ಯಾವುದೇ ಹಬ್ಬ ಹರಿದಿನ ಬಂದಾಗ ಚಿನ್ನವನ್ನು ಖರೀದಿ ಮಾಡುವುದು ವಾಡಿಕೆ. ಶುಭ ದಿನದಂದು ನಾವು ಮಾಡಿದ ಹೂಡಿಕೆಯು ನಮ್ಮ ಸಂಪತ್ತು ವೃದ್ಧಿಗೆ ಸಹಾಯವಾಗಲಿದೆ ಎಂದು ನಂಬಿಕೆಯಿದೆ. ಹಾಗಿರುವಾಗ ನೀವು ಈ ಮಕರ ಸಂಕ್ರಾಂತಿ ದಿನ ಚಿನ್ನ, ಬೆಳ್ಳಿ ಖರೀದಿಸುವ ಪ್ಲ್ಯಾನ್ ಮಾಡಿಕೊಂಡಿದ್ದರೆ ನಿಮಗೆ ಮಹತ್ವದ ಮಾಹಿತಿ.
ಕಳೆದ ನಾಲ್ಕು ದಿನಗಳಲ್ಲಿ ಮೂರು ದಿನಗಳ ಕಾಲ ಚಿನ್ನದ ಬೆಲೆಯು ಏರಿಕೆಯಾಗಿದೆ. ಹತ್ತು ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು ನಾಲ್ಕು ದಿನದಲ್ಲಿ ಸುಮಾರು 550 ರೂಪಾಯಿ ಜಿಗಿತ ಕಂಡಿದೆ. ಇನ್ನು ನಾವು 24 ಕ್ಯಾರೆಟ್ ಚಿನ್ನದ ಬೆಲೆ ನೋಡಿದಾಗ ಅದು ನಾಲ್ಕು ದಿನದಲ್ಲಿ ಸುಮಾರು 610 ರೂಪಾಯಿ ಏರಿಕೆಯಾಗಿದೆ. ನಿಮ್ಮ ನಗರದಲ್ಲಿ ಎಷ್ಟಿದೆ ಚಿನ್ನದ ದರ ಎಂಬ ಮಾಹಿತಿ ಈ ಕೆಳಗಿದೆ ಮುಂದೆ ಓದಿ....

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ
ಜನವರಿ 15ರಂದು ಈ ಸಮಯದ ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಏರಿಕೆಯಾಗಿದ್ದು 62585.00 ರೂಪಾಯಿ ಆಗಿದೆ. ಬೆಳ್ಳಿ ಹಿಗ್ಗಿದ್ದು 72701.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ.0.40ರಷ್ಟು ಏರಿಕೆ ಕಂಡಿದ್ದು 2,055.51 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.41ರಷ್ಟು ಹಿಗ್ಗಿದ್ದು 23.25 ಯುಎಸ್ ಡಾಲರ್ ಆಗಿದೆ.
ಇಂದಿನ ಚಿನ್ನದ ದರ ಎಷ್ಟಿದೆ?
ಜನವರಿ 15ರಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಗೋಲ್ಡ್ ರೇಟ್ 150 ರೂಪಾಯಿ ಏರಿಕೆಯಾಗಿದ್ದು 58,150 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 170 ರೂಪಾಯಿ ಹೆಚ್ಚಳವಾಗಿದ್ದು ಪ್ರಸ್ತುತ 63,440 ರೂಪಾಯಿ ಆಗಿದೆ. 18 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 130 ರೂಪಾಯಿ ಏರಿಕೆಯಾಗಿ 47,580 ರೂಪಾಯಿ ಆಗಿದೆ. ಒಂದು ಕೆಜಿ ಬೆಳ್ಳಿ ಬೆಲೆಯು ಇಂದು 300 ರೂಪಾಯಿ ಜಿಗಿತ ಕಂಡಿದ್ದು, 76,680 ರೂಪಾಯಿ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರೆಟ್ ಚಿನ್ನದ ಬೆಲೆಯು ಚೆನ್ನೈನಲ್ಲಿ 58700 ರೂಪಾಯಿ, ಮುಂಬೈನಲ್ಲಿ 58150 ರೂಪಾಯಿ, ದೆಹಲಿಯಲ್ಲಿ 58300 ರೂಪಾಯಿ ಆಗಿದೆ. ಕೋಲ್ಕತ್ತಾದಲ್ಲಿ, ಬೆಂಗಳೂರಿನಲ್ಲಿ, ಹೈದಾರಾಬಾದ್‌ನಲ್ಲಿ 58150 ರೂಪಾಯಿ ಆಗಿದೆ.
ಕೇರಳದಲ್ಲಿ, ಪುಣೆಯಲ್ಲಿ 58150 ರೂಪಾಯಿ, ಅಹಮದಾಬಾದ್‌ನಲ್ಲಿ ಚಿನ್ನದ ಬೆಲೆ 58200 ರೂಪಾಯಿ, ಕೋಯಮತ್ತೂರು 58700 ರೂಪಾಯಿ, ಚಂಡೀಗಢದಲ್ಲಿ 58300 ರೂಪಾಯಿ, ಮಂಗಳೂರಿನಲ್ಲಿ, ಮೈಸೂರಿನಲ್ಲಿ 58150 ರೂಪಾಯಿ ಆಗಿದೆ.


Click it and Unblock the Notifications