2020ನೇ ಇಸವಿ ನಿಮ್ಮ ಪಾಲಿಗೆ ಹೇಗಿತ್ತೋ ಏನೋ ಗೊತ್ತಿಲ್ಲ. ಅದರಲ್ಲೂ ಆರ್ಥಿಕ ಪರಿಸ್ಥಿತಿ ಹೇಗಿತ್ತೋ, ಕಷ್ಟ- ಸುಖ ಇತ್ಯಾದಿ ವಿಚಾರಗಳನ್ನು ಒಮ್ಮೆ ಮೆಲುಕು ಹಾಕಿ ನೋಡಿ. ಕೆಲವು ಘಟನೆಗಳ ಬಗ್ಗೆ ಮುಂಚೆಯೇ ಸುಳಿವು ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು ಅನ್ನಿಸಿರಬಹುದು. ಅಥವಾ ಅಂದುಕೊಂಡಂತೆ ಆ ಕೆಲಸ ಮಾಡಿಬಿಟ್ಟಿದ್ದರೆ ಚೆನ್ನಾಗಿರುತ್ತಿತ್ತು ಅಂತಲೂ ಅನಿಸಿರಬಹುದು.
ಇರಲಿ, ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲ ಇಲ್ಲ. ನಮ್ಮೆಲ್ಲರ ಎದುರಿಗೆ ಈಗ 2021ನೇ ಇಸವಿ ಇದೆ. ನಿಮ್ಮ ರಾಶಿಗಳ ಆಧಾರದಲ್ಲಿ ಹಣಕಾಸಿನ ಸ್ಥಿತಿ ಹೇಗಿರುತ್ತದೆ. ಏನು ಮಾಡಬೇಕು ಹಾಗೂ ಏನು ಮಾಡಬಾರದು ಎಂದು ತಿಳಿದುಕೊಳ್ಳಿ. ಒಂದಿಷ್ಟು ಮುಂಜಾಗ್ರತೆ ಹಾಗೂ ಕೆಲವು ವಿಷಯಗಳಲ್ಲಿ ಶೀಘ್ರ ತೀರ್ಮಾನ ಕೈಗೊಳ್ಳುವ ಮೂಲಕ ಈ ಹಿಂದಿನ ವರ್ಷದ ಹಳಹಳಿಕೆ ಬಿಟ್ಟುಬಿಡಿ.
ಈ ಹಿಂದೆ ಮೇಷದಿಂದ ಕನ್ಯಾ ತನಕ ರಾಶಿ ಭವಿಷ್ಯ ಪ್ರಕಟಿಸಲಾಗಿತ್ತು. ಇದರಲ್ಲಿ ತುಲಾದಿಂದ ಮೀನದ ತನಕ ಹಣಕಾಸು ಭವಿಷ್ಯ ತಿಳಿಯಿರಿ.
ತುಲಾ
- ಸೆಕೆಂಡ್ ವಾಹನ ಖರೀದಿ ಮಾಡುವಾಗ ನಷ್ಟ ಸಂಭವಿಸುವಂಥ ಯೋಗ ಇದೆ. ಆದ್ದರಿಂದ ಏಕಾಏಕಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕಡಿಮೆ ಬೆಲೆಗೆ ಸಿಗುತ್ತಿದೆ ಎಂಬ ಆಮಿಷಕ್ಕೆ ಬೀಳಬೇಡಿ.
- ಸ್ನೇಹಿತರು ಹೇಳಿದರು ಎಂಬ ಕಾರಣಕ್ಕೆ ಕೆಲವು ವ್ಯವಹಾರಕ್ಕೆ, ಅದರಲ್ಲೂ ನಿಮಗೆ ಹೊಸದಾದ ವ್ಯವಹಾರಕ್ಕೆ ಕೈ ಹಾಕಿ, ಮುಂದುವರಿದಲ್ಲಿ ಹಣದ ವ್ಯವಹಾರಕ್ಕೆ ಅಡೆತಡೆ ಎದುರಾಗುತ್ತದೆ.
