ಮಹಿಳೆಯರು ಹಣವನ್ನು ಉಳಿತಾಯ ಮಾಡಲು ಹಲವಾರು ರೀತಿಯಲ್ಲಿ ಸರ್ಕಸ್ ಮಾಡುತ್ತಿರುತ್ತಾರೆ. ಕಡಿಮೆ ಸಮಯದಲ್ಲಿ ನಾನು ಶ್ರೀಮಂತರಾಗಬೇಕೆಂದು ಬಯಸುವ ಹೆಣ್ಣು ಮಕ್ಕಳಿಗೆ, ಹಾಗೂ ಮಹಿಳೆಯರಿಗೆ ಈ ಯೋಜನೆ ಉತ್ತಮವೆಂದೇ ಹೇಳಬಹುದು.ಈ ಯೋಜನೆಯ ಹೆಸರು 'ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ. ಮಹಿಳೆಯರಲ್ಲಿ ಹೂಡಿಕೆಯ ಆಸಕ್ತಿಯನ್ನು ಹೆಚ್ಚಿಸಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಪ್ರಾರಂಭಿಸಿದೆ. ಅಂಚೆ ಇಲಾಖೆಯು ಮಹಿಳೆಯರಿಗಾಗಿ ವಿಶೇಷ ಯೋಜನೆ ಹೊಂದಿದೆ.
ಹೌದು, ಮಹಿಳೆಯರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ನಿಮ್ಮ ಹೆಂಡತಿ ಅಥವಾ ಮಗಳ ಹೆಸರಿನಲ್ಲಿ ನೀವು ಸರ್ಕಾರಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಸುರಕ್ಷಿತ ಹೂಡಿಕೆಗೆ ಈ ಯೋಜನೆ ಉತ್ತಮ ಅವಕಾಶವೆಂದು ಹೇಳಬಹುದು. ಯೋಜನೆಯ ಮೂಲಕ ನೀವು ವರ್ಷಕ್ಕೆ ಶೇ.7.5 ಬಡ್ಡಿಯನ್ನು ಪಡೆಯಬಹುದು. ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ಸೇರಿಸಲಾಗುತ್ತದೆ ಮತ್ತು 2 ವರ್ಷಗಳ ನಂತರ ಹೂಡಿಕೆಯ ಹಣ ಮತ್ತು ಬಡ್ಡಿಯನ್ನು ಒಟ್ಟಿಗೆ ನೀಡಲಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?
ಈ ಯೋಜನೆಯು ಎಲ್ಲಾ ಮಹಿಳೆಯರು ಮತ್ತು ಅಪ್ರಾಪ್ತ ಬಾಲಕಿಯರು ಈ ಖಾತೆಯನ್ನು ತೆರೆಯಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಫಾರ್ಮ್ ಅನ್ನು ಭರ್ತಿ ಮಾಡಿ: ಬ್ಯಾಂಕ್ ಅಥವಾ ಅಂಚೆ ಕಛೇರಿಯಿಂದ MSSC ಫಾರ್ಮ್ ಅನ್ನು ಪಡೆಯಿರಿ. ನಿಮ್ಮ ಹೆಸರು, ವಿಳಾಸ ಮತ್ತು ನಾಮಿನಿ ವಿವರಗಳನ್ನು ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು ಸಲ್ಲಿಸಿ:
ಗುರುತಿನ ಪುರಾವೆ: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಅಥವಾ ಪಾಸ್‌ಪೋರ್ಟ್.
ವಿಳಾಸ ಪುರಾವೆ: ಆಧಾರ್ ಕಾರ್ಡ್,ವೋಟರ್ ಐಡಿ ಅಥವಾ ವಿದ್ಯುತ್/ನೀರಿನ ಬಿಲ್.
ಫೋಟೋ: ಇತ್ತೀಚಿನ ಪಾಸ್‌ಪೋರ್ಟ್ ಗಾತ್ರದ ಫೋಟೋ.
ನೀವು ಎಷ್ಟು ಹಣವನ್ನು ಹೂಡಿಕೆ ಮಾಡಬಹುದು..?
