ಎಲ್‌ಪಿಜಿ ಬೆಲೆ ಏರಿಕೆ ನಡುವೆ ಗ್ರಾಮೀಣ ಪ್ರದೇಶದಲ್ಲಿ ಕಟ್ಟಿಗೆಗೆ ಭಾರೀ ಡಿಮ್ಯಾಂಡ್!

ಈಗಾಗಲೇ ಹಲವಾರು ಅಗತ್ಯ ವಸ್ತುಗಳು ದುಬಾರಿಯಾಗಿದೆ. ಈ ನಡುವೆ ಎಲ್‌ಪಿಜಿ ಸಿಲಿಂಡರ್ ಬೆಲೆಯು ಗಗನಕ್ಕೆ ಏರಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಗ್ರಾಮೀಣ ಪ್ರದೇಶದ ಜನರು ಎಲ್‌ಪಿಜಿ ಬಿಟ್ಟು ಮತ್ತೆ ಕಟ್ಟಿಗೆಯತ್ತ ಮುಖ ಮಾಡುತ್ತಿದ್ದಾರೆ.

ಹೌದು ಎಲ್‌ಪಿಜಿ ಬೆಲೆಯು ಆಗಾಗ ಏರಿಕೆಯಾಗಿ, ಇದೀಗ ಸಿಲಿಂಡರ್‌ಗೆ 1,000 ರೂಪಾಯಿಗೆ ಸಮೀಪಿಸಿದೆ. ಈ ನಡುವೆ ಗ್ರಾಮೀಣ ಪ್ರದೇಶದಲ್ಲಿ ಅಡುಗೆ ಕಟ್ಟಿಗೆಗಳಿಗೆ ಭಾರೀ ಡಿಮ್ಯಾಂಡ್ ಹೆಚ್ಚಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಖರೀದಿಗೆ ಹೋಲಿಸಿದರೆ ಕಡಿಮೆ ಬೆಲೆಯ ಕಟ್ಟಿಗೆಯನ್ನು ಬಳಕೆ ಮಾಡಲು ಜನರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಅದಿಲಾಬಾದ್‌ನಲ್ಲಿ ಒಂದು ಗಾಡಿಯ ತುಂಬ ಕಟ್ಟಿಗೆಯು 500 ರೂ.ಗೆ ದೊರೆಯುತ್ತಿದ್ದು, ಜನರು ಇದನ್ನೇ ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಈ ಸಾಮಾನ್ಯ ಪರಿಸ್ಥಿತಿಯಲ್ಲಿ ಒಂದು ಕುಟುಂಬಕ್ಕೆ ಈ ಕಟ್ಟಿಗೆಯು ಒಂದು ತಿಂಗಳವರೆಗೆ ಬಳಕೆ ಮಾಡಬಹುದು.

ಪರೋಕ್ಷವಾಗಿ ಗೃಹಬಳಕೆಯ ಮತ್ತು ವಾಣಿಜ್ಯ LPG ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿನ ಹೆಚ್ಚಳವು ಅರಣ್ಯ ಸಂರಕ್ಷಣೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಗ್ರಾಮೀಣ ಜನರು ಎಲ್‌ಪಿಜಿ ಬೆಲೆ ಏರಿಕೆ ಹಿನ್ನೆಲೆ ಕಟ್ಟಿಗೆ ಬಳಕೆ ಹೆಚ್ಚು ಮಾಡುತ್ತಿರುವ ಹಿನ್ನೆಲೆ ಅರಣ್ಯ ನಾಶಕ್ಕೆ ಕಾರಣವಾಗುತ್ತಿರುವುದು ಕೂಡಾ ಹೌದು. ಆದರೆ ಈ ನಡುವೆ ನಗರದ ಜನರು ಪಾಡು ಹೇಳುವಂತಿಲ್ಲ. ಅಪಾರ್ಟ್‌ಮೆಂಟ್‌ಗಳಲ್ಲಿ ಕಟ್ಟಿಗೆ ಬಳಕೆ ಸಾಧ್ಯವಾಗದೆ ಗ್ಯಾಸ್ ಬಳಕೆ ಮಾಡುವ ಮೂಲಕ ಜೇಬಿಗೆ ಕತ್ತರಿ ಹಾಕಿಕೊಳ್ಳುತ್ತಿದ್ದಾರೆ.

 ಸಬ್ಸಿಡಿ ಮೇಲೆ ಗೋಬರ್ ಗ್ಯಾಸ್

ಸಬ್ಸಿಡಿ ಮೇಲೆ ಗೋಬರ್ ಗ್ಯಾಸ್

ಗ್ರಾಮೀಣ ಭಾಗಗಳಲ್ಲಿ ಕಟ್ಟಿಗೆ ಹಾಗೂ ಎಲ್‌ಪಿಜಿ ಸಿಲಿಂಡರ್ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸಬ್ಸಿಡಿ ಮೇಲೆ ಇತರೆ ಪರ್ಯಾಯ ವ್ಯವಸ್ಥೆ ಪೂರೈಸುವ ಕಾರ್ಯ ಮಾಡಬೇಕಾಗಿದೆ. ಹೆಚ್ಚು ವೆಚ್ಚ ಬೇಕಾಗಿಲ್ಲದ ಗೋಬರ್ ಗ್ಯಾಸ್ ಸ್ಥಾವರಗಳನ್ನು (ಹಸುವಿನ ಸಗಣಿ ಅನಿಲ ಸ್ಥಾವರ) ಸ್ಥಾಪನೆಗೆ ಅಧಿಕಾರಿಗಳು ಪ್ರೋತ್ಸಾಹಿಸಬೇಕು ಎಂದು ಪರಿಸರ ಪ್ರೇಮಿಗಳು ಹೇಳುತ್ತಾರೆ.

