ಹಣಕಾಸು ವರ್ಷದಲ್ಲಿ ಓರ್ವ ವ್ಯಕ್ತಿಯ ನೌಕರರ ಭವಿಷ್ಯ ನಿಧಿ (ಇಪಿಎಫ್) ಖಾತೆಗೆ ರೂಪಾಯಿ 2.5 ಲಕ್ಷಕ್ಕಿಂತ ಅಧಿಕ ಹಣ ಜಮೆ ಆಗುತ್ತಿದ್ದರೆ ಆ ವ್ಯಕ್ತಿಯು 2022 ರ ಹಣಕಾಸು ವರ್ಷದಿಂದ ಎರಡು ಬೇರೆ ಬೇರೆ ನೌಕರರ ಭವಿಷ್ಯ ನಿಧಿ ಖಾತೆಯನ್ನು ಹೊಂದಿರಬೇಕಾಗುತ್ತದೆ ಎಂದು ಸಿಬಿಡಿಟಿಯು ಹೇಳಿದೆ.
ಇಪಿಎಫ್ ಒಂದು ಹಣಕಾಸು ವರ್ಷಕ್ಕೆ ರೂಪಾಯಿ 2.5 ಲಕ್ಷಕ್ಕಿಂತ ಅಧಿಕವಾಗಿದ್ದರೆ ಅದರ ಮೇಲೆ ಬಡ್ಡಿ ಹಾಕಲಾಗುತ್ತದೆ ಎಂಬ ಕೇಂದ್ರ ಬಜೆಟ್ 2021 ರಲ್ಲಿನ ಹೊಸ ನಿಬಂಧನೆಯ ಬೆನ್ನಲ್ಲೇ ಈ ಹೊಸ ಮಾರ್ಗಸೂಚಿ ಬಂದಿದೆ.
ಈಗ ಎರಡು ಇಪಿಎಫ್ ಖಾತೆ ಇರುವ ಕಾರಣದಿಂದಾಗಿ ತೆರಿಗೆದಾರರಿಗೆ ಲೆಕ್ಕಾಚಾರವನ್ನು ಮಾಡಲು ಸುಲಭವಾಗಲಿದೆ. ಈ ಎರಡು ಇಪಿಎಫ್ ಖಾತೆಗಳ ಪೈಕಿ ಒಂದು ಖಾತೆಯಲ್ಲಿ ತೆರಿಗೆಯ ಕೊಡುಗೆಗಳನ್ನು ಹಾಗೂ ಇನ್ನೊಂದು ಖಾತೆಯಲ್ಲಿ ತೆರಿಗೆ ಇಲ್ಲದ ಇಪಿಎಫ್ ಕೊಡುಗೆಯನ್ನು ಜಮೆ ಮಾಡಲಾಗುತ್ತದೆ. ಇನ್ನು ಈ ಎರಡು ಇಪಿಎಫ್ ಖಾತೆಗಳಿಗೆ ತೆರೆಗೆಯನ್ನು ವಿಧಿಸಲಿದ್ದಾರೆಯೇ ಎಂಬುವುದು ಸ್ಪಷ್ಟವಾಗಿಲ್ಲ.

ಇನ್ನು ಈ ಅಧಿಸೂಚನೆಯಲ್ಲಿ ಈ ಎರಡು ಇಪಿಎಫ್ ಖಾತೆಯ ನಿಯಮವು 2022 ರ ಹಣಕಾಸು ವರ್ಷಾವಧಿಯಲ್ಲಿ ಜಾರಿಗೆ ಬರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಹಾಗಾಗಿ 2021 ರ ಮಾರ್ಚ್ 31 ರವರೆಗಿನ ಎಲ್ಲಾ ಇಪಿಎಫ್ ಖಾತೆ ವ್ಯವಹಾರಗಳು ಯಾವುದೇ ತೆರಿಗೆ ಇರುವುದಿಲ್ಲ. ಇನ್ನು ನಿಮ್ಮ ಇಪಿಎಫ್ ಖಾತೆಗೆ ಈಗ ಉದ್ಯೋಗದಾತರಿಂದ ಯಾವುದೇ ಕೊಡುಗೆಯು ಜಮೆ ಆಗುತ್ತಿಲ್ಲ ಎಂದಾದರೆ ಈ ಖಾತೆಯಲ್ಲಿ ಇರಬಹುದಾದ ಹಣದ ಮಿತಿಯು ರೂ. 5 ಲಕ್ಷ ಆಗಿದೆ. ಇನ್ನು ಇಪಿಎಫ್‌ನ ಎರಡನೇ ಖಾತೆಗೆ ತೆರಿಗೆ ಅನ್ವಯವಾಗಲಿದ್ದು ಇದನ್ನು ನೀವು ತೆರೆಯಬೇಕಾಗಿಲ್ಲ. ಅದು ಸ್ವಯಂಚಾಲಿತವಾಗಿ ತೆರೆಯಲಿದೆ.
