ಸರ್ಕಾರಿ ನೌಕರರೇ ಗಮನಿಸಿ! ನಿಮಗೆ ಯಾವ ಪಿಂಚಣಿ ಯೋಜನೆ ಸೂಕ್ತ ಗೊತ್ತಾ? ನೀವು, ಸುರಕ್ಷಿತ ಮತ್ತು ಸ್ಥಿರ ನಿವೃತ್ತಿಯನ್ನು ನೀವು ಬಯಸಿದರೆ ತಪ್ಪದೇ ಈ ಸುದ್ದಿ ಓದಿ. ಹೌದು, ಕೇಂದ್ರ ಸರ್ಕಾರಿ ನೌಕರರು ಜೂನ್ 2025 ರೊಳಗೆ ಎನ್‌ಪಿಎಸ್ (NPS) ಅಥವಾ ಯುಪಿಎಸ್ (UPS) ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ಯುಪಿಎಸ್ ಖಾತರಿಯ ನಿವೃತ್ತಿ ಪಿಂಚಣಿ ನೀಡುತ್ತದೆ. ಎನ್‌ಪಿಎಸ್ ಮಾರುಕಟ್ಟೆ ಆಧಾರಿತ ಮತ್ತು ಹೆಚ್ಚಿನ ಲಾಭ ತರಬಹುದು. ಹಾಗಿದ್ರೆ, ಯಾವ ಪಿಂಚಣಿ ಯೋಜನೆ ಉತ್ತಮ? ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ ನೋಡಿ.
ಹೌದು,ನಿವೃತ್ತಿಯ ನಂತರದ ಭವಿಷ್ಯವನ್ನು ಸುರಕ್ಷಿತ ಮತ್ತು ಸ್ಥಿರವಾಗಿಡಲು ಸರಿಯಾದ ನಿವೃತ್ತಿ ಯೋಜನೆಯನ್ನು ಆಯ್ಕೆ ಮಾಡುವುದು ಅತ್ಯಂತ ಮುಖ್ಯವಾಗಿದೆ. ನಿವೃತ್ತಿಯ ವರ್ಷಗಳಲ್ಲಿ ಸ್ಥಿರ ಆದಾಯವನ್ನು ಬಯಸುವವರಿಗೆ, ಹಣಕಾಸು ತಜ್ಞರು ರಾಷ್ಟ್ರೀಯ ನಿವೃತ್ತಿ ಯೋಜನೆಯನ್ನು ಶಿಫಾರಸು ಮಾಡುತ್ತಾರೆ. ಈ ಯೋಜನೆ ಮಾರುಕಟ್ಟೆಯ ಏರಿಳಿತಗಳಿಂದ ಉಂಟಾಗುವ ಆರ್ಥಿಕ ಅಸ್ಥಿರತೆಯ ಚಿಂತೆ ಇಲ್ಲದೆ, ವಿಶ್ವಾಸಾರ್ಹ ಆದಾಯದ ಮೂಲವನ್ನು ಒದಗಿಸುತ್ತದೆ.

ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು..?
