MSCI ಇಂಡಿಯಾ ರಿಸಫಲ್: ನಿಮ್ಮ ಹೂಡಿಕೆಗೆ ಕಾದಿದೆ ದೊಡ್ಡ ಬದಲಾವಣೆ; ಇಟಿಎಫ್ ಅಥವಾ ನೇರ ಷೇರು ಯಾವುದು ಬೆಸ್ಟ್?

ಎಂಎಸ್‌ಸಿಐ ಇಂಡಿಯಾ ಪರಿಷ್ಕೃತ ಪಟ್ಟಿ (MSCI India reshuffle list) ನವೆಂಬರ್ 12ರಂದು ಭಾರತೀಯ ಕಾಲಮಾನ (IST) ಬೆಳಗಿನ ಜಾವ 3:30ರ ಸುಮಾರಿಗೆ ಬಿಡುಗಡೆಯಾಗಲಿದೆ. ಇದು ಮಾರುಕಟ್ಟೆಗೆ ಬಂದ ಕೆಲವೇ ಗಂಟೆಗಳಲ್ಲಿ ಷೇರುಗಳ ಬೆಲೆ ಮತ್ತು ಹಣದ ಹರಿವಿನ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರಬಹುದು. ಆದರೆ ಇಲ್ಲಿ ಪಟ್ಟಿಗಿಂತಲೂ ನೀವು ಯಾವ ಹೂಡಿಕೆ ಮಾರ್ಗವನ್ನು ಆಯ್ದುಕೊಳ್ಳುತ್ತೀರಿ ಎಂಬುದು ಮುಖ್ಯ. ನೀವು ಎಕ್ಸ್‌ಚೇಂಜ್ ಟ್ರೇಡೆಡ್ ಫಂಡ್‌ಗಳನ್ನು (ETF) ಆಯ್ಕೆ ಮಾಡುತ್ತೀರಾ, ಆಕ್ಟಿವ್ ಫಂಡ್ ಮ್ಯಾನೇಜರ್‌ಗಳನ್ನು ನಂಬುತ್ತೀರಾ ಅಥವಾ ನೀವೇ ಸ್ವತಃ (DIY) ಷೇರುಗಳ ಪೋರ್ಟ್‌ಫೋಲಿಯೋ ರೂಪಿಸಿಕೊಳ್ಳುತ್ತೀರಾ?

ಎಂಎಸ್‌ಸಿಐ ತರುವ ಬದಲಾವಣೆಗಳು ಪ್ಯಾಸಿವ್ ಮನಿ ಮತ್ತು ವಿದೇಶಿ ಹೂಡಿಕೆದಾರರ (FII) ಹರಿವನ್ನು ನಿರ್ಧರಿಸುತ್ತವೆ. ನೂತನವಾಗಿ ಸೇರ್ಪಡೆಯಾಗುವ ಷೇರುಗಳಿಗೆ ಇಂಡೆಕ್ಸ್ ಫಂಡ್‌ಗಳಿಂದ ಭಾರಿ ಹಣ ಹರಿದುಬಂದರೆ, ಹೊರಬೀಳುವ ಷೇರುಗಳು ಮಾರಾಟದ ಒತ್ತಡ ಎದುರಿಸುತ್ತವೆ. ನವೆಂಬರ್ 11-12ರ ಮಧ್ಯರಾತ್ರಿ ಭಾರತೀಯ ಕಾಲಮಾನದಲ್ಲಿ ಈ ಘೋಷಣೆ ಬರಲಿದೆ. ಈ ಬದಲಾವಣೆಗಳು ನವೆಂಬರ್ 30ರ ಮಾರುಕಟ್ಟೆ ಮುಕ್ತಾಯದ ವೇಳೆಗೆ ಜಾರಿಗೆ ಬರಲಿವೆ. ಈ ಮಧ್ಯಂತರ ಸಮಯವು ಸ್ವಿಂಗ್ ಟ್ರೇಡಿಂಗ್‌ಗೆ ಅವಕಾಶ ನೀಡಿದರೂ, ಸ್ಲಿಪ್ಪೇಜ್, ಇಂಡೆಕ್ಸ್ ಟ್ರ್ಯಾಕಿಂಗ್ ಎರರ್ ಮತ್ತು ತೀವ್ರ ಏರಿಳಿತಗಳ (whipsaw risk) ಅಪಾಯವನ್ನೂ ತಂದೊಡ್ಡುತ್ತದೆ.

MSCI ಇಂಡಿಯಾ ರಿಸಫಲ್: ಹೂಡಿಕೆದಾರರಿಗೆ ಬೆಸ್ಟ್ ತಂತ್ರ ಯಾವುದು?

