ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಮತ್ತು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಶೀಘ್ರವೇ ಆರಂಭವಾಗಲಿದೆ. ಈ ತಿಂಗಳಿನಲ್ಲಿಯೇ ಆರಂಭವಾಗಲಿದೆ. ಈ ಸೇಲ್‌ನಲ್ಲಿ ಐಫೋನ್ 12 ಭಾರೀ ರಿಯಾಯಿತಿಗೆ ಬೆಲೆಗೆ ಲಭ್ಯವಾಗಲಿದೆ. ಇನ್ನು ಐಫೋನ್ 13 ಮತ್ತು ಐಫೋನ್ 14 ಕೂಡಾ ರಿಯಾಯಿತಿ ಬೆಲೆಯನ್ನು ಲಭ್ಯವಾಗಲಿದೆ.
ಹಬ್ಬದ ಸೀಸನ್ ಆಪಲ್‌ನ ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಲು ವರ್ಷದ ಅತ್ಯುತ್ತಮ ಸಮಯಗಳಲ್ಲಿ ಒಂದಾಗಿದೆ. ಇನ್ನು ವಿನಿಮಯ ರಿಯಾಯಿತಿ ಪಡೆಯುವ ಮೂಲಕ ನೀವು ಈ ಹ್ಯಾಂಡ್‌ಸೆಟ್‌ಗಳ ಬೆಲೆಯನ್ನು ಇನ್ನಷ್ಟು ಕಡಿಮೆ ಮಾಡುವ ಸಾಧ್ಯತೆಯಿದೆ. ಅಮೆಜಾನ್, ಫ್ಲಿಪ್‌ಕಾರ್ಟ್ ಸೇಲ್ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ...

ಫ್ಲಿಪ್‌ಕಾರ್ಟ್ ಸೇಲ್ ವಿವರ
ಫ್ಲಿಪ್‌ಕಾರ್ಟ್‌ನ ವಾರ್ಷಿಕ ಬಿಗ್ ಬಿಲಿಯನ್ ಡೇಸ್ ಸೇಲ್ ಸಮಯದಲ್ಲಿ, ನೀವು ಐಫೋನ್ 12 ಅನ್ನು 38,999 ರೂಪಾಯಿಗೆ ಪಡೆಯಬಹುದು. ಅಕ್ಟೋಬರ್ 2020 ಭಾರತದಲ್ಲಿ ಲಾಂಚ್ ಮಾಡಲಾದ ಹ್ಯಾಂಡ್‌ಸೆಟ್ ಬೆಲೆ ಆಗ 79,900 ರೂಪಾಯಿ ಆಗಿತ್ತು. ಇನ್ನು ಡೆಬಿಟ್, ಕ್ರೆಡಿಟ್ ಕಾರ್ಡ್ ಆಫರ್‌ಗಳ ಮೂಲಕ ಬೆಲೆಯನ್ನು ಇನ್ನೂ 3000 ರೂಪಾಯಿ ಕಡಿಮೆ ಮಾಡಿಕೊಳ್ಳಬಹುದು. ಇನ್ನು ವಿನಿಮಯ ರಿಯಾಯಿತಿಗೆ ಹೆಚ್ಚುವರಿ 3 ಸಾವಿರ ವಿನಾಯಿತಿ ಪಡೆಯಬಹುದು. ಇದರಿಂದಾಗಿ ಹ್ಯಾಂಡ್‌ಸೆಟ್ ಬೆಲೆ 32,999 ರೂಪಾಯಿಗೆ ಇಳಿಕೆಯಾಗುತ್ತದೆ.
ಐಫೋನ್ 13 ಅಮೆಜಾನ್ ಮೂಲಕ ರಿಯಾಯಿತಿ ಬೆಲೆಯಲ್ಲಿ ಲಭ್ಯವಿರುತ್ತದೆ. 2021 ರಲ್ಲಿ ಇದು ಭಾರತದಲ್ಲಿ ಲಾಂಚ್ ಆಗಿದ್ದು, ಅದರ 128 ಜಿಬಿ ಇಂಟರ್‌ನೆಲ್ ಸ್ಟೋರೇಜ್ ಹೊಂದಿದೆ. ಈಗ ಅಮೆಜಾನ್ ಸೇಲ್ಸ್ ಸಮಯದಲ್ಲಿ ಬೆಲೆ ಎಷ್ಟು ಇರಲಿದೆ ಎಂದು ಬಹಿರಂಗಪಡಿಸಲಾಗಿಲ್ಲ. ಆದರೆ 40,000 ರೂಪಾಯಿಗಿಂತ ಕಡಿಮೆ ಇರಲಿದೆ ಎಂದು ಮಾಹಿತಿಯಿದೆ.
ಅದೇ ರೀತಿ, ನೀವು ಐಫೋನ್ 13 ಅನ್ನು 52,499 ರೂಪಾಯಿಗೆ ಅಮೆಜಾನ್ ಮೂಲಕ ಖರೀದಿ ಮಾಡಬಹುದು. ಐಫೋನ್ 13 ಸೇಲ್ಸ್ ವೇಳೆ ಸುಮಾರು 37,500 ರೂಪಾಯಿ ಕಡಿಮೆಗೆ ಲಭ್ಯವಾಗಲಿದೆ. ಅಮೆಜಾನ್‌ನಲ್ಲಿ ಮುಂಬರುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ನೀವು ಫೋನ್ ಅನ್ನು ಅಗ್ಗದ ಬೆಲೆಗೆ ಖರೀದಿಸಲು ಎಸ್‌ಬಿಐ ಕಾರ್ಡ್ ಆಫರ್ ಅನ್ನು ಪಡೆಯಬಹುದು.
ನೀವು ಇತ್ತೀಚಿನ ಐಫೋನ್ ಮಾಡೆಲ್ ಅನ್ನು ರಿಯಾಯಿತಿ ದರದಲ್ಲಿ ಖರೀದಿಸಲು ಬಯಸಿದರೆ, ಸೇಲ್ಸ್ ಸಂದರ್ಭದಲ್ಲಿ ಐಫೋನ್ 14 ಮತ್ತು ಐಫೋನ್ 14 ಪ್ಲಸ್ ಅನ್ನು ಕಡಿಮೆ ಬೆಲೆಗೆ ಪಡೆಯಬಹುದು. ಫ್ಲಿಪ್‌ಕಾರ್ಟ್ ಈ ಹ್ಯಾಂಡ್‌ಸೆಟ್‌ಗಳ ಬೆಲೆಯನ್ನು ಬಹಿರಂಗಪಡಿಸಿಲ್ಲ. ಆದರೆ 50, 60 ಸಾವಿರ ರೂಪಾಯಿಗೆ ಲಭ್ಯವಾಗುವ ಸಾಧ್ಯತೆಯಿದೆ.
ಇನ್ನು ಐಫೋನ್ 14 ಮತ್ತು ಐಫೋನ್ 14 ಪ್ಲಸ್ ಭಾರತದಲ್ಲಿ ಸೆಪ್ಟೆಂಬರ್ 2022 ರಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಫೋನ್ ಬೆಲೆ ಕ್ರಮವಾಗಿ 79,900 ಮತ್ತು 89,900 ರೂಪಾಯಿ ಆಗಿದೆ.


Click it and Unblock the Notifications