ಭಾರತೀಯ ಜನತಾ ಪಕ್ಷ ನೇತೃತ್ವದ ಕೇಂದ್ರ ಸರ್ಕಾರವು ಗೃಹ ಬಳಕೆಯ ಹಾಗೂ ವಾಣಿಜ್ಯ ಬಳಕೆಯ ಲಿಕ್ವಿಫೈಡ್ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್ ದರವನ್ನು ಏರಿಸಿದೆ. ಹಲವಾರು ಮೆಟ್ರೋ ನಗರಗಳಲ್ಲಿ ಈ ದರ ಭಾರೀ ಹೆಚ್ಚಳವಾಗಿದೆ. ಕ್ರಮವಾಗಿ ವಾಣಿಜ್ಯ ಸಿಲಿಂಡರ್ ದರವನ್ನು 350 ರೂಪಾಯಿ ಮತ್ತು ಗೃಹಬಳಕೆಯ ಸಿಲಿಂಡರ್ ದರವನ್ನು 50 ರೂಪಾಯಿ ಏರಿಕೆ ಮಾಡಲಾಗಿದೆ. ಇದರಿಂದಾಗಿ ಈಗಾಗಲೇ ಸಾವಿರ ರೂಪಾಯಿ ದಾಟಿದ್ದ ದರ ಇನ್ನಷ್ಟು ಹೆಚ್ಚಾಗಿದೆ.
ಗೃಹಬಳಕೆಯ ಹಾಗೂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ದರವು ಹೆಚ್ಚಳವಾದ ಬಳಿಕ ಈ ಹಿಂದೆ 900 ರೂಪಾಯಿ ಆಸುಪಾಸಿನಲ್ಲಿದ್ದ ಸಿಲಿಂಡರ್ ದರವು ಕೂಡಾ 1000 ರೂಪಾಯಿ ದಾಟಿದೆ. ಪ್ರಮುಖವಾಗಿ ಮೆಟ್ರೋ ನಗರಗಳಲ್ಲಿ ಸಿಲಿಂಡರ್ ದರವು ಮಾರ್ಚ್ 1ರಿಂದ ಎಲ್ಲ ಕುಟುಂಬಗಳಿಗೆ ಅತೀ ದೊಡ್ಡ ಹೊರೆಯಾಗಿದೆ. ಈ ನಡುವೆ ಈ ಒಂದು ನಗರದಲ್ಲಿ ಎಲ್ಲ ಮೆಟ್ರೋ ನಗರಗಳಿಗಿಂತ ಅಧಿಕ ಎಲ್‌ಪಿಜಿ ದರವಿದೆ. ಈ ನಗರದ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

ಈ ನಗರದಲ್ಲಿ ಎಲ್‌ಪಿಜಿ ಅತೀ ದುಬಾರಿ!
ದೇಶದಾದ್ಯಂತ ಎಲ್‌ಪಿಜಿ ದರವನ್ನು ಹೆಚ್ಚಳ ಮಾಡಲಾಗಿದೆ. ಆದರೆ ಅದರಲ್ಲೂ ಮೆಟ್ರೋ ನಗರಗಳಲ್ಲಿ ದರ ಭಾರೀ ಹೆಚ್ಚಾಗಿದೆ. ಈ ಪೈಕಿ ಈ ಒಂದು ಮೆಟ್ರೋ ನಗರದಲ್ಲಿ ಎಲ್‌ಪಿಜಿ ದರವು ಅತೀ ದುಬಾರಿಯಾಗಿದೆ. ಆ ನಗರವೇ ಹೈದರಾಬಾದ್. ದೇಶದಲ್ಲಿ ಅನಿಲ ಹಣದುಬ್ಬರವು ಆರಂಭವಾದ ಬಳಿಕ ಎಲ್‌ಪಿಜಿ ದರವು ಹೈದರಾಬಾದ್‌ನಲ್ಲಿ 1150 ರೂಪಾಯಿಯ ಗಡಿಯನ್ನು ದಾಟಿದೆ. ಈಗಾಗಲೇ ಬೆಂಗಳೂರಿಗರು ಪ್ರತಿ ಸಿಲಿಂಡರ್‌ಗೆ 1,105.50 ರೂ ಪಾವತಿ ಕಷ್ಟ ಎನ್ನುವಾಗ ಹೈದರಾಬಾದ್‌ನ ಜನತೆ 1150 ರೂಪಾಯಿಗೂ ಅಧಿಕ ಪಾವತಿಸಬೇಕಾಗಿದೆ.
ಎಲ್‌ಪಿಜಿ ಸಿಲಿಂಡರ್ ದರ ಏರಿಕೆಯಾದ ಬಳಿಕ ಹೈದಾರಾಬಾದ್‌ನಲ್ಲಿ ರಿಟೇಲ್ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್ ದರವು 1155 ರೂಪಾಯಿ ಆಗಿದೆ. ಇನ್ನು ವಾಣಿಜ್ಯ ಸಿಲಿಂಡರ್ ದರವು 2325 ರೂಪಾಯಿ ಆಗಿದೆ. ಇನ್ನು ದೇಶದ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ದರ 2119.50 ರೂಪಾಯಿ ಆಗಿದೆ. ಇನ್ನು ಕೋಲ್ಕತ್ತಾದಲ್ಲಿ ಅತೀ ಅಧಿಕ ದರವಿದೆ. ಯಾವ ಮೆಟ್ರೋ ನಗರದಲ್ಲಿ ಎಷ್ಟು ಎಲ್‌ಪಿಜಿ ದರವಿದೆ ಎಂಬ ಮಾಹಿತಿ ಈ ಕೆಳಗಿದೆ.
ದೆಹಲಿ - 1103 ರೂಪಾಯಿ
ಚೆನ್ನೈ - 1118.5 ರೂಪಾಯಿ
ಬೆಂಗಳೂರು - 1105.5 ರೂಪಾಯಿ
ಕೋಲ್ಕತ್ತಾ - 1129 ರೂಪಾಯಿ
ಹೈದರಾಬಾದ್ - 1155 ರೂಪಾಯಿ
ಮುಂಬೈ: ಮಾರ್ಚ್ 1,102.50 ರೂ


Click it and Unblock the Notifications