ಪಡಿತರ ಚೀಟಿ ರಾಜ್ಯ ಸರ್ಕಾರ ನಾಗರಿಕರಿಗೆ ನೀಡುವ ಅಧಿಕೃತ ದಾಖಲೆಯಾಗಿದೆ. ಇದು ಸಾರ್ವಜನಿಕರಿಗೆ ಸಬ್ಸಿಡಿ ದರದಲ್ಲಿ ಆಹಾರ ಪದಾರ್ಥ ಮತ್ತು ಇಂಧನಗಳು ಸೇರಿಂದತೆ ಅಗತ್ಯ ವಸ್ತಗಳನ್ನ ಖರೀದಿಸಲು ಅವಕಾಶ ನೀಡುತ್ತದೆ. ಅಲ್ಲದೆ ಇದು ಗುರುತಿನ ಚೀಟಿ ಕೂಡ ಆಗಿದ್ದು, ನಿವಾಸದ ಪುರಾವೆಯಾಗಿ ಕಾರ್ಯ ನಿರ್ವಹಿಸುತ್ತದೆ. ಈ ಪಡಿತರ ಚೀಟಿಯನ್ನ ಪಡೆಯಲು ಆನ್‌ಲೈನ್ ಹಾಗು ಆಫ್‌ಲೈನ್ ಮೂಲಕ ಜನರಿಗೆ ಸರ್ಕಾರ ಅವಕಾಶವನ್ನ ಕಲ್ಪಿಸಿಕೊಡುತ್ತದೆ. ಈ ಮೂಲಕ ನೀವು ಅರ್ಜಿ ಸಲ್ಲಿಸಬಹುದು.
ನೀವು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬೇಕಿದ್ದರೆ, ಹಾಗೆ ನಿಮ್ಮ ಪಡಿತರ ಚೀಟಿಯ ಸ್ಥಿತಿಯನ್ನ ಪರಿಶೀಲಿಸುವುದು ಹೇಗೆ ಎಂದು ಇಲ್ಲಿ ನೋಡೋಣ.

ಪಡಿತರ ಚೀಟಿಗಾಗಿ ನೀವು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಉದಾಹರಣೆಗೆ ನೀವು ಕರ್ನಾಟಕದವರಾಗಿದ್ದರೆ, ಕರ್ನಾಟಕದ ಅರ್ಜಿದಾರರು https://ahara.kar.nic.in ಅನ್ನು ಪರಿಶೀಲಬಹುದು. ಆದ್ರೆ ನೀವೇನಾದ್ರು ಮಹಾರಾಷ್ಟ್ರದವರಾಗಿದ್ದರೆ mahafood.gov.in ಅನ್ನು ಪ್ರವೇಶಿಸುವ ಮೂಲಕ ನೀವು ಅಜಿf ಸಲ್ಲಿಸಬಹುದು. ಪಡಿತರ ಚೀಟಿ ಪಡೆಯಲು ಒಂದೊಂದು ರಾಜ್ಯಗಳಿಗೆ ಒಂದೊಂದು ವೆಬ್‌ಸೈಟ್ ಇರುತ್ತದೆ.
ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವುದು ಹೇಗೆ?
-ನಿಮ್ಮ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ. ಉದಾಹರಣೆಗೆ, ನಿಮ್ಮ ರಾಜ್ಯದ "ಆಹಾರ ಮತ್ತು ನಾಗರಿಕ ಸರಬರಾಜು" ವೆಬ್‌ಸೈಟ್‌ಗಾಗಿ ನೀವು ಹುಡುಕಬಹುದು.
-ರೇಷನ್ ಕಾರ್ಡ್‌ಗಳು ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಯೊಂದಿಗೆ ವ್ಯವಹರಿಸುವ ವಿಭಾಗವನ್ನ ಆಯ್ಕೆ ಮಾಡಿ.
-ಮುಖಪುಟದಲ್ಲಿ, "ಹೊಸ ರೇಷನ್ ಕಾರ್ಡ್ ಅಪ್ಲಿಕೇಶನ್" ಲಿಂಕ್ ಅನ್ನು ಕ್ಲಿಕ್ ಮಾಡಿ.
ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿಯಂತಹ ನಿಮ್ಮ ಮೂಲ ವಿವರಗಳನ್ನು ನಮೂದಿಸುವ ಮೂಲಕ ನೀವು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಿ.
-ನೋಂದಾಯಿಸಿದ ನಂತರ, ಲಾಗ್ ಇನ್ ಮಾಡಿ ಮತ್ತು ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
-ಹಾಗೆ ಅರ್ಜಿದಾರರು ಅರ್ಜಿ ನಮೂನೆಯೊಂದಿಗೆ ಮೂಲಭೂತ ಕನಿಷ್ಠ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ನೀವು ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಿದ ನಂತರ, ನಿಮ್ಮ ಫೈಲ್ ಅನ್ನು ಪರಿಶೀಲನೆಗಾಗಿ ಕಳುಹಿಸಲಾಗುವುದು.
- ನಿಮಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದೇ ಹೋದ್ರೆ, ನಿಮ್ಮ ಸ್ಥಳೀಯ ಆಹಾರ ಮತ್ತು ನಾಗರಿಕ ಸರಬರಾಜು ಕಚೇರಿ ಅಥವಾ ನಿಮ್ಮ ಪ್ರದೇಶದಲ್ಲಿ ಪಡಿತರ ಕಚೇರಿಗೆ ಹೋಗಿ . ಸ್ಥಳೀಯವಾಗಿ ವಿಚಾರಿಸುವ ಮೂಲಕ ಅಥವಾ ನಿಮ್ಮ ಸ್ಥಳೀಯ ಅಧಿಕಾರಿಗಳೊಂದಿಗೆ ಪರಿಶೀಲಿಸುವ ಮೂಲಕ ನೀವು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಬಹುದು.
ಪಡಿತರ ಚೀಟಿ ಅರ್ಜಿಯ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ? ಇಲ್ಲಿ ತಿಳಿಯಿರಿ.
-ನಿಮ್ಮ ಪಡಿತರ ಚೀಟಿ ಅರ್ಜಿಯ ಸ್ಥಿತಿಯನ್ನು ಪರಿಶೀಲನೆ ಮಾಡಲು, ಭಾರತೀಯ ನಾಗರೀಕರು ಅಧಿಕೃತ ಆನ್‌ಲೈನ್ ಪೋರ್ಟಲ್ ಮೂಲಕ ಸುಲಭ ಪ್ರಕ್ರಿಯೆಯನ್ನು ಅನುಸರಿಸಬೇಕು.
-ಮೊದಲು ವೆಬ್‌ಸೈಟ್‌ಗೆ ಭೇಟಿ ನೀಡಿ, "ಸಿಟಿಜನ್ ಕಾರ್ನರ್" ವಿಭಾಗ ಆಯ್ಕೆ ಮಾಡಬೇಕು. ನಂತರ "ನಿಮ್ಮ ಪಡಿತರ ಕಾರ್ಡ್ ಸ್ಥಿತಿಯನ್ನು ತಿಳಿಯಿರಿ" ಆಯ್ಕೆಮಾಡಿ ಮತ್ತು ರೇಷನ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್‌ನಂತಹ ವಿವರಗಳನ್ನ ನಮೂದಿಸಬೇಕು.
-"ಆರ್‌ಸಿ ವಿವರಗಳನ್ನು ಪಡೆಯಿರಿ" ಕ್ಲಿಕ್ ಮಾಡಿದ ನಂತರ, ನಿಮ್ಮ ಅಪ್ಲಿಕೇಶನ್‌ನ ಸ್ಥಿತಿಯನ್ನು ಪ್ರದರ್ಶಿಸಲಾಗುತ್ತದೆ.
-ಅಲ್ಲದೆ, ಅರ್ಜಿದಾರರು ತಮ್ಮ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಥವಾ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗಳಿಗೆ ಕೂಡ ಭೇಟಿ ನೀಡುವ ಮೂಲಕ ನಿಮ್ಮ ಪಡಿತರ ಚೀಟಿಯ ಸ್ಥಿತಿಯನ್ನು ತಿಳಿಯಬಹುದು.
ನಂತರ ಅಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸಿ, ಕ್ಯಾಪ್ಚಾವನ್ನು ಪರಿಶೀಲಿಸುವ ಮೂಲಕ ಬಳಕೆದಾರರು ತಮ್ಮ ವಿವರಗಳನ್ನು ಸಲ್ಲಿಕೆ ಮಾಡಬಹುದು. ನೀವು ನಿಮ್ಮ ರೇಷನ್ ಕಾರ್ಡ್ ಸ್ಥಿತಿಯನ್ನು ವೀಕ್ಷಿಸಬಹುದು ಜೊತೆಗೆ ಡೌನ್‌ಲೋಡ್ ಮಾಡಬಹುದು.
ಹಾಗೆ ನೀವು ನಿಮ್ಮ ವಿಳಾಸದ ಬದಲಾವಣೆ ಅಥವಾ ವೈಯಕ್ತಿಕ ಮಾಹಿತಿಗಳ ಬದಲಾವಣೆ ಅಥವಾ ನಿಮ್ಮ ಪಡಿತರ ಚೀಟಿ ಕಳೆದು ಹೋಗಿದ್ದರೆ ಇಂತಹ ಸಮಯದಲ್ಲಿ ನೀವು ನಿಮ್ಮ ಪಡಿತರ ಚೀಟಿಯನ್ನು ನವೀಕರಿಸಬಹುದು.


Click it and Unblock the Notifications