ಈ ಯೋಜನೆಯಲ್ಲಿ 1,000 ರಿಂದ 2 ಲಕ್ಷದವರೆಗೆ ಹಣವನ್ನು ಠೇವಣಿ ಮಾಡಬಹುದು. ಹೂಡಿಕೆ ಮೊತ್ತವು 100 ರ ಗುಣಕಗಳಲ್ಲಿರಬೇಕು.
ನಿಮ್ಮೆಲ್ಲಾ ದಾಖಲೆಗಳು ಸರಿಯಾಗಿದ್ದರೆ ನೀವು MSSC ಪ್ರಮಾಣಪತ್ರವನ್ನು ಪಡೆಯುತ್ತೀರಿ.
ಹಿಂತೆಗೆದುಕೊಳ್ಳುವ ಸೌಲಭ್ಯ
ಈ ಯೋಜನೆಯಲ್ಲಿ, ನೀವು ಒಂದು ವರ್ಷದ ನಂತರ ನಿಮ್ಮ ಠೇವಣಿ ಮಾಡಿದ ಹಣದ ಶೇ.40 ಅನ್ನು ಹಿಂಪಡೆಯಬಹುದು.
ಯೋಜನೆಯ ನಿಯಮಗಳು ಮತ್ತು ಪ್ರಯೋಜನಗಳು
ಬಡ್ಡಿ ದರ: ವರ್ಷಕ್ಕೆ ಶೇ.7.5 ಬಡ್ಡಿಯನ್ನು ನೀಡುತ್ತದೆ. ಇದನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸೇರಿಸಲಾಗುತ್ತದೆ.
ತೆರಿಗೆ: MSSC ಯಿಂದ ಪಡೆದ ಬಡ್ಡಿಯು ತೆರಿಗೆಯ ವ್ಯಾಪ್ತಿಯಲ್ಲಿ ಬರುತ್ತದೆ. ಇದು ಸುರಕ್ಷಿತ ಮತ್ತು ಕಡಿಮೆ ಅಪಾಯದ ಹೂಡಿಕೆಯ ಆಯ್ಕೆಯಾಗಿದೆ. ಈ ಯೋಜನೆಯು 2 ವರ್ಷಗಳ ಕಾಲ, ಇದು ಅಲ್ಪಾವಧಿಯ ಹೂಡಿಕೆಗೆ ಉತ್ತಮವಾಗಿದೆ.
MSSC ಅನ್ನು ಏಕೆ ಆರಿಸಬೇಕು?
ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು ಮುಂದಿನ ದಿನಮಾನಗಳಲ್ಲಿ ಮಹಿಳೆಯರಿಗೆ ಸಹಾಯಕ್ಕೆ ಬರುತ್ತದೆ. ಇದು ಸುರಕ್ಷಿತ ಮಾತ್ರವಲ್ಲದೆ ಹೂಡಿಕೆಯ ಮೇಲೆ ಉತ್ತಮ ಆದಾಯವನ್ನು ನೀಡುತ್ತದೆ. 2 ವರ್ಷಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಒಟ್ಟಿಗೆ ಪಡೆಯುವುದರಿಂದ ಮಹಿಳೆಯರಿಗೆ ಆರ್ಥಿಕ ಮಟ್ಟ ಹೆಚ್ಚತ್ತದೆ.
ಈ ಯೋಜನೆಯು ಮಹಿಳೆಯರಿಗೆ ಉಳಿತಾಯ ಮಾಡಲು ಮಾತ್ರವಲ್ಲದೆ ತಮ್ಮ ಹಣವನ್ನು ಹೆಚ್ಚು ಬೆಳೆಯಲು ಅವಕಾಶವನ್ನು ನೀಡುತ್ತದೆ. ಇದರೊಂದಿಗೆ,ಮಹಿಳೆಯರು ತಮ್ಮ ಮತ್ತು ತಮ್ಮ ಕುಟುಂಬಕ್ಕೆ ಸುರಕ್ಷಿತವಾದ ಆದಾಯವನ್ನು ನೀಡಲು ಸಹಾಕಾರಿಯಾಗುತ್ತದೆ.


Click it and Unblock the Notifications