- ಸೈಟು, ಮನೆ, ವಾಹನ ಖರೀದಿಸುವ ಯೋಗ ಇದೆ. ಅದಕ್ಕಾಗಿ ಹೆಚ್ಚಿನ ಬಡ್ಡಿ ಕಟ್ಟಬೇಕಾಗುತ್ತದೆ.
- ವಿದೇಶದಲ್ಲಿ ಮಕ್ಕಳು ಇದ್ದಲ್ಲಿ ಅವರ ಕಡೆಯಿಂದ ಹಣ ಬರಲಿದೆ. ತುಂಬ ಅನುಕೂಲಸ್ಥ ಕುಟುಂಬದಿಂದ ವಿವಾಹ ಸಂಬಂಧಗಳು ದೊರೆಯುವ ಅವಕಾಶಗಳಿದ್ದು, ಬೆಳವಣಿಗೆಗೆ ಸಹಕಾರಿ ಆಗಲಿದೆ.
- ವ್ಯಾಪಾರ- ವ್ಯವಹಾರ ಮಾಡುತ್ತಿದ್ದಲ್ಲಿ ಈ ಹಿಂದಿನ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ಇನ್ನು ಪಿತ್ರಾರ್ಜಿತವಾಗಿ ಬರಬಹುದು ಎಂದು ನಿರೀಕ್ಷೆ ಮಾಡಿದ್ದ ಆಸ್ತಿ- ಹಣಕಾಸು ಬರಲಿದೆ.
ವೃಶ್ಚಿಕ
- ನಿಮ್ಮ ನಂಬಿಕೆ- ವಿಶ್ವಾಸ ದುರುಪಯೋಗ ಮಾಡಿಕೊಂಡು, ಹಣದ ವಿಚಾರದಲ್ಲಿ ವಂಚನೆ ಮಾಡುವ ಸಾಧ್ಯತೆ ಇದೆ. ಸ್ನೇಹಿತರು- ಸಂಬಂಧಿಕರೇ ನಿಮ್ಮ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಿದ್ದಾರೆ.
ನಿಮ್ಮ ಹಣದ ಹರಿವಿಗೆ ಏನೂ ಕೊರತೆ ಇರುವುದಿಲ್ಲ. ಇನ್ನು ಕುಟುಂಬದಲ್ಲಿ ಧಾರ್ಮಿಕ ಸಮಾರಂಭಗಳಿಗೆ, ಮದುವೆ ಮೊದಲಾದ ಕಾರ್ಯಕ್ರಮಗಳಿಗೆ ಹೆಚ್ಚಿನ ಖರ್ಚಾಗಲಿದೆ.
ಆಸ್ತಿ ಬರಬಹುದು ಎಂಬ ಕಾರಣಕ್ಕೆ ಕಾನೂನು ಹೋರಾಟದಲ್ಲಿ ತೊಡಗಿಕೊಂಡು, ಅದಕ್ಕಾಗಿ ಹಣ ಖರ್ಚಾಗಲಿದೆ. ಈ ವಿಚಾರದಲ್ಲಿ ನಿಮಗೆ ಸಂಪೂರ್ಣ ಲಾಭ ಆಗುವುದಿಲ್ಲ.- ಖರ್ಚು ಮಾಡಿದ್ದಕ್ಕೆ ತಕ್ಕಂತೆ ಪ್ರತಿಫಲ ದೊರೆಯುವುದಿಲ್ಲ. ವಿದೇಶ ಪ್ರಯಾಣದಲ್ಲಿ ಸ್ವಲ್ಪ ಹಿನ್ನಡೆಯಾಗಿ, ನೀವು ನಿರೀಕ್ಷೆ ಮಾಡಿದ್ದ ಆದಾಯವು ಅಂದುಕೊಳ್ಳಂತೆ ಬರುವುದಿಲ್ಲ.
