ಇತ್ತೀಚಿಗೆ ಎಲ್ಲರಿಗೂ ವೈಯತ್ತಿಕ ಸಾಲಗಳ ಕಡೆಮುಖ ಮಾಡುತ್ತಾರೆ.ಆದರೆ ನಮ್ಮಗೆ ಸಾಲ ಕೊಡುವ ಮುನ್ನ ಕೆಲವೊಂದು ಅಂಶಗಳನ್ನು ಸಾಲದಾತರು ಪರಿಗಣಿಯನ್ನು ಮಾಡುತ್ತಾರೆ. ಅದರಲ್ಲೂ ವೈಯಕ್ತಿಕ ಸಾಲಗಳಿಗಾಗಿ ನಮಗೆ ಕ್ರೆಡಿಟ್ ಸ್ಕೋರ್ ಬಹಳ ಮುಖ್ಯವಗುತ್ತದೆ. ಕ್ರೆಡಿಟ್ ಸ್ಕೋರ್‌ಗಳನ್ನ ಪರಿಗಣಿಸಿ ಸಾಲದಾತರು ನಮಗೆ ಸಾಲವನ್ನು ನೀಡುವುದು. ಬ್ಯಾಂಕ್‌ಗಳು ಅಥವಾ ಸಾಲದಾತರು ಮೊದಲು ನಮ್ಮ ಕ್ರೆಡಿಟ್ ಸ್ಕೋರ್‌ಗಳನ್ನೇ ನೋಡುತ್ತಾರೆ. ಆದರೆ ನೀವು ಕ್ರಿಡಿಟ್ ಸ್ಕೋರ್ ಇಲ್ಲದೇ ಸಹ ಸಾಲವನ್ನು ತಗೆದುಕೊಳ್ಳಬಹುದು ಅದು ಹೇಗೆ ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ.

ಹೌದು, ಭಾರತದಲ್ಲಿ ಕ್ರೆಡಿಟ್ ಸ್ಕೋರ್ ವ್ಯಕ್ತಿಯ ಸಾಲ ಪಡೆಯುವ ಅರ್ಹತೆ ಬಡ್ಡಿದರವನ್ನು ನಿರ್ಧಾರವನ್ನು ಮಾಡಲಾಗಿದೆ. ನೀವು ಹೊಸದಾಗಿ ವೈಯತ್ತಿಕ ಸಾಲವನ್ನು ಪಡೆಯುವಾಗ ಹಿಸ್ಟರಿ ತುಂಬಾನೇ ಮುಖ್ಯವಾಗುತ್ತದೆ. ಹಣಕಾಸು ಸಂಸ್ಥೆಗಳು ಸಾಲ ನೀಡಲು ಹಿಂದೇಟು ಹಾಕಬಹುದು. ಆದರೆ, ಕ್ರೆಡಿಟ್ ಸ್ಕೋರ್ ಇಲ್ಲದಿದ್ದರೂ ವೈಯಕ್ತಿಕ ಸಾಲ ಪಡೆಯಲು ಹಲವು ಮಾರ್ಗಗಳಿವೆ ಅವುಗಳು ಈ ಕೆಳಗಿನಂತೆ ಇದೆ.
1. ಎಲ್ಐಸಿ ಪಾಲಿಸಿ ಸಾಲ: ಎಲ್ಐಸಿ ಪಾಲಿಸಿಯನ್ನು ದಾಖಲೆಯ ಆಧಾರವನ್ನು ಬಳಸಿ ಸಾಲವನ್ನು ಪಡೆದುಕೊಳ್ಳಬಹುದು. ನೀವು ಎಲ್ಐಸಿಯಲ್ಲಿ ಕನಿಷ್ಠ ಮೂರು ವರ್ಷಗಳ ಪ್ರೀಮಿಯಂ ಪಾವತಿಸಿದ್ದರೆ, ಕ್ರೆಡಿಟ್ ಸ್ಕೋರ್ ಇಲ್ಲದಯೂ ಸುಲಭವಾಗಿ ಸಾಲ ಸಿಗುತ್ತದೆ.
