ಭಾರತದಲ್ಲಿ ಅತೀ ಪ್ರಮುಖವಾದ ದಾಖಲೆಗಳಲ್ಲಿ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಮತ್ತು ಆಧಾರ್ ಕಾರ್ಡ್ ಅತೀ ಮುಖ್ಯವಾದ ದಾಖಲೆಯಾಗಿದೆ. ಪ್ಯಾನ್ ಕಾರ್ಡ್ ಅತೀ ಮುಖ್ಯವಾದ ದಾಖಲೆಯಾಗಿದೆ. ಆದಾಯ ತೆರಿಗೆ ವಿಚಾರಕ್ಕೆ ಬಂದಾಗ ಮತ್ತು ಗುರುತಿನ ಪುರಾವೆಯ ವಿಚಾರಕ್ಕೆ ಬಂದಾಗ ಪ್ಯಾನ್ ಕಾರ್ಡ್ ಭಾರತದಲ್ಲಿ ಅತೀ ಪ್ರಮುಖವಾದ ದಾಖಲೆಯಾಗಿದೆ.
ಹಾಗಿರುವಾಗ ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿರುವ ಯಾವುದೇ ಮಾಹಿತಿ ತಪ್ಪಾಗಿದ್ದರೆ ಅದು ನಿಮಗೆ ತೊಂದರೆ ಉಂಟು ಮಾಡಬಹುದು. ಆದ್ದರಿಂದ, ನಿಮ್ಮ ಪ್ಯಾನ್‌ನಲ್ಲಿನ ಯಾವುದೇ ತಪ್ಪು ಮಾಹಿತಿ ಅಥವಾ ವ್ಯತ್ಯಾಸಗಳು ಇದ್ದರೆ ಬೇಗನೇ ಅದನ್ನು ಸರಿಪಡಿಸುವುದು ಉತ್ತಮ. ನಿಮ್ಮ ಹೆಸರು, ಜನ್ಮದಿನಾಂಕ, ಫೋಟೋ, ಸಹಿ, ತಂದೆಯ ಹೆಸರು, ಆಧಾರ್, ಲಿಂಗ, ನಿವಾಸ ಮತ್ತು ಸಂಪರ್ಕ ಮಾಹಿತಿಯಂತಹ ವಿವರಗಳನ್ನು ನವೀಕರಿಸಬಹುದು ಅಥವಾ ಬದಲಾಯಿಸಬಹುದು.

ಈ ಮಾಹಿತಿಗಳನ್ನು ನೀವು ಬದಲಾವಣೆ ಮಾಡಲು ಪ್ಯಾನ್ ಕಾರ್ಡ್‌ನ ಕೇಂದ್ರಕ್ಕೆ ಹೋಗಬೇಕಾಗಿಲ್ಲ. ಬದಲಾಗಿ ಆನ್‌ಲೈನ್ ಮೂಲಕವೂ ಪ್ಯಾನ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಬಹುದಾಗಿದೆ. ಪ್ಯಾನ್ ಕಾರ್ಡ್‌ನಲ್ಲಿ ಯಾವುದೇ ಬದಲಾವಣೆ ಅಥವಾ ಅಪ್‌ಡೇಟ್ ಅನ್ನು ಆನ್‌ಲೈನ್‌ನಲ್ಲಿ ಮಾಡುವುದು ಉಚಿತವೇನಲ್ಲ. ಶುಲ್ಕವನ್ನು ನೀವು ಪಾವತಿ ಮಾಡಬೇಕಾಗುತ್ತದೆ.
ಅದಕ್ಕಾಗಿ ನೀವು 96 ರೂಪಾಯಿ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಈ ಪೈಕಿ ಅರ್ಜಿ ಶುಲ್ಕವಾಗಿ 85 ರೂಪಾಯಿಯನ್ನು ಪಾವತಿ ಮಾಡಬೇಕಾಗುತ್ತದೆ, ಉಳಿದಂತೆ ಶೇಕಡ 12.36ರಷ್ಟು ಸೇವಾ ತೆರಿಗೆಯಾಗಿ ಪಾವತಿ ಮಾಡಲಾಗುತ್ತದೆ. ಪ್ಯಾನ್ ಕಾರ್ಡ್ ಮತ್ತು ಜನನ ದಿನಾಂಕದ ಮಾಹಿತಿಯನ್ನು ಹೇಗೆ ಬದಲಾಯಿಸುವುದು ಎಂಬುವುದು ನೋಡಿ....
ಪ್ಯಾನ್ ಕಾರ್ಡ್‌ನಲ್ಲಿನ ಹೆಸರು, ಜನನ ದಿನಾಂಕ ಬದಲಾವಣೆ ಮಾಡುವುದು ಹೇಗೆ?
