Personal loan: ನೀವೇನಾದ್ರೂ ಪರ್ಸನಲ್ ಲೋನ್ ತಗೋಬೇಕು ಅಂದುಕೊಂಡಿದ್ದೀರಾ? ಹಾಗಿದ್ರೆ ಈ ಸುದ್ದಿ ನಿಮಗಾಗಿ. ಹೌದು,ಇತ್ತೀಚಿನ ದಿನಮಾನಗಳಲ್ಲಿ ನಿಮ್ಮಗೆ ವೈಯಕ್ತಿಕ ಸಾಲವು ಬಹಳ ಸುಲಭವಾಗಿ ಸಿಗುತ್ತದೆ.ಆದರೆ ನೀವು ಕೆಲವೊಂದು ಮಾನದಂಡವನ್ನು ಅನುಸರಿಸಬೇಕಾಗುತ್ತದೆ. ತುರ್ತು ಪರಿಸ್ಥಿತಿಯಲ್ಲಿ ತತ್ ಕ್ಷಣದಲ್ಲಿ ನೆನಪು ಆಗುವುದು ಪರ್ಸನಲ್ ಲೋನ್... ಅದರಲ್ಲೂ ನೀವು ಕಡಿಮೆ ಸ್ಯಾಲರಿಯನ್ನು ಹೊಂದಿದ್ದರೆ ವೈಯಕ್ತಿಕ ಸಾಲವನ್ನು ಪಡೆಯುವುದು ಹೇಗೆ..? ಕೇವಲ 20 ಸಾವಿರ ಸ್ಯಾಲರಿ ಇದ್ರೆ ಸಾಲ ಪಡೆಯಲು ಏನು ಮಾಡಬೇಕು..? ಅರ್ಜಿ ಸಲ್ಲಿಸುವ ವಿಧಾನವೇನು..? ಎಂವ ಹೆಚ್ಚಿನ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ ಬನ್ನಿ....
ಹೌದು,ನೀವು ವೈಯತ್ತಿಕ ಸಾಲವನ್ನು ಪಡೆಯಲು ಯಾವುದೇ ವಸ್ತುಗಳನ್ನು ಒತ್ತೆಯಾಗಿ ಇಡಬೇಕಾಗಿಲ್ಲ.. ಇದಕ್ಕಾಗಿ ಕೆಲವೊಂದು ಮಾನದಂಡವನ್ನು ಅನುಸರಿಸಬೇಕಾಗುತ್ತದೆ ಅಷ್ಟೇ.. ನಿಮ್ಮ ಜೀವದಲ್ಲಿ ತುರ್ತು ಪರಿಸ್ಥಿತಿಗಳು ಯಾವ ಸಮಯದಲ್ಲಿ ಬೇಕಾದರೂ ಬರಬಹುದು, ವೈದ್ಯಕೀಯ ಬಿಲ್‌ಗಳು, ಮನೆ ದುರಸ್ತಿ ಅಥವಾ ತುರ್ತು ಖರೀದಿಗಳಂತಹ ವೆಚ್ಚಗಳು ಆಗಬಹುದು ಇದನೆಲ್ಲಾ ನಿಭಾಹಿಸಲು ನೀವು ತಿಂಗಳ ಸಂಬಳಕ್ಕಾಗಿ ಕಾಯುವಂತಹ ಅಗತ್ಯವಿಲ್ಲ. ಏಕೆಂದರೆ ವೈಯತ್ತಿಕ ಸಾಲಗಳನ್ನು ನೀಡಲು ಎಷ್ಟೋಂದು ಆ್ಯಪ್‌ಗಳು ಬ್ಯಾಂಕ್‌ಗಳು,ಹಣಕಾಸು ಸಂಸ್ಥೆಗಳುತಾ ಮುಂದು ನಾ ಮುಂದು ಸಾಲ ಕೊಡಲು ಬರುತ್ತೇವೆ. ಆದರೆ ನೀವು ಇವರು ನೀಡುವಂತಹ ಮಾಹಿತಿಯನ್ನು ಎಚ್ಚರದಿಂದ ಗಮನವರಿಸುವುದು ಒಳಿತು.

ಅನೇಕ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಾಧಾರಣ ಸಂಬಳ ಪಡೆಯುವವರಿಗೂ ವೈಯಕ್ತಿಕ ಸಾಲಗಳನ್ನು ನೀಡುತ್ತವೆ. ಇದನ್ನು ಪಡೆಯಲು ಮೇಲಾಧಾರ ಅಗತ್ಯವಿಲ್ಲ,ಆದರೆ ಅರ್ಹತೆಯು ಆದಾಯ ಸ್ಥಿರತೆ, ಕ್ರೆಡಿಟ್ ಸ್ಕೋರ್ ಮತ್ತು ನಿಮ್ಮ ಉದ್ಯೋಗದಾತರ ಪ್ರೊಫೈಲ್‌ನಂತಹ ಅಂಶಗಳನ್ನು ಒಳಗೊಂಡಿದ್ಧಾರೆ ಮಾತ್ರ ನಿಮ್ಮಗೆ ಸಾಲ ಸಿಗುತ್ತದೆ.
