ಹೊಸ ಹಣಕಾಸು ವರ್ಷ ಇಂದಿನಿಂದ (ಏಪ್ರಿಲ್ 1, 2023) ಆರಂಭವಾಗುತ್ತಿದೆ. ಈ ದಿನದಿಂದ ಕೇಂದ್ರ ಬಜೆಟ್‌ನ ಎಲ್ಲ ಘೋಷಣೆಗಳು ಜಾರಿಗೆ ಬರಲಿದೆ. ಹಾಗೆಯೇ ಹಲವಾರು ಹಣಕಾಸು ಬದಲಾವಣೆಗಳು ಆಗಲಿದೆ. ಹಲವಾರು ಜನರಿಗೆ ಏಪ್ರಿಲ್ ತಿಂಗಳು ಅತೀ ಮುಖ್ಯವಾದ ತಿಂಗಳು ಆಗಿದೆ. ಯಾಕೆಂದರೆ ಈ ತಿಂಗಳಲ್ಲಿ ಆಗುವ ಹಣಕಾಸು ಬದಲಾವಣೆ ನಮ್ಮ ವೈಯಕ್ತಿಕ ಹಣಕಾಸಿನ ಮೇಲೆಯೂ ಪ್ರಭಾವ ಉಂಟು ಮಾಡುತ್ತದೆ. ತೆರಿಗೆ ಪಾವತಿದಾರರಂತು ಎಲ್ಲ ಬದಲಾವಣೆಗಳನ್ನು ತಿಳಿಯುವುದು ಮುಖ್ಯವಾಗಿದೆ. ಈ ಹಲವಾರು ಬದಲಾವಣೆಗಳ ನಡುವೆ ವಾಣಿಜ್ಯ ಎಲ್‌ಪಿಜಿ (ಹೊಟೇಲ್‌ಗಳಲ್ಲಿ ಬಳಕೆ) ಬಳಕೆ ಮಾಡುವ ಗ್ರಾಹಕರಿಗೆ ಬಿಗ್ ರಿಲೀಫ್ ಸಿಕ್ಕಿದೆ.
ಹೌದು, ಉಳಿತಾಯ ಖಾತೆಯಲ್ಲಿ ಬದಲಾವಣೆ, ಹೊಸ ತೆರಿಗೆ ಸ್ಲ್ಯಾಬ್‌ನಿಂದ ಹಿಡಿದು ಹಲವಾರು ಬದಲಾವಣೆಗಳ ಜೊತೆಗೆ ಇಂದು ಎಲ್‌ಪಿಜಿ ದರ ಪರಿಷ್ಕರಣೆ ಮಾಡಲಾಗಿದೆ. ಪ್ರತಿ ತಿಂಗಳ ಮೊದಲ ದಿನ ತೈಲ ಹಾಗೂ ಅನಿಲ ಸಂಸ್ಥೆಗಳು ಎಲ್‌ಪಿಜಿ ದರವನ್ನು ಪರಿಷ್ಕರಣೆ ಮಾಡುತ್ತದೆ. ಕಳೆದ ಹಲವಾರು ತಿಂಗಳುಗಳಿಂದ ಅಡುಗೆ ಅನಿಲ ದರವನ್ನು ಸ್ಥಿರವಾಗಿರಿಸಿದ್ದ ಸಂಸ್ಥೆಗಳು ಕಳೆದ ತಿಂಗಳು ಅಂದರೆ ಮಾರ್ಚ್‌ನಲ್ಲಿ ಗೃಹಬಳಕೆ ಎಲ್‌ಪಿಜಿ ದರದಲ್ಲಿ 50 ರೂಪಾಯಿ ಏರಿಕೆ ಮಾಡಲಾಗಿದೆ. ಏಪ್ರಿಲ್‌ನಲ್ಲಿ ವಾಣಿಜ್ಯ ಎಲ್‌ಪಿಜಿ (19 ಕೆಜಿ) ಬಳಕೆ ಮಾಡುವ ಗ್ರಾಹಕರಿಗೆ ಸಿಹಿಸುದ್ದಿಯನ್ನು ಸಂಸ್ಥೆಗಳು ನೀಡಿದ್ದು, ಎಲ್‌ಪಿಜಿ ದರವನ್ನು 92 ರೂಪಾಯಿ ಇಳಿಕೆ ಮಾಡಲಾಗಿದೆ.

ಗೃಹ ಬಳಕೆ ಎಲ್‌ಪಿಜಿ ದರದಲ್ಲಿ ಬದಲಾವಣೆಯಿಲ್ಲ!
