Expensive Private Jet: ಜಗತ್ತಿನ ಅತೀ ದುಬಾರಿ ಪ್ರೈವೇಟ್‌ ಜೆಟ್‌ ಹೊಂದಿರುವ ಉದ್ಯಮಿ ಯಾರು, ಮೌಲ್ವವೆಷ್ಟು ಗೊತ್ತೇ?

ಭಾರತದಂಥಹ ದೇಶದಲ್ಲಿ ಹಲವಾರು ಉದ್ಯಮಿಗಳು ಅಪಾರ ಶ್ರೀಮಂತಿಕೆಯನ್ನು ಹೊಂದಿದ್ದು, ಅವರೆಲ್ಲರೂ ಐಶಾರಾಮಿ ಜೀವನ ನಡೆಸುತ್ತಿದ್ದಾರೆ. ಮುಕೇಶ್‌ ಅಂಬಾನಿ, ರತನ್‌ ಟಾಟಾ ಹಾಗೂ ಗೌತಮ್‌ ಅದಾನಿ ಅವರಂಥ ಉದ್ಯಮಿಗಳು ಶ್ರೀಮಂತಿಕೆಯಲ್ಲಿ ಮುಂಚೂಣಿಯಲ್ಲಿದ್ದು, ಅವರ ಬಳಿ ಬಹು ಕೋಟಿಗಳ ಕಾರು ಹಾಗೂ ಆಸ್ತಿ ಸಂಪತ್ತು ಇದೆ.

ಆದರೆ ಆ ಪೈಕಿ ಅನೇಕ ಉದ್ಯಮಿಗಳು ಅತ್ಯಾಧುನಿಕ ಸೌಲಭ್ಯಗಳಿರುವ ಸ್ವಂತ ಜೆಟ್‌ ವಿಮಾನಗಳನ್ನು ಕೂಡ ಹೊಂದಿದ್ದಾರೆ. ಆದರೆ, ವಿಶ್ವದ ಅತ್ಯಂತ ದುಬಾರಿ ಖಾಸಗಿ ಜೆಟ್‌ಗಳನ್ನು ಹೊಂದಿರುವ ಶ್ರೀಮಂತ ವ್ಯಕ್ತಿಗಳು ಭಾರತೀಯರಲ್ಲ ಎನ್ನುವುದು ಗಮನಾರ್ಹ ಸಂಗತಿ.

 ಜಗತ್ತಿನ ಅತೀ ದುಬಾರಿ ಪ್ರೈವೇಟ್‌ ಜೆಟ್‌ ಹೊಂದಿರುವ ಉದ್ಯಮಿ ಯಾರು?

ಏಕೆಂದರೆ ಇಂಥಹ ಐಶಾರಾಮಿ ಜೆಟ್‌ಗಳು ಮುಕೇಶ್‌ ಅಂಬಾನಿ ಅಥವಾ ರತನ್‌ ಟಾಟಾ ಅವರ ಬಳಿ ಇಲ್ಲ. ಬದಲಿಗೆ, ವಿಶ್ವದ ಅತ್ಯಂತ ದುಬಾರಿ ಖಾಸಗಿ ಜೆಟ್‌ ವಿಮಾನವು ಸೌದಿ ಅರೇಬಿಯಾ ರಾಜಕುಮಾರ ಹಾಗೂ ಉದ್ಯಮಿಯಾಗಿರುವ ಅಲ್‌ ವಲೀದ್‌ ಬಿನ್‌ ತಲಾಲ್‌ ಅಲ್‌ ಸೌದ್‌ ಅವರ ಒಡೆತನದಲ್ಲಿದೆ. ಅಲ್‌ ವಲೀದ್‌ ಅವರು ಮಧ್ಯಪ್ರಾಚ್ಯದ ರಾಜಮನೆತನಕ್ಕೆ ಸೇರಿದ್ದು, ಅಪಾರ ಪ್ರಮಾಣದ ಸಂಪತ್ತು ಹೊಂದಿದ್ದಾರೆ.

