ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈ ಹಿಂದೆ ಡಿಸೆಂಬರ್‌ನಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮೂರು ಹೊಸ ಬಸ್ ಮಾರ್ಗಗಳನ್ನು ಪರಿಚಯಿಸಿತ್ತು. ಅದಾದ ಬಳಿಕ ಮತ್ತೆ ಜನವರಿ 8 ರಂದು ಹೊಸ ಮೂರು ಮಾರ್ಗಗಳನ್ನು ಬಿಎಂಟಿಸಿ ಪರಿಚಯಿಸಿದೆ.
ಈಗ ಮತ್ತೆ ಇಂದು (ಜನವರಿ 19) ಹೊಸ ಮೂರು ಮಾರ್ಗಗಳಲ್ಲಿ ಬಿಎಂಟಿಸಿ ಸಂಚಾರ ಆರಂಭಿಸುವ ಮಾಹಿತಿ ನೀಡಿದೆ. ಸೋಮವಾರ ಮೂರು ಹೊಸ ಬಸ್ ಮಾರ್ಗಗಳನ್ನು ಪರಿಚಯಿಸಿದ್ದು ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ.

ಮೂರು ಹೊಸ ಮಾರ್ಗಗಳ ವಿವರ
297-ಸಿ: ಹೆಬ್ಬಾಳ, ಯಲಹಂಕ, ಸಾದಹಳ್ಳಿ, ನಾಗಮಂಗಲ, ಕುಂದಾಣ ಸರ್ಕಲ್ ಮತ್ತು ಸುಲುಕುಂಟೆ ಮೂಲಕ ಮೆಜೆಸ್ಟಿಕ್‌ನಿಂದ ಬಾಚೇಹಳ್ಳಿ ಸರ್ಕಾರಿ ಶಾಲೆಗೆ. ಎರಡೂ ಕಡೆಯಿಂದ ದಿನಕ್ಕೆ ನಾಲ್ಕು ಟ್ರಿಪ್‌ಗಳು.
267-ಎ: ಶಿವಾಜಿನಗರದಿಂದ ಹೆಸರಘಟ್ಟಕ್ಕೆ ಮೆಹಕ್ರಿ ಸರ್ಕಲ್, ಮತ್ತಿಕೆರೆ, ಬಿಇಎಲ್ ಸರ್ಕಲ್, ಎಂಎಸ್ ಪಾಳ್ಯ, ರೈನ್ಬೋ ಲೇಔಟ್, ಶಾಮರಾಜಪುರ, ಬೈಲಕೆರೆ ಮತ್ತು ಶಿವಕೋಟೆ ಮೂಲಕ ಸಂಚಾರ. ಎರಡೂ ಕಡೆಯಿಂದ ದಿನಕ್ಕೆ ಹದಿಮೂರು ಟ್ರಿಪ್‌ಗಳು.
507-ಕೆ: ಚಿಕ್ಕಬಾಣಾವರದಿಂದ ಕೆಆರ್ ಪುರಂಗೆ ಅಬ್ಬಿಗೆರೆ ಕ್ರಾಸ್, ಜರಕಬಂಡೆ, ಬಿಇಎಲ್ ಸರ್ಕಲ್, ಹೆಬ್ಬಾಳ ಮತ್ತು ಟಿನ್ ಫ್ಯಾಕ್ಟರಿ ಮೂಲಕ ಬಸ್ ಸಂಚಾರ. ದಿನಕ್ಕೆ ಹತ್ತು ಟ್ರಿಪ್‌ಗಳು.
ಈ ಹಿಂದಿನ ಹೊಸ ಮಾರ್ಗಗಳು
410-ಎಬಿ/10: ಬಂಡೆ ಮಾರಮ್ಮ ಬಸ್ ನಿಲ್ದಾಣದಿಂದ ನಾಗರಭಾವಿ ಸರ್ಕಲ್, ಕತ್ರಿಗುಪ್ಪೆ, ಬನಶಂಕರಿ ಮತ್ತು ರಾಗಿಗುಡ್ಡ ಮೂಲಕ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ಬಸ್ ಬರಲಿದೆ. ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್ ಇರುತ್ತದೆ. ಬೆಳಿಗ್ಗೆ 8.30 ಕ್ಕೆ ಬಂಡೆ ಮಾರಮ್ಮ ಬಸ್ ನಿಲ್ದಾಣದಿಂದ ಮತ್ತು ಸಂಜೆ 4.15 ಕ್ಕೆ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಬಸ್ ಇರಲಿದೆ.
