ಹಬ್ಬದ ಸೀಸನ್‌ನಲ್ಲಿ ನಾವು ನಮ್ಮ ಊರಿನಲ್ಲಿ ಹಬ್ಬ ಆಚರಿಸುವ ಜೊತೆಗೆ ಇತರೆ ಕಡೆ ಪ್ರವಾಸವನ್ನು ಹೋಗುವ ಪ್ಲ್ಯಾನ್ ಕೂಡಾ ಮಾಡುವುದು ಇದೆ. ಮಕ್ಕಳಿಗೂ ರಜೆ, ನಮಗೂ ರಜೆ ಎಂದಾಗ ಪೋಷಕರು ಪ್ರವಾಸ ಪ್ಲ್ಯಾನ್ ಮಾಡುತ್ತಾರೆ. ಇಂತಹವರಿಗೆ ಇಲ್ಲಿದೆ ಗುಡ್‌ನ್ಯೂಸ್..
ಹಬ್ಬದ ಅವಧಿಯಲ್ಲಿ ದುಬೈಗೆ ಪ್ರಯಾಣಿಸಲು ಪ್ಲ್ಯಾನ್ ಮಾಡುವ ಭಾರತೀಯ ಪ್ರವಾಸಿಗರಿಗೆ ಓಯೋ ಶೇಕಡ 60 ರವರೆಗೆ ರಿಯಾಯಿತಿಯನ್ನು ಘೋಷಣೆ ಮಾಡಿದೆ. ದುಬೈನ ಮರೀನಾ, ಬಿಸಿನೆಸ್ ಬೇ, ಜಬೆಲ್ ಅಲಿ, ಸ್ಪೋರ್ಟ್ಸ್ ಸಿಟಿ ಮತ್ತು ಡಿಸ್ಕವರಿ ಗಾರ್ಡನ್‌ನಂತಹ ಪ್ರಮುಖ ಪ್ರದೇಶಗಳಲ್ಲಿ ಇರುವ ಓಯೋ ಸ್ಮಾರ್ಟ್ ಮತ್ತು ಓಯೋ ಹೋಮ್‌ಗಳು ಸೇರಿದಂತೆ 130 ಕ್ಕೂ ಅಧಿಕ ಆಸ್ತಿಗಳು ಇದೆ ಎಂದು ಓಯೋ ಹೇಳಿದೆ.

ಆಫರ್ ಏನು ಹೇಳುತ್ತದೆ?
ಭಾರತೀಯ ಪ್ರವಾಸಿಗರು ದುಬೈನಾದ್ಯಂತ ಓಯೋ ಪ್ರಾಪರ್ಟಿಗಳಲ್ಲಿ ಬುಕ್ಕಿಂಗ್ ಅನ್ನು ಮಾಡಿಕೊಳ್ಳಬಹುದು. ಭಾರತೀಯ ಪ್ರವಾಸಿಗರಿಗೆ ಈ ಹಬ್ಬದ ರಿಯಾಯಿತಿ ಆಫರ್ ಅಕ್ಟೋಬರ್ 11-31 ರವರೆಗೆ ಇರಲಿದೆ. ಪ್ರವಾಸಿಗರು ಡಿಸೆಂಬರ್ 31, 2023 ರವರೆಗೆ ದುಬೈನಲ್ಲಿರುವ ಓಯೋ ಪ್ರಾಪರ್ಟಿಯಲ್ಲಿ ರಿಯಾಯಿತಿ ದರದಲ್ಲಿ ರೂಮ್‌ಗಳನ್ನು ಕಾಯ್ದಿರಿಸಬಹುದು.
ಬುಕ್ ಮಾಡುವುದು ಹೇಗೆ?
