ದಕ್ಷಿಣ ರಾಜ್ಯದ ಬರಗಾಲದ ನಡುವೆ ಭಾರೀ ಬೇಡಿಕೆಯ ನಂತರ ಕರ್ನಾಟಕದಾದ್ಯಂತ ಈರುಳ್ಳಿ ಬೆಲೆ ತೀವ್ರ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ ಪ್ರತಿ ಕಿಲೋಗ್ರಾಂಗೆ 75 ರೂಪಾಯಿಗೆ ತಲುಪಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ವರದಿಗಳ ಪ್ರಕಾರ, ಒಂದು ವಾರದ ಅವಧಿಯಲ್ಲಿ ಬೆಂಗಳೂರಿನಲ್ಲಿ ಈರುಳ್ಳಿ ಪ್ರತಿ ಕಿಲೋಗ್ರಾಂಗೆ ಶೇಕಡ 40 ರಿಂದ 50 ರಷ್ಟು ಏರಿಕೆಯಾಗಿದೆ. ಈ ಹಿಂದೆ ಟೊಮೆಟೊ ದರವು ಕೂಡಾ ಇದೇ ರೀತಿಯಲ್ಲಿ ಏರಿಕೆಯಾಗಿದೆ. ಟೊಮೆಟೊ ದರ ಬೆಂಗಳೂರಿನಲ್ಲಿ ಮಾತ್ರವಲ್ಲ ದೇಸದಾದ್ಯಂತ ಜಿಗಿತ ಕಂಡಿತ್ತು. ಈಗ ಬೆಲೆ ಸುಧಾರಿಸಿದೆ.

ಭಾನುವಾರ, ಕೆಲವು ತೋಟಗಾರಿಕಾ ಉತ್ಪಾದಕರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ (ಎಚ್‌ಒಪಿಸಿಒಎಂಪಿಎಸ್) ಮಳಿಗೆಗಳು 75 ರೂಪಾಯಿಗೆ ಈರುಳ್ಳಿ ಮಾರಾಟ ಮಾಡಿದ್ದರೆ, ಹಿಂದಿನ ವಾರದಲ್ಲಿ, ಈರುಳ್ಳಿ ಬೆಲೆ ಕಿಲೋಗ್ರಾಂಗೆ 40 ರೂಪಾಯಿಯಿಂದ 45 ರೂಪಾಯಿ ನಡುವೆ ಇತ್ತು.
ಬೆಲೆ ಏರಿಕೆಗೆ ಕಾರಣವೇನು?
ಅತಿ ಹೆಚ್ಚು ಈರುಳ್ಳಿ ಬೆಳೆಯುವ ಉತ್ತರ ಕರ್ನಾಟಕ ಭಾಗದಲ್ಲಿ ಬರಗಾಲವಿದೆ. ಇದುವೇ ಬೆಲೆ ಏರಿಕೆಗೆ ಕಾರಣ ಎಂದು ವರದಿಗಳು ಹೇಳಿದೆ. ರಾಬಿ ಬೆಲೆಯ ಸ್ಟಾಕ್ ಕುಸಿತ ಕಂಡಿದೆ. ಹಾಗೆಯೇ ತಾಜಾ ಖಾರಿಫ್ ಸ್ಟಾಕ್ ಇನ್ನೂ ಬರದ ಕಾರಣ ದೇಶಾದ್ಯಂತ ಈರುಳ್ಳಿ ಬೆಲೆ ಏರಿಕೆಯಾಗಿದೆ ಎಂದು ವರದಿಯಾಗಿದೆ.
ರಾಷ್ಟ್ರ ರಾಜಧಾನಿಯಲ್ಲೂ ಈರುಳ್ಳಿ ಬೆಲೆ ಖರೀದಿದಾರರನ್ನು ಕಂಗಾಲಾಗಿಸಿದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ನವದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಈರುಳ್ಳಿಯ ಗರಿಷ್ಠ ಬೆಲೆ ಪ್ರತಿ ಕಿಲೋಗ್ರಾಂಗೆ 70 ರೂಪಾಯಿಗೆ ಏರಿದೆ. ಈ ಬೆಲೆ ಏರಿಕೆಯು ಡಿಸೆಂಬರ್‌ವರೆಗೆ ಮುಂದುವರಿಯುವ ಸಾಧ್ಯತೆಯಿದೆ.
ಬೆಲೆಯಲ್ಲಿ ತೀವ್ರ ಏರಿಕೆಯಾಗಿರುವ ರಾಜ್ಯಗಳಲ್ಲಿ ಸಗಟು ಮತ್ತು ರಿಟೇಲ್ ಮಾರುಕಟ್ಟೆಗಳಲ್ಲಿ ಈರುಳ್ಳಿಯನ್ನು ಬಫರ್ ಸ್ಟಾಕ್‌ನಿಂದ ಪಡೆಯಲಾಗುತ್ತಿದೆ ಎಂದು ಕೇಂದ್ರ ಗ್ರಾಹಕ ಸಚಿವಾಲಯ ತಿಳಿಸಿದೆ. ಆಗಸ್ಟ್ ಮಧ್ಯದಿಂದ, ಸುಮಾರು 1.7 ಲಕ್ಷ ಟನ್‌ಗಳಷ್ಟು ಬಫರ್ ಸ್ಟಾಕ್ ಈರುಳ್ಳಿಯನ್ನು 22 ರಾಜ್ಯಗಳಲ್ಲಿ ವಿವಿಧ ಸ್ಥಳಗಳಲ್ಲಿ ಮಾರಾಟ ಮಾಡಲಾಗಿದೆ.


Click it and Unblock the Notifications