ನಾವು ಪ್ರಯಾಣ ಮಾಡಬೇಕಾದರೆ ಅಲ್ಲಲ್ಲಿ ಟೋಲ್ ಕಟ್ಟಿಕೊಂಡು ಸಾಗುವುದು ಒಂದು ತಲೆಬಿಸಿಯೇ ಹೌದು. ಈ ನಡುವೆ ಈಗ ಬೆಂಗಳೂರಿನ ಹೊರವಲಯದಲ್ಲಿ ಹೊಸದಾಗಿ ಮತ್ತೊಂದು ಟೋಲ್ ಆಗಲಿದೆ. ನಾವು ಇಲ್ಲಿಯೂ ಹಣವನ್ನು ಕಟ್ಟಿ ಪ್ರಯಾಣ ಮುಂದುವರಿಸಬೇಕಾಗುತ್ತದೆ!
ಹೌದು, ನವೆಂಬರ್ 17 ರಿಂದ, ಸ್ಯಾಟಲೈಟ್ ಟೌನ್ ರಿಂಗ್ ರೋಡ್ (ಎಸ್‌ಟಿಆರ್‌ಆರ್) ನ ದೊಡ್ಡಬಳ್ಳಾಪುರ-ಹೊಸಕೋಟೆ ವಿಭಾಗದಲ್ಲಿ ಓಡಾಡುವ ಪ್ರಯಾಣಿಕರು ಟೋಲ್ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಬೆಂಗಳೂರು ಅನ್ನು ನೆರೆಯ ಪಟ್ಟಣಗಳಾದ ಡಾಬ್ಸ್‌ಪೇಟೆ, ದೇವನಹಳ್ಳಿ, ಹೊಸಕೋಟೆ ಮತ್ತು ರಾಮನಗರದೊಂದಿಗೆ ಸಂಪರ್ಕಿಸುವ 288-ಕಿಮೀ ಎಸ್‌ಟಿಆರ್‌ಆರ್ ನಿರ್ಮಾಣ ಹಂತದಲ್ಲಿದೆ.

ಒಮ್ಮೆ ಸಂಪೂರ್ಣವಾಗಿ ಕಾರ್ಯಾರಂಭಿಸಿದ ನಂತರ, ದೂರದ ವಾಣಿಜ್ಯ ವಾಹನಗಳನ್ನು ಬೆಂಗಳೂರಿನಿಂದ ಬೇರೆಡೆಗೆ ಬದಲಾಯಿಸುವ ಸಾಧ್ಯತೆಯಿದೆ. ಸ್ಯಾಟೆಲೈಟ್ ಟೌನ್‌ಗೂ ಸಂಚಾರ ಸಾಧ್ಯವಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) 17,000 ಕೋಟಿ ರೂಪಾಯಿ ಯೋಜನೆಯನ್ನು 10 ಪ್ಯಾಕೇಜ್‌ಗಳಲ್ಲಿ ನೋಡುತ್ತದೆ.
ದೊಡ್ಡಬಳ್ಳಾಪುರ ಬೈಪಾಸ್-ಹೊಸಕೋಟೆ ವಿಭಾಗ (34.15 ಕಿಮೀ) ಈಗಾಗಲೇ ಪೂರ್ಣಗೊಂಡಿದೆ. ನಾಲ್ಕು ಲೇನ್‌ಗಳನ್ನು ಪ್ರತಿ ಗಂಟೆಗೆ 10,000 ಪ್ಯಾಸೆಂಜರ್ ಕಾರು ಸಂಚಾರ ಮಾಡುವಷ್ಟು ದೊಡ್ಡದಾಗಿ ನಿರ್ಮಾಣ ಮಾಡಲಾಗಿದ್ದು, ಅಷ್ಟು ಸಾಮರ್ಥ್ಯವನ್ನು ಹೊಂದಿದೆ.
ಟೋಲ್ ಶುಲ್ಕ ಎಷ್ಟಿದೆ ನೋಡಿ
ಈ ವಿಭಾಗಕ್ಕೆ ಟೋಲ್ ಶುಲ್ಕಗಳನ್ನು ನವೆಂಬರ್ 2 ರಂದು ಭಾರತದ ಗೆಜೆಟ್‌ನಲ್ಲಿ ಅಧಿಕೃತವಾಗಿ ತಿಳಿಸಲಾಗಿದೆ. ನಂತರ ನವೆಂಬರ್ 9 ರಂದು ಎನ್‌ಎಚ್‌ಎಐ ಅನುಮೋದಿಸಿತು. ಲಘು ಮೋಟಾರು ವಾಹನಗಳ ದರವನ್ನು ಏಕಮುಖ ಪ್ರಯಾಣಕ್ಕೆ 70 ರೂಪಾಯಿ ಎಂದು ನಿಗದಿಪಡಿಸಲಾಗಿದೆ. 24 ಗಂಟೆಗಳ ಒಳಗೆ ಹಿಂದಿರುಗಿದರೆ, ಎರಡು ಬಾರಿಗೆ 105 ರೂಪಾಯಿ ಎಂದು ನಿಗದಿಪಡಿಸಲಾಗಿದೆ.
