ಏಳು ಬಾರಿ ಗಡುವು ವಿಸ್ತರಣೆ ಆದ ನಂತರ ಇದೀಗ ಡಿಸೆಂಬರ್ ಮೂವತ್ತೊಂದನೇ ತಾರೀಕಿಗೆ ಪ್ಯಾನ್ ಕಾರ್ಡ್ ಹಾಗೂ ಅಧಾರ್ ಜೋಡಣೆಗೆ ಮತ್ತೊಂದು ಅಂತಿಮ ಅವಕಾಶ ನೀಡಲಾಗಿದೆ. ಒಂದು ವೇಳೆ ಆದಾಯ ತೆರಿಗೆ ಇಲಾಖೆ ಮತ್ತೊಂದು ಅವಕಾಶ ನೀಡದಿದ್ದಲ್ಲಿ 2019ನೇ ಇಸವಿಯ ಕ್ಯಾಲೆಂಡರ್ ಬದಲಾಗುವುದರೊಳಗೆ ಕಡ್ಡಾಯವಾಗಿ ಈ ಎರಡು ದಾಖಲೆಗಳನ್ನು ಜೋಡಣೆ ಮಾಡಲೇಬೇಕಾಗುತ್ತದೆ.
ಒಂದು ವೇಳೆ ಈ ಗಡುವು ಮೀರಿದರೆ ನಿಮ್ಮ ಪ್ಯಾನ್ ಕಾರ್ಡ್ 2020ನೇ ಇಸವಿಯಿಂದ "ಕಾರ್ಯ ನಿರ್ವಹಿಸುವುದಿಲ್ಲ". ಕಳೆದ ವಾರವಷ್ಟೇ ಆದಾಯ ತೆರಿಗೆ ಇಲಾಖೆಯಿಂದ ಒಂದು ಟ್ವೀಟ್ ಮಾಡಿದ್ದು, ಅಂತಿಮ ಗಡುವನ್ನು ನೆನಪಿಸಿದ್ದು, ಒಂದು ವೇಳೆ ಆಧಾರ್- ಪ್ಯಾನ್ ಕಾರ್ಡ್ ಜೋಡಣೆ ಆಗದಿದ್ದಲ್ಲಿ ನಿಮ್ಮ ಪ್ಯಾನ್ ಕಾರ್ಡ್ 'ಕಾರ್ಯ ನಿರ್ವಹಿಸದಂತೆ' ಮಾಡಬಹುದು ಎನ್ನಲಾಗಿದೆ.
'ಕಾರ್ಯ ನಿರ್ವಹಿಸದ' ಎಂಬ ಪದದ ಸರಿಯಾದ ಅರ್ಥ ಏನು ಎಂಬ ಸ್ಪಷ್ಟನೆಯಿಲ್ಲ. ಜೋಡಣೆ ಆಗದಿರುವ ಪ್ಯಾನ್ ಕಾರ್ಡ್ ಗಳು ಜನವರಿಯಿಂದ ಕಾರ್ಯ ನಿರ್ವಹಿಸುವುದಿಲ್ಲ ಎಂಬ ಅರ್ಥವೇ ಬರುವಂತಿದೆ. ಇಲ್ಲಿ ಇನ್ನೊಂದು ಮಾತು. ಮತ್ತೆ ಪ್ಯಾನ್ ಕಾರ್ಡ್ ಜತೆ ಆಧಾರ್ ಜೋಡಣೆಯಾದ ಮೇಲೆ ಕಾರ್ಯ ನಿರ್ವಹಿಸುತ್ತದೆ.

ಅನಿವಾಸಿ ಭಾರತೀಯರಿಗೆ ಕೂಡ ಆಧಾರ್- ಪ್ಯಾನ್ ಜೋಡಣೆ ಕಡ್ಡಾಯ ಎಂಬುದನ್ನು ವರದಿಗಳು ತಿಳಿಸುತ್ತಿವೆ. ಆದಾಯ ತೆರಿಗೆ ವ್ಯಾಪ್ತಿಯೊಳಗೆ ಬರುವ ಆದಾಯವನ್ನು ಭಾರತದಲ್ಲಿ ಹೊಂದಿದ್ದರೆ ಅಥವಾ ದೇಶದಲ್ಲಿ ಹೂಡಿಕೆ ಮಾಡುವುದಕ್ಕೆ ಪ್ಯಾನ್ ಕಾರ್ಡ್ ಕಡ್ಡಾಯ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications