NPS ವಾತ್ಸಲ್ಯ: 1ನೇ ವಯಸ್ಸಿನಿಂದ ದಿನಕ್ಕೆ 100 ರೂ ಉಳಿತಾಯ ಮಾಡಿ 6 ಕೋಟಿ ಹಣ ಗಳಿಸಿ ...2.3 ಲಕ್ಷ ಪಿಂಚಣಿ ಪಡೆಯುದು ಹೇಗೆ?

ನಿಮ್ಮ ಮಕ್ಕಳ ಭವಿಷ್ಯ ಸುಂದರವಾಗಿರಬೇಕು, ಆರ್ಥಿಕವಾಗ ಭದ್ರವಾಗಿರಬೇಕು ಎಂದು ಪ್ರತಿ ಪೋಷಕರು ಬಯಸುವುದು ಸಹಜ. ಇದಕ್ಕಾಗಿಯೇ ಕೇಂದ್ರ ಸರ್ಕಾರ NPS ವಾತ್ಸಲ್ಯ ಯೋಜನೆಯನ್ನು ಆರಂಭಿಸಿರುವುದು ನಿಮಗೆಲ್ಲಾ ಗೊತ್ತಿರುವ ವಿಚಾರವೇ.. ಈ ಯೀಚನೆಯು ಸೆಪ್ಟೆಂಬರ್ 2024 ರಲ್ಲಿ ಪ್ರಾರಂಭವಾದ NPS ವಾತ್ಸಲ್ಯ ಯೋಜನೆಯು ಪೋಷಕರಿಗೆ ತಮ್ಮ ಮಕ್ಕಳ ಆರ್ಥಿಕ ಸ್ಥಿರತೆಗಾಗಿ ಯೋಜನೆ ರೂಪಿಸಲು ಸಹಾಯ ಮಾಡುತ್ತದೆ. ಹಾಗಿದ್ರೆ 1ನೇ ವಯಸ್ಸಿನಿಂದ ದಿನಕ್ಕೆ 100 ರೂಪಯಿಗಳ ಉಳಿತಾಯ ಮಾಡುವುದರಿಂದ 6 ಕೋಟಿ ಹಣವನ್ನು ಗಳಿಸಬಹುದು ಅದು ಹೇಗೆ? ಎಷ್ಟು ಲಕ್ಷ ಪಿಂಚಣಿ ಸಿಗುತ್ತೆ ಎಂವ ಹೆಚ್ಚಿನ ವಿವರವನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ....

ಹೌದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ವಾತ್ಸಲ್ಯವು ಸರ್ಕಾರಿ ಬೆಂಬಲಿತ ಪಿಂಚಣಿ ಯೋಜನೆಯಾಗಿದ್ದು, ನೀವು ಈ ಯೋಜನೆಗೆ 0-18 ವರ್ಷ ವಯಸ್ಸಿನ ಭಾರತೀಯ ಮಕ್ಕಳಿಗಾಗಿ ವಿನ್ಯಾಸಗೊಳಿಸಲಾದ ವಿಶಿಷ್ಟವಾದ ಪಿಂಚಣಿ ಯೋಜನೆಯಾಗಿದೆ. ಪೋಷಕರು ತಮ್ಮ ಮಕ್ಕಳ ಹೆಸರಿನಲ್ಲಿ ಖಾತೆಯನ್ನು ತೆರೆಯುವ ಮೂಲಕ, ಅವರು ನಿವೃತ್ತಿಗಾಗಿ ಉಳಿತಾಯ ಮಾಡಲು ಒಂದು ಉತ್ತಮ ಆರಂಭವನ್ನು ನೀಡಬಹುದು.

100 ರೂ ಉಳಿತಾಯ ಮಾಡಿ 6 ಕೋಟಿ ಹಣ ಗಳಿಸಿ ಯಾವ ಯೋಜನೆ?