- ಸೋದರ- ಸೋದರಿಯರ ಮಕ್ಕಳ ವಿವಾಹ ಅಥವಾ ಮತ್ಯಾವುದಾದರೂ ಕಾರಣಕ್ಕೆ ಆಸ್ತಿಯನ್ನು ಮಾರಿ ಅಥವಾ ಉಳಿತಾಯದ ಹಣವನ್ನು ತೆಗೆದು, ಕೊಡಬೇಕಾಗುತ್ತದೆ. ಹೊಸ ಜವಾಬ್ದಾರಿಗಳನ್ನು ಮೈ ಮೇಲೆ ಎಳೆದುಕೊಳ್ಳಬೇಡಿ.
ಧನುಸ್ಸು
- ನಿಮ್ಮ ಮಾತಿನಿಂದಲೇ ದೊಡ್ಡ ಮೊತ್ತದ ಹಣವನ್ನು ಕೈಯಿಂದ ಕಳೆದುಕೊಳ್ಳಲಿದ್ದೀರಿ ಅಥವಾ ನಿಮ್ಮ ಪಾಲಿಗೆ ಬರಬೇಕಾದ ಹಣವು ಬೇರೆಯವರ ಪಾಲಾಗಲಿದೆ.
- ಭೂಮಿ ವ್ಯವಹಾರ ಮಾಡುವಾಗ ಲೆಕ್ಕಾಚಾರದಿಂದ ಮಾಡಿ. ಕುಟುಂಬ ಸದಸ್ಯರನ್ನು ನಂಬಿಕೊಂಡು, ಅವರಿಗೆ ಈ ಜವಾಬ್ದಾರಿಯನ್ನು ವಹಿಸದಿರಿ.
- ನಿಮ್ಮ ಆರೋಗ್ಯ ಸಮಸ್ಯೆಗಳಿಗೆ ಅಥವಾ ತಂದೆಯ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವುದಕ್ಕೆ ಹೆಚ್ಚಿನ ಖರ್ಚು ಆಗಲಿದೆ.
- ನಿಮಗೆ ಆಗಬೇಕಾದ ಬಡ್ತಿ ಅಥವಾ ವೇತನ ಹೆಚ್ಚಳವನ್ನು ಮೇಲಧಿಕಾರಿಗಳು ತಡೆ ಹಿಡಿಯಲಿದ್ದಾರೆ. ವಿದೇಶದಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದಲ್ಲಿ ಸ್ವಲ್ಪ ಸಮಯ ಆ ಪ್ರಯತ್ನವನ್ನು ನಿಲ್ಲಿಸುವುದು ಉತ್ತಮ.
- ಇನ್ನು ಹೊಸಬರ ಜತೆಗಿನ ವ್ಯವಹಾರವಂತೂ ಬಿಲ್ ಕುಲ್ ಬೇಡ. ಚೀಟಿ ವ್ಯವಹಾರದಿಂದ ದೂರವೇ ಇದ್ದುಬಿಡಿ.
ಮಕರ
ಹಣಕಾಸು ವಿಚಾರದಲ್ಲಿ ಮಿಶ್ರ ಫಲ ಅನುಭವಿಸಲಿದ್ದೀರಿ. ಪಿತ್ರಾರ್ಜಿತ ಆಸ್ತಿ ಮಾರಾಟದಿಂದ ಹಣ ಬರಲಿದೆ. ಆದರೆ ಅದು ನಿಮ್ಮ ಅಗತ್ಯಕ್ಕೆ ಹಾಗೂ ಸಮಯಕ್ಕೆ ಸಿಗುತ್ತದೆಯೇ ಎಂದು ಹೇಳುವುದು ಕಷ್ಟ.
