ಇ ವ್ಯಾಲೆಟ್ ಗೆ ಕ್ರೆಡಿಟ್ ಕಾರ್ಡ್ ಬಳಸಿ ಹಣವನ್ನು ಹಾಕಿದಲ್ಲಿ ಪೇಟಿಎಂ ಬಳಕೆದಾರರಿಗೆ 2% ಶುಲ್ಕ ಬೀಳುತ್ತದೆ. ಇಲ್ಲಿಯ ತನಕ ಒಂದು ತಿಂಗಳಲ್ಲಿ 10,000 ರುಪಾಯಿಗಿಂತ ಹೆಚ್ಚು ಮೊತ್ತವನ್ನು ಕ್ರೆಡಿಟ್ ಕಾರ್ಡ್ ನಿಂದ ಪೇಟಿಎಂಗೆ ಹಾಕಿದಲ್ಲಿ ಮಾತ್ರ 2% ಶುಲ್ಕ ಬೀಳುತ್ತಿತ್ತು. ಈ ಬಗ್ಗೆ ಸಂದೇಶವೊಂದು ಬಂದಿದೆ.
"ಕ್ರೆಡಿಟ್ ಕಾರ್ಡ್ ಬಳಸಿ ಪೇಟಿಎಂಗೆ ಹಣ ತುಂಬಿದರೆ 2% ಶುಲ್ಕ ಬೀಳುತ್ತದೆ. ಕ್ರೆಡಿಟ್ ಕಾರ್ಡ್ ಬಳಸಿ ಹಣ ವರ್ಗಾವಣೆ ಮಾಡಿದಾಗ ನಿಮ್ಮ ಬ್ಯಾಂಕ್/ಪೇಮೆಂಟ್ ನೆಟ್ ವರ್ಕ್ ಗೆ ನಾವು ಹೆಚ್ಚಿನ ಶುಲ್ಕವನ್ನು ಪಾವತಿಸುವುದರಿಂದ ಅಲ್ಪ ಮೊತ್ತವನ್ನು ವಿಧಿಸುತ್ತಿದ್ದೇವೆ. ಈ ಶುಲ್ಕ ಬೀಳಬಾರದು ಎಂದಾದಲ್ಲಿ ಯುಪಿಐ ಅಥವಾ ಡೆಬಿಟ್ ಕಾರ್ಡ್ ಬಳಸಿ ಹಣವನ್ನು ತುಂಬಿ," ಎಂದು ಹೇಳಲಾಗಿದೆ.
ಬ್ಯಾಂಕ್ ವರ್ಗಾವಣೆ ಶುಲ್ಕ 5% ತಾತ್ಕಾಲಿಕ ಮನ್ನಾ
ಮತ್ತೊಂದು ಮೆಸೇಜ್ ಪ್ರಕಾರ, ಕನಿಷ್ಠ 50 ರುಪಾಯಿಯನ್ನು ಕ್ರೆಡಿಟ್ ಕಾರ್ಡ್ ಬಳಸಿ ಹಣ ತುಂಬಿದಲ್ಲಿ 2% ಕ್ಯಾಶ್ ಬ್ಯಾಕ್ - 200 ರುಪಾಯಿ ತನಕ ಪೇಟಿಎಂನಿಂದ ದೊರೆಯುತ್ತದೆ ಎಂದು ಹೇಳಲಾಗಿದೆ. ಸದ್ಯಕ್ಕೆ ಹಬ್ಬದ ಸೀಸನ್ ಗೋಸ್ಕರ, ವ್ಯಾಲೆಟ್ ನಿಂದ ಬ್ಯಾಂಕ್ ಗೆ ವರ್ಗಾವಣೆ ಮಾಡುವುದಕ್ಕೆ ವಿಧಿಸುತ್ತಿದ್ದ 5% ಶುಲ್ಕವನ್ನು ತಾತ್ಕಾಲಿಕವಾಗಿ ಮನ್ನಾ ಮಾಡಲಾಗಿದೆ ಎಂದು ವಕ್ತಾರರು ಹೇಳಿದ್ದಾರೆ.
ಆನ್ ಲೈನ್ ಪಾವತಿಯಲ್ಲಿ ಉಳಿದಂತೆ ಬದಲಾವಣೆಗಳಿಲ್ಲ
ಇನ್ನುಳಿದಂತೆ ಪೇಟಿಎಂ ಮೂಲಕ ಮಾಡುವ ಎಲ್ಲ ಆನ್ ಲೈನ್ ಹಾಗೂ ಆಫ್ ಲೈನ್ ಪಾವತಿಗಳು ಉಚಿತವಾಗಿ ಇರುತ್ತವೆ. ಕ್ರೆಡಿಟ್ ಕಾರ್ಡ್ ಮೂಲಕ ಪೇಟಿಎಂ ವ್ಯಾಲೆಟ್ ಗೆ ಹಣ ತುಂಬಿದಲ್ಲಿ ಶುಲ್ಕ ವಿಧಿಸುವುದಾಗಿ 2017ರಲ್ಲಿ ಕೂಡ ಪೇಟಿಎಂ ನಿಯಮ ತಂದಿತ್ತು. ಆದರೆ ಬಳಕೆದಾರರ ಒತ್ತಡದ ಕಾರಣಕ್ಕೆ ಹಿಂಪಡೆಯಲಾಯಿತು.
ದುರುಪಯೋಗ ತಪ್ಪಿಸಿಕೊಳ್ಳಲು ತೆಗೆದುಕೊಂಡಿದ್ದ ನಿರ್ಧಾರ
ಬಡ್ಡಿ ಇಲ್ಲದ ಕ್ರೆಡಿಟ್ ಕಾರ್ಡ್ ಹಣವನ್ನು ಬಳಕೆದಾರರ ಬ್ಯಾಂಕ್ ಖಾತೆಗಳಿಗೆ ಯಾವುದೇ ಶುಲ್ಕ ಇಲ್ಲದೆ ವರ್ಗಾವಣೆ ಮಾಡುವ ಮೂಲಕ ದುರುಪಯೋಗ ಆಗುತ್ತಿರುವುದನ್ನು ತಪ್ಪಿಸಲು ಈ ನಿರ್ಧಾರ ಮಾಡಲಾಗಿದೆ ಎಂದು ಇದೇ ರೀತಿ ತೀರ್ಮಾನ ಮಾಡಿದ್ದಾಗ 2017ರಲ್ಲಿ ಪೇಟಿಎಂ ತಿಳಿಸಿತ್ತು.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications