ಇನ್ಫೋಸಿಸ್‌ನ ಸಿಇಒ ಮತ್ತು ಎಂಡಿ ಸಲೀಲ್ ಪರೇಖ್ ವಿಶ್ವದಲ್ಲೇ ಅತೀ ಅಧಿಕ ವೇತನವನ್ನು ಪಡೆಯುವ ಸಿಇಒಗಳಲ್ಲಿ ಒಬ್ಬರಾಗಿದ್ದಾರೆ. ಐಟಿ ದೈತ್ಯ ಸಂಸ್ಥೆಯಾದ ಇನ್ಫೋಸಿಸ್ 2022ರಲ್ಲಿ ಸಲೀಲ್ ಪರೇಖ್ ವೇತನವನ್ನು ಶೇಕಡ 88ರಷ್ಟು ಏರಿಸಿದ ಬಳಿಕ ಸಲೀಲ್ ಪರೇಖ್ ದೇಶದಲ್ಲಿ 2ನೇ ಅತೀ ಅಧಿಕ ವೇತನ ಪಡೆಯುವ ಸಿಇಒ ಆಗಿದ್ದಾರೆ. ಮಾಹಿತಿ ಪ್ರಕಾರ ಸಲೀಲ್ ಪರೇಖ್ ವಾರ್ಷಿಕ ಈ ಹಿಂದೆ 42.50 ಕೋಟಿ ರೂಪಾಯಿ ಪಡೆಯುತ್ತಿದ್ದರು.
ಇನ್ನು ಸಲೀಲ್ ಪರೇಖ್ ವೇತನವನ್ನು ಏರಿಕೆ ಮಾಡಿದ ಬಳಿಕ ಒಟ್ಟು ವೇತನ 79.75 ಕೋಟಿ ರೂಪಾಯಿಗೆ ತಲುಪಿದೆ. ಅಂದರೆ ಸಲೀಲ್ ಪರೇಖ್ ಪ್ರತಿ ದಿನಕ್ಕೆ 21 ಲಕ್ಷ ರೂಪಾಯಿ ಆಗಲಿದೆ. ಸಲೀಲ್ ಪರೇಖ್‌ನ ನಿಗದಿತ ವೇತನವು 11 ಕೋಟಿ ರೂಪಾಯಿ ಆಗಿದೆ. ಉಳಿದ ಮೊತ್ತ ಕಾರ್ಯವೈಖರಿಯ ಮೇಲೆ ನೀಡಲಾಗುವ ಭತ್ಯೆಯಾಗಿದೆ. ಸಲೀಲ್ ಪರೇಖ್ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ ಮುಂದೆ ಓದಿ....

ಸಲೀಲ್ ಪರೇಖ್ ಬಗ್ಗೆ ಅಧಿಕ ಮಾಹಿತಿ
ಸಲೀಲ್ ಪರೇಖ್ ಐಟಿ ಸೇವಾ ಉದ್ಯಮ ಕ್ಷೇತ್ರದಲ್ಲಿ ಅನುಭವ ಹೊಂದಿರುವ ವ್ಯಕ್ತಿಯಾಗಿದ್ದಾರೆ. ಹಾಗೆಯೇ ಈ ಕ್ಷೇತ್ರದಲ್ಲಿ ಸಮಾರು ಮೂರು ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟದ ರಾಷ್ಟ್ರೀಯ ಮಂಡಳಿಯ ಸದಸ್ಯರೂ ಆಗಿದ್ದಾರೆ. ಇನ್ಫೋಸಿಸ್‌ಗೆ ಸೇರುವ ಮೊದಲು, ಸಲೀಲ್ ಪರೇಖ್ ಕ್ಯಾಪೆಗ್ಮಿನಿ ಬೋರ್ಡ್‌ನಲ್ಲಿದ್ದರು. ಕ್ಯಾಪೆಗ್ಮಿನಿ ಬೋರ್ಡ್‌ನಲ್ಲಿ ಇರುವ ಸಂದರ್ಭದಲ್ಲಿ ಸಲೀಲ್ ಪರೇಖ್ ಹಲವಾರು ಪ್ರಮುಖ ಸ್ಥಾನಗಳನ್ನು ಹೊಂದಿದ್ದರು.