ಹಂತ 1: ಎನ್‌ಎಸ್‌ಡಿಎಲ್ ಅಧಿಕೃತ ವೆಬ್‌ಸೈಟ್ https://www.protean-tinpan.com/ ಗೆ ಭೇಟಿ ನೀಡಿ
ಹಂತ 2: ಸರ್ವಿಸ್ ಸೆಕ್ಷನ್ ಅಡಿಯಲ್ಲಿ ಪ್ಯಾನ್ ಕಾರ್ಡ್ ಅನ್ನು ಕ್ಲಿಕ್ ಮಾಡಿ
ಹಂತ 3: ಸ್ಕ್ರೋಲ್ ಡೌನ್ ಮಾಡಿ ಪ್ಯಾನ್ ಆಯ್ಕೆಯಲ್ಲಿ Update/Correction ಅನ್ನು ಕ್ಲಿಕ್ ಮಾಡಿ
ಹಂತ 4: ನಿಮ್ಮ ಹೆಸರು, ಪ್ಯಾನ್ ನಂಬರ್, ಇಮೇಲ್ ಐಡಿ, ಸಂಪರ್ಕ ನಂಬರ್ ಮತ್ತು ಇತರೆ ಮಾಹಿತಿಯನ್ನು ನಮೂದಿಸಿ
ಹಂತ 5: ನಿಮ್ಮ ಇಮೇಲ್ ಐಡಿಯಲ್ಲಿ ನೀವು ಟೋಕನ್ ಸಂಖ್ಯೆ ಲಭ್ಯವಾಗಲಿದೆ. ಅದು ಪ್ಯಾನ್ ಅಪ್ಲಿಕೇಶನ್‌ನ ಡ್ರಾಫ್ಟ್ ಆವೃತ್ತಿಯನ್ನು ತೆರೆಯಲು ನಿಮಗೆ ಸಹಾಯ ಮಾಡುತ್ತದೆ.
ಹಂತ 6: Continue ಆಯ್ಕೆಯನ್ನು ನೀವು ಕ್ಲಿಕ್ ಮಾಡಿ
ಹಂತ 7: ನಿಮಗೆ ಮೂರು ಆಯ್ಕೆಗಳು ಲಭ್ಯವಾಗಲಿದೆ. ಆಧಾರ್ ಒಟಿಪಿ ಮೂಲಕ ಸಂಪೂರ್ಣ ಪ್ರಕ್ರಿಯೆಯನ್ನು ನೀವು ಮಾಡಲು ಇ-ಕೆವೈಸಿ ಮತ್ತು ಇ-ಸೈನ್ (ಪೇಪರ್‌ಲೆಸ್) ಮೊದಲ ಆಯ್ಕೆಯನ್ನು ಆಯ್ಕೆ ಮಾಡಿ.
ಹಂತ 8: ಆಧಾರ್ ಕಾರ್ಡ್ ಮಾಹಿತಿಯನ್ನು ನಮೂದಿಸಿ
ಹಂತ 9: ನೀವು ಯಾವ ಮಾಹಿತಿಯನ್ನು ಅಪ್‌ಡೇಟ್ ಮಾಡಬೇಕೋ ಅದನ್ನು ಆಯ್ಕೆ ಮಾಡಿ
ಹಂತ 10: ಹೊಸ ಮಾಹಿತಿಯ ದಾಖಲೆಯ ಪುರಾವೆಯನ್ನು ಅಟಚ್ ಮಾಡಿ
ಹಂತ 11: ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಆಧಾರ್ ಸಂಖ್ಯೆಯನ್ನು ಭರ್ತಿ ಮಾಡಿ, ಎಲ್ಲಾ ಮಾಹಿತಿಯನ್ನು ನೀವು ಮಾತ್ರ ಭರ್ತಿ ಮಾಡಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ಹಂತ 12: ಅರ್ಜಿ ಶುಲ್ಕವನ್ನು ಪಾವತಿಸಿ
ಹಂತ 13: ನಿಮ್ಮ ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಇ-ಸೈನ್ ಅನ್ನು ಸಲ್ಲಿಸಿ.
ಹಂತ 14: ನಿಮಗೆ ಅಕ್ನಾಲಜ್‌ಮೆಂಟ್ ಫಾರ್ಮ್ ಲಭ್ಯವಾಗಲಿದೆ.
ನಿಮ್ಮ ನೋಂದಾಯಿತ ಇಮೇಲ್ ಐಡಿಗೆ ಅಪ್‌ಡೇಟೆಡ್ ಪ್ಯಾನ್ ಕಾರ್ಡ್ ಲಭ್ಯವಾಗಲಿದೆ. ನೀವು ಯುಟಿಐಐಎಸ್‌ಎಲ್ ಪೋರ್ಟಲ್ ಮೂಲಕವೂ ಈ ಮಾಹಿತಿಯನ್ನು ಅಪ್‌ಡೇಟ್ ಮಾಡಬಹುದು. ನಿಮ್ಮ ಪ್ಯಾನ್ ಕಾರ್ಡ್‌ನಲ್ಲಿನ ವಿವರಗಳನ್ನು ಅಪ್‌ಡೇಟ್ ಮಾಡಲು, ನೀವು ಆಫ್‌ಲೈನ್ ವಿಧಾನವನ್ನು ಆರಿಸಿಕೊಳ್ಳಬಹುದು. ನಿಮ್ಮ ಪ್ರದೇಶಕ್ಕೆ ಹತ್ತಿರದ ಪ್ಯಾನ್ ಕೇಂದ್ರಗಳಿಗೆ ಭೇಟಿ ನೀಡಿ ಪ್ಯಾನ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಬಹುದು.


Click it and Unblock the Notifications