"ಖಾತೆದಾರರು ಅಥವಾ ಉದ್ಯೋಗದಾತರು ಈ ಖಾತೆಯನ್ನು ಸ್ವಂತವಾಗಿ ತೆರೆಯುವ ಸ್ಥಿತಿಯಲ್ಲಿಲ್ಲ. ಕಾನೂನಿನ ಪ್ರಕಾರ, ಅದನ್ನು ನಿರ್ವಹಿಸುವ ಜವಾಬ್ದಾರಿ ಪಿಎಫ್ ಅಧಿಕಾರಿಗಳ ಮೇಲಿದೆ," ಎಂದು ಟ್ಯಾಕ್ಸ್ ಪ್ಲಾನರ್‌ನ ತೆಸಹ-ಸಂಸ್ಥಾಪಕ ಮತ್ತು ಸಿಇಒ ಸುಧೀರ್ ಕೌಶಿಕ್ ಹೇಳಿದ್ದಾರೆ.
ಹಣಕಾಸು ಸಚಿವಾಲಯವು ಮಂಗಳವಾರದಂದು ಹೊಸ ಆದಾಯ ತೆರಿಗೆ ನಿಯಮಗಳಿಗೆ ಸೂಚನೆ ನೀಡಿದೆ. ಆದರೆ ಈ ಹೊಸ ನಿಯಮವು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಮತ್ತು ತಮ್ಮ ಕಾರ್ಮಿಕರ ಇಪಿಎಫ್ ಉಳಿತಾಯವನ್ನು ಮನೆಯಲ್ಲೇ ನಿರ್ವಹಿಸುವ ಕೆಲವು ಸಾವಿರ ಉದ್ಯೋಗದಾತರಿಗೆ ದುಃಸ್ವಪ್ನವಾಗಿ ಪರಿಣಮಿಸಬಹುದು.
"ತೆರಿಗೆಯ ಬಡ್ಡಿಯ ಲೆಕ್ಕಾಚಾರದ ಉದ್ದೇಶಕ್ಕಾಗಿ, ನೌಕರರ ಭವಿಷ್ಯ ನಿಧಿ ಖಾತೆಯವ ಪ್ರತ್ಯೇಕ ಖಾತೆಗಳನ್ನು ಮಾಡಲಾಗುತ್ತದೆ. ಇದು 2021-2022 ವರ್ಷ ಹಾಗೂ ನಂತರದ ಎಲ್ಲಾ ವರ್ಷಗಳಲ್ಲಿ ಅನ್ವಯವಾಗಲಿದೆ. ಒಂದು ಖಾತೆಯು ತೆರಿಗೆ ನಿಯಮದಡಿ ಬರಲಿದ್ದು, ಮತ್ತೊಂದು ಖಾತೆಯು ತೆರೆಗೆ ನಿಯಮದಡಿ ಬರುವುದಿಲ್ಲ," ಎಂದು 2021 ಆದಾಯ ತೆರಿಗೆ (25 ನೇ ತಿದ್ದುಪಡಿ) ನಿಯಮಗಳು ಹೇಳುತ್ತದೆ.
ಇಪಿಎಫ್ ಖಾತೆಯನ್ನು 24.77 ಕೋಟಿ ಸದಸ್ಯರು ಹೊಂದಿದ್ದಾರೆ. ಈ ಪೈಕಿ ಮಾರ್ಚ್ 31, 2020 ರವರೆಗೆ 14.36 ಕೋಟಿ ಸದಸ್ಯರಿಗೆ ಯುನಿಕ್ ಅಕೌಂಟ್ ನಂಬರ್‌ಗಳನ್ನು (ಯುಎಎನ್) ನೀಡಲಾಗಿದೆ. ಈ ಪೈಕಿ 2019-20 ರ ಹಣಕಾಸು ವರ್ಷಾವಧಿಯಲ್ಲಿ ಸುಮಾರು ಐದು ಕೋಟಿಗೂ ಅಧಿಕ ಮಂದಿಯ ಇಪಿಎಫ್ ಖಾತೆಯು ಸಕ್ರಿಯವಾಗಿದೆ.
ತೆರಿಗೆ ಪಾವತಿದಾರರು ತೆರಿಗೆ ರಿಟರ್ನ್ಸ್ ಸಲ್ಲಿಸುವಾಗ ಅವರ ಒಟ್ಟು ಆದಾಯದಲ್ಲಿ ತೆರಿಗೆಯ ಪಿಎಫ್ ಬಡ್ಡಿಯನ್ನು ಸೇರಿಸಬೇಕು ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ ಈ ಹಿಂದೆಯೇ ಹೇಳಿತ್ತು. ಆದರೆ ಹೊಸ ನಿಯಮಗಳು ಕಂಪನಿಗಳಿಂದ ನಡೆಸಲ್ಪಡುವ ಇಪಿಎಫ್‌ಒ ಮತ್ತು ಪಿಎಫ್ ಟ್ರಸ್ಟ್‌ಗಳು ತೆರಿಗೆಯನ್ನು ಕಡಿತಗೊಳಿಸಬೇಕು ಮತ್ತು ಅಂತಹ ಖಾತೆಗಳಿಂದ ಬೊಕ್ಕಸಕ್ಕೆ ರವಾನಿಸಬೇಕು ಎಂದು ಹೇಳುತ್ತದೆ.
"ತೆರಿಗೆ ವಿಧಿಸಬಹುದಾದ ಇಪಿಎಫ್ ಖಾತೆಯಿಂದ ತೆರಿಗೆಯನ್ನು ಕಡಿತಗೊಳಿಸಬೇಕೇ ಅಥವಾ ಈ ಹಿಂದೆ ಸೂಚಿಸಿದಂತೆ ಒಬ್ಬರ ಐಟಿ ರಿಟರ್ನ್ಸ್‌ಗೆ ಸೇರಿಸಬೇಕೇ ಎಂದು ಅಧಿಸೂಚನೆಯಲ್ಲಿ ಸ್ಪಷ್ಟ ಪಡಿಸಿಲ್ಲ," ಎಂದು ನಿವೃತ್ತಿ ಪ್ರಯೋಜನಗಳ ತಜ್ಞರು ಹೇಳುತ್ತಾರೆ.
"2.5 ಲಕ್ಷಕ್ಕಿಂತ ಅಧಿಕ ಹಣ ಜಮೆ ಆಗುವ ಇಪಿಎಫ್ ಖಾತೆಗಳಿಗೆ ಆದಾಯದ ಮೇಲೆ ಈವರೆಗೆ ನೀಡಲಾಗಿದ್ದ, ತೆರಿಗೆ ವಿನಾಯತಿಯನ್ನು ಹಿಂಪಡೆಯಲಾಗುತ್ತದೆ ಎಂದು ಈ ವರ್ಷದ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದರು. ಹಾಗೆಯೇ ಕೆಲವು ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗಳಿಗೆ ದೊಡ್ಡ ಮೊತ್ತವನ್ನು ಜಮೆ ಮಾಡುತ್ತಿದ್ದಾರೆ. ಈ ಮೂಲಕ ತೆರಿಗೆ ರಹಿತ ಆದಾಯವನ್ನು ಪಡೆಯುತ್ತಿದ್ದಾರೆ. ಈ ಹಿನ್ನೆಲೆ ಇಪಿಎಫ್ ಖಾತೆಗೂ ತೆರಿಗೆ ವಿಧಿಸಲಾಗುತ್ತದೆ," ಎಂದು ವಾದ ಮಾಡಿದ್ದರು.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್‌ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications