ದುಡ್ಡು ಯಾರು ಬೇಕಾದ್ರೂ ಸಂಪಾದನೆ ಮಾಡ್ತಾರೆ. ಆ ಹಣವನ್ನು ಉಳಿಸುವುದು ಇದೆಯೆಲ್ಲಾ, ಅದು ಕಷ್ಟದ ಕೆಲಸವೇ ಸರಿ. ಏನು ಮಾಡಿದ್ರೂ ಒಂದಿಷ್ಟು ದುಡ್ಡು ಕೂಡಿಡೋದು ಕಷ್ಟಕಷ್ಟ! ಹಣ ಉಳಿಸಿದರೂ ಅದರಿಂದ ಹೇಗೆ ಲಾಭ ಪಡೆದುಕೊಳ್ಳಬೇಕು ಅಂತ ಬಹುತೇಕರಿಗೆ ತಿಳಿದಿಲ್ಲ. ನೀವು ಕೂಡ ತುಂಬಾ ಖರ್ಚು ಮಾಡ್ತೀರಾ? ಏನು ಮಾಡಿದರೂ ದುಡ್ಡು ಉಳಿಸೋಕೆ ಆಗ್ತಿಲ್ವಾ? ಅತಿಯಾಗಿ ಖರ್ಚು ಮಾಡುವುದು ಒಂದು ಸರ್ಕಲ್‌ನಂತೆ. ಅದನ್ನು ಮುರಿಯುವುದು ಅಷ್ಟು ಸುಲಭವಲ್ಲ. ಆದರೆ, ಕೆಲವು ಅಭ್ಯಾಸಗಳೊಂದಿಗೆ ನಿಮ್ಮ ಖರ್ಚನ್ನು ನಿಯಂತ್ರಿಸಲು ಸಾರ್ಧಯ. ಅಳತೆ ಮೀರಿದ ಖರ್ಚುಗಳನ್ನು ನಿಭಾಯಿಸಲು ಇಲ್ಲಿವೆ ಕೆಲವು ಸಲಹೆಗಳು.
ನಿಮ್ಮ ಹಣ ಎಲ್ಲಿ ಖಚ್ಚು ಆಗುತ್ತದೆ ಎಂದು ತಿಳಿದುಕೊಳ್ಳಿ
ಮೊದಲು ನಿಮ್ಮ ಜೀವನದಲ್ಲಿ ಅನವಶ್ಯಕವಾಗಿ ಖರ್ಚು ಮಾಡ್ತಿದ್ದೀರಾ ಅಂತ ತಿಳಿದುಕೊಳ್ಳಿ. ನಂತರ ಅದನ್ನು ನೀವು ಹೀಗೆ ನಿರ್ವಹಣೆ ಮಾಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಇವೆಲ್ಲಾವನ್ನು ಗಮನದಲಿಟ್ಟುಕೊಂಡು ಒಂದೊಂದಾಗಿ ಕಡಿಮೆ ಮಾಡಿಕೊಂಡು ಬರಬೇಕು. ಒಂದೇ ಸಲ ನಿಲ್ಲಿಸೋದು ಕಷ್ಟ. ಆದರೆ ಕ್ರಮೇಣ ಕಡಿಮೆ ಮಾಡಿಕೊಂಡು ಬನ್ನಿ.

ನಿಮ್ಮದೇ ಅದ ಬಜೆಟ್ ತಯಾರಿ ಮಾಡಿಕೊಳ್ಳಿ
ನಿಮ್ಮ ಕೈಯಲ್ಲಿ ಇರುವ ಹಣವನ್ನು ಹೇಗೆಲ್ಲಾ ಉಪಯೋಗ ಮಾಡಿಕೊಳ್ಳಬೇಕು ಎಂಬುವುದನ್ನು ಬಜೆಟ್ ಹಾಕಿ ಲೆಕ್ಕಾಚಾರ ಮಾಡಿಕೊಳ್ಳಿ. ಇದರಿಂದ ನಿಮ್ಮ ಬಜೆಟ್ ನ ಖಚ್ಚು ವೆಚ್ಚಗಳ ಮಾಹಿತಿ ಸಿಗುತ್ತದೆ. ಇದನ್ನು ಅಳವಡಿಸಿಕೊಂಡು ನಿಮ್ಮ ಖರ್ಚುಗಳನ್ನು ಸರಿದೂಗಿಸುವುದನ್ನು ಕಲಿಯಲು ಸಹಾಯ ಮಾಡುತ್ತದೆ.
ಮಾರುಕಟ್ಟೆಯಲ್ಲಿ ನಿಮಗೆ ಸಹಾಯವಾಗಲಿ ಎಂದುಹಣಕಾಸುಗಳನ್ನು ಟ್ರ್ಯಾಕ್ ಮಾಡುವ ಉಪಕರಣಗಳು ಸಿಗುತ್ತವೆ ಅದನ್ನು ಬಳಕೆ ಮಾಡಿಕೊಳ್ಳಿ. ಇಲ್ಲವಾದರೆ ಮೊಬೈಲ್ ಅಪ್ಲಿಕೇಶನ್‌ಗಳನ್ನು ಬಳಸಿ. ನಿಮ್ಮ ಅಗತ್ಯತೆಗಳಿಗೆ ಉಳಿತಾಯ ಮತ್ತು ವೆಚ್ಚಗಳಿಗಾಗಿ ನಿರ್ದಿಷ್ಟ ಮೊತ್ತವನ್ನು ಹೊಂದಿಸುವುನ್ನು ಅಭ್ಯಾಸ ಮಾಡಿಕೊಳ್ಳಿ. ನಿಯಮಿತವಾಗಿ ಬಜೆಟ್ ಅನ್ನು ಅನುಸರಿಸುವುದರಿಂದ ಅನಗತ್ಯ ವೆಚ್ಚಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ.