ಇಟಿಎಫ್ vs ಆಕ್ಟಿವ್ ಲಾರ್ಜ್/ಮಿಡ್‌ಕ್ಯಾಪ್ ಫಂಡ್‌ಗಳು vs ನೇರ ಷೇರು ಹೂಡಿಕೆ: ಎಂಎಸ್‌ಸಿಐ ನವೆಂಬರ್ 11 ಪರಿಷ್ಕರಣೆಯ ವೆಚ್ಚಗಳು

ಇದನ್ನು ಅರ್ಥಮಾಡಿಕೊಳ್ಳಲು ತಿಂಗಳಿಗೆ ₹10,000 ಎಸ್‌ಐಪಿ (SIP) ಹೂಡಿಕೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳೋಣ. 0.20 ಶೇಕಡಾ ಎಕ್ಸ್‌ಪೆನ್ಸ್ ರೇಶಿಯೋ ಹೊಂದಿರುವ ಕಡಿಮೆ ವೆಚ್ಚದ ಇಟಿಎಫ್‌ಗೆ ಸರಾಸರಿ ಬಂಡವಾಳದ ಮೇಲೆ ವರ್ಷಕ್ಕೆ ಸುಮಾರು ₹120 ವೆಚ್ಚವಾಗುತ್ತದೆ. ಇದಕ್ಕೆ ಬ್ರೋಕರೇಜ್ ಮತ್ತು ಸ್ಪೆಡ್ ರೂಪದಲ್ಲಿ ಸುಮಾರು ₹240 ಸೇರಿಕೊಳ್ಳುತ್ತದೆ. ಅದೇ 1.20 ಶೇಕಡಾ ವೆಚ್ಚದ ಡೈರೆಕ್ಟ್-ಪ್ಲಾನ್ ಆಕ್ಟಿವ್ ಫಂಡ್‌ಗೆ ವರ್ಷಕ್ಕೆ ಸುಮಾರು ₹720 ಖರ್ಚಾಗುತ್ತದೆ, ಜೊತೆಗೆ ಎಕ್ಸಿಟ್ ಲೋಡ್ ಇರಬಹುದು. ಇನ್ನು ನೀವೇ ಸ್ವತಃ ಷೇರು ಖರೀದಿಸಿದರೆ (DIY) ಬ್ರೋಕರೇಜ್, ರೀಬ್ಯಾಲೆನ್ಸಿಂಗ್ ಶ್ರಮ ಮತ್ತು ಸಮಯದ ಅಪಾಯ ಹೆಚ್ಚಿರುತ್ತದೆ.

ಹೂಡಿಕೆ ಮಾರ್ಗ₹10,000 ಎಸ್‌ಐಪಿ ಮೇಲಿನ ಅಂದಾಜು ವಾರ್ಷಿಕ ವೆಚ್ಚಮುಖ್ಯ ಸವಾಲುಗಳು/ತೊಂದರೆಗಳುಮಾರಾಟದ ಮೇಲಿನ ತೆರಿಗೆ
ಇಂಡೆಕ್ಸ್ ಇಟಿಎಫ್~₹360 (₹120 ವೆಚ್ಚ + ~₹240 ಟ್ರೇಡಿಂಗ್)ಪ್ರೀಮಿಯಂ/ಡಿಸ್ಕೌಂಟ್, ಟ್ರ್ಯಾಕಿಂಗ್ ಎರರ್ಈಕ್ವಿಟಿ ನಿಯಮಗಳು; ದೀರ್ಘಾವಧಿಗಿಂತ ಅಲ್ಪಾವಧಿಗೆ ತೆರಿಗೆ ಹೆಚ್ಚು
ಆಕ್ಟಿವ್ ಫಂಡ್ (ಡೈರೆಕ್ಟ್)~₹720 ವೆಚ್ಚಒಂದು ವರ್ಷದೊಳಗೆ ಹಿಂಪಡೆದರೆ ಎಕ್ಸಿಟ್ ಲೋಡ್ಈಕ್ವಿಟಿ ನಿಯಮಗಳು; ಹೂಡಿಕೆ ಅವಧಿಯನ್ನು ಆಧರಿಸಿದೆ
ನೇರ ಷೇರು ಹೂಡಿಕೆ (DIY)₹180–₹600 ಶುಲ್ಕ, ಜೊತೆಗೆ ಸ್ಲಿಪ್ಪೇಜ್ಸಮಯ, ರಿಸರ್ಚ್, ರೀಬ್ಯಾಲೆನ್ಸಿಂಗ್ಈಕ್ವಿಟಿ ನಿಯಮಗಳು; ಆಗಾಗ ಷೇರು ಬದಲಿ ಮಾಡುವುದರಿಂದ ತೆರಿಗೆ ಹೆಚ್ಚಳ