2. ಆಸ್ತಿ ಮೇಲಿನ ಸಾಲ: ನಿಮ್ಮ ಬಳಿ ವಸತಿ ಆಸ್ತಿ ಇದ್ದರೆ ಅದನ್ನು ಬಳಸಿ ಸಾಲವನ್ನು ಪಡೆದುಕೊಳ್ಳಬಹುದು. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಆಸ್ತಿಯ ಆಧಾರದ ಮೇಲೆ ಕಡಿಮೆ ಬಡ್ಡಿಗೆ ಸಾಲವನ್ನು ನೀಡುತ್ತದೆ. ದೀರ್ಘಾವಧಿಯ ಮರುಪಾವತಿ ಆಯ್ಕೆ ಕೂಡ ಇದೆ.
3. ಎಫ್‌ಡಿ ಬೆಂಬಲಿತ ಕ್ರೆಡಿಟ್ ಕಾರ್ಡ್‌ಗಳು: ಸ್ಥಿರ ಠೇವಣಿ ಆಧಾರಿತ ಕ್ರೆಡಿಟ್ ಕಾರ್ಡ್‌ಗಳನ್ನು ಕ್ರೆಡಿಟ್ ಇತಿಹಾಸವಿಲ್ಲದೆಯೇ ಸಾಲ ಪಡೆಯಲು ಬಳಸಬಹುದು. ಹೆಚ್ಚಿನ ಬ್ಯಾಂಕುಗಳು ಈ ಸೌಲಭ್ಯ ನೀಡುತ್ತವೆ.10,000 ದಿಂದ ಪ್ರಾರಂಭಿಸಬಹುದು. ಕ್ರೆಡಿಟ್ ಮಿತಿಯಲ್ಲಿ ಜವಾಬ್ದಾರಿಯುತವಾಗಿ ಕ್ರೆಡಿಟ್ ಸ್ಕೋರ್ ಹೆಚ್ಚಿಸಬಹುದು.
4. ಬಾಡಿಗೆ ಠೇವಣಿ ಸಾಲ: ನೀವು ಬಾಡಿಗೆ ಮನೆಗೆ ಹೋಗುವ ಭಾರಿ ಠೇವಣಿ ಕಟ್ಟಲು ಹಣವಿಲ್ಲದಿದ್ದರೆ, ಕೆಲವು ಸಂಸ್ಥೆಗಳು ಬಾಡಿಗೆ ಠೇವಣಿ ಸಾಲ ನೀಡುತ್ತವೆ.
5. ಉಳಿತಾಯ ಖಾತೆಯ ಮೇಲೆ ಓವರ್‌ಡ್ರಾಫ್ಟ್: ಹಲವು ಬ್ಯಾಂಕುಗಳು ಉಳಿತಾಯ ಖಾತೆಗಳ ಮೇಲೆ ಓವರ್‌ಡ್ರಾಫ್ಟ್ ಸೌಲಭ್ಯ ನೀಡುತ್ತವೆ. ಇದು ಪೂರ್ವ ಅನುಮೋದಿತ ಸಾಲವಾಗಿದ್ದು, ಕ್ರೆಡಿಟ್ ಸ್ಕೋರ್ ಅಗತ್ಯವಿಲ್ಲ.
ನಿಮ್ಮ ಕ್ರೆಡಿಟ್ ವರದಿಗಳನ್ನು ನಿಯಮಿತವಾಗಿ ವೀಕ್ಷಿಸುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ದೋಷಗಳು ಅಥವಾ ವಂಚನೆಯ ಚಟುವಟಿಕೆಯನ್ನು ಸುಲಭವಾಗಿ ಗುರುತಿಸಲು ಸಹಾಯ ಮಾಡುತ್ತದೆ.
ಸುರಕ್ಷಿತ ಕಾರ್ಡ್‌ನ ಜವಾಬ್ದಾರಿಯುತವಾಗಿ ಇಟ್ಟಿಕೊಳ್ಳವುದರಿಂದ ನಿಮ್ಮ ಕ್ರೆಡಿಟ್ ಕಾರ್ಡ್ ಉತ್ತಮವಾಗಿ ಇರುತ್ತದೆ. ಕ್ರೆಡಿಟ್ ಸ್ಕೋರ್ ಅನ್ನು ನೀವು ಶಿಸ್ತು ಮತ್ತು ಉತ್ತಮ ಆರ್ಥಿಕ ಅಭ್ಯಾಸಗಳ ಅಳವಡಿಸಿಕೊಂಡು ಬಳಕೆ ಮಾಡಿದ್ದರೆ ಮುಂದೆ ಆಗುವಂತಕ ಅಪಾಯಗಳನ್ನು ಇದು ತಡೆಯುತ್ತದೆ.


Click it and Unblock the Notifications