ಈ ಐದು ಆಪ್‌ಗಳು ಇರಲೇಬೇಕು..ಇದ್ದರೆ ಬೆರಳ ತುದಿಯಲ್ಲೇ ಕೆಲಸ!

ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಅಭಿಯಾನದಡಿ ವಿವಿಧ ಯೋಜನೆಗಳನ್ನು ಅಭಿವೃದ್ಧಿಪಡಿಸುತ್ತಲೇ ಇದೆ. ಸರ್ಕಾರದ ಎಲ್ಲಾ ಯೋಜನೆಗಳು ಕೈಗೆ ಎಟುಕುವಂತೆ ಪ್ರತಿಯೊಬ್ಬರಿಗೂ ಸಿಗಬೇಕೆಂಬುವುದೇ ಇದರ ಉದ್ದೇಶವಾಗಿದೆ. ನೀವು ಸರ್ಕಾರದ ಯೋಜನೆಗಳ ಪ್ರಯೋಜಗಳನ್ನು ಪಡೆಯಲು ಸರ್ಕಾರ ಕೆಲವೊಂದು ಆ್ಯಪ್‌ಗಳನ್ನು ಬಿಡುಗಡೆ ಮಾಡಿ ಮಾಹಿತಿಯನ್ನು ತಿಳಿಸುತ್ತಿದೆ. ಹೊಸ ಯೋಜನೆಗಳಿಗೆ ಅರ್ಜಿ ಸಲ್ಲಿಕೆ ಸೇರಿದಂತೆ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೂ ಸರ್ಕಾರ ಮುಂದಾಗಿದೆ. ನಾವು ಕೆಲವು ಸರ್ಕಾರಿ ಆಪ್‌ಗಳ ಬಗ್ಗೆ ಇಂದಿನ ಲೇಖನದಲ್ಲಿ ಹೆಚ್ಚಿನ ವಿವರಗಳನ್ನು ತಿಳಿಯೋಣ ಬನ್ನಿ....

ಹೌದು, ಮೊದಲೊಂದು ಕಾಲವಿತ್ತು.ಆ ಕಾಲದಲ್ಲಿ ನೀವು ಯಾವುದೇ ರೀತಿಯ ಚಿಕ್ಕ ಕೆಲಸಕ್ಕೂ ಸರ್ಕಾರಿ ಕಚೇರಿಗೆನೇ ಹೋಗಬೇಕಿತ್ತು. ಆದರೆ ಇಂದು ತಂತ್ರಜ್ಞಾನ ಬದಲಾಗಿದೆ. ಮನೆಯಲ್ಲಿಯೇ ಎಲ್ಲಾ ತಂತ್ರಜ್ಞಾನಗಳನ್ನು ನಾವು ಬಳಕೆ ಮಾಡಿಕೊಳ್ಳಬಹುದು.ಅದರಲ್ಲೂ ನಿಮ್ಮ ಅಂಗೈಯಲ್ಲಿ ಇರುವ ಮೊಬೈಲ್‌ ಮೂಲಕವೇ ಕೆಲವು ಕೆಲಸಗಳನ್ನು ಮಾಡಬಹುದು. ಡಿಜಿಟಲ್‌ ಯುಗದಲ್ಲಿ ಹೆಚ್ಚಿನ ಸರ್ಕಾರಿ ಸೇವೆಗಳು ಆನ್‌ಲೈನ್‌ನಲ್ಲಿ ಸಿಗುತ್ತದೆ.ಇಲ್ಲಿಯವರೆಗೆ, ಕೇಂದ್ರ ಸರ್ಕಾರವು ಜನರ ಅನುಕೂಲಕ್ಕಾಗಿ ಹಲವು ಮೊಬೈಲ್ ಆಪ್‌ಗಳನ್ನು ಬಿಡುಗಡೆ ಮಾಡಿದೆ. ಈ ಆಪ್‍ಗಳು ನಿಮ್ಮ ಮೊಬೈಲ್‍ನಲ್ಲಿದ್ದರೆ ಸರ್ಕಾರಿ ಸೇವೆಗಳೆಲ್ಲಾ ನಿಮ್ಮ ಬೆರಳ ಅಂಚಿನಲ್ಲಿಯೇ ಆಗುತ್ತವೆ. ಅವುಗಳು ಈ ಕೆಳಗಿನಂತೆ ಇವೆ.

 ಬೆರಳ ತುದಿಯಲ್ಲೇ ಕೆಲಸ! ಈ ಐದು ಆಪ್‌ಗಳು ಇರಲೇಬೇಕು!

ಉಮಾಂಗ್ ಇಂಡಿಯಾ ಆಪ್

ಉಮಾಂಗ್ ಆಪ್ (UMANG India) ಒಂದು ಮೊಬೈಲ್ ಅಪ್ಲಿಕೇಶನ್ ಆಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸೇವೆಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತದೆ. ಉಮಾಂಗ್ ಆಪ್ (UMANG App) ಸಹಾಯದಿಂದ, ನೀವು ಪ್ಯಾನ್ ಕಾರ್ಡ್, ಪಾಸ್‌ಪೋರ್ಟ್, ಗ್ಯಾಸ್ ಬುಕಿಂಗ್, ಚಾಲನಾ ಪರವಾನಗಿ, ರೈಲು ಟಿಕೆಟ್ ಬುಕಿಂಗ್ ಸೇರಿದಂತೆ ಮುಂತಾದ ಹಲವು ಕೆಲಸಗಳನ್ನು ಸುಲಭವಾಗಿ ಮಾಡಬಹುದು.

