Max Bupaದಿಂದ ಹೊಸ ಹೆಲ್ತ್ ಇನ್ಷೂರೆನ್ಸ್: ಎಷ್ಟೆಲ್ಲ ಅನುಕೂಲಗಳು?

ಮ್ಯಾಕ್ಸ್ ಬೂಪ (Max Bupa) ಹೆಲ್ತ್ ಇನ್ಷೂರೆನ್ಸ್ ನಿಂದ ಈಚೆಗೆ ಸಮಗ್ರ ಹೆಲ್ತ್ ಇನ್ಷೂರೆನ್ಸ್ ಪ್ಲಾನ್ ಪರಿಚಯಿಸಲಾಗಿದೆ. ಪಾಲಿಸಿದಾರರು ಅಥವಾ ಇನ್ಷೂರೆನ್ಸ್ ಖರೀದಿಸಿದ ಕುಟುಂಬ ಸದಸ್ಯರು ಕೊರೊನಾ ಸೇರಿದಂತೆ ಯಾವುದೇ ಅನಾರೋಗ್ಯಕ್ಕೆ ಆಸ್ಪತ್ರೆಗೆ ದಾಖಲಾದಲ್ಲಿ ಅನಿಯಮಿತ ಮೊತ್ತಕ್ಕೆ ಇನ್ಷೂರೆನ್ಸ್ ಕವರ್ ಆಗುತ್ತದೆ. ಇದಕ್ಕೆ 'ReAssure' ಎಂದು ಹೆಸರಿಸಲಾಗಿದೆ.

ಒಂದು ವರ್ಷದಲ್ಲಿ ಯಾವುದೇ ಹೆಚ್ಚುವರಿ ವೆಚ್ಚ ಇಲ್ಲದೆ ಈ ಪಾಲಿಸಿ ಅಡಿಯಲ್ಲಿ ಒಂದೇ ಅಥವಾ ಬೇರೆ ಬೇರೆ ಕಾಯಿಲೆಗೆ ಗ್ರಾಹಕರು ಎಷ್ಟು ಮೊತ್ತಕ್ಕಾದರೂ ಕ್ಲೇಮ್ ಮಾಡಬಹುದು. ಮೂಲ ಇನ್ಷೂರ್ಡ್ ಮೊತ್ತದ ತನಕ ಸಿಂಗಲ್ ಕ್ಲೇಮ್ ಪಾವತಿಸಲಾಗುತ್ತದೆ ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಿದೆ.

ಎರಡೇ ವರ್ಷದಲ್ಲಿ ಇನ್ಷೂರ್ಡ್ ಮೊತ್ತ ದುಪ್ಪಟ್ಟು

ಎರಡೇ ವರ್ಷದಲ್ಲಿ ಇನ್ಷೂರ್ಡ್ ಮೊತ್ತ ದುಪ್ಪಟ್ಟು

ಒಟ್ಟಿನಲ್ಲಿ ಪಾಲಿಸಿದಾರರಿಗೆ ಕವರೇಜ್ ನಲ್ಲಿ ಕೊರತೆ ಬರಲ್ಲ. ಕಿಡ್ನಿ ಡಯಾಲಿಸೀಸ್, ಕ್ಯಾನ್ಸರ್ ನಂಥ ಸಮಸ್ಯೆ ಇರುವವರು ಒಂದೇ ವರ್ಷದಲ್ಲಿ ಹಲವು ಸಲ ಆಸ್ಪತ್ರೆಗೆ ದಾಖಲಾಗಬೇಕಿದ್ದರೂ ಈ ಪಾಲಿಸಿ ಅಡಿಯಲ್ಲಿ ಅನುಕೂಲ ಆಗುತ್ತದೆ. ಕೇವಲ ಎರಡು ವರ್ಷ ಯಾವುದೇ ಕ್ಲೇಮ್ ಮಾಡದಿದ್ದರೆ ಇನ್ಷೂರ್ಡ್ ಮೊತ್ತ ದುಪ್ಪಟ್ಟು ಆಗುತ್ತದೆ. ಮೊದಲ ವರ್ಷ ಯಾವುದೇ ಕ್ಲೇಮ್ ಮಾಡದಿದ್ದಲ್ಲಿ ಮುಂದಿನ ವರ್ಷಕ್ಕೆ ಇನ್ಷೂರ್ಡ್ ಮೊತ್ತ 50% ಹೆಚ್ಚಾಗುತ್ತದೆ. ಅದರ ಮುಂದಿನ ವರ್ಷವೂ ಯಾವುದೇ ಕ್ಲೇಮ್ ಮಾಡದಿದ್ದಲ್ಲಿ ಇನ್ಷೂರ್ಡ್ ಮೊತ್ತ 50% ಹೆಚ್ಚಾಗಿ, ಎರಡೇ ವರ್ಷದಲ್ಲಿ ಒಟ್ಟು 100% ಏರಿಕೆ ಆಗುತ್ತದೆ. ಒಂದು ವೇಳೆ ಕೊರೊನಾ ಕಾರಣಕ್ಕೆ ಕ್ಲೇಮ್ ಮಾಡಿದಲ್ಲಿ ಈ "ಏರಿಕೆ ಅನುಕೂಲ"ವೇನೂ ತಪ್ಪಿಹೋಗಲ್ಲ.

