Savings Accountಗೆ ಹೆಚ್ಚು ಬಡ್ಡಿ ನೀಡುವ 10 ಬ್ಯಾಂಕ್ ಗಳಿವು

ಸಂಬಳ, ಹೂಡಿಕೆ ಹಾಗೂ ಕಟ್ಟಬೇಕಾದ ಸಾಲ ಇಎಂಐ ಎಲ್ಲದರ ವ್ಯವಹಾರ ನಡೆಯುವುದು ಬ್ಯಾಂಕ್ ನ ಉಳಿತಾಯ ಖಾತೆ ಮೂಲಕವೇ. ಆದರೆ ಅಲ್ಲಿ ಎಷ್ಟು ಮೊತ್ತದ ವ್ಯವಹಾರ ನಡೆಯುತ್ತಿದೆ. ಅಲ್ಲಿ ನಮ್ಮ ಹಣಕ್ಕೆ ಎಷ್ಟು ಬಡ್ಡಿ ಸಿಗುತ್ತಿದೆ ಎಂಬುದನ್ನು ಅಷ್ಟಾಗಿ ಗಮನಿಸಿರಲಿಕ್ಕೆ ಇಲ್ಲ. ಉಳಿತಾಯ ಖಾತೆಯಲ್ಲಿ ಇರುವ ಹಣಕ್ಕೂ ಬಡ್ಡಿ ಬರುತ್ತದೆ. ಆದರೆ ದೊಡ್ಡ ಮಟ್ಟದಲ್ಲಿ ಅಲ್ಲ.

ನಿಮಗೆ ಗೊತ್ತಿರಲಿ, ಕೆಲವು ಬ್ಯಾಂಕ್ ಗಳು, ಅದರಲ್ಲಿ ಸಣ್ಣ ಬ್ಯಾಂಕ್ ಗಳು ಅಥವಾ ಹೊಸದಾಗಿ ಶುರುವಾದ ಬ್ಯಾಂಕ್ ಗಳು ಖಾತೆಯಲ್ಲಿರುವ ಬ್ಯಾಲೆನ್ಸ್ ಗೆ ಒಳ್ಳೆ ಬಡ್ಡಿ ದರವನ್ನು ನೀಡುತ್ತವೆ. ಅವರ ಉದ್ದೇಶ ಏನಾಗಿರುತ್ತದೆ ಅಂದರೆ, ಹೊಸದಾಗಿ ಗ್ರಾಹಕರನ್ನು ಬ್ಯಾಂಕ್ ಗೆ ಸೆಳೆಯಬೇಕಾಗಿರುತ್ತದೆ. ಇನ್ನು ಅಷ್ಟಾಗಿ ಹೆಸರು ಮಾಡದ ಬ್ಯಾಂಕ್ ಅನ್ನು ಪ್ರಚಾರ ಮಾಡಬೇಕಿರುತ್ತದೆ.

ಎಸ್ ಬಿಐ ಹಾಗೂ ಎಚ್ ಡಿಎಫ್ ಸಿ ನೀಡುವ ಬಡ್ಡಿ ಎಷ್ಟು?

ಎಸ್ ಬಿಐ ಹಾಗೂ ಎಚ್ ಡಿಎಫ್ ಸಿ ನೀಡುವ ಬಡ್ಡಿ ಎಷ್ಟು?

ದೊಡ್ಡ ಬ್ಯಾಂಕ್ ಗಳು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳೇ ಇರಲಿ ಅಥವಾ ಖಾಸಗಿ ಬ್ಯಾಂಕ್ ಆಗಿರಲಿ ಠೇವಣಿದಾರರಿಗೆ ನೀಡುವ ಬಡ್ಡಿ ದರ ಬಹಳ ಕಡಿಮೆ. ಬ್ಯಾಂಕ್ ಬಜಾರ್ ನ ಮಾಹಿತಿ ಪ್ರಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುವುದು ವರ್ಷಕ್ಕೆ 2.70 ಪರ್ಸೆಂಟ್ ಮಾತ್ರ. ಎಚ್ ಡಿಎಫ್ ಸಿ ಬ್ಯಾಂಕ್ ನಿಂದ 3- 3.5 ಪರ್ಸೆಂಟ್ ಬಡ್ಡಿ ನೀಡಲಾಗುತ್ತದೆ.

