಯಷ್ಟು ಜಿಗಿತ ಕಂಡಿದೆ. ಕಳೆದ ಎರಡು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಹೋದ ತಿಂಗಳು ಕೂಡಾ ಬೆಲೆ ಹೆಚ್ಚಳ ಮಾಡಲಾಗಿದೆ.

ಬೆಂಗಳೂರು ಸೇರಿ, ಯಾವ ನಗರದಲ್ಲಿ ಎಷ್ಟಿದೆ ಬೆಲೆ
ನಮ್ಮ ಬೆಂಗಳೂರಿನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವು 101.50 ರೂಪಾಯಿ ಏರಿಕೆಯಾಗಿ, 1914.50 ರೂಪಾಯಿಗೆ ತಲುಪಿದೆ. ಅಕ್ಟೋಬರ್‌ನಲ್ಲಿ 209 ರೂಪಾಯಿ ದರ ಏರಿಕೆ ಬಳಿಕ ಬೆಂಗಳೂರಿನಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1813 ರೂಪಾಯಿ ಆಗಿತ್ತು. ಅಕ್ಟೋಬರ್‌ನಲ್ಲಿ ವಾಣಿಜ್ಯ ಸಿಲಿಂಡರ್ ದರ ಮುಂಬೈನಲ್ಲಿ 1,684 ರೂಪಾಯಿ, ಕೋಲ್ಕತ್ತಾದಲ್ಲಿ 1,839.50 ರೂಪಾಯಿ ಮತ್ತು ಚೆನ್ನೈನಲ್ಲಿ 1,898 ರೂಪಾಯಿ ಆಗಿತ್ತು.
ಇತ್ತೀಚಿನ ಪರಿಷ್ಕರಣೆ ಬಳಿಕ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಈಗ ದೆಹಲಿಯಲ್ಲಿ 1,731 ರೂಪಾಯಿ ಬದಲಿಗೆ 1,833 ರೂಪಾಯಿಗೆ ಲಭ್ಯವಾಗಲಿದೆ. ಇನ್ನು ಮುಂಬೈನಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ 1,785.50 ರೂಪಾಯಿ, ಕೋಲ್ಕತ್ತಾದಲ್ಲಿ ಪ್ರತಿ ಸಿಲಿಂಡರ್‌ಗೆ 1,943 ರೂಪಾಯಿ ಮತ್ತು ಚೆನ್ನೈನಲ್ಲಿ ಪ್ರತಿ ಸಿಲಿಂಡರ್‌ಗೆ 1,999.50 ರೂಪಾಯಿಗೆ ಬೆಲೆ ಏರಿಕೆಯಾಗಿದೆ.
ಗೃಹ ಬಳಕೆ ಎಲ್‌ಪಿಜಿ ದರ ಏರಿಕೆಯಾಗಿದೆಯೇ?
ವಾಣಿಜ್ಯ ಎಲ್‌ಪಿಜಿ ದರವನ್ನು ಹೆಚ್ಚಳ ಮಾಡಲಾಗಿದ್ದರೂ ಕೂಡಾ ಗೃಹ ಬಳಕೆಗೆ ಬಳಸಲಾಗುವ 14.2 ಕೆಜಿ ಎಲ್‌ಪಿಜಿ ದರವನ್ನು ಮಾತ್ರ ಹೆಚ್ಚಳ ಮಾಡಲಾಗಿಲ್ಲ. ಪ್ರಸ್ತುತ ಬೆಲೆಯು 903 ರೂಪಾಯಿ ಆಗಿದೆ. ಬೆಂಗಳೂರಿನಲ್ಲಿ ಎಲ್‌ಪಿಜಿ ಬೆಲೆ 905.50 ರೂಪಾಯಿ, ಕೋಲ್ಕತ್ತಾದಲ್ಲಿ 929 ರೂಪಾಯಿ, ಮುಂಬೈನಲ್ಲಿ 902.5 ರೂಪಾಯಿ, ಚೆನ್ನೈನಲ್ಲಿ 918.5 ರೂಪಾಯಿ ಆಗಿದೆ.
ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರವು ಸೆಪ್ಟೆಂಬರ್‌ನಲ್ಲಿ ಇಳಿಕೆಯಾಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಸೆಪ್ಟೆಂಬರ್‌ನಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್‌ನ ಬೆಲೆಯನ್ನು 157 ರೂಪಾಯಿ ಕಡಿತಗೊಳಿಸಿದೆ. ಆಗಸ್ಟ್‌ನಲ್ಲಿ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆಯನ್ನು 100 ರೂಪಾಯಿ ಇಳಿಸಲಾಗಿತ್ತು.


Click it and Unblock the Notifications