ವೈದ್ಯಕೀಯ ವೆಚ್ಚಗಳೂ ಒಳಗೊಳ್ಳುತ್ತವೆ

ವೈದ್ಯಕೀಯ ವೆಚ್ಚಗಳೂ ಒಳಗೊಳ್ಳುತ್ತವೆ

ಈ ಪ್ರಾಡಕ್ಟ್ ನಲ್ಲಿ ವೈದ್ಯಕೀಯ ವೆಚ್ಚಗಳು ಶೇಕಡಾ 100ರಷ್ಟು ಕವರ್ ಆಗುತ್ತವೆ. ಪರ್ಸನಲ್ ಪ್ರೊಟೆಕ್ಟಿವ್ ಎಕ್ವಿಪ್ ಮೆಂಟ್ ಕಿಟ್ (ಪಿಪಿಇ ಕಿಟ್), ಗ್ಲೌವ್ಸ್ಮ್ ಆಕ್ಸಿಜನ್ ಮಾಸ್ಕ್ ಇಂಥ ಯಾವುದೇ ವೆಚ್ಚವನ್ನು ಪಾಲಿಸಿದಾರರು ಭರಿಸುವ ಅಗತ್ಯ ಇಲ್ಲ. ಇನ್ನು ಹಣದುಬ್ಬರಕ್ಕೆ ತಕ್ಕಂತೆ ಇನ್ಷೂರ್ಡ್ ಮೊತ್ತ ಸಹ ಪ್ರತಿ ವರ್ಷ ಕ್ಯುಮಲೇಟಿವ್ ವಿಧಾನದಲ್ಲಿ ಹೆಚ್ಚಳ ಆಗುತ್ತದೆ. ಇನ್ನು ಒಂದು ವರ್ಷಕ್ಕೆ 50 ಸಾವಿರದೊಳಗೆ ಕ್ಲೇಮ್ ಮಾಡಿದಲ್ಲಿ ಇನ್ಷೂರ್ಡ್ ಮೊತ್ತದ 'ಏರಿಕೆ ಅನುಕೂಲ' ಕೈ ತಪ್ಪಲ್ಲ.

ರಿನೀವಲ್ ಮಾಡುವಾಗ ರಿಯಾಯಿತಿ

ರಿನೀವಲ್ ಮಾಡುವಾಗ ರಿಯಾಯಿತಿ

ಈ ಪಾಲಿಸಿಯಲ್ಲಿ ಹಲವು ಅನುಕೂಲಗಳಿವೆ. 'Live Healthy' ಅಡಿ ಪ್ರೀಮಿಯಂ ರಿನೀವಲ್ ಮಾಡುವಾಗ 30% ತನಕ ರಿಯಾಯಿತಿ ದೊರೆಯುತ್ತದೆ. ವೈದ್ಯರಿಗೆ 5%, ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಮಂದಿ ವೈಯಕ್ತಿಕ ಪಾಲಿಸಿ ಮಾಡಿಸಿದಲ್ಲಿ 10% ರಿಯಾಯಿತಿ ಹೀಗೆ ವಿವಿಧ ಅನುಕೂಲಗಳಿವೆ.

30 ನಿಮಿಷದೊಳಗಾಗಿ ಕ್ಯಾಶ್ ಲೆಸ್ ಪ್ರಕ್ರಿಯೆ

30 ನಿಮಿಷದೊಳಗಾಗಿ ಕ್ಯಾಶ್ ಲೆಸ್ ಪ್ರಕ್ರಿಯೆ

ಕೊರೊನಾ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿದಲ್ಲಿ ಆರಂಭಿಕ ಕಾಯುವ (ವೇಯ್ಟಿಂಗ್) ಅವಧಿ ಹದಿನೈದು ದಿನ ಇದೆ. ಕ್ಯಾಶ್ ಲೆಸ್ ಪ್ರಕ್ರಿಯೆಯು ಮೂವತ್ತು ನಿಮಿಷಗಳೊಳಗೆ ಮಾಡುವುದಾಗಿ ಕಂಪೆನಿ ಹೇಳಿದೆ. ಒಂದು ವೇಳೆ ಕೊರೊನಾ ರೋಗಿ ಮೃತಪಟ್ಟಲ್ಲಿ ಯಾವ ವಸ್ತುಗಳಿಗೆ ಹಣ ಪಾವತಿ ಆಗುವುದಿಲ್ಲ ಎಂದಿರುತ್ತದೋ ಅವುಗಳಿಗೂ ಸೇರಿಸಿ, ಪಾವತಿ ಮಾಡಲಾಗುತ್ತದೆ ಎಂದು ಕಂಪೆನಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+