For Quick Alerts
ALLOW NOTIFICATIONS  
For Daily Alerts

10 ಗ್ರಾಂ ಚಿನ್ನದ ಬೆಲೆ 113 ರೂ, ಅಚ್ಚರಿ ಆಯ್ತ, ವೈರಲ್ ಸುದ್ದಿ ಓದಿ!

|

ಪ್ರಸ್ತುತ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಡಾಲರ್ ಮೌಲ್ಯ ಕುಸಿಯುತ್ತಿದ್ದಂತೆ ಚಿನ್ನ ಬಲಗೊಳ್ಳುತ್ತಿದೆ. ಈ ನಡುವೆ 10 ಗ್ರಾಂ ಚಿನ್ನದ ಬೆಲೆ 113 ರೂಪಾಯಿ ಎಂದರೆ ನಿಮಗೆ ಅಚ್ಚರಿಯಾಗುವುದಿಲ್ಲವೇ?, ಆದರೆ ಇದು ಈಗಿನ ಬೆಲೆ ಅಲ್ಲ, ಸುಮಾರು ವರ್ಷಗಳ ಹಿಂದೆ ಚಿನ್ನದ ಬೆಲೆ ಇಷ್ಟೇ ಆಗಿತ್ತು. ಚಿನ್ನ ಖರೀದಿಯ ರಶೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇತ್ತೀಚೆಗೆ ಚಿನ್ನದ ಬೆಲೆಯು ಹೊಸ ದಾಖಲೆಯನ್ನು ಸೃಷ್ಟಿ ಮಾಡಿದೆ. ಗ್ರಾಹಕರ ಜೇಬಿಗೆ ನಿರಂತರವಾಗಿ ಹಳದಿ ಲೋಹ ಕತ್ತರಿ ಹಾಕುತ್ತಿದೆ. ಅದರಲ್ಲೂ ವಿವಾಹ ಸೀಸನ್‌ನಲ್ಲಿ ಚಿನ್ನದ ಬೆಲೆ ಗಗನಕ್ಕೆ ಏರಿದೆ. ಪ್ರಸ್ತುತ ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ ಹತ್ತು ಗ್ರಾಂ ಚಿನ್ನದ ಬೆಲೆಯು 52,750 ರೂಪಾಯಿ ಆಗಿದೆ. ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯು 57,550 ರೂಪಾಯಿ ಆಗಿದೆ. ಜಿಎಸ್‌ಟಿ ಸೇರಿ ದರ ಇನ್ನಷ್ಟು ಹೆಚ್ಚಳವಾಗುತ್ತದೆ.

Budget 2023: ಪೆಟ್ರೋಲ್, ಚಿನ್ನ, ಬಜೆಟ್ ಬಳಿಕ ಈ ವಸ್ತುಗಳು ದುಬಾರಿ?Budget 2023: ಪೆಟ್ರೋಲ್, ಚಿನ್ನ, ಬಜೆಟ್ ಬಳಿಕ ಈ ವಸ್ತುಗಳು ದುಬಾರಿ?

ಚಿನ್ನದ ಬೆಲೆಯ ಮೇಲೆ ಹಲವಾರು ಅಂಶಗಳು ಪ್ರಭಾವ ಬೀರುತ್ತದೆ ಮತ್ತು ಚಿನ್ನದ ಬೆಲೆ ಪ್ರತಿ ದಿನ ಬದಲಾವಣೆಯಾಗುತ್ತ ಸಾಗುತ್ತದೆ. ಆದರೆ ಒಂದು ಕಾಲದಲ್ಲಿ 10 ಗ್ರಾಂ ಚಿನ್ನ ಬೆಲೆ 113 ರೂಪಾಯಿ ಆಗಿತ್ತು ಎಂದರೆ ನೀವು ನಂಬುತ್ತೀರಾ?. ಹೌದು ಸುಮಾರು ವರ್ಷಗಳ ಹಿಂದೆ 10 ಗ್ರಾಂ ಚಿನ್ನದ ಬೆಲೆ 113 ರೂಪಾಯಿ ಆಗಿತ್ತು. ಹಳೆದ ರಶೀದಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಇಲ್ಲಿದೆ ವಿವರ...

 ರಶೀದಿ ಎಷ್ಟು ವರ್ಷ ಹಳೆಯದ್ದು?

ರಶೀದಿ ಎಷ್ಟು ವರ್ಷ ಹಳೆಯದ್ದು?

ಚಿನ್ನದ ಬೆಲೆಯ ಹಳೆಯ ರಶೀದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಆ ಸಂದರ್ಭದಲ್ಲಿ ಚಿನ್ನದ ಬೆಲೆಯು 113 ರೂಪಾಯಿ ಆಗಿದ್ದು, ತೀರಾ ಅಗ್ಗ ಅನಿಸುತ್ತದೆ. ಆದರೆ ಅಂದಿನ ರೂಪಾಯಿ ಮೌಲ್ಯಕ್ಕೆ ಆ ಬೆಲೆ ದುಬಾರಿಯೇ ಹೌದು. ಆದರೆ ಇಂದಿನ ಚಿನ್ನದ ಬೆಲೆಗೆ ಹೋಲಿಕೆ ಮಾಡಿದಾಗ ಹಳೆಯ ರಶೀದಿಯಲ್ಲಿರುವ ಬೆಲೆಯು ಅತೀ ಅಗ್ಗವಾಗಿದೆ.