ಭಾರತೀಯ ಪ್ರವಾಸಿಗರು ಓಯೋ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ, ನಗರವನ್ನು ಆಯ್ಕೆ ಮಾಡುವ ಮೂಲಕ ಮತ್ತು ಅರ್ಹವಾದ ಆಸ್ತಿಯನ್ನು ಆಯ್ಕೆ ಮಾಡುವ ಮೂಲಕ ರಿಯಾಯಿತಿಯನ್ನು ಪಡೆಯಬಹುದು. ಜೈಪುರ, ಲಕ್ನೋ, ಗುವಾಹಟಿ, ಭುವನೇಶ್ವರ ಮತ್ತು ಚಂಡೀಗಢದಂತಹ ಮಹಾನಗರಗಳನ್ನು ಒಳಗೊಂಡಂತೆ ಭಾರತದಿಂದ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲು ಈ ಯೋಜನೆ ಆರಂಭಿಸಲಾಗಿದೆ.
ದುಬೈ ಆಕರ್ಷಣೆ ನಿಮಗೂ ಇದೆಯೇ?
ಆಕರ್ಷಕ ಸ್ಥಳಗಳು, ಐಷಾರಾಮಿ ಶಾಪಿಂಗ್ ಸ್ಥಳಗಳು, ಸುಂದರವಾದ ದೃಶ್ಯಗಳನ್ನು ದುಬೈ ಹೊಂದಿದೆ. ಅನೇಕ ಭಾರತೀಯ ಪ್ರವಾಸಿಗರಿಗೆ ಕನಸಿನ ತಾಣವಾಗಿದೆ. ಇದು ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾ, ವಿಶ್ವದ ಅತಿದೊಡ್ಡ ಕೃತಕ ದ್ವೀಪ ಪಾಮ್ ಜುಮೇರಾ ಮತ್ತು ವಿಶ್ವದ ಅತಿದೊಡ್ಡ ಮಾಲ್ ದುಬೈ ಮಾಲ್ ಅನ್ನು ಹೊಂದಿದೆ.
ದುಬೈ ಆಹಾರ ಪ್ರಿಯರಿಗೆ ಒಂದು ಸ್ವರ್ಗವಾಗಿದೆ. ದುಬೈನ ಆರ್ಥಿಕ ಮತ್ತು ಪ್ರವಾಸೋದ್ಯಮ ಇಲಾಖೆಯ ವರದಿಯು ಸಾಗರೋತ್ತರ ಪ್ರಯಾಣಿಕರ ಸಂಖ್ಯೆಗೆ ಹೋಲಿಕೆ ಮಾಡಿದಾಗ ಭಾರತವು ಅಗ್ರ ಮೂಲ ದೇಶವಾಗಿದೆ ಎಂದು ಹೇಳಿದೆ. 2023 ರ ಮೊದಲ ತ್ರೈಮಾಸಿಕದಲ್ಲಿ ಅಂದಾಜು 46 ಲಕ್ಷ ಅಂತರಾಷ್ಟ್ರೀಯ ಪ್ರವಾಸಿಗರು ದುಬೈಗೆ ಪ್ರಯಾಣಿಸಿದ್ದಾರೆ. 2022 ರಲ್ಲಿ ಅದೇ ಅವಧಿಯಲ್ಲಿ ಸರಿಸುಮಾರು 39 ಲಕ್ಷ ಪ್ರವಾಸಿಗರು ದುಬೈಗೆ ಪ್ರಯಾಣಿಸಿದ್ದಾರೆ.
ರಷ್ಯಾ (4.70 ಲಕ್ಷ), ಯುನೈಟೆಡ್ ಕಿಂಗ್‌ಡಮ್ (3.90 ಲಕ್ಷ) ಮತ್ತು ಸೌದಿ ಅರೇಬಿಯಾ (3.50 ಲಕ್ಷ) ನಂತರ ಸುಮಾರು 8 ಲಕ್ಷ ಪ್ರವಾಸಿಗರೊಂದಿಗೆ ಭಾರತವು ಸಾಗರೋತ್ತರ ಪ್ರವಾಸಿಗರಿಗೆ ಅತಿದೊಡ್ಡ ಮೂಲ ಮಾರುಕಟ್ಟೆಯಾಗಿ ಹೊರಹೊಮ್ಮಿದೆ.


Click it and Unblock the Notifications