215-ಎಂ: ಮೆಜೆಸ್ಟಿಕ್‌ನಿಂದ ಕಾರ್ಪೊರೇಷನ್ ಸರ್ಕಲ್, ವಿಜಯಾ ಕಾಲೇಜು, ಜಯನಗರ 5ನೇ ಬ್ಲಾಕ್ ಮತ್ತು ಡೆಲ್ಮಿಯಾ ವೃತ್ತದ ಮೂಲಕ ವಿನಾಯಕ ನಗರಕ್ಕೆ ಬಸ್ ಸಂಚರಿಸಲಿದೆ. ದಿನಕ್ಕೆ ಒಟ್ಟು 12 ಟ್ರಿಪ್‌ಗಳಿರುತ್ತವೆ.
ಬಸ್ ಮೆಜೆಸ್ಟಿಕ್‌ನಿಂದ ಬೆಳಗ್ಗೆ 6.30, 8.35, 11.10, ಸಂಜೆ 4.35, ಸಂಜೆ 6.45 ಮತ್ತು ರಾತ್ರಿ 9.20ಕ್ಕೆ ಹೊರಡಲಿದೆ. ಹಿಂದಿರುಗುವ ಮಾರ್ಗದಲ್ಲಿ ಸಮಯ ಬೆಳಿಗ್ಗೆ 5.30, 7.30, ಬೆಳಿಗ್ಗೆ 9.40, ಮಧ್ಯಾಹ್ನ 3.10, ಸಂಜೆ 5.40 ಮತ್ತು ಸಂಜೆ 7.50 ಆಗಿರುತ್ತದೆ.
ಮೆಟ್ರೋ ಫೀಡರ್ ಬಸ್
ಎಂಎಫ್-20/1: ಕೋಣನಕುಂಟೆ ಕ್ರಾಸ್‌ನಿಂದ ದೊಡ್ಡಕಲ್ಲಸಂದ್ರ, ವಾಜರಹಳ್ಳಿ, ತಲಘಟ್ಟಪುರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ಮೆಟ್ರೋ ನಿಲ್ದಾಣಗಳ ಮೂಲಕ ಬ್ರಿಗೇಡ್ ಮೆಡೋಸ್‌ಗೆ ತಲುಪಲಿದೆ. ದಿನಕ್ಕೆ 15 ಟ್ರಿಪ್‌ಗಳಿರುತ್ತವೆ.
ಬಸ್ ಕೋಣನಕುಂಟೆ ಕ್ರಾಸ್‌ನಿಂದ ಬೆಳಗ್ಗೆ 8.30, 10.25, ಮಧ್ಯಾಹ್ನ 12.30, ಮಧ್ಯಾಹ್ನ 2, 3.30, ಸಂಜೆ 5.50 ಮತ್ತು ರಾತ್ರಿ 7.45 ಕ್ಕೆ ಹೊರಡಲಿದೆ. ಹಾಗೆಯೇ ಬಸ್ ಬೆಳಿಗ್ಗೆ 7.30, 9.25, 11.45, ಮಧ್ಯಾಹ್ನ 1.15, ಮಧ್ಯಾಹ್ನ 2.45, ಸಂಜೆ 4.50, ಸಂಜೆ 6.45 ಮತ್ತು ರಾತ್ರಿ 8.40 ಕ್ಕೆ ಹಿಂದಿರುಗುವ ಮಾರ್ಗದಲ್ಲಿ ಅಂದರೆ ಬ್ರಿಗೇಡ್ ಮೆಡೋಸ್‌ನಿಂದ ಸಂಚರಿಸಲಿದೆ.


Click it and Unblock the Notifications