ಅಪ್ಲಿಕೇಶನ್ ಸೇವೆಗಳು, ಕ್ಲೌಡ್ ಮೂಲಸೌಕರ್ಯ ಸೇವೆಗಳು ಮತ್ತು ಕ್ಯಾಪ್ಜೆಮಿನಿಯ ಟೆಕ್ ವಿಭಾಗವನ್ನು ಮುನ್ನಡೆಸಿದ್ದರು. ಸಲೀಲ್ ಪರೇಖ್ ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯಾದ ಬಾಂಬೆ ಹಳೆ ವಿದ್ಯಾರ್ಥಿಯಾಗಿದ್ದು ತಮ್ಮ ಏರೋನಾಟಿಕಲ್ ಎಂಜಿನಿಯರಿಂಗ್ ಅನ್ನು ಪ್ರತಿಷ್ಠಿತ ಸಂಸ್ಥೆಯಲ್ಲಿ ಮಾಡಿದ್ದಾರೆ. ಸಲೀಲ್ ಪರೇಖ್ ಜನವರಿ 2, 2018 ರಂದು ಹಂಗಾಮಿ ಸಿಇಒ ಯು ಬಿ ಪ್ರವೀಣ್ ರಾವ್‌ರಿಂದ ಇನ್ಫೋಸಿಸ್ ಸಿಇಒ ಮತ್ತು ಎಂಡಿ ಆಗಿ ಅಧಿಕಾರ ವಹಿಸಿಕೊಂಡರು.
ಈಗಾಗಲೇ 30 ವರ್ಷದ ಅನುಭವವನ್ನು ಹೊಂದಿದ್ದಾರೆ. ವಿಶಾಲ್ ಸಿಕ್ಕಾ ಬಳಿಕ ಇನ್ಫೋಸಿಸ್‌ನ ಎರಡನೇ ಸಿಇಒ ಸಲೀಲ್ ಪರೇಖ್ ಆಗಿದ್ದಾರೆ. ಇನ್ನು ಭಾರತದ ಐಟಿ ಇಂಡಸ್ಟ್ರೀಯಲ್ಲಿ ಅತೀ ದೊಡ್ಡ ನಾಯಕತ್ವ ಬದಲಾವಣೆ ಮಾಡಲಾಗಿದೆ. ಇನ್ಫೋಸಿಸ್ ಅಧ್ಯಕ್ಷ ಮೋಹಿತ್ ಜೋಶಿ ತನ್ನ ಹುದ್ದೆಗೆ ಶನಿವಾರ ರಾಜೀನಾಮೆ ನೀಡಿದ್ದು, ಅದೇ ದಿನವೇ ಇನ್ನೊಂದು ಪ್ರಮುಖ ಸಂಸ್ಥೆಯಾದ ಟೆಕ್ ಮಹೀಂದ್ರಾದ ಎಂಡಿ ಹಾಗೂ ಸಿಇಒ ಆಗಿ ನೇಮಕಾತಿಯಾಗಿದ್ದಾರೆ. ಡಿಸೆಂಬರ್ 19, 2023ರಂದು ಟೆಕ್ ಮಹೀಂದ್ರಾದ ಎಂಡಿ, ಸಿಇಒ ಸಿಪಿ ಗುರ್ನಾನಿ ನಿವೃತ್ತಿ ಹೊಂದಲ್ಲಿದ್ದಾರೆ. ಆ ಸ್ಥಾನಕ್ಕೆ ಮೋಹಿತ್ ಜೋಶಿ ನೇಮಿಸಲಾಗಿದೆ.


Click it and Unblock the Notifications