ವೈಯಕ್ತಿಕ ಹಣಕಾಸು ನಮ್ಮ ಜೀವನದ ಪ್ರಮುಖ ಅಂಶವಾಗಿದೆ. ಪ್ರತಿ ತಿಂಗಳು ಕೆಲವೊಂದು ಬದಲಾವಣೆಗಳು ವೈಯಕ್ತಿಕ ಹಣಕಾಸಿಗೆ ಪರಿಣಾಮ ಬೀರುತ್ತದೆ. ವಿಶ್ವದಲ್ಲಿ ಆಗುವ ಕೆಲವೊಂದು ಬದಲಾವಣೆಗಳು ಹಾಗೂ ಸ್ಥಳೀಯವಾಗಿ ನಡೆಯುವ ಕೆಲವೊಂದು ಬೆಳವಣಿಗೆಗಳು ನಮ್ಮ ವೈಯಕ್ತಿಕ ಜೀವನದ ಹಣಕಾಸು ನಿರ್ವಹಣೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ.
ಕಳೆದ ತಿಂಗಳು ವೈಯಕ್ತಿಕ ಹಣಕಾಸಿನಲ್ಲಿ ಪ್ರಮುಖವಾಗಿ ಎಂಟು ಬದಲಾವಣೆಗಳು ಆಗಿದೆ. ಎಟಿಎಂನಲ್ಲಿ ಹಣ ಪಡೆಯುವ ವ್ಯವಹಾರವು ದುಬಾರಿಯಾಗಿತ್ತು. ಉಚಿತ ಎಟಿಎಂ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಎಟಿಎಂ ವ್ಯವಹಾರದ ಬಗ್ಗೆ ಐಸಿಐಸಿಐ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹಾಗೆಯೇ ಚೆಕ್‌ಬುಕ್ ವಿಚಾರದಲ್ಲೂ ಐಸಿಐಸಿಐ ಬ್ಯಾಂಕ್ ಹೊಸ ನಿಯಮವನ್ನು ಜಾರಿಗೆ ತಂದಿದೆ. ಹಾಗೆಯೇ ಕಳೆದ ತಿಂಗಳು ಅಡುಗೆ ಅನಿಲ ಬೆಲೆಯು ಅಧಿಕವಾಗುವ ಸಾಧ್ಯತೆ ಇದೆ ಎಂದು ಸುದ್ದಿಯಾಗಿತ್ತು. ಹಾಗೆಯೇ ಕೆಲವೊಂದು ಪ್ರಮುಖ ಬದಲಾವಣೆಗಳು ಆಗಿದ್ದವು.
ಈ ಸೆಪ್ಟೆಂಬರ್ ತಿಂಗಳು ಕೂಡಾ ಕೆಲವೊಂದು ಬದಲಾವಣೆಗಳು ಆಗಿದೆ. ಹಾಗಾದರೆ ಸೆಪ್ಟೆಂಬರ್ ಆಗಿರುವ ವೈಯಕ್ತಿಕ ಹಣಕಾಸಿನ ಬದಲಾವಣೆಗಳ ಬಗ್ಗೆ ತಿಳಿಯಲು ಮುಂದೆ ಓದಿ.
ಕಾರು, ದ್ವಿಚಕ್ರ ವಾಹನಗಳ ಬೆಲೆ ದುಬಾರಿ
ಹೊಸ ನಿರ್ದೇಶನದಂತೆ ಕಾರಿಗೆ ಉಂಟಾಗಿರುವ ಯಾವುದೇ ಹಾನಿಯನ್ನು ಸರಿಯಪಡಿಸಿಕೊಳ್ಳುವುದು ವಾಹನ ಖರೀದಿದಾರರ ಜವಾಬ್ದಾರಿಯಾಗಿದೆ. ಈ ಹೊಸ ನಿರ್ದೇಶನವು ಸೆಪ್ಟೆಂಬರ್ ತಿಂಗಳಿನಿಂದ ಜಾರಿಗೆ ಬರಲಿದೆ. ಹಾಗೆಯೇ ಕಾರು ಖರೀದಿ ಮಾಡುವಾಗ ಮೊದಲು ಪಾವತಿ ಮಾಡಬೇಕಾದ ಹಣವು ಹತ್ತರಿಂದ ಹನ್ನೆರಡು ಸಾವಿರಕ್ಕೆ ಏರಿಕೆಯಾಗುತ್ತದೆ. ಇನ್ನು ದ್ವಿ ಚಕ್ರ ವಾಹನ ಖರೀದಿದಾರರು ಮೊದಲು ಒಂದು ಸಾವಿರ ರೂಪಾಯಿಯವರೆಗೆ ಪಾವತಿ ಮಾಡಬೇಕಾಗುತ್ತದೆ. ಇದರಿಂದಾಗಿ ಕಾರು, ದ್ವಿಚಕ್ರ ವಾಹನಗಳ ಮೇಲಿನ ವಿಮೆಯೂ ಕೂಡಾ ಏರಿಕೆಯಾಗಲಿದೆ.
ಗಮನಿಸಿ ಜಿಎಸ್‌ಟಿಆರ್ -1 ಸಲ್ಲಿಸಲು ಅನರ್ಹರಾಗುವಿರಿ
ಜಿಎಸ್‌ಟಿ ಪಾವತಿದಾರರು ಕಳೆದ ಎರಡು ತಿಂಗಳಿನಿಂದ ಜಿಎಸ್‌ಟಿ 3 ಬಿ ಸಲ್ಲಿಕೆ ಮಾಡದಿದ್ದರೆ ಸೆಪ್ಟೆಂಬರ್ ಆರಂಭದಿಂದ ಆ ವ್ಯಕ್ತಿಯು ಜಿಎಸ್‌ಟಿಆರ್ -1 ರಲ್ಲಿ ಬಾಹ್ಯ ಪೂರೈಕೆಗಳನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಜಿಎಸ್‌ಟಿಆರ್ -3 ಬಿ ಸಲ್ಲಿಸದಿದ್ದರೆ ಜಿಎಸ್‌ಟಿಆರ್ -1 ಸಲ್ಲಿಸಲು ನೀವು ಅನರ್ಹರಾಗುತ್ತೀರಿ. ಸತತ ಕೆಲವು ತಿಂಗಳಿನಿಂದ ಜಿಎಸ್‌ಟಿಆರ್ 3 ಬಿ ಅನ್ನು ತಿಂಗಳ 20-24ರ ನಡುವೆ ಸಲ್ಲಿಸಲಾಗುತ್ತಿದೆ.
ಎಲ್‌ಪಿಜಿ ದರ ಮತ್ತೆ ಏರಿಕೆ
ಎಲ್‌ಪಿಜಿ ಅಡುಗೆ ಅನಿಲದ ದರವನ್ನು ಪ್ರತಿ ತಿಂಗಳು ಪರಿಷ್ಕರಣೆ ಮಾಡಲಾಗುತ್ತದೆ. ಈ ತಿಂಗಳು ಎಲ್‌ಪಿಜಿ ದರವು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಆಗಸ್ಟ್ ತಿಂಗಳ ಆರಂಭದಲ್ಲಿ ವರದಿಯಾಗಿದ್ದವು. ಈ ವರದಿಯಂತೆಯೇ ಆಗಸ್ಟ್ ತಿಂಗಳಿನಲ್ಲಿ ಎಲ್‌ಪಿಜಿ ದರವು ಏರಿಕೆಯಾಗಿದೆ. ಅಂತರಾಷ್ಟ್ರೀಯ ದರದ ಮೇಲೆ ಆಧಾರಿತವಾಗಿರುವ ಈ ಎಲ್‌ಪಿಜಿ ದರವು ಆಗಸ್ಟ್ ತಿಂಗಳಿನಿಂದಲ್ಲೇ ಸುಮಾರು 25 ರೂಪಾಯಿ ಅಧಿಕವಾಗಿದೆ. ಹೀಗಾಗಿ ನಿಮಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಅಡುಗೆ ಅನಿಲ ಬಿಲ್ ಅಧಿಕ ಬರಲಿದೆ.
ಈಗಲೇ ಯುಎಎನ್ ಅನ್ನು ಆಧಾರ್ ಲಿಂಕ್ ಮಾಡಿಸಿ
ಯುಎಎನ್ ಅನ್ನು ಆಧಾರ್‌ಗೆ ಲಿಂಕ್ ಮಾಡಿದರೆ ಮಾತ್ರ ಇಪಿಎಫ್ ಮೊತ್ತವನ್ನು ನಿಮ್ಮ ಪಿಎಫ್ ಖಾತೆಗೆ ಜಮೆ ಮಾಡಲಾಗುತ್ತದೆ. ಈ ಆಧಾರ್‌ಗೆ ಯುಎಎನ್ ಸಂಖ್ಯೆ ಲಿಂಕ್ ಮಾಡಲು ಕೊನೆಯ ದಿನಾಂಕ ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ. ಆ ದಿನವೂ ಹತ್ತಿರ ಬರುತ್ತಿದೆ. ಆದ್ದರಿಂದ ಕೂಡಲೇ ಯುಎಎನ್ ಅನ್ನು ಆಧಾರ್‌ಗೆ ಲಿಂಕ್ ಮಾಡಿಸಿಕೊಳ್ಳಿ,. ಇಲ್ಲವಾದರೆ ನಿಮ್ಮ ಖಾತೆಗೆ ಪಿಎಫ್ ಹಣವನ್ನು ಜಮೆ ಮಾಡಲು ಸಾಧ್ಯವಾಗುವುದಿಲ್ಲ. ಈ ಹೊಸ ನಿಯಮವನ್ನು ಜಾರಿಗೆ ತರಲು ಸಾಮಾಜಿಕ ಭದ್ರತೆ ಕೋಡ್ 2020 ರ ಸೆಕ್ಷನ್ 142 ರ ತಿದ್ದುಪಡಿ ಮಾಡಿ ಇತ್ತೀಚಿನ ತೀರ್ಪು ನೀಡಲಾಗಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

LPG cylinder Price: ದೇಶದ ಜನರಿಗೆ ಅಡುಗೆ ಅನಿಲ ದರ ಶಾಕ್… LPG ಸಿಲಿಂಡರ್ ಬೆಲೆಯಲ್ಲಿ 60 ರೂ. ಏರಿಕೆ!

Siddaramaiah: ಹೋಟೆಲ್ ಉದ್ಯಮಿಗಳ ಸಂಕಷ್ಟಕ್ಕೆ ಧ್ವನಿಯಾದ ಸಿಎಂ ಸಿದ್ದರಾಮಯ್ಯ; ಪತ್ರ ಬರೆದು ಮನವಿ

LPG Gas Cylinder: ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತ, ಹೋಟೆಲ್ ಉದ್ಯಮಕ್ಕೆ ಅಡ್ಡಿ; ಪ್ರಧಾನಿಗೆ ಪತ್ರ

Hotel Bandh: ಬೆಂಗಳೂರಿಗೂ ತಟ್ಟಿದ ಯುದ್ಧದ ಬಿಸಿ; ಇಂದಿನಿಂದ ಹಲವು ಹೋಟೆಲ್ ಬಂದ್

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications