ದೀಪಾವಳಿ ಹಬ್ಬ ಆರಂಭವಾಗಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಈ ನಡುವೆ ಎಲ್ಲ ವಸ್ತುಗಳ ಬೆಲೆಯು ಏರಿಕೆಯಾಗುತ್ತಾ ಸಾಗುತ್ತಿದೆ. ಈಗಾಗಲೇ ಈರುಳ್ಳಿ ಬೆಲೆಯು ಭಾರೀ ಪ್ರಮಾಣದಲ್ಲಿ ಜಿಗಿತ ಕಂಡಿದೆ, ಆದರೆ ಇದು ಒಂದು ಮಾತ್ರವಲ್ಲ ಕರ್ನಾಟಕ ರಾಜ್ಯದಲ್ಲಿ ಧಾನ್ಯಗಳು, ತರಕಾರಿಗಳ ಬೆಲೆಯು ಕೂಡಾ ಗಗನಕ್ಕೇರಿದೆ.
ಬರಗಾಲದ ಕಾರಣದಿಂದಾಗಿ ಕರ್ನಾಟಕದಾದ್ಯಂತ ಧಾನ್ಯಗಳು ಮತ್ತು ತರಕಾರಿಗಳ ಬೆಲೆಗಳು ಏರಿಕೆಯಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಬೆಳಗಾವಿಯಲ್ಲಿ ಬೆಲೆಯು ಭಾರೀ ಪ್ರಮಾಣದಲ್ಲಿ ಜಿಗಿತ ಕಂಡಿದೆ. ಹಾಗೆಯೇ ಮುಂದಿನ ಕೆಲವು ತಿಂಗಳುಗಳ ಕಾಲ ಹೀಗೆಯೇ ಇರುವ ಸಾಧ್ಯತೆಯಿದೆ. ಈ ಬೆಲೆ ಏರಿಕೆಯು ಪ್ರಮುಖವಾಗಿ ಬಡ, ಮಧ್ಯಮ ವರ್ಗದ ಜನರ ಮೇಲೆ ಪ್ರಭಾವ ಬೀರುತ್ತಿದೆ.

ದೀಪಾವಳಿಯ ಎಲ್ಲ ತಯಾರಿಯನ್ನು ಇತರೆ ಜಿಲ್ಲೆಗಳಂತೆ ಬೆಳಗಾವಿಯಲ್ಲೂ ಮಾಡಲಾಗುತ್ತಿದೆ. ಆದರೆ ಈ ನಡುವೆಯೇ ತರಕಾರಿ, ಧಾನ್ಯಗಳ ಬೆಲೆ ಜಿಗಿತ ಕಂಡಿದೆ. ಇತ್ತೀಚೆಗೆ ಏರಿಕೆಯಾಗಿದ್ದ ಟೊಮೆಟೊ ಸ್ಥಾನವನ್ನು ಈಗ ಈರುಳ್ಳಿ ಪಡೆದುಕೊಂಡಿದೆ. ಈ ನಡುವೆ ತರಕಾರಿ, ಧಾನ್ಯಗಳ ಬೆಲೆ ಕೂಡಾ ಏರಿಕೆಯಾಗುತ್ತಾ ಸಾಗುತ್ತಿದೆ.
ಕೆಲವು ತಿಂಗಳುಗಳ ಹಿಂದೆ ಟೊಮೆಟೊ ಸೇರಿ, ತರಕಾರಿಗಳ ಬೆಲೆಯು ಇಳಿಕೆಯಾಗಿತ್ತು. ಆದರೆ ಈಗ ಸುಧಾರಿಸುತ್ತಿದೆ. ಕ್ಯಾರೆಟ್, ಬೆಂಡೆಕಾಯಿ, ಆಲೂಗಡ್ಡೆ, ಬದನೆ, ಹಾಗಲಕಾಯಿ ಬೆಲೆಗಳು ಏರಿಕೆ ಕಾಣುತ್ತಿದೆ. ಎರಡು ತಿಂಗಳ ಹಿಂದೆ ಕೆಜಿಗೆ 25-30 ರೂಪಾಯಿ ಆಗಿದ್ದು ಈರುಳ್ಳಿ ಬೆಲೆಯು ಈಗ ಗಗನಕ್ಕೇರಿದೆ. ದೊಡ್ಡ ಈರುಳ್ಳಿ ಬೆಲೆ 70-80 ರೂಪಾಯಿ, ಮಧ್ಯಮ ಗಾತ್ರದ ಈರುಳ್ಳಿ ಬೆಲೆ 50-60 ರೂಪಾಯಿ, ಸಣ್ಣ ಈರುಳ್ಳಿ ಬೆಲೆ 50 ರೂಪಾಯಿಗೆ ತಲುಪಿದೆ.
ಕರ್ನಾಟಕದಲ್ಲಿ ತರಕಾರಿ ಬೆಲೆ ಎಷ್ಟಿದೆ?
ಈರುಳ್ಳಿ ದೊಡ್ಡ 71-79
ಈರುಳ್ಳಿ ಸಣ್ಣ 138-152
ಟೊಮೆಟೋ 33- 37
ಮೆಣಸಿನಕಾಯಿ 52-57
ಬೀಟ್‌ರೂಟ್ 35- 38
ಆಲೂಗಡ್ಡೆ 37- 41
ಬಾಳೆ ಕಾಯಿ 7-8
ಹರಿವೆ ಸೊಪ್ಪು 14-15
ನೆಲ್ಲಿ ಕಾಯಿ 86 -95
ಬೂದಿ ಸೋರೆಕಾಯಿ 23- 25
ಜೋಳ (baby corn) 64-71
ಬಾಳೆ ಹೂವು 25-28
ದೊಡ್ಡ ಮೆಣಸಿನಕಾಯಿ 58- 64
ಹಾಗಲಕಾಯಿ 37- 41
ಸೋರೆಕಾಯಿ 25-28
ಅವರೆಕಾಳು 58-64
ಚಪ್ಪರೆಯ ಅವರೆಕಾಳು 58-64
ಎಲೆಕೋಸು 22-24
ಕ್ಯಾರೆಟ್ 35- 38
ಹೂಕೋಸು 32- 36
ಗೋರಿಕಾಯಿ 51-56
ತೆಂಗಿನ ಕಾಯಿ 37-41
ಕೆಸುವಿನ ಎಲೆ 18-20
ಕೆಸವು 31-34
ಕೊತ್ತಂಬರಿ ಸೊಪ್ಪು 10-11
ಜೋಳ 35-38
ಮುಳ್ಳು ಸೌತೆ 33-37
ಕರಿಬೇವು 33-37
ನುಗ್ಗೆ ಕಾಯಿ 104-114
ಬದನೆ 31-34
ಬದನೆ ದೊಡ್ಡ 30-33
ಸುವರ್ಣ ಗೆಡ್ಡೆ 28-30
ಬೀನ್ಸ್ 64-71
ಬೆಳ್ಳುಳ್ಳಿ 171-189
ಶುಂಠಿ 115-127
ಬಟಾಣಿ 97-107
ತೊಂಡೆಕಾಯಿ 32-36
ನಿಂಬೆ ಹಣ್ಣು 81-89
ಮಾವಿನ ಕಾಯಿ 85-94
ಪುದೀನ ಸೊಪ್ಪು 3-4
ಅಣಬೆ 100-110
ಬೆಂಡೆಕಾಯಿ 48-53
ಕುಂಬಳಕಾಯಿ 23-25
ಮೂಲಂಗಿ 33-37
ಹೀರೆಕಾಯಿ 37-41
ಪಡುವಲಕಾಯಿ 26-29
ಬಸಳೆ 14-15
ಸಿಹಿಗೆಣಸು 44-48
ಮಣ್ಣಿನಲ್ಲಿ ತೇವಾಂಶದ ಕೊರತೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಬಿತ್ತಿದ ಸಾವಿರಾರು ಹೆಕ್ಟೇರ್ ಈರುಳ್ಳಿ ಬೆಳೆ ನಷ್ಟವಾಗಿದೆ. ಈಗ ಬೆಳಗಾವಿ ಎಪಿಎಂಸಿಗೆ ಬಾಗಲಕೋಟೆ, ಕಲಬುರ್ಗಿ, ಮಹಾರಾಷ್ಟ್ರದ ನಾಸಿಕ್ ಮತ್ತು ಸೊಲ್ಲಾಪುರ ಭಾಗಗಳಿಂದ ಈರುಳ್ಳಿ ಬರುತ್ತಿದೆ. ತರಕಾರಿಗಳಲ್ಲಿ ಟೊಮೆಟೊ ಬೆಲೆ ಕೆಜಿಗೆ 20 ರೂಪಾಯಿ ಆಗಿದೆ.
ಇತರೆ ತರಕಾರಿಗಳ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಬೆಂಡೆಕಾಯಿ, ಮುಳ್ಳು ಸೌತೆಕಾಯಿ, ಆಲೂಗಡ್ಡೆ, ಕ್ಯಾರೆಟ್, ಬೀನ್ಸ್, ಮೆಣಸಿನಕಾಯಿ, ಹಾಗಲಕಾಯಿ, ಬೀಟ್‌ರೂಟ್ ಬೆಲೆಯು 40 ರೂಪಾಯಿಯಿಂದ 400 ರೂಪಾಯಿಯ ನಡುವೆ ಇದೆ. ಧಾನ್ಯಗಳ ಬೆಲೆ ಒಂದು ತಿಂಗಳ ಅವಧಿಯಲ್ಲಿಯೇ ಶೇಕಡ 20 ರಿಂದ ಶೇಕಡ 30 ರಷ್ಟು ಏರಿಕೆಯಾಗಿದೆ.


Click it and Unblock the Notifications