ವಾಣಿಜ್ಯ ಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ದರವನ್ನು ಶುಕ್ರವಾರದಂದು ಇಳಿಕೆ ಮಾಡಲಾಗಿದೆ. 19 ಕೆಜಿ ಸಿಲಿಂಡರ್‌ನ ದರವನ್ನು 39.50 ರೂಪಾಯಿಗಳಷ್ಟು ಕಡಿಮೆಗೊಳಿಸಲಾಗಿದೆ. ಸ್ಥಳೀಯ ತೆರಿಗೆಯ ಆಧಾರದ ಮೇಲೆ ದರಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.
ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಂತಹ ವಿವಿಧ ಸಂಸ್ಥೆಗಳಲ್ಲಿ ಬಳಸುವ ವಾಣಿಜ್ಯ ಎಲ್‌ಪಿಜಿ ಈಗ ರಾಷ್ಟ್ರ ರಾಜಧಾನಿಯಲ್ಲಿ 1,757 ರೂಪಾಯಿಯಿಂದ 1,796.50 ರೂಪಾಯಿಗೆ ತಲುಪಿದೆ. ಮುಂಬೈನಲ್ಲಿ 19 ಕೆಜಿ ಸಿಲಿಂಡರ್‌ಗೆ 1,710 ರೂಪಾಯಿ, ಕೋಲ್ಕತ್ತಾದಲ್ಲಿ 1,868.50 ರೂಪಾಯಿ ಮತ್ತು ಚೆನ್ನೈನಲ್ಲಿ 1,929 ರೂಪಾಯಿ ಆಗಿದೆ. ಈ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ....

ಗೃಹ ಬಳಕೆಯ ಎಲ್‌ಪಿಜಿ ದರ ಎಷ್ಟಿದೆ?
ವಾಣಿಜ್ಯ ಬಳಕೆಯ ಎಲ್‌ಪಿಜಿ ದರ ಇಳಿಕೆಯಾಗಿದ್ದರೂ ಕೂಡಾ ಗೃಹಬಳಕೆಯ ಎಲ್‌ಪಿಜಿ ಬೆಲೆ ಮಾತ್ರ ಸ್ಥಿರವಾಗಿದೆ. ಈ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. 14.2 ಕೆಜಿ ಸಿಲಿಂಡರ್ ದರವು 903 ರೂಪಾಯಿಯೇ ಆಗಿದೆ. ಇದರಲ್ಲಿ ಬದಲಾವಣೆ ಆಗಿಲ್ಲ.
ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ಪಿಸಿಎಲ್) ಪ್ರತಿ ತಿಂಗಳ 1 ರಂದು ಅಡುಗೆ ಅನಿಲ ಮತ್ತು ಎಟಿಎಫ್ ಬೆಲೆಗಳನ್ನು ಹಿಂದಿನ ತಿಂಗಳ ಸರಾಸರಿ ಅಂತರರಾಷ್ಟ್ರೀಯ ಬೆಲೆಯನ್ನು ಆಧರಿಸಿ ಪರಿಷ್ಕರಿಸುತ್ತವೆ.
ಪೆಟ್ರೋಲ್ ಬೆಲೆ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸತತವಾಗಿ 21 ನೇ ತಿಂಗಳವರೆಗೆ ಸ್ಥಿರವಾಗಿಯೇ ಉಳಿದಿದೆ. ರಾಷ್ಟ್ರ ರಾಜಧಾನಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 96.72 ರೂಪಾಯಿ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ 89.62 ರೂಪಾಯಿ ಆಗಿದೆ. ನವೆಂಬರ್ 17 ರಂದು, ರಾಜ್ಯ-ಚಾಲಿತ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 19-ಕಿಲೋಗ್ರಾಂ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 57.5 ರೂಪಾಯಿವರೆಗೆ ಕಡಿತಗೊಳಿಸಿದೆ.
ಗೃಹ ಬಳಕೆಯ ಎಲ್‌ಪಿಜಿ ದರ ಪರಿಶೀಲಿಸಿ
ನವದೆಹಲಿ: 903 ರೂಪಾಯಿ
ಕೋಲ್ಕತ್ತಾ: 1000 ರೂಪಾಯಿ
ಮುಂಬೈ: 902.50 ರೂಪಾಯಿ
ಚೆನ್ನೈ: 918.50 ರೂಪಾಯಿ
ಗುರುಗ್ರಾಮ: 911.50 ರೂಪಾಯಿ
ನೋಯ್ಡಾ: 900.50 ರೂಪಾಯಿ
ಬೆಂಗಳೂರು: 905.50 ರೂಪಾಯಿ
ಭುವನೇಶ್ವರ: 929 ರೂಪಾಯಿ
ಚಂಡೀಗಢ: 9012.50 ರೂಪಾಯಿ
ಹೈದಾರಾಬಾದ್: 955 ರೂಪಾಯಿ
ಜೈಪುರ: 906.50 ರೂಪಾಯಿ
ಲಕ್ನೋ: 940.50 ರೂಪಾಯಿ
ಪಾಟ್ನಾ: 1001 ರೂಪಾಯಿ
ತಿರುವನಂತಪುರಂ: 912 ರೂಪಾಯಿ


Click it and Unblock the Notifications