ಹೀಗಿರುವಾಗ, ಸೌದಿಯ ಈ ರಾಜಕುಮಾರನಾದ ಅಲ್‌ ವಲೀದ್‌ ಬಿನ್‌ ತಲಾಲ್‌ ಅಲ್‌ ಸೌದ್‌ ಅವರ ಒಡೆಯನದಲ್ಲಿ ವಿಶ್ವದ ಅತ್ಯಂತ ದುಬಾರಿ ಜೆಟ್‌ ಇದೆ. ಇದರ ಬೆಲೆ ಬರೋಬ್ಬರಿ 500 ಮಿಲಿಯನ್‌ ಅಮೆರಿಕನ್‌ ಡಾಲರ್‌ ಎಂದು ಅಂದಾಜಿಸಲಾಗಿದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದರ ಬೆಲೆ 4100 ಕೋಟಿ ರೂಪಾಯಿ. ಇನ್ನು ನಮ್ಮಲ್ಲಿ ಅಂಬಾನಿ ಹಾಗೂ ಟಾಟಾ ಅವರು ಖಾಸಗಿ ಜೆಟ್‌ ಹೊಂದಿದ್ದರೂ ಅವುಗಳ ಮೌಲ್ಯ ಮಾತ್ರ ಬಹಳ ಕಡಿಮೆಯಿದೆ.

ಉದ್ಯಮಿ ಅಲ್‌ ವಲೀದ್‌ ಬಿನ್‌ ತಲಾಲ್‌ ಅಲ್‌ ಸೌದ್‌ ಒಡೆತನದ ಖಾಸಗಿ ಜೆಟ್‌ ಬೋಯಿಂಗ್‌ 747 ಆಗಿದ್ದು, ಇದರ ಬೆಲೆ 150ರಿಂದ 200 ಮಿಲಿಯನ್‌ ಅಮೆರಿಕನ್‌ ಡಾಲರ್‌ ಆಗಿದೆ. ಆದರೆ ಈ ವಿಮಾನವನ್ನು ಐಷಾರಾಮಿ ಸೌಲಭ್ಯಗಳೊಂದಿಗೆ ಅತ್ಯಾಧುನಿಕವಾಗಿ ಮಾರ್ಪಾಟುಗೊಳಿಸುವುದಕ್ಕೆ ತುಂಬಾ ಹಣ ಖರ್ಚು ಮಾಡಲಾಗಿದೆ. ಹೀಗಾಗಿ, ಅದೆಲ್ಲ ಸೇರಿದಂತೆ ಜಗತ್ತಿನ ಈ ದುಬಾರಿ ಜೆಟ್‌ ಬೆಲೆ 500 ಮಿಲಿಯನ್‌ ಅಮೆರಿಕನ್‌ ಡಾಲರ್‌ ಇರಬಹುದೆಂದು ಲೆಕ್ಕ ಹಾಕಲಾಗಿದೆ.

ತಲಾಲ್‌ ಅಲ್‌-ಸೌದ್‌ ಅವರು ಹೊಂದಿರುವ ಈ ಖಾಸಗಿ ಜೆಟ್‌ ವಿಮಾನದಲ್ಲಿ 800 ಮಂದಿ ಪ್ರಯಾಣಿಸುವ ಸಾಮರ್ಥ್ಯವನ್ನು ಹೊಂದಿದೆ. ಜತೆಗೆ ಈ ವಿಮಾನವು 10 ಆಸನಗಳ ಡೈನಿಂಗ್‌ ಹಾಲ್‌, ಐಷಾರಾಮಿ ಮಲಗುವ ಕೋಣೆ ಸೂಟ್‌, ಪ್ರಾರ್ಥನೆ ಸಲ್ಲಿಸುವುದಕ್ಕೆ ಹಾಗೂ ಮನರಂಜನೆಗೆ ಪ್ರತ್ಯೇಕ ಕೊಠಡಿ ಇದೆ. ಅಲ್ಲದೆ, ಹೋಮ್‌ ಥಿಯೇಟರ್‌ ಸಿಸ್ಟಮ್‌, ಸ್ಪಾ ಹಾಗೂ ಸ್ಟೀಮ್‌ ಬಾತ್‌ ಸೌಲಭ್ಯವನ್ನು ಕೂಡ ಹೊಂದಿದೆ.

ಫೋರ್ಬ್ಸ್‌ ವರದಿ ಪ್ರಕಾರ, ಅಲ್‌ ವಲೀದ್‌ ಬಿನ್‌ ತಲಾಲ್‌ ಅಲ್‌ ಸೌದ್‌ ಅವರ ನಿವ್ವಳ ಆಸ್ತಿ ಮೌಲ್ಯವು 1.55 ಲಕ್ಷ ಕೋಟಿ ರೂ. ಆಗಿದೆ. ರತನ್‌ ಟಾಟಾ ಹಾಗೂ ಮುಕೇಶ್‌ ಅಂಬಾನಿ ಅವರಿಗೆ ಹೋಲಿಸಿದರೆ ತಲಾಲ್‌ ಅಲ್‌ ಸೌದ್‌ ಅವರ ಆಸ್ತಿ ಮೌಲ್ಯ ಕಡಿಮೆಯಿದೆ. ಇನ್ನು ಭಾರತೀಯ ಬಿಲಿಯೇನರ್‌ ಮುಕೇಶ್‌ ಅಂಬಾನಿ ಅವರು ಬೋಯಿಂಗ್‌ ಜೆಟ್‌-2 ಅನ್ನು ಹೊಂದಿದ್ದಾರೆ.

ಇದರ ಬೆಲೆ 603 ಕೋಟಿ ರೂಪಾಯಿ ಆಗಿದೆ. ಅದೇರೀತಿ ಅದಾನಿ ಗ್ರೂಪ್‌ನ ಗೌತಮ್‌ ಅದಾನಿ ಅವರು ಕೂಡ ಬೊಂಬಾರ್ಡಿಯಾರ್‌ ಚಾಲೆಂಜ್‌ 605, ಎಂಬ್ರೇರ್‌ ಲೆಗಸಿ 650 ಹಾಗೂ ಹಾಕರ್‌ ಬೀಚ್‌ಕ್ರಾಫ್ಟ್‌ 850 XPನಂಥಹ ಹಲವು ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ.

ಅದೇರೀತಿ ಟಾಟಾ ಗ್ರೂಪ್‌ನ ರತನ್‌ ಟಾಟಾ ಅವರು ಕೂಡ ಅತ್ಯಂತ ದುಬಾರಿ ಬೆಲೆಯ ಖಾಸಗಿ ಜೆಟ್‌ ಮಾಡೆಲ್‌ಗಳಾದ ಡಸಾಲ್ಟ್‌ ಫಾಲ್ಕನ್‌ 2000 ಅನ್ನು ಹೊಂದಿದ್ದು, ಇದರ ಬೆಲೆ ಸುಮಾರು 200 ಕೋಟಿ ರೂ. ಮತ್ತೊಂದೆಡೆ, ಜಗತ್ತಿನ ಅತ್ಯಂತ ಶ್ರೀಮಂತ ಬಿಲಿಯನೇರ್‌ಗಳಾದ ಎಲೋನ್‌ ಮಸ್ಕ್‌, ಬಿಲ್‌ ಗೇಟ್ಸ್‌ ಹಾಗೂ ಜೆಫ್‌ ಬೆಜೋಸ್‌ ಅವರು ಕೂಡ ದುಬಾರಿ ಖಾಸಗಿ ಜೆಟ್‌ಗಳನ್ನು ಹೊಂದಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+