2,000 ರೂಪಾಯಿ ಸಂಬಳ ಇದ್ದರೆ ಯಾವ ಬ್ಯಾಂಕ್‌ಗಳು ವೈಯಕ್ತಿಕ ಸಾಲವನ್ನು ನೀಡುತ್ತವೆ..? ಮಾನದಂಡಗಳು ಏನು?
20,000 ರೂಪಾಯಿ ಸಂಬಳಕ್ಕೆ ವೈಯಕ್ತಿಕ ಸಾಲದ ಅರ್ಹತೆಯನ್ನು ಅರ್ಥಮಾಡಿಕೊಳ್ಳುವುದು ನಿಮ್ಮ ಮುಖ್ಯವಾಗುತ್ತದೆ.
ವೈಯಕ್ತಿಕ ಸಾಲವು ಒಂದು ರೀತಿಯ ಅಸುರಕ್ಷಿತ ಸಾಲವಾಗಿದೆ, ಅಂದರೆ ನೀವು ಯಾವುದೇ ಆಸ್ತಿಯನ್ನು ಮೇಲಾಧಾರವಾಗಿ ನೀಡಬೇಕಾಗಿಲ್ಲ.ಯಾವುದೇ ಕಾಗದಪತ್ರಗಳು ಮತ್ತು ಕಡಿಮೆ ಸಂಸ್ಕರಣಾ ಶುಲ್ಕದೊಂದಿಗೆ, ನೀವು ಹಣವನ್ನು ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ತ್ವರಿತವಾಗಿ ವರ್ಗಾಯಿಸಬಹುದು.
ವೈಯತ್ತಿಕ ಸಾಲಕ್ಕೆಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಸರಳ ರೀತಿಯಲ್ಲಿ ಇದೆ. ಇದರಲ್ಲಿ ನಿಮ್ಮ ವಿವರಗಳನ್ನು ನಮೂದಿಸಿ, KYC ಪರಿಶೀಲನೆಯನ್ನು ಪೂರ್ಣಗೊಳಿಸಿ ಮತ್ತು ನಿಮ್ಮ EMI ಮರುಪಾವತಿ ಯೋಜನೆಯನ್ನು ಹೊಂದಿಸಬೇಕಾಗುತ್ತದೆ.
ಮಾನದಂಡಗಳೇನು..?
20,000 ರೂಪಾಯಿ ಸಂಬಳದಿಂದ ನೀವು ಪಡೆಯಬಹುದಾದ ಮೊತ್ತವು, ನಿಮ್ಮ ಅರ್ಜಿಯನ್ನು ಅನುಮೋದಿಸುವ ಮೊದಲು ಬ್ಯಾಂಕುಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು (NBFC ಗಳು) ಮೌಲ್ಯಮಾಪನ ಮಾಡುವ ಹಲವಾರು ಅಂಶಗಳನ್ನು ಒಳಗೊಂಡಿರುತ್ತದೆ.
ಕನಿಷ್ಠ ವೇತನ ಇರಬೇಕು
ಹೆಚ್ಚಿನ ಬ್ಯಾಂಕುಗಳು ವೈಯಕ್ತಿಕ ಸಾಲಗಳಿಗೆ ಕನಿಷ್ಠ ಮಾಸಿಕ ವೇತನದ ಅವಶ್ಯಕತೆ ಇರುತ್ತದೆ.ಇದಕ್ಕೆ ಆದಾಯ ಮಿತಿಯನ್ನು ನಿಗದಿಪಡಿಸುತ್ತವೆ. ಕೆಲವು ಬ್ಯಾಂಕುಗಳು ಕನಿಷ್ಠ 25,000ರೂ ನಿಂದ 30,000 ರೂ ವರೆಗೆ ಕೇಳಿದರೆ, ಇನ್ನು ಕೆಲವು ಬ್ಯಾಂಕುಗಳು 20,000 ರೂ.ಗಳವರಿಗೆ ಸಾಲ ನೀಡುತ್ತವೆ, ವಿಶೇಷವಾಗಿ ಅವರು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೆ ಅಥವಾ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ ಅವರಿಗೆ ವೈಯತ್ತಿಕ ಸಾಲ ಸಿಗುತ್ತದೆ.
ಕ್ರೆಡಿಟ್ ಸ್ಕೋರ್
ಕ್ರೆಡಿಟ್ ಸ್ಕೋರ್ ಸಾಲ ಅನುಮೋದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 750 ಅಥವಾ ಅದಕ್ಕಿಂತ ಹೆಚ್ಚಿನ ಸ್ಕೋರ್ ಸಾಲದ ಅನುಮೋದನೆಗೆ ಬೇಕಾಗುತ್ತದೆ.ಕ್ರೆಡಿಟ್ ಸ್ಕೋರ್ ಕಡಿಮೆಯಾದರೆ ಸಾಲದಾತರು ಕಡಿಮೆ ಸಾಲದ ಮೊತ್ತವನ್ನು ನೀಡಬಹುದು ಅಥವಾ ಹೆಚ್ಚಿನ ಬಡ್ಡಿದರಗಳನ್ನು ವಿಧಿಸಬಹುದು.