ಎಂ ಪಾಸ್‌ಪೋರ್ಟ್ ಸೇವಾ

ಎಂ ಪಾಸ್‌ಪೋರ್ಟ್ ಸೇವಾ (Mpassportseva) ಸಹ ಮೊಬೈಲ್ ಆಪ್ ಆಗಿದೆ. ಪಾಸ್‌ಪೋರ್ಟ್‌ಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಈ ಸರ್ಕಾರಿ ಎಂ ಪಾಸ್‌ಪೋರ್ಟ್ ಸೇವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಆನ್‌ಲೈನ್‌ನಲ್ಲಿ ಮಾಡಬಹುದು. ಈ ಅಪ್ಲಿಕೇಶನ್ ಸಹಾಯದಿಂದ ನೀವು ಅಪಾಯಿಂಟ್‌ಮೆಂಟ್ ಬುಕ್ ಮಾಡಬಹುದು. ನೀವು ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಬಹುದು. ನಿಮ್ಮ ಪಾಸ್‌ಪೋರ್ಟ್ ಸ್ಥಿತಿಯನ್ನು ಪರಿಶೀಲಿಸಬಹುದು.

ಎಂ ಆಧಾರ್‌ ಈ ಆಪ್‌ನ ಮೂಲಕ ಏನು ಮಾಡಬಹುದು?

ಎಂ ಆಧಾರ್‌ (mAadhaar) ಅಪ್ಲಿಕೇಶನ್‌ನ ಸಹಾಯದಿಂದ, ನಿಮ್ಮ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಬಹುದು. ಆನ್‌ಲೈನ್‌ನಲ್ಲಿ ನಿಮ್ಮ ವಿಳಾಸವನ್ನು ಅಪ್ಡೇಟ್ ಮಾಡಬಹುದು. ಆಧಾರ್ ಅನ್ನು ಪರಿಶೀಲಿಸುವುದು ಮತ್ತು ನಿಮ್ಮ ಇಮೇಲ್ ಅಥವಾ ಮೊಬೈಲ್ ಅನ್ನು ಪರಿಶೀಲಿಸುವಂತಹ ಕೆಲಸಗಳನ್ನು ನೀವು ಸುಲಭವಾಗಿ ಮಾಡಬಹುದು.

ಡಿಜಿಲಾಕರ್ ಆಪ್

ಇದು ಡಿಜಿಟಲ್ ಲಾಕರ್ (DigiLocker App). ಇ ಆಪ್‌ನಲ್ಲಿ ನೀವು ಎಲ್ಲಾ ಪ್ರಮುಖ ದಾಖಲೆಗಳನ್ನು ಸುರಕ್ಷಿತವಾಗಿ ಇಡಬಹುದು. ಈ ಅಪ್ಲಿಕೇಶನ್‌ನಲ್ಲಿ, ನೀವು ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್ ಮತ್ತು ಅಂಕಪಟ್ಟಿ ಸೇರಿದಂತೆ ಇನ್ನಿತರ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಬಹುದು.

ಎಂ ಪರಿವಾಹನ್

ಎಂ ಪರಿವಾಹನ್ (mParivahan) ಆಪ್‌ನ ಸಹಾಯದಿಂದ, ನಿಮ್ಮ ವಾಹನ ದಾಖಲೆಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು. ಹಾಗೆಯೇ ನೀವು ವರ್ಚುವಲ್ ಆರ್‌ಸಿ, ವರ್ಚುವಲ್ ಡಿಎಲ್, ಆರ್‌ಸಿ ಸರ್ಚ್, ಡಿಎಲ್ ಸರ್ಚ್, ಡುಪ್ಲಿಕೇಟ್ ಆರ್‌ಸಿ, ಮಾಲೀಕತ್ವ ವರ್ಗಾವಣೆ, ಹೈಪೋಥೆಕೇಶನ್ ತೆಗೆಯುವಿಕೆ ಮತ್ತು ಇನ್ನೂ ಅನೇಕ ಕೆಲಸಗಳನ್ನು ಮಾಡಬಹುದು. ಈ ಐದು ಅಪ್ಲಿಕೇಶನ್‌ಗಳಲ್ಲದೆ, ಇನ್ನೂ ಅನೇಕ ಸರ್ಕಾರಿ ಆಪ್‌ಗಳು ಲಭ್ಯವಿದೆ. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಈ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ನೀವು ಗೂಗಲ್ ಪ್ಲೇ ಸ್ಟೋರ್ ಅಥವಾ ಆಪಲ್ ಆಪ್ ಸ್ಟೋರ್‌ನಿಂದ ಈ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+