ಘೋಷಣೆ ಹೊರಬೀಳುವ ಸಮಯ ಮತ್ತು ನವೆಂಬರ್ 30ರ ಮಾರುಕಟ್ಟೆ ಮುಕ್ತಾಯದ ವೇಳೆಯಲ್ಲಿ ಹೂಡಿಕೆಯನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದು ಅತ್ಯಂತ ಮುಖ್ಯ. ಮಾರ್ಕೆಟ್ ಮೇಕರ್‌ಗಳು ಹೆಡ್ಜಿಂಗ್ ಮಾಡುವುದರಿಂದ ಇಟಿಎಫ್‌ಗಳಲ್ಲಿ ಸ್ಪೆಡ್‌ಗಳು ಹೆಚ್ಚಾಗಬಹುದು. ಕ್ರಿಯೇಷನ್ ಬಾಸ್ಕೆಟ್‌ಗಳು ಸ್ಥಗಿತಗೊಂಡರೆ ಟ್ರ್ಯಾಕಿಂಗ್ ಎರರ್ ತೀವ್ರಗೊಳ್ಳಬಹುದು. ಆಕ್ಟಿವ್ ಫಂಡ್ ಮ್ಯಾನೇಜರ್‌ಗಳು ಮೊದಲೇ ಪ್ಲಾನ್ ಮಾಡಿ ಪಟ್ಟಿಯಿಂದ ಹೊರಬೀಳುವ ಷೇರುಗಳನ್ನು ನಿರ್ವಹಿಸಬಲ್ಲರು, ಆದರೂ ವೆಟೇಜ್‌ಗೆ ಮಿತಿ ಹೇರಬಹುದು. ಇನ್ನು ನೇರವಾಗಿ ಷೇರು ಖರೀದಿಸುವವರಿಗೆ ಆಕ್ಷನ್‌ಗಳಲ್ಲಿ ಸರಿಯಾದ ಬೆಲೆ ಸಿಗದೆ ಮೂಲ ಹೂಡಿಕೆ ಯೋಜನೆಯಿಂದಲೇ ಪಥಭ್ರಷ್ಟರಾಗುವ ಅಪಾಯವಿರುತ್ತದೆ.

ಎಂಎಸ್‌ಸಿಐ ಇಂಡಿಯಾ ಪರಿಷ್ಕೃತ ಪಟ್ಟಿ ಮತ್ತು ವೆಟೇಜ್ ಟ್ರ್ಯಾಕ್ ಮಾಡುವುದು ಹೇಗೆ?

ಹಂತಎಲ್ಲಿ ನೋಡಬೇಕು?ಏನನ್ನು ಗಮನಿಸಬೇಕು?
1MSCI ತ್ರೈಮಾಸಿಕ ಇಂಡೆಕ್ಸ್ ರಿವ್ಯೂ ಪೇಜ್ (ನವೆಂಬರ್ 12, ಬೆಳಗಿನ ಜಾವ ~3:30)ಭಾರತೀಯ ಇಂಡೆಕ್ಸ್‌ನ ನೂತನ ಸೇರ್ಪಡೆ, ತೆಗೆದುಹಾಕಿದ ಷೇರುಗಳು ಮತ್ತು ನಿಯಮಗಳ ಟಿಪ್ಪಣಿ
2ಇಂಡೆಕ್ಸ್ ಫ್ಯಾಕ್ಟ್‌ಶೀಟ್‌ಗಳು/PDF ಗಳುಫ್ರೀ-ಫ್ಲೋಟ್ ಫ್ಯಾಕ್ಟರ್ ಮತ್ತು ಇಂಡೆಕ್ಸ್ ವೆಟೇಜ್ ಕಾಲಮ್‌ಗಳು
3ಬ್ರೋಕರ್ ವರದಿಗಳು ಮತ್ತು ಎಕ್ಸ್‌ಚೇಂಜ್ ನೋಟಿಸ್‌ಗಳುಟಿಕರ್ ಸಿಂಬಲ್, ಕಾರ್ಪೊರೇಟ್ ಕ್ರಮಗಳು ಮತ್ತು ಫ್ರೀ-ಫ್ಲೋಟ್ ಬದಲಾವಣೆಗಳು
4ರೀಬ್ಯಾಲೆನ್ಸ್ ದಿನಾಂಕ, ನವೆಂಬರ್ 30ಕ್ಲೋಸಿಂಗ್ ವಾಲ್ಯೂಮ್, ಸ್ಲಿಪ್ಪೇಜ್ ಮತ್ತು ಬೆಲೆಯಲ್ಲಿನ ವ್ಯತ್ಯಾಸಗಳು