NPS ವಾತ್ಸಲ್ಯ ಖಾತೆಯನ್ನು ತೆರೆಯುವ ಮೂಲಕ, ಪೋಷಕರು ತಮ್ಮ ಮಕ್ಕಳಿಗೆ ಆರಂಭಿಕ ಹೂಡಿಕೆಯ ಪ್ರಯೋಜನವನ್ನು ಸಹ ನೀಡಬಹುದು ಮತ್ತು ಹೂಡಿಕೆ ಸಮಯದಲ್ಲಿ ಅಗತ್ಯವಾದ ಹಣ ನಿರ್ವಹಣಾ ಕೌಶಲ್ಯಗಳನ್ನು ಸಹ ನೀಡಬಹುದು.

NPS ವಾತ್ಸಲ್ಯದ ಬರುವ ಆದಾಯವನ್ನು ಪೋಷಕರು NPS ಟ್ರಸ್ಟ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ NPS ವಾತ್ಸಲ್ಯ ಕ್ಯಾಲ್ಕುಲೇಟರ್ ಅನ್ನು ಬಳಸಿಕೊಂಡು ಅಂತಿಮ ಆದಾಯದ ಅಂದಾಜನ್ನು ಲೆಕ್ಕಚಾರಮಾಡಬಹುದು.

NPS ಕ್ಯಾಲ್ಕುಲೇಟರ್ ಪ್ರಕಾರ ಲೆಕ್ಕಾಚಾರ ಹೀಗಿದೆ

ಮಾಸಿಕ ಹೂಡಿಕೆ: 3000 (ದಿನಕ್ಕೆ100 ಉಳಿಸುವ ಮೂಲಕ)
ವಯಸ್ಸು: 1 ವರ್ಷ
60 ವರ್ಷ ವಯಸ್ಸಿನವರೆಗೆ ಕೊಡುಗೆ
ನಿರೀಕ್ಷಿತ ಆದಾಯ: ಶೇ10
ನಿರೀಕ್ಷಿತ ವರ್ಷಾಶನ ದರ: ಶೇ.6.75
ವರ್ಷಾಶನ ಖರೀದಿ ಅನುಪಾತ: ಶೇ. 40
ಹೂಡಿಕೆ ಆಯ್ಕೆ: LC75 (75% ಷೇರು ಮತ್ತು 25% ಸಾಲ)

ಮಗುವಿನ 1 ವರ್ಷ ವಯಸ್ಸಿನಿಂದ ದಿನಕ್ಕೆ 100 ಉಳಿತಾಯ ಮಾಡುವ ಮೂಲಕವೂ 6.2 ಕೋಟಿಗೂ ಹೆಚ್ಚು ಮೊತ್ತ ಮತ್ತು 2.3 ಲಕ್ಷ ಮಾಸಿಕ ಪಿಂಚಣಿ ಪಡೆಯಬಹುದು ಎಂದು ಕ್ಯಾಲ್ಕುಲೇಟರ್ ಮಾಡಬಹುದು.

ಈ ಯೋಜನೆಯ 'ಹೂಡಿಕೆಯ ಅವಧಿಯಲ್ಲಿ ನಾವು ಶೇ 8ರಷ್ಟು ಮಧ್ಯಮ ಲಾಭವನ್ನು ಊಹಿಸಿದರೆ, ಒಟ್ಟು ಮೊತ್ತವು 2.5 ಕೋಟಿಗೆ ಮತ್ತು ಮಾಸಿಕ ಪಿಂಚಣಿ 97,000ಕ್ಕೆ ಹೆಚ್ಚಾಗುತ್ತದೆ.

ದೀರ್ಘಾವಧಿಕಾಲ ಹೊಡಿಕೆ ಮಾಡಿದ್ರೆ ಶೇ.10 ರಿಂದ 11ರಷ್ಟು ಹೆಚ್ಚಿನ ಲಾಭವನ್ನು ಪಡೆದುಕೊಳ್ಳಬಹುದು. ಹೂಡಿಕೆದಾರರು ಪ್ರತಿ ವರ್ಷವೂ ತಮ್ಮ ಕೊಡುಗೆಯನ್ನು ಸಣ್ಣ ಪ್ರಮಾಣದಲ್ಲಿ ಹೆಚ್ಚಿಸುವ ಮೂಲಕ ಅದನ್ನು ಸರಿದೂಗಿಸಬಹುದು.