ಉದ್ಯೋಗ ಸ್ಥಿರತೆ: ಬ್ಯಾಂಕುಗಳು ಪ್ರತಿಷ್ಠಿತ ಕಂಪನಿಗಳು, ಸರ್ಕಾರಿ ಸಂಸ್ಥೆಗಳು ಅಥವಾ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಸಂಬಳ ಪಡೆಯುವ ಅರ್ಜಿದಾರರನ್ನು ಆದ್ಯತೆ ನೀಡುತ್ತವೆ. ನೀವು ಕನಿಷ್ಠ ಒಂದು ವರ್ಷದ ಕೆಲಸದ ಅನುಭವವನ್ನು ಹೊಂದಿರಬೇಕು ಮತ್ತು ನಿಮ್ಮ ಪ್ರಸ್ತುತ ಕೆಲಸದಲ್ಲಿ ಕನಿಷ್ಠ ಆರು ತಿಂಗಳುಗಳ ಅನುಭವ ಹೊಂದಿರಬೇಕಾಗುತ್ತದೆ
ಸಾಲ-ಆದಾಯ ಅನುಪಾತ: ನೀವು ಯಾವುದೇ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಹೊಂದಿದ್ದರೆ, ಸಾಲದಾತರು ನಿಮ್ಮ ಸಂಬಳದ ಎಷ್ಟು ಭಾಗವನ್ನು ಈಗಾಗಲೇ ಪಾವತಿಸಲಾಗಿದೆ ಎಂಬುದನ್ನು ಪರಿಶೀಲಿಸುತ್ತಾರೆ.ನಿಮ್ಮ ಒಟ್ಟು ಇಎಂಐ ಬಾಧ್ಯತೆಗಳು ನಿಮ್ಮ ನಿವ್ವಳ ಆದಾಯದ 40% ರಿಂದ 50% ಮೀರಬಾರದು.
20,000 ಸಂಬಳಕ್ಕೆ ವೈಯಕ್ತಿಕ ಸಾಲ ನೀಡುವ ಬ್ಯಾಂಕ್‌ಗಳು
20,000 ರೂ. ಮಾಸಿಕ ವೇತನ ಹೊಂದಿರುವವರಿಗೆ ವೈಯಕ್ತಿಕ ಸಾಲಗಳನ್ನು ನೀಡುವ ಕೆಲವು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಇಲ್ಲಿವೆ:
ಆಕ್ಸಿಸ್ ಬ್ಯಾಂಕ್: ಕನಿಷ್ಠ ವೇತನ ಅವಶ್ಯಕತೆ 15,000 ರೂ.ಗಳು
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ದೆಹಲಿ, ಮುಂಬೈ, ಪುಣೆ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಅಹಮದಾಬಾದ್‌ನಂತಹ ಮಹಾನಗರಗಳಿಗೆ ಕನಿಷ್ಠ ವೇತನ 20,000.ರೂ.ಗಳು ಆಗಿರುತ್ತದೆ. ಇತರ ನಗರಗಳಲ್ಲಿ, ಅರ್ಜಿದಾರರು ಅರ್ಹತೆ ಪಡೆಯಲು ಕನಿಷ್ಠ ಒಟ್ಟು ವೇತನ 15,000 ಹೊಂದಿರಬೇಕು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI): ಆಯ್ದ ನಗರಗಳಲ್ಲಿ ಕನಿಷ್ಠ 15,000 ರೂ. ಮತ್ತು ಇತರ ನಗರಗಳಲ್ಲಿ 20,000 ರೂ. ಸಂಬಳ ಹೊಂದಿರುವ ಜನರಿಗೆ ವಿವಿಧ ಅಗತ್ಯಗಳನ್ನು ಪೂರೈಸಲು SBI ವೈಯಕ್ತಿಕ ಸಾಲಗಳನ್ನು ನೀಡುತ್ತದೆ.
ಟಾಟಾ ಕ್ಯಾಪಿಟಲ್: ಕನಿಷ್ಠ 15,000 ರೂ. ಮಾಸಿಕ ಆದಾಯದೊಂದಿಗೆ ವೈಯಕ್ತಿಕ ಸಾಲವನ್ನು ನೀಡಲಾಗುತ್ತದೆ.
ನೀವು ಎಲ್ಲಿ ಸಾಲ ಪಡೆಯಬೇಕಾದರೂ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನೀವು ಸಾಲವನ್ನು ಎಚ್ಚರಿಯಿಂದ ಪಡೆದುಕೊಳ್ಳಬೇಕಾಗುತ್ತದೆ.


Click it and Unblock the Notifications