ಹಣದ ವಿಚಾರಕ್ಕೇ ಬಂಧುಗಳು, ಸ್ನೇಹಿತರಿಂದ ಅವಮಾನಕ್ಕೆ ಗುರಿ ಆಗಲಿದ್ದೀರಿ. ಏಕಾಗ್ರತೆ ಕಳೆದುಕೊಳ್ಳದೆ ಮಕ್ಕಳ ಶಿಕ್ಷಣ, ಆರೋಗ್ಯಕ್ಕೆ ಅಗತ್ಯ ಇರುವ ಹಣವನ್ನು ಹೊಂದಿಸುವ ಕಡೆಗೆ ಗಮನ ನೀಡಿ.
ಇನ್ನು ವರ್ಷದ ಆರು ತಿಂಗಳು ಆದಾಯ ಹೆಚ್ಚಳ ಆಗಿ ಅಥವಾ ಯಾವುದಾದರೂ ಮೂಲದಿಂದ ಹಣ ಬಂದಲ್ಲಿ ಅದನ್ನು ಕೂಡಿಡುವ ಕಡೆಗೆ ಗಮನ ನೀಡಿ. ತಕ್ಷಣಕ್ಕೆ ಹೂಡಿಕೆ, ಲಾಭ ಎಂದು ಆಲೋಚಿಸದಿರಿ.
ನಿಮಗಿಂತ ಹಿರಿಯರು ಹೇಳುವ ಸಲಹೆಗಳನ್ನು ಕೇಳಿಸಿಕೊಂಡು, ಭವಿಷ್ಯದ ಭದ್ರತೆಗೆ ಹಣಕಾಸಿನ ಯೋಜನೆ ರೂಪಿಸಿ.
ಇನ್ನು ಉದ್ಯೋಗಸ್ಥರು ಕೆಲಸವನ್ನು ಬಿಟ್ಟು, ಹೊಸ ವ್ಯಾಪಾರ- ವ್ಯವಹಾರ ಎಂದು ಆರಂಭಿಸಿದಲ್ಲಿ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇದೆ. ಬಡ್ಡಿ ವ್ಯವಹಾರಕ್ಕಂತೂ ಕೈ ಹಾಕಲೇಬೇಡಿ. ಇನ್ನು ವೇತನ ಹೆಚ್ಚಳ ನಿರೀಕ್ಷಿತ ಪ್ರಮಾಣದಲ್ಲಿ ಇರುವುದಿಲ್ಲ.
ಕುಂಭ
- ವಾಹನ ಖರೀದಿ, ಆರೋಗ್ಯ ಹಾಗೂ ಪ್ರಯಾಣದಲ್ಲಿ ಸಮಸ್ಯೆಗಳಾಗಿ ಹಣವನ್ನು ಕೈಯಿಂದ ವಿಪರೀತ ಖರ್ಚು ಮಾಡಲಿದ್ದೀರಿ. ತಾಯಿಯ ಆರೋಗ್ಯಕ್ಕಾಗಿ ಜಾಸ್ತಿ ಖರ್ಚಾಗಲಿದೆ.
- ಮಧುಮೇಹ ಮತ್ತಿತರ ಸಮಸ್ಯೆಗಳನ್ನು ಎದುರಿಸುತ್ತಿರುವವರಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಅನಿವಾರ್ಯ ಆಗಿ, ಅದಕ್ಕಾಗಿ ಹಣವನ್ನು ಸಾಲ ಮಾಡಬೇಕಾಗಿ ಬರಬಹುದು.
- ಕ್ರೆಡಿಟ್ ಕಾರ್ಡ್ ಬಳಸುತ್ತಿರುವವರು, ಆನ್ ಲೈನ್ ವ್ಯವಹಾರ ಮಾಡುವವರು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ನಿಮಗೆ ವಂಚನೆ ಆಗುವ ಸಾಧ್ಯತೆ ಇದೆ.
- ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ ಹಾಗೂ ನವೆಂಬರ್ ಮತ್ತು ಡಿಸೆಂಬರ್ ನಲ್ಲಿ ನೀವು ಬಳಸುವ ಗ್ಯಾಜೆಟ್, ಲ್ಯಾಪ್ ಟಾಪ್, ಎಟಿಎಂ ಕಾರ್ಡ್, ಕ್ರೆಡಿಟ್ ಕಾರ್ಡ್ ಇತ್ಯಾದಿಗಳನ್ನು ಜೋಪಾನವಾಗಿ ನೋಡಿಕೊಳ್ಳಿ.
- ದೂರ ಪ್ರಯಾಣ ಮಾಡುವ ವೇಳೆ ಬೆಲೆ ಬಾಳುವ ವಸ್ತುಗಳನ್ನು ತೆಗೆದುಕೊಂಡು ಹೋಗಬೇಡಿ. ಸಂಬಂಧಿಕರ ಮನೆಗಳಿಗೆ ತೆರಳುವಾಗ ಸಾಧ್ಯವಾದಷ್ಟು ಒಡವೆಗಳನ್ನು ಹಾಕಿಕೊಳ್ಳದಿರುವುದು ಉತ್ತಮ.
ಮೀನ
- ವ್ಯಾಪಾರ- ವ್ಯವಹಾರ ಮಾಡುವವರಿಗೆ ದೊಡ್ಡ ಲಾಭದ ಅವಕಾಶಗಳು ದೊರೆಯುತ್ತವೆ. ಆದರೆ ಅದು ದೊರೆಯುವುದು ಸ್ವಲ್ಪ ಮಟ್ಟಿಗೆ ನಿಧಾನವಾಗುತ್ತದೆ.
- ಪ್ರಭಾವಿ ವ್ಯಕ್ತಿಗಳ ಪರಿಚಯದಿಂದ ನಿಮ್ಮ ವ್ಯಾಪಾರಕ್ಕೆ ಅನುಕೂಲ ಒದಗಿಬರುತ್ತದೆ. ವಾಹನ ಖರೀದಿ, ಮನೆ, ಸೈಟು ಖರೀದಿ ಇತ್ಯಾದಿ ಶುಭ ಫಲಗಳನ್ನು ನೀವು ಕಾಣಲಿದ್ದೀರಿ.
- ನಿಮ್ಮ ಹಾಗೂ ಕುಟುಂಬದವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದಲ್ಲಿ ಖರ್ಚು ಕಡಿಮೆ ಮಾಡಿಕೊಳ್ಳಬಹುದು.
- ನಿಮ್ಮಲ್ಲಿ ಕೆಲವರು ಹೊಸ ಕಂಪೆನಿ ಅಥವಾ ಸಂಸ್ಥೆಗಳನ್ನು ಆರಂಭಿಸುವ ಯೋಗ ಇದೆ. ಉದ್ಯೋಗ ಸ್ಥಳದಲ್ಲಿ ಮೇಲಧಿಕಾರಿಗಳ ಪ್ರಶಂಸೆ ದೊರೆಯಲಿದೆ. ಇದರ ಜತೆಗೆ ವಿದೇಶ ಪ್ರಯಾಣದ ಅವಕಾಶಗಳು ಕೂಡ ದೊರೆಯಲಿವೆ.
- ಚಿತ್ರರಂಗದಲ್ಲಿ ನಟರಾಗಿರುವವರಿಗೆ ಅತಿ ದೊಡ್ಡ ಅವಕಾಶ ದೊರೆಯಲಿದೆ. ಸಂಭಾವನೆಯಲ್ಲಿ ಭಾರೀ ಏರಿಕೆ ಕೂಡ ಆಗಲಿದೆ. ಸಂಗಾತಿಯ ಬೆಂಬಲದ ಮೂಲಕ ಆರಂಭಿಸಿದ ವ್ಯವಹಾರ ಸ್ವಲ್ಪ ನಿಧಾನವಾಗಿಯಾದರೂ ಫಲ ನೀಡಲು ಆರಂಭವಾಗುತ್ತದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!



Click it and Unblock the Notifications