Personal Loan: ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ, ಎಷ್ಟು EMI?
ತಕ್ಷಣಕ್ಕೆ ಹಣದ ಅಗತ್ಯ ಬಂದಾಗ ಪರ್ಸನಲ್ ಲೋನ್ ಕಡೆಗೆ ಮನಸ್ಸು ಜಗ್ಗುತ್ತದೆ. ನಾಳಿನ ಆದಾಯವನ್ನು ಇಂದೇ ಬಳಸುವ ಒಂದು ಮಾರ್ಗ ಅಂದರೆ, ಅದು ಪರ್ಸನಲ್ ಲೋನ್. ಪಡೆಯುವುದು ಬಹಳ ಸಲೀಸು. ಆದರೆ ಉಳಿದ ಸಾಲಕ್ಕೆ ಹೋಲಿಸಿದರೆ ಬಡ್ಡಿ ದರ ಜಾಸ್ತಿ. ಏಕೆಂದರೆ, ಯಾವುದೇ ಆಸ್ತಿಯನ್ನು ಅಡಮಾನ ಇಡದೆ ನೀಡುವಂಥ ಅನ್ ಸೆಕ್ಯೂರ್ಡ್ ಲೋನ್ ಇದು.
ಒಬ್ಬ ವ್ಯಕ್ತಿಯ ಆದಾಯ, ಸಾಲ ಮರುಪಾವತಿ ಸಾಮರ್ಥ್ಯ ಮತ್ತಿತರ ಅಂಶಗಳು ಮುಖ್ಯವಾಗುತ್ತವೆ. ಪರ್ಸನಲ್ ಲೋನ್ ಬಡ್ಡಿ ದರ ಹೆಚ್ಚು ಅನ್ನೋದು ಒಂದು ಕಡೆ ಆಯಿತು. ನಿರಂತರವಾಗಿ ಸಾಲ ಮರುಪಾವತಿ ಮಾಡದೇ ಇದ್ದಲ್ಲಿ ಅದರ ಪರಿಣಾಮ ಕೂಡ ಅಷ್ಟೇ ಭಯಂಕರವಾಗಿರುತ್ತದೆ.
54 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಕುಗ್ಗಿದ ಬ್ಯಾಂಕ್ ಸಾಲ ನೀಡಿಕೆ
ಒಂದು ಲಕ್ಷ ರುಪಾಯಿ ಮೊತ್ತ, ಐದು ವರ್ಷದ ಅವಧಿಗೆ ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿ ಹಾಗೂ ಎಷ್ಟು ಇಎಂಐ ಎಂಬ ಮಾಹಿತಿ ಇಲ್ಲಿದೆ.
ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ 8.35- 10.20, 2044- 2135
ಕೆನರಾ ಬ್ಯಾಂಕ್ 8.50- 13.90, 2052- 2322
ಐಡಿಬಿಐ ಬ್ಯಾಂಕ್ 8.80- 11.55, 2066- 2202
ಪಂಜಾಬ್ ನ್ಯಾಷನಲ್ ಬ್ಯಾಂಕ್ 8.95- 11.80, 2073- 2214
ಇಂಡಿಯನ್ ಬ್ಯಾಂಕ್ 9.20- 13.65, 2086- 2309
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 9.30- 13.40, 2090- 2296
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 9.60- 15.65, 2105- 2413
ಇಂಡಿಯನ್ ಓವರ್ ಸೀಸ್ ಬ್ಯಾಂಕ್ 10- 12.45, 2125- 2247
ಬ್ಯಾಂಕ್ ಆಫ್ ಬರೋಡಾ 10.25- 15.60, 2137- 2411
ಬ್ಯಾಂಕ್ ಆಫ್ ಇಂಡಿಯಾ 10.35- 12.35, 2142- 2242
ಯುಕೋ ಬ್ಯಾಂಕ್ 10.40- 10.65, 2144- 2157
ಎಚ್ ಡಿಎಫ್ ಸಿ ಬ್ಯಾಂಕ್ 10.75- 21.30, 2162- 2722
ಆಕ್ಸಿಸ್ ಬ್ಯಾಂಕ್ 10.75- 22, 2162- 2762
ಕೊಟಕ್ ಮಹೀಂದ್ರಾ ಬ್ಯಾಂಕ್ 10.75- 24, 2162- 2877
ಬ್ಯಾಂಕ್ ಆಫ್ ಮಹಾರಾಷ್ಟ್ರ 10.85- 11.85, 2167- 2217