ಅಷ್ಟಕ್ಕೂ ಈ ಬಿಲ್ ಸುಮಾರು 64 ವರ್ಷ ಹಳೆಯ ಬಿಲ್ ಆಗಿದೆ, ಅಂದರೆ 1959ರ ಬಿಲ್ ಆಗಿದೆ. 1959ರ ಮಾರ್ಚ್ 3ರಂದು ಹತ್ತು ಗ್ರಾಂ ಚಿನ್ನದ ಬೆಲೆಯು 113 ರೂಪಾಯಿ ಆಗಿತ್ತು ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. ಪ್ರಸ್ತುತ ಬ್ರಾಂಡೆಡ್ ಚಾಕ್ಲೇಟ್‌ಗಳ ಬೆಲೆಯೂ 1959ರ ಚಿನ್ನದ ಬೆಲೆಗಿಂತ ಅಧಿಕವಾಗಿರುತ್ತದೆ. ಈ ಬಿಲ್ ಮಹಾರಾಷ್ಟ್ರದ ವಾಮನ ನಿಂಬಾಜಿ ಅಷ್ಟೇಖರ್ ಎಂಬ ಜ್ಯುವೆಲ್ಲರಿ ಮಳಿಗೆಯದ್ದಾಗಿದೆ.

ಚಿನ್ನವನ್ನು ಖರೀದಿ ಮಾಡಿದವರ ಹೆಸರು ಶಿವಲಿಂಗ ಆತ್ಮರಾಮ ಆಗಿದೆ. ಶಿವಲಿಂಗ ಎಂಬವರು ಮಹಾರಾಷ್ಟ್ರದ ಈ ಚಿನ್ನದ ಮಳಿಗೆಯಲ್ಲಿ ಚಿನ್ನ ಹಾಗೂ ಬೆಳ್ಳಿಯನ್ನು ಒಟ್ಟಾಗಿ 909 ರೂಪಾಯಿಗೆ ಖರೀದಿ ಮಾಡಿದ್ದಾರೆ ಎಂದು ರಶೀದಿಯನ್ನು ನೋಡಿದಾಗ ತಿಳಿದು ಬರುತ್ತದೆ.

 

 ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?

ನೆಟ್ಟಿಗರ ಪ್ರತಿಕ್ರಿಯೆ ಹೇಗಿದೆ?

ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಈ ಬಿಲ್ ನೋಡಿ ಅಚ್ಚರಿಯಾಗಿದ್ದಾರೆ. ಉತ್ತಮವಾದ ಹಳೆಯ ದಿನಗಳು ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ. ಅಂದಿನ 100 ರೂಪಾಯಿ ಇಂದಿನ 50 ಸಾವಿರ ರೂಪಾಯಿಗೆ ಸಮವಾಗಿದೆ ಎಂಬುವುದನ್ನು ಉಲ್ಲೇಖಿಸಿ ಕೆಲವು ನೆಟ್ಟಿಗರು ಅಚ್ಚರಿ ಸೂಚಿಸಿದ್ದಾರೆ. ಇನ್ನು ಕೆಲವರು ಹಳೆಯ ಬಿಲ್ ಹಾಗೂ ಈಗಿನ ಬಿಲ್‌ನೊಂದಿಗೆ ತುಲನೆ ಮಾಡಿಕೊಂಡಿದ್ದಾರೆ.

 ಗೋಧಿ ಬೆಲೆ ಟ್ವೀಟ್

ಗೋಧಿ ಬೆಲೆ ಟ್ವೀಟ್

ಕೆಲವು ದಿನಗಳ ಹಿಂದೆ ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಗೋಧಿಯ ಖರೀದಿ ಮಾಡಿದ ಬಿಲ್ ಅನ್ನು ಹಂಚಿಕೊಂಡಿದ್ದರು. 1987ರಲ್ಲಿ ಗೋಧಿ ಬೆಲೆಯು ಒಂದು ಕೆಜಿಗೆ ಬರೀ 1.6 ರೂಪಾಯಿ ಆಗಿತ್ತು. "ಈ ಹಿಂದೆ ಗೋಧಿ ಬೆಲೆ ಒಂದು ಕೆಜಿಗೆ 1.6 ರೂಪಾಯಿ ಆಗಿತ್ತು. ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾಕ್ಕೆ ನನ್ನ ಅಜ್ಜ 1987ರಲ್ಲಿ ಕೆಜಿಗೆ 1.6 ರೂಪಾಯಿಯಂತೆ ಗೋಧಿ ಮಾರಾಟ ಮಾಡಿದ್ದಾರೆ," ಎಂದು ಐಎಫ್‌ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಹೇಳಿದ್ದಾರೆ. ಚಿನ್ನದಂತೆ ಗೋಧಿ ಬೆಲೆಯು ಕೂಡಾ ಭಾರೀ ಪ್ರಮಾಣದಲ್ಲಿ ಏರಿಕೆಯಾದರೆ ಹಲವಾರು ಮಂದಿ ಹಸಿವಿನಿಂದಲೇ ಸಾಯುತ್ತಾರೆ ಎಂದು ನೆಟ್ಟಿಗರು ಹೇಳಿದ್ದರು.

English summary

Old bill from 1959 shows 10gm Gold priced at just Rs 113, Take a look

An old receipt (bill) of gold that is going viral on social media shows 10 gram (one tola) gold was once available for a mere Rs 113. Take a look.
Story first published: Tuesday, January 24, 2023, 14:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X