ಹೂಡಿಕೆ ಆಯ್ಕೆ ಹೇಗೆ?
ಎನ್‌ಪಿಎಸ್ ವಾತ್ಸಲ್ಯ ಯೋಜನೆಯಡಿಯಲ್ಲಿ ಹಲವಾರು ಹೂಡಿಕೆಯ ಆಯ್ಕೆಗಳು ಇವೆ. ಇದರಲ್ಲಿ LC75 ಒಂದಾಗಿದೆ. ಇದರಲ್ಲಿ ಹೂಡಿಕೆದಾರರ ಹಣದ ಶೇ.75 ಅನ್ನು ಈಕ್ವಿಟಿಗೆ ಮತ್ತು ಶೇ.25 ಅನ್ನು ಸಾಲಕ್ಕಾಗಿ ಹಂಚಿಕೆ ಮಾಡಿಕೊಳ್ಳಬಹುದು.

NPS ವಾತ್ಸಲ್ಯದ ಅಡಿಯಲ್ಲಿ ಇತರ ಹೂಡಿಕೆ ಆಯ್ಕೆಗಳು LC50 (ಶೇ.50 ಇಕ್ವಿಟಿ, ಶೇ.50 ಸಾಲ); LC25 (ಶೇ.25 ಇಕ್ವಿಟಿ, ಶೇ.75 ಸಾಲ) ಮತ್ತು ಸಕ್ರಿಯ ಆಯ್ಕೆ, ಇವುಗಳಲ್ಲಿ ನೀವು ಈಕ್ವಿಟಿ (ಶೇ.75 ವರೆಗೆ), ಕಾರ್ಪೊರೇಟ್ ಸಾಲ (ಶೇ.100 ವರೆಗೆ), ಸರ್ಕಾರಿ ಭದ್ರತೆಗಳು (ಶೇ.100 ವರೆಗೆ) ಮತ್ತು ಪರ್ಯಾಯ ಆಸ್ತಿ (ಶೇ.5) ಗಳಲ್ಲಿ ನಿಧಿಗಳ ಹಂಚಿಕೆಯನ್ನು ನಿರ್ಧಾರ ಮಾಡಬಹುದು.

ಎನ್‌ಪಿಎಸ್ ವಾತ್ಸಲ್ಯ ಯೋಜನೆ ಎಂದರೇನು?

ಎನ್‌ಪಿಎಸ್ ವಾತ್ಸಲ್ಯ ಯೋಜನೆಯು ಭಾರತದಲ್ಲಿ ಮಕ್ಕಳಿಗಾಗಿ ಒಂದು ವಿಶೇಷ ಉಳಿತಾಯ ಯೋಜನೆಯಾಗಿದ್ದು, ಇದು ನಿವೃತ್ತಿಗಾಗಿ ತಯಾರಿ ನಡೆಸಲು ಅವರಿಗೆ ಸಹಾಯ ಮಾಡುತ್ತದೆ. NPS ವಾತ್ಸಲ್ಯ ಸರ್ಕಾರಿ ಸ್ವಾಮ್ಯದ ಪೆನ್ಷನ್ ಫಂಡ್ ರೆಗ್ಯುಲೇಟರಿ ಅಂಡ್ ಡೆವಲಪ್ಮೆಂಟ್ ಅಥಾರಿಟಿ (PERDA) ಸಂಸ್ಥೆಯಿಂದ ನಿರ್ವಹಿಸಲಾಗುವ ಯೋಜನೆ. ಮತ್ತು ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಉತ್ತಮ ಹಣಕಾಸು ಅಭ್ಯಾಸಗಳನ್ನು ಕಲಿಸುತ್ತದೆ. ಈ ಯೋಜನೆಯಡಿ ಭಾರತದ ಯಾವುದೇ ನಾಗರಿಕರು ತಮ್ಮ ಮಕ್ಕಳ ಹೆಸರಿನಲ್ಲಿ ಸ್ಕೀಮ್ ಅಕೌಂಟ್ ತೆರೆಯಬಹುದು. ಆ ಮಗು 18 ವರ್ಷ ವಯಸ್ಸಾಗುವವರೆಗೂ ಯೋಜನೆ ಚಾಲನೆಯಲ್ಲಿರುತ್ತದೆ. ವಯಸ್ಕ ಮಟ್ಟಕ್ಕೆ ಬಂದ ಬಳಿಕ ಅಕೌಂಟ್ ಅನ್ನು ಮುಂದುವರಿಸಬಹುದು ಅಥವಾ ಅಂತ್ಯಗೊಳಿಸಬಹುದು.

