ಕ್ರೆಡಿಟ್ ಸ್ಕೋರ್ ಇಲ್ವಾ? ಆದರೂ 30,000 ಸಾಲ ಸಿಗುತ್ತೆ! ಹೇಗೆ ಗೊತ್ತಾ?

ಸಾಲ (Loan) ಬೇಕು ಅಂದ್ರೆ ನಿಮ್ಮ ಕ್ರೆಡಿಟ್‌ ಹಿಸ್ಟರಿ (Credit Histroy ಚನ್ನಾಗಿ ಇರಬೇಕು. ಸಾಲ ತಗೆದುಕೊಳ್ಳುವುವಾಗ ಬ್ಯಾಂಕಿನಲ್ಲಿ ಕ್ರೆಡಿಟ್‌ ಸ್ಕೋರ್‌ ತುಂಬಾ ಮಖ್ಯವಾಗುತ್ತದೆ. ನಮ್ಮ ಜೀವನದಲ್ಲಿ ಯಾವಾಗ ಸಮಸ್ಸೆಗಳನ್ನು ಎದುರಿಸುತ್ತೇವೆ ಎಂದು ಹೇಳಲು ಬರುವುದಿಲ್ಲ. ಸರಿಯಾದ ಸಮಯಕ್ಕೆ ಹಣ ಸಿಗದಿದ್ದರೆ ನಾವು ಎಷ್ಟೆಲ್ಲಾ ಸಮಸ್ಸೆಗಳನ್ನು ಫೇಸ್ ಮಾಡಬೇಕಾಗುತ್ತದೆ. ನಮಗೆವೈದ್ಯಕೀಯ ಬಿಲ್ ಅಥವಾ ನಿಮ್ಮ ನಿಯಮಿತ ಬಿಲ್‌ಗಳಲ್ಲಿ ಅನಿರೀಕ್ಷಿತ ಹೆಚ್ಚಳವನ್ನು ಪೂರೈಸಲು ಸಹಾಯ ಮಾಡುತ್ತದೆ.ಹಾಗಿದ್ರೆ ನಿಮಗೆ 30,000 ವೈಯಕ್ತಿಕ ಸಾಲದ ಅವಶ್ಯಕತೆ ಇದ್ದೀಯಾ..? ಕ್ರೆಡಿಟ್ ಸ್ಕೋರ್ ಇಲ್ಲದೆ ವೈಯಕ್ತಿಕ ಸಾಲ ಪಡೆಯುವುದು ಹೇಗೆ?ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ...

ಹೌದು, ಕ್ರೆಡಿಟ್ ಸ್ಕೋರ್ ಎಂಬುವುದು ತುಂಬಾ ಮುಖ್ಯವಾಗುತ್ತದೆ. ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಯಾವುದೇ ವ್ಯಕ್ತಿಗೆ ಇತರೆ ಲೋನ್‌ಗೆ ಹೋಲಿಸಿದ್ರೆ, ಪರ್ಸನಲ್ ಲೋನ್‌ಗೆ ಹೆಚ್ಚಿನ ಡಾಕ್ಯುಮೆಂಟ್‌ ಇಲ್ಲದೆ ಪರ್ಸನಲ್ ಲೋನ್‌ ನೀಡುತ್ತವೆ. ಆದರೆ, ಎರಡು ವಿಷಯಗಳನ್ನು ಪರಿಶೀಲಿಸಿದ ನಂತರ ಸಾಲ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುತ್ತಾರೆ. ಇವುಗಳಲ್ಲಿ ಮೊದಲ ಮತ್ತು ಪ್ರಮುಖವಾದದ್ದು ಕ್ರೆಡಿಟ್ ಸ್ಕೋರ್ ಎಂದೇ ಹೇಳಬಹುದು.

ಕ್ರೆಡಿಟ್ ಸ್ಕೋರ್ ಇಲ್ವಾ? ಆದರೂ 30,000 ಸಾಲ ಸಿಗುತ್ತೆ!