ಹಲವಾರು ತಿಂಗಳುಗಳಿಂದ ವಾಣಿಜ್ಯ ಎಲ್‌ಪಿಜಿ ದರವು ಏರಿಳಿತವಾಗುತ್ತಿದೆ. ಹೊಸ ಹಣಕಾಸು ವರ್ಷದ ಮೊದಲ ದಿನವೇ ವಾಣಿಜ್ಯ ಎಲ್‌ಪಿಜಿ ದರವನ್ನು ಇಳಿಕೆ ಮಾಡಲಾಗಿದೆ. ಭಾರತದಲ್ಲಿ ಪ್ರಮುಖವಾಗಿ ರೂಪಾಯಿ ಹಾಗೂ ಯುಎಸ್ ಡಾಲರ್‌ನ ನಡುವಿನ ವಿನಿಮಯ ದರ ಮತ್ತು ಇವೆರಡು ಕರೆನ್ಸಿಗಳ ಅಂತಾರಾಷ್ಟ್ರೀಯ ಬೇಂಚ್‌ಮಾರ್ಕ್ ರೇಟ್ ಭಾರತದಲ್ಲಿ ಎಲ್‌ಪಿಜಿ ದರ ಪರಿಷ್ಕರಣೆಯ ಮೇಲೆ ಪ್ರಭಾವ ಬೀರುತ್ತದೆ. ಎಲ್‌ಪಿಜಿ ದರವನ್ನು ಈ ತಿಂಗಳಲ್ಲಿ ಇಳಿಕೆ ಮಾಡಲಾಗಿದ್ದರೂ ಕೂಡಾ ಪ್ರತಿ ಕುಟುಂಬಕ್ಕೆ ಒಂದು ಹಣಕಾಸು ವರ್ಷದಲ್ಲಿ 12 ಸಿಲಿಂಡರ್ (14.2 ಕೆಜಿ) ಮಾತ್ರ ವಿನಾಯಿತಿ ದರದಲ್ಲಿ ಪಡೆಯಲು ಸಾಧ್ಯ ಎಂಬುವುದು ನೆನಪಿರಲಿ.
14.2 ಕೆಜಿಯ ಗೃಹ ಬಳಕೆಯ ಎಲ್‌ಪಿಜಿ ದರವು ಕಳೆದ ತಿಂಗಳವರೆಗೆ ಸ್ಥಿರವಾಗಿತ್ತು. ಆದರೆ ಮಾರ್ಚ್‌ನಲ್ಲಿ ಪ್ರತಿ ಸಿಲಿಂಡರ್ ದರವನ್ನು 50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಹಾಗೆಯೇ ವಾಣಿಜ್ಯ ಎಲ್‌ಪಿಜಿ ದರವನ್ನು ಕೂಡಾ ಹೆಚ್ಚಳ ಮಾಡಲಾಗಿದೆ. 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು 350.50 ರೂಪಾಯಿ ಹೆಚ್ಚಳ ಮಾಡಲಾಗಿದೆ. ಏಪ್ರಿಲ್‌ನಲ್ಲಿ ವಾಣಿಜ್ಯ ಸಿಲಿಂಡರ್ ದರವನ್ನು 92 ರೂಪಾಯಿ ಇಳಿಕೆ ಮಾಡಲಾಗಿದೆ. ಆದರೆ ನಾವು ದಿನನಿತ್ಯ ಮನೆಯಲ್ಲಿ ಅಡುಗೆಗೆ ಬಳಸುವ ಗೃಹ ಬಳಕೆ ಎಲ್‌ಪಿಜಿ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಈ ಹಿಂದೆ ಜನವರಿ 1ರಂದು ವಾಣಿಜ್ಯ ಸಿಲಿಂಡರ್ ದರವನ್ನು ಪ್ರತಿ ಯುನಿಟ್‌ಗೆ 25 ರೂಪಾಯಿ ಏರಿಕೆ ಮಾಡಲಾಗಿದೆ. ಕಳೆ ಬಾರಿ 2022ರ ಸೆಪ್ಟೆಂಬರ್ 1ರಂದು ವಾಣಿಜ್ಯ ಎಲ್‌ಪಿಜಿ ದರವನ್ನು 91.50 ರೂಪಾಯಿ ಇಳಿಕೆ ಮಾಡಲಾಗಿದೆ. ಇನ್ನು 2022ರ ಆಗಸ್ಟ್ 1ರಂದು ಕೂಡಾ ವಾಣಿಜ್ಯ ಎಲ್‌ಪಿಜಿ ದರವನ್ನು 36 ರೂಪಾಯಿ ಇಳಿಕೆ ಮಾಡಲಾಗಿದೆ. ಜುಲೈ 6ರಂದು 19 ಕೆಜಿಯ ವಾಣಿಜ್ಯ ಸಿಲಿಂಡರ್ ದರವನ್ನು 8.5 ರೂಪಾಯಿ ಕಡಿತ ಮಾಡಲಾಗಿದೆ.
19 ಕೆಜಿ ಸಿಲಿಂಡರ್ ದರ ಎಷ್ಟಿದೆ?
ದೆಹಲಿ: 2028 ರೂಪಾಯಿ
ಕೋಲ್ಕತ್ತಾ: 2132 ರೂಪಾಯಿ
ಮುಂಬೈ: 1980 ರೂಪಾಯಿ
ಚೆನ್ನೈ: 2192.50 ರೂಪಾಯಿ


Click it and Unblock the Notifications