LIC: ಎಲ್‌ಐಸಿ ಪಾಲಿಸಿ ಲ್ಯಾಪ್ಸ್‌ ಆಗಿದೆಯಾ? ಪ್ರಯೋಜನ ಕಳೆದುಕೊಳ್ಳದೆ ಮತ್ತೆ ಸಕ್ರಿಯಗೊಳಿಸಲು ಹೀಗೆ ಮಾಡಿ

ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಬೇಕೆಂದು ನೀವು ಎಲ್‌ಐಸಿ ಯೋಜನೆಯ ಪಾಲಿಸಿಗಳಲ್ಲಿ ಹಣವನ್ನು ಕಟ್ಟುತ್ತಿದ್ದೀರಾ..? ನಿಮ್ಮ LIC ಪ್ರೀಮಿಯಂ ಪಾವತಿಗಳಿಗೆ ಕೊನೆಯ ದಿನಾಂಕ ತಪ್ಪದೇ ಹೆಚ್ಚಿನ ಹಣವನ್ನು ಕಟ್ಟಬೇಕೆಂದು ಭಯಭೀತರಾಗುವುದು ಸಹಜ ಆದರೆ ಇದಕ್ಕಾಗಿ ಚಿಂತೆಪಡುವಂತಹ ಅವಶ್ಯಕತೆ ಇಲ್ಲ.ಹಾಗಿದ್ದರೆ ನಾವಿಂದು ನಿಮ್ಮಎಲ್‌ಐಸಿ ಪಾಲಿಸಿಯು ಕಳೆದುಹೋದರೆ ನೀವು ಅದನ್ನು ಹೇಗೆ ಮತ್ತೆ ಪಡೆದುಕೊಳ್ಳಬಹುದು..? ಪ್ರೀಮಿಯಂ ಪಾವತಿಗಳು ತಪ್ಪಿದಾಗ ಏನಾಗುತ್ತದೆ ಎಂಬುದರ ಕುರಿತು ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ..

LIC ಪಾಲಿಸಿ ಲ್ಯಾಪ್ಸ್‌ ಆಗಿದೆಯ? ಮತ್ತೆ ಸಕ್ರಿಯಗೊಳಿಸಲು ಹೀಗೆ ಮಾಡಿ

ಹೌದು,ಭಾರತದ ಅತಿ ದೊಡ್ಡ ವಿಮಾ ಕೇಂದ್ರವಾದ ಭಾರತೀಯ ಜೀವ ನಿಗಮ ( LIC) ದೀರ್ಘಾವಧಿಯ ಪಾಲಿಸಿದಾರರಾಗಿರಲಿ ಅಥವಾ ಹೊಸ ಬಳಕೆದಾರರಾಗಿರಲಿ, ನಿಮ್ಮ LIC ಪ್ರೀಮಿಯಂ ಪಾವತಿಗಳಿಗೆ ಗಡುವು ತಪ್ಪಿದರೆ ನೀವು ಬೇಡಪಡಬೇಕಿಲ್ಲ. ಯಾಕೆಂದರೆ LIC ನಿಮಗಾಗಿ ಇನ್ನೂ ಹೆಚ್ಚಿನ ಸಮಯವನ್ನು ಇದಕ್ಕಾಗಿ ಮೀಸಲು ಇಟ್ಟಿದೆ. ಮತ್ತು ಎಲ್‌ಐಸಿ ವಿಮಾ ಕಂಪನಿಯು ಈಗ ತನ್ನ ಪಾಲಿಸಿದಾರರು ವಿವಿಧ ಹೂಡಿಕೆದಾರರ ಸ್ನೇಹಿ ಆಯ್ಕೆಯನ್ನು ಮಾಡಿಕೊಳ್ಳಲು ತಮ್ಮ ಪಾಲಿಸಿ ಯೋಜನೆಗಳನ್ನು ಮತ್ತೆ ಸಕ್ರಿಯಗೊಳಿಸಲು ಅನುಮತಿಯನ್ನು ಕೊಟ್ಟಿದೆ.

