ಎಲ್‌ಪಿಜಿ ಬಳಕೆದಾರರಿಗೆ ತೈಲ ಮಾರುಕಟ್ಟೆ ಕಂಪನಿಗಳು ಸಿಹಿಸುದ್ದಿಯೊಂದನ್ನು ನೀಡಿದೆ. ಮುಖ್ಯವಾಗಿ ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ಇದು ಗುಡ್ ನ್ಯೂಸ್ ಆಗಿದೆ. ಒಎಂಸಿಗಳು ಶುಕ್ರವಾರ ನಾಲ್ಕು ಮೆಟ್ರೋ ನಗರಗಳಲ್ಲಿ 19-ಕಿಲೋಗ್ರಾಂ ವಾಣಿಜ್ಯ ಎಲ್‌ಪಿಜಿ ದರದಲ್ಲಿ ಇಳಿಕೆಯನ್ನು ಘೋಷಿಸಿದೆ.
ನವೆಂಬರ್ 16 ರಿಂದ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್‌ಗೆ 57.5 ರೂಪಾಯಿವರೆಗೆ ಬೆಲೆಯನ್ನು ಕಡಿತಗೊಳಿಸಲಾಗಿದೆ. ಯಾವೆಲ್ಲ ನಗರಗಳಲ್ಲಿ ವಾಣಿಜ್ಯ ಎಲ್‌ಪಿಜಿ ದರ ಇಳಿಸಲಾಗಿದೆ. ನಿಮ್ಮ ಗೃಹ ಬಳಕೆಯ ಎಲ್‌ಪಿಜಿ ದರ ಎಷ್ಟಿದೆ, ಯಾರಿಗೆ ಲಾಭ ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

ನಗರವಾರು ಇತ್ತೀಚಿನ ಎಲ್‌ಪಿಜಿ ಬೆಲೆ ಪರಿಶೀಲಿಸಿ
ಎಲ್‌ಪಿಜಿ ವಾಣಿಜ್ಯ ಸಿಲಿಂಡರ್‌ಗಳ ಬೆಲೆಯು ದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಲ್ಲಿ ಇಳಿಕೆಯಾಗಿದೆ. ದೀಪಾವಳಿಯ ಮುಂಚೆಯೇ ಪ್ರತಿ ಸಿಲಿಂಡರ್‌ಗೆ 101.5 ರೂಪಾಯಿಗಳ ಗಣನೀಯ ಏರಿಕೆಯ ನಂತರ ಒಂದು ವಿರಾಮ ಈಗ ಲಭ್ಯವಾದಂತೆ ಆಗಿದೆ.
ಪರಿಷ್ಕೃತ ಬೆಲೆಗಳ ಪ್ರಕಾರ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ನವದೆಹಲಿಯಲ್ಲಿ 1,775.5 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ 1,885.5 ರೂಪಾಯಿ ಆಗಿದೆ. ಮುಂಬೈನಲ್ಲಿ 1,728 ರೂಪಾಯಿ, ಚೆನ್ನೈನಲ್ಲಿ 1,942 ರೂಪಾಯಿಗೆ ಲಭ್ಯವಿದೆ.
ದೇಶೀಯ ಎಲ್‌ಪಿಜಿ ಬೆಲೆ ಸ್ಥಿರ
ವಾಣಿಜ್ಯ ಎಲ್‌ಪಿಜಿ ಬೆಲೆಗಳು ಕಡಿತವನ್ನು ಕಂಡಿದ್ದರೂ ಸಹ, ದೇಶಾದ್ಯಂತ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಬದಲಾಗದೆ ಉಳಿದಿವೆ. ಈ ತಿಂಗಳ ಆರಂಭದಲ್ಲಿ, ಒಎನ್‌ಸಿಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಿವೆ. ಕಳೆದ ಎರಡು ತಿಂಗಳಲ್ಲಿ ಎರಡನೇ ಬಾರಿಗೆ ದೇಶಾದ್ಯಂತ ಹಲವಾರು ಸ್ಥಳಗಳಲ್ಲಿ ಎಲ್‌ಪಿಜಿ ಬೆಲೆ ಏರಿಸಲಾಗಿದೆ.
ವಾಣಿಜ್ಯ ಮತ್ತು ದೇಶೀಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ಪ್ರತಿ ತಿಂಗಳ ಮೊದಲ ದಿನದಂದು ಮಾಸಿಕವಾಗಿ ಪರಿಷ್ಕರಣೆ ಮಾಡಲಾಗುತ್ತದೆ. ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳಲ್ಲಿನ ಕಡಿತವು ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಂತಹ ವ್ಯವಹಾರಗಳ ಮೇಲಿನ ಹೊರೆಯನ್ನು ತಗ್ಗಿಸುವ ನಿರೀಕ್ಷೆಯಿದೆ.
ಗೃಹ ಬಳಕೆಯ ಎಲ್‌ಪಿಜಿ ದರ
ನವದೆಹಲಿಯಲ್ಲಿ 903 ರೂಪಾಯಿ, ಕೋಲ್ಕತ್ತಾದಲ್ಲಿ 1000 ರೂಪಾಯಿ, ಮುಂಬೈನಲ್ಲಿ 902.50 ರೂಪಾಯಿ, ಚೆನ್ನೈನಲ್ಲಿ 918.50 ರೂಪಾಯಿ, ಬೆಂಗಳೂರಿನಲ್ಲಿ 905.50 ರೂಪಾಯಿ, ಭುವನೇಶ್ವರದಲ್ಲಿ 929 ರೂಪಾಯಿ, ಚಂಡೀಗಢದಲ್ಲಿ 912.50 ರೂಪಾಯಿ, ಹೈದಾರಾಬದ್‌ನಲ್ಲಿ 955 ರೂಪಾಯಿ, ತಿರುವನಂತಪುರಂನಲ್ಲಿ ಗೃಹ ಬಳಕೆಯ ಎಲ್‌ಪಿಜಿ ಬೆಲೆ ಇದೆ.


Click it and Unblock the Notifications