ಹೆಚ್ಚು ದರ ನೀಡುವ ಕಡೆ ಹಣ ಇಡಬಹುದಲ್ಲವಾ?

ಹೆಚ್ಚು ದರ ನೀಡುವ ಕಡೆ ಹಣ ಇಡಬಹುದಲ್ಲವಾ?

ಅದೇ ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 4ರಿಂದ 7 ಪರ್ಸೆಂಟ್ ಬಡ್ಡಿ ನೀಡಿದರೆ, ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಿಂದ 4- 6.5 ಪರ್ಸೆಂಟ್ ಬಡ್ಡಿ ಉಳಿತಾಯ ಖಾತೆದಾರರಿಗೆ ನೀಡಲಾಗುತ್ತದೆ. ನಿಮ್ಮ ಉಳಿತಾಯ ಖಾತೆಗೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ಬಡ್ಡಿ ನೀಡುವ ಕಡೆಗೆ ಹಣ ಇಡುವುದು ಉತ್ತಮ ಅಲ್ಲವಾ?

ಇತರ ಅಂಶಗಳನ್ನು ಸಹ ಗಮನಿಸಬೇಕು

ಇತರ ಅಂಶಗಳನ್ನು ಸಹ ಗಮನಿಸಬೇಕು

ಆದರೆ, ಯಾವ ಬ್ಯಾಂಕ್ ಗೆ ಉತ್ತಮ ಇತಿಹಾಸ ಇದೆಯೋ, ಸೇವೆ ಚೆನ್ನಾಗಿದೆಯೋ ಹಾಗೂ ಎಟಿಎಂ ಜಾಲ ಮತ್ತು ಶಾಖೆಗಳು ಅತ್ಯುತ್ತಮವಾಗಿದೆಯೋ ಅಂಥಲ್ಲಿ ಹಣ ಇರಿಸಿವುದು ಕ್ಷೇಮ. ಕೆಲವು ಬ್ಯಾಂಕ್ ಗಳು ಹೆಚ್ಚಿನ ಬಡ್ಡಿ ನೀಡಬೇಕು ಎಂದಲ್ಲಿ ಕನಿಷ್ಠ ಬ್ಯಾಲೆನ್ಸ್ ಮೊತ್ತ, ತ್ರೈಮಾಸಿಕವಾಗಿ ಇರಿಸಬೇಕಾದ ಕನಿಷ್ಠ ಮೊತ್ತದ ಮಿತಿಯನ್ನೂ ಜಾಸ್ತಿ ನಿಗದಿ ಮಾಡಿರುತ್ತವೆ.

ಯಾವ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಗೆ ಎಷ್ಟು ಬಡ್ಡಿ ದರ?

ಯಾವ ಬ್ಯಾಂಕ್ ನಲ್ಲಿ ಉಳಿತಾಯ ಖಾತೆಗೆ ಎಷ್ಟು ಬಡ್ಡಿ ದರ?

ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್ 4- 7%

ಬಂಧನ್ ಬ್ಯಾಂಕ್ 4- 7.15%

ಡಿಸಿಬಿ ಬ್ಯಾಂಕ್ 3.25- 5.5%

ಐಡಿಎಫ್ ಸಿ ಫಸ್ಟ್ ಬ್ಯಾಂಕ್ 6- 7%

ಇಂಡಸ್ ಇಂಡ್ ಬ್ಯಾಂಕ್ 4- 6%

ಲಕ್ಷ್ಮೀವಿಲಾಸ್ ಬ್ಯಾಂಕ್ 3.25- 6%

ಆರ್ ಬಿಎಲ್ ಬ್ಯಾಂಕ್ 5- 6.75%

ಸೌತ್ ಇಂಡಿಯನ್ ಬ್ಯಾಂಕ್ 2.35- 4.6%

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ 4- 6.5%

ಯೆಸ್ ಬ್ಯಾಂಕ್ 4- 6%

(ಎಲ್ಲವೂ ವಾರ್ಷಿಕ ಬಡ್ಡಿ ದರ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+