ಕೊರೊನಾ ಕಾಲಘಟ್ಟದಲ್ಲಿ ಹೂಡಿಕೆಗೆ ಇಲ್ಲಿವೆ ಗ್ರೇಟ್ ಐಡಿಯಾ

ಕೊರೊನಾ ವೈರಸ್‌ನಿಂದಾಗಿ‌ ಕಳೆದ‌ ಕೆಲ ತಿಂಗಳಿನಿಂದ ವಿಶ್ವದ ಆರ್ಥಿಕ‌ ಸ್ಥಿತಿ ಬುಡಮೇಲಾಗಿದೆ. ನಮ್ಮ ನಿತ್ಯ ವೆಚ್ಚದಿಂದ ಹಿಡಿದು ಹಣಕಾಸು ನಿರ್ವಹಣೆಯ ವಿಧಾನವನ್ನು ಬದಲಿಸಿಕೊಳ್ಳುವ ಅನಿವಾರ್ಯ ಎದುರಾಗಿದೆ.‌ ಕೊರೊನಾ ಕೇವಲ ಆರೋಗ್ಯ ಸ್ಥಿತಿ ಅಷ್ಟೇ ಅಲ್ಲದೆ ಆರ್ಥಿಕ ಸ್ಥಿತಿ ಮೇಲೂ ಪರಿಣಾಮ ಬೀರಿದೆ.‌

ಇದರಿಂದ ಜಾಗತಿಕವಾಗಿ ಲಕ್ಷಾಂತರ ಜನರ ಉದ್ಯೋಗ ಕಳೆದುಕೊಳ್ಳುವ ಜತೆಗೆ ಜೀವನೋಪಾಯದ ಮೇಲೆ ಪರಿಣಾಮ ಬೀರಿದೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ ಹಣಕಾಸು ನಿರ್ವಹಣೆಯನ್ನು ಜಾಗರೂಕತೆಯಾಗಿ ನಿಭಾಯಿಸಬೇಕು. ಅಂದರೆ ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು, ಅದರಿಂದ ಲಾಭವೇ ಅಥವಾ ನಷ್ಟವೇ? ಹಣಕಾಸು ನಿರ್ವಹಣೆ ಹೇಗೆ ಮಾಡುವುದು ಎಂಬಿತ್ಯಾದಿ ಪ್ರಶ್ನೆಗಳು ಜನರನ್ನು ಕಾಡುತ್ತಿದೆ.

ಇದಕ್ಕೆ ಸರಳ ಮತ್ತು ಪರಿಣಾಮಕಾರಿ ಮಾರ್ಗಸೂಚಿ ಇಲ್ಲಿದೆ...

ಎಮರ್ಜೆನ್ಸಿ ಕಾರ್ಪಸ್

ಎಮರ್ಜೆನ್ಸಿ ಕಾರ್ಪಸ್

ದೀರ್ಘಾವಧಿಯ ಹೂಡಿಕೆ ಮಾಡುವ ಮೊದಲು ಪ್ರತಿಯೊಬ್ಬರು ಎಮರ್ಜೆನ್ಸಿ ಕಾರ್ಪಸ್‌ (ತುರ್ತು‌ನಿಧಿ) ಮಾಡಿಕೊಳ್ಳುವುದು ಅನಿವಾರ್ಯ. ಕನಿಷ್ಠ 6 ರಿಂದ 9 ತಿಂಗಳ ತಮ್ಮ‌ ಸಂಬಳದ ಉಳಿತಾಯದ ಹಣವನ್ನು ಎಮರ್ಜೆನ್ಸಿ ಕಾರ್ಪಸ್‌ ನಲ್ಲಿ ಉಳಿಸಿಕೊಳ್ಳುವುದರಿಂದ ಒಂದು ವೇಳೆ ಉದ್ಯೋಗ ಕಡಿತ ಅಥವಾ ಆರೋಗ್ಯ ಸ್ಥಿತಿ ಗಂಭೀರವಾದರೂ ಈ ತುರ್ತು ನಿಧಿ ನಿಮ್ಮ‌ ಸಹಾಯಕ್ಕೆ ಬರಲಿದೆ.