ಮಗುವಿಗೆ 18 ವರ್ಷ ತುಂಬಿದ ನಂತರ ಮುಂದೆ ಏನು ಮಾಡಬಹುದು?

ಅವರನ್ನು NPS ಶ್ರೇಣಿ - I ಗೆ ವರ್ಗಾಯಿಸಬಹುದು ಅಪ್ರಾಪ್ತ ವಯಸ್ಕರಿಗೆ 18 ವರ್ಷ ತುಂಬಿದ ದಿನಾಂಕದಿಂದ ಮೂರು ತಿಂಗಳೊಳಗೆ ಹೊಸ KYC ಅನ್ನು ಮಾಡಲಾಗುತ್ತದೆ.

NPS ವಾತ್ಸಲ್ಯ: 100 ಕೋಟಿ ರೂಪಾಯಿ ನಿವೃತ್ತಿ ನಿಧಿಗಾಗಿ ಮಾಸಿಕ ಹೂಡಿಕೆ ಎಷ್ಟಿರಬೇಕು?

ಅದರ ಲೆಕ್ಕಾಚಾರ 100 ಕೋಟಿ ರೂಪಾಯಿ ನಿವೃತ್ತಿ ನಿಧಿಗಾಗಿ ಮಾಸಿಕ ಹೂಡಿಕೆ 5,500 ರೂ.ಗಳಾಗಿರುತ್ತದೆ. NPS ಕ್ಯಾಲ್ಕುಲೇಟರ್ ಪ್ರಕಾರ ಲೆಕ್ಕಾಚಾರ ಹೀಗಿದೆ.

ಇಲ್ಲಿ ವಾರ್ಷಿಕ ಆದಾಯದ ಶೇಕಡಾ 6.75 ಮತ್ತು ವಾರ್ಷಿಕವಾಗಿ ಶೇಕಡಾ 5 ರಷ್ಟು ಹೆಚ್ಚಳವನ್ನು ತೆಗೆದುಕೊಂಡಿದ್ದೇವೆ.ನೀವು ಈ ಯೋಜನೆಯಲ್ಲಿ ಮಾಸಿಕ ರೂ. 5,500 ಹೂಡಿಕೆ ಮಾಡಿದರೆ. ನಿಮ್ಮ ಮಗುವಿಗೆ 60 ವರ್ಷ ತುಂಬುವ ಹೊತ್ತಿಗೆ, ಅವರ ನಿವೃತ್ತಿ ನಿಧಿ 100 ಕೋಟಿ ರೂ.ಗಳನ್ನು ಹೊಂದಿರುತ್ತದೆ. ಒಟ್ಟು ಹೂಡಿಕೆಯು 2,33,36,525 ರೂ.ಗಳಾಗಿರುತ್ತದೆ, ಅಂದಾಜು ಬಂಡವಾಳ ಲಾಭಗಳು 98,40,14,537 ರೂ.ಗಳಾಗಿರುತ್ತದೆ ಮತ್ತು ಮುಕ್ತಾಯ ಮೊತ್ತವು 1,00,73,51,062 ರೂ.ಗಳಾಗಿರುತ್ತದೆ. ಹೀಗಾಗಿ ನಿಮ್ಮ ಮಗುವಿಗೆ ಸಿಗುವ ಮಾಸಿಕ ಪಿಂಚಣಿ 22,66,540 ರೂ.ಗಳಾಗಿರುತ್ತದೆ.

Disclaimer: The write-up is just for information purposes, and is not a recommendation to buy, sell or hold. We have not done fundamental or technical analysis and have no opinion on article mentioned. Neither, the author nor Greynium Information Technologies should be held liable for any losses. Please consult a professional advisor.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+