 ಮೂಲೆಗೆ ಸರಿದ ಗ್ಯಾಸ್ ಸ್ಟವ್

ಮೂಲೆಗೆ ಸರಿದ ಗ್ಯಾಸ್ ಸ್ಟವ್

ಎಲ್‌ಪಿಜಿ ಬೆಲೆ ಏರಿಕೆಯಾದ ನಂತರ ಅನೇಕ ಕುಟುಂಬಗಳು ಗ್ಯಾಸ್ ಸ್ಟೌವ್‌ನಲ್ಲಿ ಅಡುಗೆ ಮಾಡುವುದನ್ನು ಕಡಿಮೆ ಮಾಡಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಗ್ಯಾಸ್ ಸ್ಟವ್‌ಗಳನ್ನು ಮೂಲೆಗೆ ಸರಿಸಲಾಗಿದೆ. ಇಲ್ಲಿಯವರೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಂದ ಸಬ್ಸಿಡಿ ಮತ್ತು ಉಚಿತವಾಗಿ ಗೃಹೋಪಯೋಗಿ ಸಿಲಿಂಡರ್ ಮತ್ತು ಗ್ಯಾಸ್ ಸ್ಟವ್‌ಗಳನ್ನು ಪಡೆದ ಅನೇಕ ಬಡ ಕುಟುಂಬಗಳು ಕ್ರಮೇಣ ಈಗ ಕಟ್ಟಿಗೆ ಬಳಕೆಯನ್ನೇ ಅಧಿಕ ಮಾಡುತ್ತಿದೆ. ಸಿಲಿಂಡರ್‌ಗಳ ಬೆಲೆಯನ್ನು ಭರಿಸಲು ಸಾಧ್ಯವಾಗದೆ ಈ ನಿರ್ಧಾರವನ್ನು ಹಲವಾರು ಗ್ರಾಮೀಣ ಕುಟುಂಬಗಳು ಮಾಡಿದೆ.

 ಹೋಟೆಲ್ ಮಾಲೀಕರಿಗೆ ಬರೆ

ಹೋಟೆಲ್ ಮಾಲೀಕರಿಗೆ ಬರೆ

ಇನ್ನು ದೇಶೀಯ ಅಡುಗೆ ಅನಿಲ ಮಾತ್ರವಲ್ಲದೇ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ ದರವೂ ಹೆಚ್ಚಿದೆ. ಇದು ಮುಖ್ಯವಾಗಿ ಸಣ್ಣ ಹೋಟೆಲ್‌ಗಳು ಮತ್ತು ರಸ್ತೆ ಬದಿ ಫಾಸ್ಟ್‌ಫುಡ್ ಅಂಗಡಿಗಳನ್ನು ನಡೆಸುತ್ತಿರುವವರಿಗೆ ಹೊರೆಯಾಗಿದೆ. "ನಾವು ಲಾಭಕ್ಕಿಂತ ಹೆಚ್ಚು ನಷ್ಟವನ್ನೇ ಅನುಭವಿಸುತ್ತಿದ್ದೇವೆ. ವಾಣಿಜ್ಯ ಸಿಲಿಂಡರ್‌ಗಳನ್ನು ಖರೀದಿ ಮಾಡಲೆಂದೇ ಹೆಚ್ಚಿನ ಹಣವನ್ನು ಖರ್ಚು ಮಾಡಬೇಕಾಗುತ್ತದೆ," ಎಂದು ಸಣ್ಣ ಹೋಟೆಲ್ ಮಾಲೀಕರು ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲಾಗಿತ್ತು. ಮೇ 1 ರಂದು, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ರೂ 102.50 ಹೆಚ್ಚಿಸಲಾಗಿದ್ದು, ಬೆಲೆ ರೂ 2355.50 ಕ್ಕೆ ಏರಿದೆ. ಈ ಹಿಂದೆ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ರೂ 2253 ಆಗಿತ್ತು. ಏಪ್ರಿಲ್‌ನಲ್ಲಿಯೂ ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಕೆ ಮಾಡಲಾಗಿದೆ.

 ಎಲ್‌ಪಿಜಿ ಬೆಲೆ ಎಷ್ಟು ಏರಿಕೆ?

ಎಲ್‌ಪಿಜಿ ಬೆಲೆ ಎಷ್ಟು ಏರಿಕೆ?

ಕಳೆದ ಹತ್ತು ವರ್ಷಗಳಲ್ಲಿ ಹಲವಾರು ಬಾರಿ ಎಲ್‌ಪಿಜಿ ಬೆಲೆಯು ಏರಿಕೆ ಕಂಡಿದೆ. ಈಗ ಬಹುತೇಕ ಎಲ್ಲಾ ಪ್ರದೇಶಗಳಲ್ಲಿ ಎಲ್‌ಪಿಜಿ ಬೆಲೆಯು ಸಾವಿರ ದಾಟಿದೆ. ಈಗಾಗಲೇ ಬೆಲೆ ಏರಿಕೆಯಿಂದಾಗಿ ತತ್ತರಿಸಿಹೋಗಿರುವ ಜನರಿಗೆ ಈಗ ಮತ್ತೆ ಆಘಾತ ಉಂಟಾಗಿದೆ. ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ನ ಬೆಲೆಯನ್ನು 50 ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಪರಿಷ್ಕರಣೆಯ ಬಳಿಕ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯು 999.50 ರೂಪಾಯಿ ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+