ಬೆಂಗಳೂರಿನಲ್ಲಿ ಡಿಸೆಂಬರ್‌ನಲ್ಲಿ ಹಲವಾರು ದಿನಗಳ ಕಾಲ ವಿದ್ಯುತ್ ವ್ಯತ್ಯಯವಾಗಿದೆ. ಜನವರಿಯಲ್ಲಿಯೂ ಹಲವಾರು ದಿನಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ. ಹೊಸ ವರ್ಷ ಆರಂಭದ ಮೊದಲ ತಿಂಗಳಿನಲ್ಲಿಯೇ ರಾಜ್ಯ ರಾಜಧಾನಿಯ ಹಲವಾರು ಪ್ರದೇಶಗಳಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 15 ದಿನಗಳ ಕಾಲ ವಿದ್ಯುತ್ ವ್ಯತ್ಯಯವಾಗಲಿದೆ.
ಆ ಪೈಕಿ ಜನವರಿ 17-18 ರಂದು ನಿರ್ವಹಣಾ ಕಾರ್ಯದ ಕಾರಣ ಈ ಕೆಳಗಿನ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಯಾವ ದಿನ, ಯಾವ ಪ್ರದೇಶದಲ್ಲಿ ವಿದ್ಯುತ್ ಕಡಿತವಾಗಲಿದೆ ಎಂಬ ವಿವರ ಇಲ್ಲಿದೆ ಮುಂದೆ ಓದಿ...

ಜನವರಿ 17 (ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 1 ಗಂಟೆ)
ಕೋರಮಂಗಲ 5ನೇ ಬ್ಲಾಕ್, ಮಡಿವಾಳ, ವೆಂಕಟೇಶ್ವರ ಲೇಔಟ್, ಚಿಕ್ಕದುಗೋಡಿ, ಜೋಗಿ ಕಾಲೋನಿ, ಸೇಂಟ್ ಜಾನ್ಸ್ ಸ್ಟಾಫ್ ಕ್ವಾರ್ಟರ್ಸ್, ಆದುಗೋಡಿಯಲ್ಲಿ ವಿದ್ಯುತ್ ಕಡಿತವಾಗಲಿದೆ.
ಜನವರಿ 18, ಬೆಳಿಗ್ಗೆ 10 ರಿಂದ ಮಧ್ಯಾಹ್ನ 3:
ವೀವರ್ಸ್ ಕಾಲೋನಿ, ಗೊಟ್ಟಿಗೆರೆ, ಎಂಎಲ್ಎ ಲೇಔಟ್, ಭೋರಾ ಲೇಔಟ್, ಆಶ್ರಮ ರಸ್ತೆ, ಕಮ್ಮನಹಳ್ಳಿ, ಬಾಲಾಜಿ ಗಾರ್ಡನ್ ಲೇಔಟ್, ಬಸವನಪುರದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಜನವರಿ 18, ಬೆಳಗ್ಗೆ 10 ರಿಂದ ಸಂಜೆ 4:
ಬಿಟಿಎಂ ಐ ಸ್ಟೇಜ್, ಜೈ ಭೀಮಾ ನಗರ, ಕೋರಮಂಗಲ 2ನೇ ಬ್ಲಾಕ್, ತಾವರೆಕೆರೆ, ಎಸ್‌ಜಿ ಪಾಳ್ಯ, ವಿಲ್ಸನ್ ಗಾರ್ಡನ್, ಜೆಸಿ ರಸ್ತೆ, ಶಾಂತಿನಗರ, ರಿಚ್‌ಮಂಡ್ ಸರ್ಕಲ್, ಕೆಎಚ್ ರಸ್ತೆ, ಲಾಲ್‌ಬಾಗ್ ರಸ್ತೆಯಲ್ಲಿ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ವಿದ್ಯುತ್ ಕಡಿತವಾಗಲಿದೆ.