LIC ಪ್ರೀಮಿಯಂ ಕಳೆದು ಹೋದರೆ ಏನಾಗುತ್ತದೆ?

ಭಾರತೀಯ ಜೀವ ವಿಮಾ ನಿಗಮ (LIC) ತಿಂಗಳ ಪಾವತಿಗಳಿಗೆ ಪಾಲಿಸಿ 15 ದಿನಗಳು ಮತ್ತು ಮೂರು ತಿಂಗಳ ಪಾಲಿಸಿ ಮತ್ತು ಆರು ತಿಂಗಳ ಪಾಲಿಸಿ ಅಥವಾ ವರ್ಷದದ ಆಯ್ಕೆಯ ಪಾಲಿಸಿಯಂತಹ ವಿಧಾನಗಳಿಗೆ 30 ದಿನಗಳವರೆಗೆ ಗ್ರೇಸ್ ಅವಧಿಯನ್ನು ನೀಡಿದೆ.

ನಿಮ್ಮ ಪಾಲಿಸಿಯನ್ನು ಮತ್ತೆ ಸಕ್ರಿಯಗೊಳಿಸುವುದು ಹೇಗೆ..?

ನಿಮ್ಮ ಎಲ್‌ಐಸಿ ಪಾಲಿಸಿಯನ್ನು ಈ ಕೆಳಗಿನ ವಿಧಾನಗಳ ಮೂಲಕ 2 ವರ್ಷಗಳ ಒಳಗೆ ಅಥವಾ ಕೆಲವೊಮ್ಮೆ 5 ವರ್ಷಗಳವರೆಗೆ ಮತ್ತೆ ಆಕ್ಟಿವ್‌ ಮಾಡಬಹುದು.

ಸಾಮಾನ್ಯ ವಿಧಾನ (Ordinary Revival): ಈ ವಿಧಾನದ ಮೂಲಕ ನೀವು ಆರೋಗ್ಯ ವಿಮೆಗೆ ಸಲ್ಲಿಸುವಾಗ ತಪ್ಪಿದ ಎಲ್ಲಾ ಪ್ರೀಮಿಯಂಗಳನ್ನು ಶೇ.8 ಮತ್ತು10 ಬಡ್ಡಿಯೊಂದಿಗೆ ಪಾವತಿಸಬೇಕಾಗುತ್ತದೆ.

ವಿಶೇಷ ಪುನರುಜ್ಜೀವನ(Special Revival): ನೀವು ಪಾಲಿಸಿ ಶುರುಮಾಡಿದ ದಿನಾಂಕದಿಂದ ಸರಿಹೊಂದಿಸಿ. ಈ ವಿಧಾನವು 2 ದಿಂದ 5 ವರ್ಷ ವಿಳಂಬ ಹೊಂದಿರುವವರಿಗೆ ಹೆಚ್ಚಿನ ಸಹಾಯವಾಗುತ್ತದೆ.

ಸಾಲ ಮರುಪಾವತಿಯ ವಿಧಾನ (Loan-Cum-Revival): ಈ ವಿಧಾನವು ನಿಮ್ಮ ಪಾಲಿಸಿಯನ್ನು ಸಕ್ರಿಯವಾಗಿಡಲು ಅಗತ್ಯವಿರುವ ಬಾಕಿಗಳನ್ನು ಪಾವತಿಸಲು ಪಾಲಿಸಿಯ ಸರೆಂಡರ್ ಮೌಲ್ಯವನ್ನು ಸಾಲವಾಗಿ ಬಳಸುವುದನ್ನು ಸಹ ಒಳಗೊಂಡಿದೆ.