ಕೇಂದ್ರ ಸರ್ಕಾರಿ ನೌಕರರು ನಿವೃತ್ತಿ ಹೊಂದಿದ ನಂತರ, ಖಚಿತ ವೇತನವನ್ನು ಪಡೆಯುತ್ತಾರೆ. ಅದರಂತೆ ಕೇಂದ್ರ ಸರ್ಕಾರವು ರಾಷ್ಟ್ರೀಯ ನಿವೃತ್ತಿ ಯೋಜನೆ (NPS) ಅಡಿಯಲ್ಲಿ ಏಕೀಕೃತ ನಿವೃತ್ತಿ ಯೋಜನೆಯನ್ನು (UPS) ಪರಿಚಯಿಸಿದೆ. ಕೇಂದ್ರ ಸರ್ಕಾರಿ ನೌಕರರು ಮುಂದಿನ ತಿಂಗಳ (ಜೂನ್ 2025) ಒಳಗೆ ಒಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಅಂದರೆ, ಜೂನ್ ತಿಂಗಳೊಳಗೆ ರಾಷ್ಟ್ರೀಯ ನಿವೃತ್ತಿ ಯೋಜನೆ (NPS) ಮತ್ತು ಹೊಸ ಏಕೀಕೃತ ನಿವೃತ್ತಿ ಯೋಜನೆಗಳಲ್ಲಿ (UPS) ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಒಬ್ಬ ನೌಕರ ಏಕೀಕೃತ ನಿವೃತ್ತಿ ಯೋಜನೆಗೆ ಸೇರಿದ ಬಳಿಕ, ಅವರ ನಿರ್ಧಾರವನ್ನು ಬದಲಾಯಿಸಲು ಸಾಧ್ಯವಿಲ್ಲ. ಇದೇ ವೇಳೆ ಎರಡರಲ್ಲೂ ಇರುವ ಅನುಕೂಲಗಳು ಮತ್ತು ಅನಾನುಕೂಲಗಳನ್ನು ತಿಳಿದುಕೊಳ್ಳಬೇಕು. ಈ ಮೂಲಕ ಸರ್ಕಾರಿ ನೌಕರರು ಸರಿಯಾದ ಯೋಜನೆಯನ್ನು ಆಯ್ಕೆ ಮಾಡಬಹುದಾಗಿದೆ
UPS ಯೋಜನೆಯ ಪ್ರಮುಖ ಲಕ್ಷಣಗಳು
ಖಾತರಿಯ ನಿವೃತ್ತಿ: ನಿವೃತ್ತಿಯ ಸಂದರ್ಭದಲ್ಲಿ ನೌಕರನಿಗೆ ತನ್ನ ಸೇವೆಯ ಕೊನೆಯ 12 ತಿಂಗಳ ಸರಾಸರಿ ಮೂಲ ವೇತನದಲ್ಲಿ ಶೇ. 50ರಷ್ಟು ಪಿಂಚಣಿಯಾಗಿ ಸರ್ಕಾರ ನೀಡುತ್ತದೆ.
ಖಚಿತ ಆದಾಯ: ನಿವೃತ್ತಿಯ ನಂತರ ಜೀವನವನ್ನು ಸಾಗಿಸಲು ಬೇಕಾದ ಖಚಿತ ಆದಾಯವನ್ನು ಒದಗಿಸುತ್ತದೆ.
ದೀರ್ಘಕಾಲಿಕ ಸುರಕ್ಷತೆ: ನೌಕರನಿಗೆ ಜೀವಮಾನ ಪಿಂಚಣಿ ನೀಡಲಾಗುವುದು. ಕೆಲವೊಮ್ಮೆ ಪತ್ನಿ ಅಥವಾ ಪತಿ, ಹಾಗೂ ಅವಲಂಬಿತರಿಗೆ ಸಹ ಪಿಂಚಣಿಯ ಲಾಭವನ್ನು ನೀಡಲಾಗುತ್ತದೆ.
ಆಸಕ್ತಿ ಹೊಂದಿದ ಸರ್ಕಾರಿ ನೌಕರರಿಗೆ ಆದರ್ಶ ಆಯ್ಕೆ: ಸಂರಕ್ಷಿತದ ಜೊತೆಗೆ ಖಚಿತವಾದ ಆದಾಯವನ್ನು ಬಯಸುವಂತಹ ಸರ್ಕಾರಿ ನೌಕರರಿಗೆ UPS ಯೋಜನೆ ಉತ್ತಮ ಆಯ್ಕೆಯಾಗಿದೆ.
NPS ಯೋಜನೆಯ ಪ್ರಮುಖ ಲಕ್ಷಣಗಳು ಇಲ್ಲಿವೆ
NPS ಮಾರುಕಟ್ಟೆ ಆಧಾರಿತ ನಿವೃತ್ತಿ ಯೋಜನೆ
ಇದು ಒಂದು ಮಾರುಕಟ್ಟೆ ಆಧಾರಿತ ದೀರ್ಘಕಾಲೀನ ನಿವೃತ್ತಿ ಹೂಡಿಕೆ ಯೋಜನೆ ಆಗಿದೆ. ನಿಮ್ಮ ಹಣವನ್ನು ಷೇರುಗಳು (Equity), ಬಾಂಡ್‌ಗಳು ಮತ್ತು ಇತರೆ ಆಸ್ತಿಗಳಲ್ಲಿ ಹೂಡಿಕೆಯನ್ನು ಮಾಡಲಾಗುತ್ತದೆ.