ಜನವರಿ 10 ರಿಂದ ಜನವರಿ 26ರವರೆಗೆ ವಿದ್ಯುತ್ ಕಡಿತ
ಕೆಪಿಟಿಸಿಎಲ್ ಮಾಗಡಿ ಬ್ಯಾಡರಹಳ್ಳಿ 66 ಕೆವಿ ಮಾರ್ಗದ ದುರಸ್ತಿ ನಡೆಯಲಿರುವ ಕಾರಣದಿಂದಾಗಿ ಜನವರಿ 10 ರಿಂದ ಜನವರಿ 26ರವರೆಗೆ ತಾವರೆಕರೆ ಹಾಗೂ ಮಾಚೋಹಳ್ಳಿ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರತಿ ದಿನ ಎರಡರಿಂದ ಮೂರು ಗಂಟೆಗಳ ಕಾಲ ವಿದ್ಯುತ್ ಸ್ಥಗಿತವಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.
ತಾವರೆಕೆರೆ ಸುತ್ತ ಮುತ್ತ ಇರುವ ದೊಡ್ಡಾಲದ ಮರ ರಸ್ತೆ, ಗಾಣಕಲ್ ಕೈಗಾರಿಕಾ ಪ್ರದೇಶ, ಹೊನಗನಹಟ್ಟಿ, ಯಲ್ಲಪ್ಪನ ಪಾಳ್ಯ, ಕೆಂಪಗೊಂಡನಹಳ್ಳಿ, ಯರಪ್ಪ ಕೈಗಾರಿಕಾ ಪ್ರದೇಶ, ಯಲಚಗುಪ್ಪೆ, ಚನ್ನೇನಹಳ್ಳಿ, ದೇವಮಾಚೋಹಳ್ಳಿ, ಪೆದ್ದನಪಾಳ್ಯ, ಗಂಗಪ್ಪಹಳ್ಳಿ, ನಾಗನಹಳ್ಳಿಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.
ಇನ್ನು ಮಾಚೋಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಾದ ವಿನಾಯಕ ಬಡಾವಣೆ, ಕಲ್ಪಾ ಕೈಗಾರಿಕಾ ಪ್ರದೇಶ, ಮಾಚೋಹಳ್ಳಿ, ಕಾಚೋಹಳ್ಳಿ, ಕಡಬಗೆರೆ ಕ್ರಾಸ್, ಸೀಗೇಹಳ್ಳಿ ಗೇಟ್, ಕೆಕೆ ಲೇಔಟ್, ಚಿಕ್ಕಗೊಲ್ಲರಹಟ್ಟಿ, ಕೆಜಿ ಲಕ್ಕೇನಹಳ್ಳಿ, ಶ್ರೀನಿಧಿ ಲೇಔಟ್, ಮಂಚನಬೆಲೆ ಕಾಲೋನಿ, ಜನಪ್ರಿಯ, ಲಕ್ಷ್ಮೀ ಬಡಾವಣೆಯಲ್ಲಿ ವಿದ್ಯುತ್ ಕಡಿತವಾಗಲಿದೆ.
ಫಾರೆಸ್ಟ್‌ಗೇಟ್ ಕೈಗಾರಿಕಾ ಪ್ರದೇಶ, ಕಡಬಗೆರೆ, ರಾಘವೇಂದ್ರ ಲೇಔಟ್, ಅರ್ಕಾವತಿ ಲೇಔಟ್, ಸೀಗೆಹಳ್ಳಿ, ಮಹಿಮಣ್ಣನಪಾಳ್ಯ, ಬೈಲಾಹೋನೆಹಳ್ಳಿ, ಸ್ಪೂರ್ತಿ ಬಡಾವಣೆ, ರಾಘವೇಂದ್ರ ಬಡಾವಣೆ, ಕಿತ್ನಹಳ್ಳಿ ರಸ್ತೆಯಲ್ಲಿಯೂ ವಿದ್ಯುತ್ ವ್ಯತ್ಯಯವಾಗಲಿದೆ.


Click it and Unblock the Notifications