ಪ್ರಸ್ತುತ ಹಲವಾರು ಸಂಸ್ಥೆಗಳು ವೆಚ್ಚವನ್ನು ಕಡಿತ ಮಾಡುವ ನೆಪವೊಡ್ಡಿ ಸಂಸ್ಥೆಯಲ್ಲಿ ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಪ್ರತಿ ದಿನ ಇಂತಹ ಸುದ್ದಿಗಳನ್ನು ಕೇಳುತ್ತಿದ್ದೇವೆ, ಮಾಧ್ಯಮಗಳಲಂತೂ ಪ್ರತಿದಿನ ಒಂದಾದಾರೂ ಉದ್ಯೋಗ ಕಡಿತದ ಸುದ್ದಿ ಇರುತ್ತದೆ. ಈ ನಡುವೆ ಗುಜರಾತ್‌ನ ಅಹಾಮದಾಬಾದ್‌ನ ಸಂಸ್ಥೆಯೊಂದು ತನ್ನ ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಕಾರನ್ನು ಗಿಫ್ಟ್ ನೀಡಿದೆ.
ಸಂಸ್ಥೆಯು ಎಂಟು ವರ್ಷಕ್ಕೂ ಮುನ್ನ ಆರಂಭವಾಗಿದ್ದು ಪ್ರಸ್ತುತ ಕೋಟ್ಯಾಂತರ ರೂಪಾಯಿಯ ವಹಿವಾಟನ್ನು ಸಂಸ್ಥೆಯು ಹೊಂದಿದೆ. ತನ್ನ ಸಂಸ್ಥೆಯ ಎಲ್ಲ ಕಾರ್ಯಗಳಲ್ಲಿ ಜೊತೆಯಾಗಿದ್ದ ಉದ್ಯೋಗಿಗಳಿಗೆ ಸಂಸ್ಥೆಯು ಕಾರುಗಳನ್ನು ಗಿಫ್ಟ್ ಆಗಿ ನೀಡಿದೆ. ಸಂಸ್ಥೆಯ ಹೆಸರು ತ್ರಿದ್ಯಾ ಟೆಕ್ ಲಿಮಿಟೆಡ್ ಆಗಿದೆ. ಇದು ಅಹಮದಾಬಾದ್ ಮೂಲದ ಸಂಸ್ಥೆಯಾಗಿದೆ.
ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್, ಸಿಇಒ ರಮೇಶ್ ಮರಂದ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನಾವು ಟೊಯೋಟಾ ಗ್ಲಾನ್ಜಾ ಕಾರುಗಳನ್ನು ಗಿಫ್ಟ್ ನೀಡಿದ ಉದ್ಯೋಗಿಗಳು ನಮ್ಮ ಸಂಸ್ಥೆಗೆ ಆರಂಭದಿಂದಲೇ ಸಹಾಯವನ್ನು ಮಾಡಿದ್ದಾರೆ. ಈವರೆಗೂ ಸಂಸ್ಥೆಯಲ್ಲಿಯೇ ಇದ್ದಾರೆ. ಸಂಸ್ಥೆಯ ಬೆಳವಣಿಗೆಗಾಗಿ ಶ್ರಮಿಸಿದ್ದಾರೆ. ಆದ್ದರಿಂದಾಗಿ ಈಗ ಉದ್ಯೋಗಿಗಳಿಗೆ ಕಾರನ್ನು ನೀಡುವ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.

ರಮೇಶ್ ಮಂದರ್‌ರ ಸಂಸ್ಥೆಯಲ್ಲಿ ಏಷ್ಯಾ, ಯುರೋಪ್, ಆಸ್ಟ್ರೇಲಿಯಾದಲ್ಲಿ ಕ್ಲೈಂಟ್‌ಗಳು ಇದ್ದಾರೆ. ಈ ಸಂಸ್ಥೆಯು ಆರೋಗ್ಯ, ವಿಮೆ, ರಿಟೇಲ್, ಎನರ್ಜಿ ಸೆಕ್ಟರ್‌ಗಳಿಗಾಗಿ ಸಾಫ್ಟ್‌ವೇರ್ ಅನ್ನು ಡೆವಲಪ್ ಮಾಡುತ್ತದೆ. ಈ ಸಂಸ್ಥೆಯು ಟೆಕ್ ಸಹಾಯವನ್ನು ಕೂಡಾ ನೀಡುತ್ತದೆ. ಹಾಗಾದರೆ ಈ ರಮೇಶ್ ಮಂದರ್ ಯಾರು, ಇಲ್ಲಿದೆ ವಿವರ ಮುಂದೆ ಓದಿ...
ರಮೇಶ್ ಮಂದರ್ ಯಾರು?
ರಮೇಶ್ ಮಂದರ್ ಐಟಿಯ ಡೈರೆಕ್ಟರ್ ಮತ್ತು ತ್ರಿದ್ಯಾ ಇನ್ಫೋಟೆಕ್‌ನ ಸಿಇಒ ಆಗಿದ್ದಾರೆ. ವಹಿವಾಟು ಅಭಿವೃದ್ಧಿ ಮತ್ತು ಮಾರುಕಟ್ಟೆಯಲ್ಲಿ ಸುಮಾರು 12 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ರಮೇಶ್ ಮಂದರ್ ಯುಕೆ ಮೂಲದ ಸಾಫ್ಟ್‌ವೇರ್ ಡೆವೆಲಪ್ ಮಾಡುವ ಸಂಸ್ಥೆಯಾದ ಶಾಲಿಗ್ರಾಮ್ ಇನ್ಫೋಟೆಕ್‌ನ ಪಾಲುದಾರರು ಕೂಡಾ ಹೌದು. ಲಿಂಕ್‌ಡಿನ್‌ನಲ್ಲಿ ಸ್ಟಾರ್ ಕೂಡಾ ಹೌದು. ತನ್ನ ವೆಬ್‌ಸೈಟ್‌ನಲ್ಲಿ ಒಟ್ಟು 30,000 ಫಾಲೋವರ್‌ಗಳನ್ನು ಅವರು ಹೊಂದಿದ್ದಾರೆ.
"ನನ್ನ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ನಾನು ಕಾರ್ಯನಿರ್ವಹಣೆ ಮಾಡುತ್ತಿದ್ದೇನೆ. ಯಾಕೆಂದರೆ ನಾನು ಸ್ವಾರ್ಥಿಕಯಾಗಿದ್ದೇನೆ, ಆದರೆ ನಾನು ಪ್ರಾಮಾಣಿಕವಾಗಿದ್ದೇನೆ," ಎಂದು ತನ್ನ ಬಯೋದಲ್ಲಿ ಉಲ್ಲೇಖ ಮಾಡಿದ್ದಾರೆ.


Click it and Unblock the Notifications