ಕಂತು ಪುನರುಜ್ಜೀವನ(Instalment Revival): ನಿಮ್ಮ ಎಲ್‌ಐಸಿ ಪಾಲಿಸಿಯನ್ನು ಪುನಃ ಸಕ್ರಿಯಗೊಳಿಸಲು ಪುನರುಜ್ಜೀವನದ ಮೊತ್ತವನ್ನು ಸಹ ಆಭಗವಹಿಸಬಹದು.

ಅಭಿಯಾನಗಳು(Revival Campaigns): ವಿಶೇಷ ಅಭಿಯಾನಗಳ ಸಮಯದಲ್ಲಿ, ಎಲ್ಐಸಿ ನಿಮ್ಮ ವಿಳಂಬ ಶುಲ್ಕವನ್ನು ಮನ್ನಾ ಕೂಡ ಮಾಡಬಹುದು.

ಹಂತ ಹಂತದ ಪ್ರಕ್ರಿಯೆ

ಹತ್ತಿರದ ಎಲ್ಐಸಿ ಶಾಖೆ ಅಥವಾ ಏಜೆಂಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಪಾಲಿಸಿ ಸ್ಥಿತಿಯನ್ನು ಪರಿಶೀಲಿಸಬಹುದು. ಫಾರ್ಮ್ 680 ಅಥವಾ ಎಲ್‌ಐಸಿ ಒದಗಿಸಿದ ಪುನರುಜ್ಜೀವನ ವಿನಂತಿ ಫಾರ್ಮ್ ಅನ್ನು ಭರ್ತಿ ಮಾಡಬಹುದು. ನೀವು ತಪ್ಪಿಸಿದ ಎಲ್ಲಾ ಪ್ರೀಮಿಯಂಗಳನ್ನು ಬಡ್ಡಿಯೊಂದಿಗೆ ಪಾವತಿ ಮಾಡಬೇಕಾಗುತ್ತದೆ.

ನೀವು ನಿಮ್ಮ ಪಾಲಿಸಿಗಳನ್ನು ಈ ಗ್ರೇಸ್ ಅವಧಿಯೊಳಗೆ ಪ್ರೀಮಿಯಂ ಪಾವತಿಸದಿದ್ದರೆ ಮಾತ್ರ ನಿಮ್ಮ ಪಾಲಿಸಿ ರದ್ದಾಗುತ್ತದೆ. ಗ್ರೇಸ್ ಅವಧಿ ಮುಗಿದ ನಂತರ ನಿಮ್ಮ ಜೀವ ವಿಮೆಯನ್ನು ರದ್ದುಗೊಳಿಸಲಾಗುತ್ತದೆ. ಇದರ ಜೊತೆಗೆ ನಿಮ್ಮ ಪಾಲಿಸಿಉ ಮೇಲಿನ ಬೋನಸ್ ಮತ್ತು ಲಾಯಲ್ಟಿ ಅನುಕೂಲವನ್ನು ತಡೆಹಿಡಿಯಲಾಗುತ್ತದೆ ಮತ್ತು ನೀವು ನಂತರ ಪಾಲಿಸಿಯನ್ನು ಸಕ್ರೀಯಗೊಳಿಸದ ಹೊರತು, ನೀವು ಮೆಚ್ಯೂರಿಟಿ ಪ್ರಯೋಜನಗಳಿಗೆ ಅರ್ಹತೆಯನ್ನು ನೀವು ಕಳೆದುಕೊಳ್ಳಬಹುದು. ನಿಮ್ಮ ಪಾಲಿಸಿಗಳು 6 ತಿಂಗಳಿಗಿಂತ ಹೆಚ್ಚು ಕಾಲ ರದ್ದಾಗಿದ್ದರೆ ಅಥವಾ ಹೆಚ್ಚಿನ ಮೊತ್ತದ ವಿಮಾ ಯೋಜನೆಗಳಿದ್ದರೆ, ಎಲ್ಐಸಿಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ವೈದ್ಯಕೀಯ ವರದಿಗಳು ನೀಡಿ ಮತ್ತೆ ಸಕ್ರಿಯಗೊಳಿಸಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+