ಸರ್ಕಾರದ ಸಹಭಾಗಿತ್ವ
ಸರ್ಕಾರಿ ನೌಕರ: ನೌಕರರು ತಮ್ಮ ವೇತನದಲ್ಲಿ ಶೇ. 10 ಪಾವತಿಸಿದರೆ, ಸರ್ಕಾರದ ಕಡೆಯಿಂದ ಶೇ.14ರಷ್ಟು ಪಿಂಚಣಿಯನ್ನು ಪಾವತಿಸಲಾಗುತ್ತದೆ.
ಖಾಸಗಿ ಉದ್ಯೋಗಿ: ನೌಕರರು ತಮ್ಮ ವೇತನದ ಶೇ,10 ಪಾವತಿಸಿದರೆ, ಸಂಸ್ಥೆಯು ಸಹ ಆಯ್ಕೆ ಮಾಡಿದರೆ ಪಾವತಿಸಬಹುದು.
ಹೆಚ್ಚು ಆದಾಯದ ಸಾಧ್ಯತೆ
ಇತರ ಪಿಂಚಣಿ ಯೋಜನೆಗಳಿಗಿಂತ ಹೆಚ್ಚು ವಾರ್ಷಿಕ ಆದಾಯ (8% - 10%) ಗಳಿಸುವ ಸಾಧ್ಯತೆ ಇದೆ. ಆದರೆ ಇದು ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ.
ತೆರಿಗೆ ವಿನಾಯಿತಿಗಳು
ಸೆಕ್ಷನ್ 80CCD(1), 80CCD(1B) ಮತ್ತು 80CCD(2) ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯ.ನೀವು ವಾರ್ಷಿಕವಾಗಿ 50,000 ವರೆಗೆ ಹೆಚ್ಚುವರಿ ತೆರಿಗೆ ವಿನಾಯಿತಿ ಪಡೆಯಬಹುದು
ಲಾಂಗ್ ಟರ್ಮ್ (ದೀರ್ಘಾವಧಿ) ಹೂಡಿಕೆ
ನಿವೃತ್ತಿಯ ನಂತರ ಖಾತೆದಾರರು ಒಂದು ಭಾಗವನ್ನು ವರ್ಷಾಶನ ರೂಪದಲ್ಲಿ ಬಳಸಬಹುದು. ಉಳಿದ ಹಣವನ್ನು ಒಟ್ಟುಗೂಡಿಸಿ ಪಡೆಯಬಹುದು.
ಹೂಡಿಕೆ ಆಯ್ಕೆಗಳು
ಸ್ವಯಂಚಾಲಿತ ಹೂಡಿಕೆ ಮಾದರಿ
ಖಾತೆದಾರರು ಹೂಡಿಕೆ ವಿಧಾನದ ನಿರ್ಧಾರ ತೆಗೆದುಕೊಳ್ಳುತ್ತಾರೆ.ಯಾವುದು ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು.
NPS ಯಾರು ಆರಿಸಬೇಕು?
- ಷೇರು ಮಾರುಕಟ್ಟೆ ಬಗ್ಗೆ ತಿಳುವಳಿಕೆ ಇರುವವರು
- ದೀರ್ಘಾವಧಿಯ ಹೂಡಿಕೆಗೆ ಆಸಕ್ತರಾದವರು
- ನಿವೃತ್ತಿ ನಂತರ ಆದಾಯಕ್ಕಾಗಿ ಭದ್ರತಾ ಯೋಜನೆ ಬೇಕಾದವರು
ಈ ಮೇಲಿನ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡು ಯಾವುದು ಉತ್ತಮ ಆಯ್ಕೆ ಎಂದು ಎಚ್ಚರಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.


Click it and Unblock the Notifications