ವೈದ್ಯಕೀಯ ವಿಮೆ

ವೈದ್ಯಕೀಯ ವಿಮೆ

ಹೆಚ್ಚುತ್ತಿರುವ ಆಸ್ಪತ್ರೆಯ ವೆಚ್ಚ ಮತ್ತು ಅನಿಶ್ಚಿತ ಉದ್ಯೋಗ ವಾತಾವರಣದಲ್ಲಿ ವೈಯಕ್ತಿಕ ವೈದ್ಯಕೀಯ ವಿಮಾ ಪಾಲಿಸಿಯು ಅವಶ್ಯಕತೆ ಇದೆ. ಕುಟುಂಬದ ಎಲ್ಲ ಸದಸ್ಯರನ್ನು ಒಳಗೊಳ್ಳುವ ಕನಿಷ್ಠ 5 ರಿಂದ 10 ಲಕ್ಷ ರುಪಾಯಿ ಮೊತ್ತದ ಹೆಲ್ತ್ ಪಾಲಿಸಿ ಮಾಡಿಸಿಕೊಳ್ಳುವುದು ಪ್ರಸ್ತುತ ಹಾಗೂ ದೀರ್ಘಕಾಲೀನವಾಗಿ ಸಹಾಯಕ್ಕೆ ಬರಲಿದೆ. ಹೆಲ್ತ್ ಪಾಲಿಸಿ ಆಯ್ಕೆ ಮಾಡಿಕೊಳ್ಳುವಾಗ ಜಾಗರೂಕರಾಗಿ ಆಯ್ದುಕೊಳ್ಳುವುದು ಉತ್ತಮ.

ಈಕ್ವಿಟಿ ಫಂಡ್, ರುಪಾಯಿ ಆಧಾರಿತ ಹೂಡಿಕೆ

ಈಕ್ವಿಟಿ ಫಂಡ್, ರುಪಾಯಿ ಆಧಾರಿತ ಹೂಡಿಕೆ

ಕೊರೊನಾ ಪ್ರಾರಂಭಗೊಂಡ ನಂತರ ವಿಶ್ವದಲ್ಲೇ ಷೇರು ಮಾರುಕಟ್ಟೆ ಕುಸಿತಗೊಂಡಿತು. ಇದರಿಂದ ಸಾಕಷ್ಟು ಜನರು ಆತಂಕಕ್ಕೊಳಗಾಗಿ ಈಕ್ವಿಟಿ ಫಂಡ್ ನಲ್ಲಿ ಹಾಕಿದ ಹಣವನ್ನು ತೆಗೆಯಲು ಮುಂದಾಗಿದ್ದರು. ಆದರೆ ಪ್ರಸ್ತುತ ಇಕ್ವಿಟಿಯಲ್ಲಿ ಹೂಡಿಕೆ ಮಾಡುವುದು ಉತ್ತಮ‌ ಮಾರ್ಗವಾಗಿದೆ. ಯಾವುದೇ ಷೇರು ಕುಸಿತದ ನಂತರ ಏರಿಕೆ ಹಾದಿ ಹಿಡಿಯುವುದು ಸಾಮಾನ್ಯ.‌ ಅಂತೆಯೇ ಇದು ಸಕಾಲ.‌ ದೀರ್ಘಕಾಲದ ಹೂಡಿಕೆಯಲ್ಲಿ ಇಚ್ಛೆ ಇರುವವರು ಇಲ್ಲಿ ಹೂಡಿಕೆ ಮಾಡಿದರೆ ಲಾಭ ಪಡೆಯಬಹುದು.

ಡಾಲರ್ ಆಧಾರಿತ ಹೂಡಿಕೆಗಳು - ಚಿನ್ನ ಮತ್ತು ಇಂಟರ್ ನ್ಯಾಷನಲ್ ಈಕ್ವಿಟಿ

ಡಾಲರ್ ಆಧಾರಿತ ಹೂಡಿಕೆಗಳು - ಚಿನ್ನ ಮತ್ತು ಇಂಟರ್ ನ್ಯಾಷನಲ್ ಈಕ್ವಿಟಿ

ಕಳೆದ ಕೆಲ ವರ್ಷಗಳಿಂದ ಡಾಲರ್ ವಿರುದ್ಧ ರುಪಾಯಿ ಸಮನಾಗಿ ಏರಿಳಿತವನ್ನು ಕಾಯ್ದುಕೊಳ್ಳುತ್ತಿದೆ.‌ ಅಂದರೆ, ಡಾಲರ್ ಮೌಲ್ಯದ ಸ್ವತ್ತುಗಳಲ್ಲಿ ಹೂಡಿಕೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಇಲ್ಲಿ ಹೂಡಿಕೆ ಮಾಡುವುದರಿಂದ ನಷ್ಟದ ಭಯ ಇರುವುದಿಲ್ಲ. ಇನ್ನು ಚಿನ್ನದ ಬೆಲೆ ದಿನೇದಿನೇ ಏರಿಕೆಯಾಗುತ್ತಿದೆ. ಸಾಮಾನ್ಯವಾಗಿ ಚಿನ್ನದ ಬಾಂಡ್ ಏರಿಕೆಯಾದಷ್ಟು ಪ್ರಮಾಣದಲ್ಲಿ ಕುಸಿತ ಕಾಣುವುದಿಲ್ಲ.‌ ಹೀಗಾಗಿ ಧೈರ್ಯವಾಗಿ ಗೋಲ್ಡ್‌ ಫಂಡ್ ಖರೀದಿಗೆ ಕೈ ಹಾಕಬಹುದು. ಇನ್ನು ಪ್ರತಿಯೊಬ್ಬರು ನಿತ್ಯ ಬಳಸುವ ಅಮೆಜಾನ್, ಫೇಸ್‌ಬುಕ್, ಗೂಗಲ್, ನೆಟ್‌ ಫ್ಲಿಕ್ಸ್, ಮೈಕ್ರೋಸಾಫ್ಟ್ ಕಂಪೆನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ಉತ್ತಮ ಅವಕಾಶವಾಗಿದೆ. ಏಕೆಂದರೆ, ಆನ್‌ಲೈನ್ ಯುಗ ಪ್ರಾರಂಭವಾಗಿರುವಾಗ ಪ್ರತಿಯೊಬ್ಬರು ಆನ್‌ ಲೈನ್‌ ಬಳಕೆಗೆ ಆದ್ಯತೆ ನೀಡುವರು.

ಗುರಿ ಆಧಾರಿತ ಹೂಡಿಕೆ

ಗುರಿ ಆಧಾರಿತ ಹೂಡಿಕೆ

ಹೂಡಿಕೆ ವಿಚಾರದಲ್ಲಿ ಪ್ರತಿಯೊಬ್ಬರಿಗೂ ತಳಮಳ ಇರುವುದು ಸಾಮಾನ್ಯ. ಆದರೆ ಈ ತಳಮಳವೇ ನಮ್ಮನ್ನು ದಾರಿ ತಪ್ಪಿಸುವ ಸಾಧ್ಯತೆ ಇರುತ್ತದೆ. ಯಾವುದಾದರೊಂದು‌ ಕ್ಷೇತ್ರದ ಮೇಲೆ ಹೂಡಿಕೆ ಮಾಡುವ ಮೊದಲು ಆ ಕ್ಷೇತ್ರದ ಬಗ್ಗೆ ಅಧ್ಯಯನ ನಡೆಸುವುದು ಉತ್ತಮ. ನಂತರ ಧೈರ್ಯದಿಂದ ಹೂಡಿಕೆ ಮಾಡಬೇಕು. ಹೂಡಿಕೆಯಲ್ಲಿ ಗುರಿ‌ ಇಲ್ಲದೇ ಹೆಜ್ಜೆ ಇಟ್ಟರೆ ಶೀಘ್ರವೇ ಆ ಹೂಡಿಕೆಯಿಂದ ಹೊರತೆಗೆಯುವ ಆತಂಕ ಹಾಗೂ ಚಂಚಲ ಮನಸ್ಸು ಮೂಡಿಸುತ್ತದೆ. ಇದು‌ ನಿಮ್ಮ ಆತ್ಮಬಲ ಕುಗ್ಗಿಸುತ್ತದೆ. ಹೀಗಾಗಿ ಗುರಿ ಆಧಾರಿತ ಹೂಡಿಕೆ ಅತ್ಯಂತ ಅವಶ್ಯಕ.

ಇನ್ಫಿನಿಟಿ ಬ್ಲಾಕ್‌ ಬುಕ್ ಖಾತೆ ತೆರೆಯಿರಿ

ಇನ್ಫಿನಿಟಿ ಬ್ಲಾಕ್‌ ಬುಕ್ ಖಾತೆ ತೆರೆಯಿರಿ

ಪ್ರತಿಯೊಬ್ಬರು ಇನ್ಫಿನಿಟಿಯಲ್ಲಿ ಬ್ಲಾಕ್‌ ಬುಕ್ ಅಕೌಂಟ್ ತೆರೆಯುವುದು ಅತ್ಯಂತ ಅವಶ್ಯಕವಾಗಿದೆ. ಇನ್ಫಿನಿಟಿ ಬ್ಲಾಕ್‌ ಬುಕ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಭದ್ರವಾಗಿ ಇಡಬಹುದು. ಜೊತೆಗೆ ಇದರ ನಿರ್ವಹಣೆ ಹಾಗೂ ನಿಮ್ಮ ನಂತರದಲ್ಲಿ‌ ನಿಮ್ಮ ಕುಟುಂಬ ಆ ಮಾಹಿತಿ ಪಡೆಯಲು ಸಹಕಾರಿಯಾಗಿದೆ. ಉದಾಹರಣೆಗೆ, ನಿಮ್ಮ ಹೂಡಿಕೆ ಸಂಬಂಧ ಮಾಹಿತಿ ಹಾಗೂ ಆಕ್ಸೆಸ್, ಬ್ಯಾಂಕ್ ಖಾತೆ ವಿವರ, ವಿಮಾ‌ ಪಾಲಿಸಿ, ಆಸ್ತಿ ವಿವರ, ಡಿಜಿಟಲ್ ಅಸೆಟ್ ಇತರೆ ಪಾಸ್‌ವರ್ಡ್‌ಗಳನ್ನು ಇನ್ಪಿನಿಟಿ ಬ್ಲಾಕ್‌ನಲ್ಲಿ‌ ಸಂಗ್ರಹಿಸಿಡಬಹುದು. ಇದರಿಂದ ನಿಮ್ಮ ನಂತರದ ಸಮಯದಲ್ಲಿ ಅಥವಾ ತುರ್ತು ಸಮಯದಲ್ಲಿ‌ ನಿಮ್ಮ ಕುಟುಂಬದವರು ಯಾವುದೇ ಕಷ್ಟ ಪಡದೇ ಈ ಮಾಹಿತಿಯನ್ನು ಅವರು ಪಡೆದುಕೊಳ್ಳಬಹುದು ಹಾಗೂ ಅದರ ನಿರ್ವಹಣೆಯೂ ಸುಲಭವಾಗಲಿದೆ. ಹೀಗೆ ಹೂಡಿಕೆಯ ಜೊತೆಗೆ ಅದರ‌ ನಿರ್ವಹಣೆಯೂ ಅತಿ ಅವಶ್ಯಕ. ನಮ್ಮ ನಾಳೆಯ ಉತ್ತಮ ಭವಿಷ್ಯಕ್ಕಾಗಿ ಇಂದು ಹೂಡಿಕೆ ಪ್ರಾರಂಭಿಸುವುದು ಒಳ್ಳೆಯದು.
(ಲೇಖಕರು ಹಣಕಾಸು ತಜ್ಞರು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+