ನಿಮಗೆ ಈ ಅವಕಾಶ ಬೇರೆಯವರ ಕೈಗೆ ಸೇರುವ ಮೊದಲು ಪಡೆದುಕೊಳ್ಳಿ. ಆದ್ದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾದಾಗ ನೀವು ಏನು ಮಾಡುತ್ತೀರಿ, ಅಥವಾ ನಿಮ್ಮ ಬಳಿ ಯಾವುದೇ ದಾಖಲೆಯನ್ನು ಹೊಂದಿಲ್ಲ ಅಂದರೆ ಚಿಂತೆ ಮಾಡುವ ಅವಶ್ಯಕೆ ಇರುವುದಿಲ್ಲ.ನಿಮಗೆ ಅಗತ್ಯವಿರುವ ಹಣವನ್ನು ಸುರಕ್ಷಿತವಾಗಿರಿಸಲು ನೀವು ಕೆಲವೊಂದು ಅಂಶಗಳನ್ನು ಗಮನದಲಿಟ್ಟುಕೊಂಡು ಕೇಳುಬೇಕಾಗುತ್ತದೆ.

ವೈಯಕ್ತಿಕ ಸಾಲಗಳು ಕೆಲವು ಅಗತ್ಯ ಬಳಕೆಗಳಿಗೆ ರಜೆ, ಸಾಲ ತೀರಿಸುವುದಕ್ಕೆ ಮನೆಗಳಿಗೆ ಸುಧಾರಣೆಗಳನ್ನು ಮಾಡುವುದು ವೈದ್ಯಕೀಯ ಬಿಲ್‌ಗಳನ್ನು ಪಾವತಿಸುವುದು ಮತ್ತು ಅಗತ್ಯವಿರುವ ಇತರ ವಸ್ತುಗಳನ್ನು ತಗೆದುಕೊಳ್ಳಲು ವೈಯತ್ತಿಕ ಸಾಲದ ಮೋರೆ ಹೋಗುತ್ತಾರೆ. ಆದರೆ ಸಾಲದಾತರು ನಿಮ್ಮ ಆದಾಯದ ಆಧಾರದ ಮೇಲೆ ಮರುಪಾವತಿ, ವಿಶ್ವಾಸಾರ್ಹತೆ ಮತ್ತು ಪಾವತಿಸುವ ಸಾಮರ್ಥ್ಯದ ಆಧಾರದ ಮೇಲೆ ನಿಮ್ಮ ಯೋಗ್ಯತೆಯನ್ನು ಮೌಲ್ಯಮಾಪನ ಮಾಡಿ ಸಾಲವನ್ನು ನೀಡುತ್ತೇನೆ.

ತ್ವರಿತ ವೈಯಕ್ತಿಕ ಸಾಲ

ತ್ವರಿತ ವೈಯಕ್ತಿಕ ಸಾಲಗಳನ್ನು ಸಾಲ ಕೊಡವವರು ಕೆಲವು ನಿಮಿಷಗಳು ಅಥವಾ ಗಂಟೆಗಳಲ್ಲಿ ಸಾಲವನ್ನು ಕೊಡುತ್ತಾರೆ. ಈ ಸಾಲವನ್ನು ಪಡೆಯಲಿ ಕಡಿಮೆ ದಾಖಲೆಗಳ ಅವಶ್ಯಕತೆ ಮಾತ್ರ ಇರುವುದು. ಕಡಿಮೆ ಅವಧಿಯಲ್ಲಿ ಆರ್ಥಿಕ ತುರ್ತುಗಳನ್ನು ನಿರ್ಭಾಹಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಆದರೆ, ಇತರರಿಗೆ ಹೋಲಿಸಿದರೆ ಇದರಲ್ಲಿ ಹೆಚ್ಚಿನ ಬಡ್ಡಿ ಇರುತ್ತದೆ.

ನೀವು ಉತ್ತಮ ಕ್ರೆಡಿಟ್ ಹಿಸ್ಟರಿ ಅಥವಾ ಸ್ಕೋರ್ ಹೊಂದಿಲ್ಲದಿದ್ದರೆ ನೀವು ಮಾಡಬಹುದಾದ ನಾಲ್ಕು ವಿಷಯಗಳನ್ನು ಯಾವುವು ಎಂಬುವುದನ್ನು ನಾವು ಈ ಕೆಳಗಿನಂತೆ ತಿಳಿಯೋಣ ಬನ್ನಿ...