ಪಟ್ಟಿ ಹೊರಬಿದ್ದ ತಕ್ಷಣ ಬರಿ ಮುಖ್ಯಾಂಶಗಳನ್ನು ನೋಡಿ ನಿರ್ಧಾರ ಕೈಗೊಳ್ಳಬೇಡಿ; ಫ್ರೀ-ಫ್ಲೋಟ್ ಫ್ಯಾಕ್ಟರ್‌ಗಳು ಮತ್ತು ಇಂಡೆಕ್ಸ್ ವೆಟೇಜ್‌ಗಳ ಮೇಲೆ ಗಮನಹರಿಸಿ. ಷೇರಿನ ಬೆಲೆ ಬದಲಾಗದಿದ್ದರೂ ಹೆಚ್ಚಿನ ಫ್ರೀ-ಫ್ಲೋಟ್ ಫ್ಯಾಕ್ಟರ್ ಅದರ ವೆಟೇಜ್ ಅನ್ನು ಹೆಚ್ಚಿಸಬಹುದು. ಹಾಗೆಯೇ ಪಟ್ಟಿಯಿಂದ ಹೊರಬಿದ್ದ ಷೇರುಗಳು ಪ್ಯಾಸಿವ್ ಸೆಲ್ಲಿಂಗ್‌ ನಂತರ ಮತ್ತೆ ಚೇತರಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಹೆಚ್ಚಿನ ಹೂಡಿಕೆದಾರರಿಗೆ, ಇಡೀ ತಿಂಗಳಿನಲ್ಲಿ ಎಸ್‌ಐಪಿಗಳನ್ನು ಹಂಚಿಕೆ ಮಾಡುವುದು ಟೈಮಿಂಗ್ ರಿಸ್ಕ್ ಅನ್ನು ಕಡಿಮೆ ಮಾಡುತ್ತದೆ ಮತ್ತು ದೀರ್ಘಾವಧಿಯ ಲಾಭಕ್ಕೆ ನೆರವಾಗುತ್ತದೆ.

ಎಂಎಸ್‌ಸಿಐ ನವೆಂಬರ್ 11 ಪರಿಷ್ಕರಣೆಯ ಸುತ್ತಲಿನ ತಂತ್ರಗಳು ಮತ್ತು ಅಪಾಯಗಳು

ನಿಖರವಾದ ರಿಸ್ಕ್ ಮ್ಯಾನೇಜ್‌ಮೆಂಟ್ ಇಲ್ಲದೆ ಒಂದೇ ಬಾರಿಗೆ ಭಾರಿ ಹೂಡಿಕೆ ಮಾಡುವ ಸಾಹಸಕ್ಕೆ ಕೈಹಾಕಬೇಡಿ. ಬದಲಿಗೆ, ಈ ಘೋಷಣೆ ಮತ್ತು ನವೆಂಬರ್ 30ರ ನಡುವಿನ ಎರಡು ವಾರಗಳ ಅವಧಿಯಲ್ಲಿ ಹಂತ-ಹಂತವಾಗಿ ಎಸ್‌ಐಪಿ (staggered SIPs) ಮಾಡುವುದು ಸೂಕ್ತ. ಏರಿಳಿತದ ಆಕ್ಷನ್‌ಗಳ ಸಮಯದಲ್ಲಿ 'ಲಿಮಿಟ್ ಆರ್ಡರ್‌'ಗಳನ್ನು ಬಳಸಿ. ಎಕ್ಸಿಟ್ ಲೋಡ್ ಬೀಳುವ ರೀತಿಯಲ್ಲಿ ಅವಧಿಗೂ ಮುನ್ನ ಹೂಡಿಕೆ ಹಿಂಪಡೆಯುವುದನ್ನು ತಪ್ಪಿಸಿ. ತೆರಿಗೆ ನಿಯಮಗಳನ್ನೂ ನೆನಪಿನಲ್ಲಿಡಿ. ಕೊನೆಗೆ, ಕೇವಲ ಊಹೆಗಳಲ್ಲ, ಬದಲಿಗೆ ಸರಿಯಾದ ಹೂಡಿಕೆ ಪ್ರಕ್ರಿಯೆಯೇ ನಿಮ್ಮ ಸಂಪತ್ತನ್ನು ವೃದ್ಧಿಸಲು ನೆರವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+