ಬಸ್‌ಗಳು ಮತ್ತು ಟ್ರಕ್‌ಗಳು ಕ್ರಮವಾಗಿ 240 ರೂಪಾಯಿ ಮತ್ತು 360 ರೂಪಾಯಿ ಟೋಲ್ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. 2024 ರ ಮಾರ್ಚ್ 31 ರವರೆಗೆ ದೇವನಹಳ್ಳಿ ಬಳಿಯ ನಲ್ಲೂರು ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹ ನಡೆಯಲಿದೆ ಎಂದು ಎನ್‌ಎಚ್‌ಎಐ ಬೆಂಗಳೂರಿನ ಯೋಜನಾ ನಿರ್ದೇಶಕ ಕೆಬಿ ಜಯಕುಮಾರ್ ಖಚಿತಪಡಿಸಿದ್ದಾರೆ.
ವೀಲಿಂಗ್ ಮಾಡಿದರೆ ದಂಡ
ದ್ವಿಚಕ್ರ ವಾಹನಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ. ಆದರೂ ಎನ್‌ಎಚ್‌ಎಐ ಅಜಾಗರೂಕ ಚಾಲನೆಗೆ, ವಿಶೇಷವಾಗಿ ವೀಲಿಂಗ್‌ಗೆ ದಂಡವನ್ನು ಜಾರಿಗೊಳಿಸುತ್ತದೆ. ಎಸ್‌ಟಿಆರ್‌ಆರ್ ಕರ್ನಾಟಕದ ಮೊದಲ ಬೂತ್‌ಲೆಸ್ ಟೋಲ್ ಪ್ಲಾಜಾವನ್ನು ಹೊಂದಿದ್ದು, ಮಾನವಸಹಿತ ಟೋಲ್ ಕೌಂಟರ್‌ಗಳನ್ನು ತೆಗೆದುಹಾಕುತ್ತದೆ. ಬದಲಾಗಿ, ವಾಹನಗಳ ನಂಬರ್ ಪ್ಲೇಟ್ ಮತ್ತು ತೂಕವನ್ನು ಟೋಲ್ ಪ್ಲಾಜಾದಿಂದ 50 ಮೀಟರ್ ವ್ಯಾಪ್ತಿಯಲ್ಲಿ ಸ್ಕ್ಯಾನ್ ಮಾಡಲಾಗುತ್ತದೆ.
ಬೂತ್ ತಡೆಗೋಡೆ ಸ್ವಯಂಚಾಲಿತವಾಗಿ ತೆರೆದುಕೊಳ್ಳುವುದರಿಂದ ಸಂಪೂರ್ಣ ವಿವರಗಳನ್ನು ಹೊಂದಿರುವ ಫಾಸ್ಟ್‌ಟ್ಯಾಗ್ ಬಳಕೆದಾರರು ತಡೆರಹಿತ ಸಂಚಾರವನ್ನು ಮಾಡಬಹುದಾಗಿದೆ. ಫಾಸ್ಟ್‌ಟ್ಯಾಗ್ ಇಲ್ಲದಿರುವವರು ಟೋಲ್‌ಗಳನ್ನು ನಗದು ರೂಪದಲ್ಲಿ ಪಾವತಿಸಲು ಪರ್ಯಾಯ ಮಾರ್ಗವನ್ನು ತೆಗೆದುಕೊಳ್ಳಬೇಕಾಗುತ್ತದೆ.
ಇನ್ನು ಎನ್‌ಎಚ್‌ಎಐ ಬೆಂಗಳೂರಿನ ಯೋಜನಾ ನಿರ್ದೇಶಕ ಕೆಬಿ ಜಯಕುಮಾರ್ ಪ್ರಕಾರ ಅನುಮತಿಸುವ ತೂಕದ ಶೇಕಡ 105 ಕ್ಕಿಂತ ಹೆಚ್ಚಿನ ತೂಕದ ವಾಹನಗಳು ಹತ್ತು ಪಟ್ಟು ದಂಡವನ್ನು ಎದುರಿಸಬೇಕಾಗುತ್ತದೆ. ಹಾಗೆಯೇ ತೂಕವನ್ನು ಕಡಿಮೆ ಮಾಡಿದ ಬಳಿಕವೇ ಮುಂದೆ ಸಂಚಾರಕ್ಕೆ ಅವಕಾಶವಿರುತ್ತದೆ.
42 ಕಿಲೋ ಮೀಟರ್‌ನ ದಾಬಸ್‌ಪೇಟೆ- ದೊಡ್ಡಬಳ್ಳಾಪುರ ವಿಭಾಗ ಶೇಕಡ 90 ರಷ್ಟು ಪೂರ್ಣಗೊಂಡಿದೆ. ಜನವರಿ 2024 ರಲ್ಲಿ ಸಿದ್ಧತೆಗಾಗಿ ನಿಗದಿಪಡಿಸಲಾಗಿದೆ. ಫೆಬ್ರವರಿಯಲ್ಲಿ ಟೋಲ್ ಸಂಗ್ರಹಣೆ ಪ್ರಾರಂಭವಾಗುತ್ತದೆ. ಈ ನಡುವೆ ಹೊಸಕೋಟೆ-ತಮಿಳುನಾಡು ಗಡಿ ವಿಭಾಗದಲ್ಲಿ (21 ಕಿಮೀ) ನಿರ್ಮಾಣ ಪ್ರಗತಿಯು ಶೇಕಡ 13 ರಷ್ಟಿದೆ. ಟಿಎನ್ ಗಡಿ-ಓಬಳಾಪುರ ಸ್ಟ್ರೆಚ್ (179.93 ಕಿಮೀ) ನಿರ್ಮಾಣ ಹಂತದಲ್ಲಿದೆ ಅಥವಾ ಹರಾಜು ಪ್ರಕ್ರಿಯೆಯಲ್ಲಿದೆ.


Click it and Unblock the Notifications