1. ಗ್ಯಾರಂಟರ್: ನಿಮ್ಮ ಕ್ರೆಡಿಟ್ ಅನ್ನು ದೃಢೀಕರಿಸಲು ಸಿದ್ಧರಿರುವ ಕ್ರೆಡಿಟ್ ಯೋಗ್ಯ ವ್ಯಕ್ತಿಯನ್ನು ನೀವು ಹೊಂದಿದ್ದರೆ ಸಾಲಕ್ಕೆ ನಿಮ್ಮ ಅನುಮೋದನೆಯನ್ನು ಪಡೆಯುವ ಸಾಧ್ಯತೆಗಳನ್ನು ಹೆಚ್ಚಿಸಬಹುದು. ಗ್ಯಾರಂಟಿ ಎನ್ನುವುದು ಸುರಕ್ಷತಾ ನಿವ್ವಳದಂತಿದ್ದು ಅದು ಸಾಲದಾತನಿಗೆ ನೀವು ಮರುಪಾವತಿ ಮಾಡುವುದಾಗಿ ಭರವಸೆ ಕೊಡುತ್ತದೆ.

2. ಆದಾಯ: ಕ್ರೆಡಿಟ್ ಸ್ಕೋರ್ ಬದಲಿಗೆ , ಸಾಲದಾತರು ಸ್ಥಿರ ಆದಾಯದ ಪುರಾವೆಗಳನ್ನು ಬಳಕೆ ಮಾಡಿಕೊಳ್ಳಬಹುದು. ಸಾಲವನ್ನು ಮರುಪಾವತಿ ಮಾಡುವ ಸಾಮರ್ಥ್ಯವನ್ನು ನೀವು ಹೊಂದಿದ್ದೀರಿ ಎಂದು ಸಾಬೀತುಪಡಿಸಲು ನಿಮ್ಮ ಆದಾಯ ತೆರಿಗೆ ರಿಟರ್ನ್ಸ್, ಬ್ಯಾಂಕ್ ದಾಖಲೆಗಳು ಅಥವಾ ಪೇ ಸ್ಟಬ್‌ಗಳನ್ನು ಸಹ ಬಳಕೆ ಮಾಡಿಕೊಳ್ಳಬಹುದು.

3. ಮೇಲಾಧಾರ: ಆಸ್ತಿಯನ್ನು ಮೇಲಾಧಾರವಾಗಿ ನೀಡಿ, ಅದು ರಿಯಲ್ ಎಸ್ಟೇಟ್ ಅಥವಾ ಚಿನ್ನದಂತಹದ್ದಾಗಿರಬಹುದು. ಏಕೆಂದರೆ ಸಾಲದಾತನು ತನಗೆ ಅಥವಾ ಅವಳಿಗೆ ಅಗತ್ಯವಿದ್ದಲ್ಲಿ ಐಟಂ ಅನ್ನು ಮಾರಾಟ ಮಾಡುವ ಮೂಲಕ ತನ್ನ ಹಣವನ್ನು ಮರುಪಡೆಯಬಹುದಾದ ಅವಕಾಶಗಳು ಇರುತ್ತೇವೆ.

4. NH ಸ್ಥಿತಿ: ಕ್ರೆಡಿಟ್ ಇತಿಹಾಸವಿಲ್ಲ ಟ್ಯಾಗ್ (NH) ಅನ್ನು ತೋರಿಸುವ ಕ್ರೆಡಿಟ್ ವರದಿಯನ್ನು ರಚಿಸಿ ಅಂದರೆ ನೀವು ಎಂದಿಗೂ ಸಾಲಕ್ಕಾಗಿ ಅರ್ಜಿ ಸಲ್ಲಿಸಿಲ್ಲ ಅಥವಾ ಕ್ರೆಡಿಟ್ ಕಾರ್ಡ್‌ಗೆ ಸೈನ್ ಅಪ್ ಮಾಡಿಲ್ಲ.

ತ್ವರಿತ ವೈಯಕ್ತಿಕ ಸಾಲದ ವೈಶಿಷ್ಟ್ಯಗಳೇನು?

ತ್ವರಿತ ಅನುಮೋದನೆ: ನಿಮ್ಮಗೆ ಐದು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಸಾಲವನ್ನು ಅನುಮೋದಿಸಬಹುದು.

ತ್ವರಿತ ವಿತರಣೆ: ಒಂದು ದಿನಕ್ಕಿಂತ ಕಡಿಮೆ ಅವಧಿಯಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣವನ್ನು ಕ್ರೆಡಿಟ್ ಮಾಡುತ್ತದೆ.

ನಿಮ್ಮ ಮರುಪಾವತಿ ದಿನಾಂಕಗಳನ್ನು ಬದಲಾಯಿಸಿ: ನಿಮ್ಮ ಬಜೆಟ್‌ಗೆ ಅನುಗುಣವಾಗಿ 96 ತಿಂಗಳ ನಡುವೆ ಯಾವುದೇ ಮರುಪಾವತಿ ದಿನಾಂಕವನ್ನು ಆಯ್ಕೆಮಾಡಿ ಕೊಳ್ಳುವ ಅವಕಾಶವಿರುತ್ತದೆ.

ವಿನಂತಿಯ ಮೇರೆಗೆ ಹಿಂಪಡೆಯಿರಿ: ಹಣವನ್ನು ಪಡೆಯುವಾಗ ಬಳಸಿದ ಮೊತ್ತಕ್ಕೆ ಬಡ್ಡಿಯನ್ನು ಮಾತ್ರ ಪಾವತಿಸಬೇಕಾಗುತ್ತದೆ.

30,000 ತ್ವರಿತ ವೈಯಕ್ತಿಕ ಸಾಲಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ?

ಹಂತ 1: ನಿಮ್ಮ ಬ್ಯಾಂಕ್ ಅಥವಾ ಯಾವುದೇ ಇತರ ಹಣಕಾಸು ಸಂಸ್ಥೆಯ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ಗೆ ಹೋಗಿ.

ಹಂತ 2: ನಂತರ ತ್ವರಿತ ವೈಯಕ್ತಿಕ ಸಾಲ ಆಯ್ಕೆಮಾಡಿ.

ಹಂತ 3: ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ ಮತ್ತು OTP ಬಳಸಿಕೊಂಡು ಅದನ್ನು ಪರಿಶೀಲಿಸಿ.

ಹಂತ 4: ನಿಮ್ಮ ಉದ್ಯೋಗ, ಆದಾಯ ಮತ್ತು KYC ಕುರಿತು ಮಾಹಿತಿಯನ್ನು ಭರ್ತಿ ಮಾಡಿ.

ಹಂತ 5: ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

ಹಂತ 6: ಸಾಲದಾತರು ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತಾರೆ.

ಹಂತ 7: ಒಮ್ಮೆ ಅನುಮೋದನೆಗೊಂಡ ನಂತರ ಸಾಲದ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.

ಕ್ರೆಡಿಟ್ ಸ್ಕೋರ್ ಇಲ್ಲದೆ 30,000 ಸಾಲವನ್ನು ಪಡೆಯುವುದು ತುಂಬಾ ಸುಲಭ ಆದರೆ ಸಾಲವನ್ನು ನೀವು ಅಂತಿಮಗೊಳಿಸುವ ಮೊದಲು ಬಡ್ಡಿ ದರಗಳು, ಮರುಪಾವತಿಯ ನಿಯಮಗಳು ಮತ್ತು ಸಾಲಕ್ಕೆ ಸಂಬಂಧಿಸಿದ ಯಾವುದೇ ಹೆಚ್ಚುವರಿ ವೆಚ್ಚಗಳನ್ನು ಮೌಲ್ಯಮಾಪನ ಮಾಡಿ ಮುಂದಿನ ಹೆಜ್ಜೆ ಇಡಿ ಯಾಕೆಂದರೆ ವೈಯಕ್ತಿಕ ಸಾಲಗಳು ಯಾವಾಗಲೂ ಹೆಚ್ಚಿನ ಬಡ್ಡಿದರವನ್ನು ಹೊಂದಿರುವುದರಿಂದ ಸಾಲವನ್ನು ಮರುಪಾವತಿಸಲು ನೀವು ಮರುಪಾವತಿ ಯೋಜನೆಯನ್ನು ನೀವು ಹೊಂದಿರಬೇಕಾಗುತ್ತದೆ. ನೀವು ಯಾವಗಲ್ಲೂಪರ್ಸನಲ್ ಲೋನ್‌ಗಳು ಹೆಚ್ಚಿನ ಬಡ್ಡಿದರಗಳನ್ನು ಹೊಂದಿರುತ್ತವೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡ ಸಾಲವನ್ನು ತಗೆದುಕೊಳ್ಳಬೇಕೋ ಇಲ್ಲವೂ ಎಂಬುವುದನ್ನು ಯೋಜನೆ ಮಾಡಿ ಸಾಲ ತಗೆದುಕೊಳ್ಳುಲು ಯೋಚನೆ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+