ನಿಯಮ ಹಾಕಿಕೊಳ್ಳಿ
ದಿನದಲ್ಲಿ ನೀವು ಏನನ್ನಾದರೂ ವಸ್ತುಗಳನ್ನು ನೋಡಿದ್ರೆ ಅದನ್ನು ಖರೀದಿಸಲು ಆತುರಪಡಬೇಡಿ, ಅದನ್ನು ಖರೀದಿಸುವ ಮೊದಲು 24 ಗಂಟೆಗಳ ಕಾಲ ಯೋಚನೆ ಮಾಡಿ ಈ ಅಂತರವು ನಮಗೆ ನಿಜವಾಗಿಯೂ ಆ ವಸ್ತು ಅಗತ್ಯವಿದೆಯೇ ಎಂದು ತಿಳಿಯಲು ಸಹಾಯ ಮಾಡುತ್ತದೆ. ಬೇಡ ಎನಿಸಿದರೆ ಅದನ್ನು ಎಂದಿಗೂ ಖರೀದಿಸ ಮನಸ್ಸು ಮಾಡಬೇಡಿ.
ಆದಷ್ಟು ಕ್ರೆಡಿಟ್ ಕಾರ್ಡ್ ಬಳಕೆ ಕಡಿಮೆ ಮಾಡಿ
ನೀವು ಏನಾದರೂ ಖರೀದಿಯನ್ನು ಮಾಡುವಾಗ ನಗದು ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಸುವುದು ನಿಮ್ಮ ಖರ್ಚನ್ನು ನಿಯಂತ್ರಿಸಲು ಮತ್ತು ಸಾಲಕ್ಕೆ ಹೋಗುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕ್ರೆಡಿಟ್ ಕಾರ್ಡ್‌ಗಳ ಬಳಕೆಯನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವ ಪ್ರಯತ್ನ ಮಾಡಿ.
ನಿಮ್ಮ ಹಣಕಾಸಿನ ಗುರಿಯ ಕಡೆ ಇರಲಿ ಗಮನ
ನೀವು ಪ್ರವಾಸಕ್ಕೆ ಹೋಗೋದಕ್ಕೆ ಉಳಿತಾಯ ಮಾಡುವುದು, ತುರ್ತು ನಿಧಿಯನ್ನು ನಿರ್ಮಿಸುವುದು ಅಥವಾ ಸಾಲವನ್ನು ಪಾವತಿಸುವುದು ಮುಂತಾದ ಸ್ಪಷ್ಟ ಹಣಕಾಸಿನ ಗುರಿಗಳನ್ನು ಹೊಂದಿರುವುದು ಅವಶ್ಯಕ. ಇದರಿಂದ ನಿಮ್ಮ ಖರ್ಚಿಗೆ ಹೆಚ್ಚಿನ ಆದ್ಯತೆ ನೀಡಲು ಸಹಾಯವನ್ನು ಮಾಡುತ್ತದೆ.
ಅತಿ ಆಸೆ ಕಡಿಮೆ ಮಾಡಿ
ನೀವು ಸಾಮಾಜಿಕ ಜಾಲತಾಣದಲ್ಲಿ ಬರುವಂತಹ ಮಾರ್ಕೆಟಿಂಗ್ ಇಮೇಲ್‌ಗಳನ್ನು ವೀಕ್ಷಿಸಬೇಡಿ. ವಿಂಡೋ ಶಾಪಿಂಗ್ ತಪ್ಪಿಸಿ. ಯಾವುದೇ ಉತ್ಪನ್ನಗಳನ್ನು ಪ್ರಚಾರ ಮಾಡುವ ಸಾಮಾಜಿಕ ಮಾಧ್ಯಮದ ಪ್ರಭಾವಶಾಲಿ ವೀಡಿಯೊಗಳನ್ನು ನೋಡಬೇಡಿ. ಆದು ಬೇಕು ಇದು ಬೇಕು ಎಂದು ಹಣವನ್ನು ದುಂದುವೆಚ್ಚ ಮಾಡಬೇಡಿ.
ನಿಮ್ಮ ಹಣಕಾಸಿನ ಯೋಜನೆಗಳು ದಾರಿ ತಪ್ಪಿದ್ದರೆ ನಿಮ್ಮ ಬಜೆಟ್‌ನಲ್ಲಿ ಸ್ವಲ್ಪ ಮೊತ್ತವನ್ನು ಮೀಸಲಿಡಿ. ಅತಿಯಾದ ಖರ್ಚು ತೊಡೆದು ಹಾಕಲು ಸಮಯ ತೆಗೆದುಕೊಳ್ಳುತ್ತದೆ. ಹೀಗೆ ನೀವು ಹಣಕಾಸನ್ನು ನಿರ್ವಹಣೆ ಮಾಡುವುದನ್ನು ಈ ಮೇಲಿನಂತೆ ಹಂತ ಹಂತವಾಗಿ ಕಲಿಯಿರಿ.


Click it and Unblock the Notifications