ಅರ್ಜೆಂಟ್ ದುಡ್ಡು ಬೇಕಾ? ಹಾಗಿದ್ದರೆ ತಪ್ಪದೇ ಈ ಸುದ್ದಿಯನ್ನು ಓದಿ. ಹೌದು, ಇತ್ತೀಚಿನ ದಿನಗಳಲ್ಲಿ ಹಣಕಾಸಿನ ತುರ್ತು ಪರಿಸ್ಥಿತಿಗಳು ಪ್ರತಿಯೊಬ್ಬರಿಗೂ ಎದುರಾಗುವುದು ಸರ್ವೇಸಾಮಾನ್ಯವಾಗಿದೆ. ನಮ್ಮ ಜೀವನದಲ್ಲಿ ಅನಿರೀಕ್ಷಿತವಾಗಿ ಆರೋಗ್ಯ ಸಮಸ್ಯೆಗಳು, ಮದುವೆ ಖರ್ಚು, ಮನೆಯ ರಿಪೇರಿ ಅಥವಾ ಮಕ್ಕಳ ವಿದ್ಯಾಭ್ಯಾಸದಂತಹ ಅಗತ್ಯಗಳಿಗೆ ಹಣದ ಅವಶ್ಯಕತೆ ಬೀಳಬಹುದು. ಈ ಸಮಯದಲ್ಲಿ ವೈಯಕ್ತಿಕ ಸಾಲಗಳು, ಚಿನ್ನದ ಸಾಲ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕ ಹಣ ಪಡೆಯುವ ಅವಕಾಶಗಳಿವೆ. ನೀವು ಕ್ರೆಡಿಟ್ ಕಾರ್ಡ್, ಚಿನ್ನದ ಸಾಲ ಅಥವಾ ಮನೆ ಸಾಲಗಳಿಗೆ ಹೋಲಿಸಿದರೆ ವೈಯಕ್ತಿಕ ಸಾಲಗಳು ಹಲವಾರು ರೀತಿಯಲ್ಲಿ ಅನುಕೂಲಕರವಾಗಿವೆ. ಹಾಗಿದ್ದರೆ ಕ್ರೆಡಿಟ್ ಕಾರ್ಡ್, ಗೋಲ್ಡ್ ಲೋನ್‌ಗಿಂತ ಪರ್ಸನಲ್ ಲೋನ್ ಯಾಕೆ ಬೆಸ್ಟ್? ಇಲ್ಲಿದೆ ನೋಡಿ ವಿವರ
ನಿಮ್ಮಗೆ ವೈಯಕ್ತಿಕ ಸಾಲಗಳು ಬಹುಬೇಗನೆ ಸಿಗುತ್ತದೆ. ಇದಕ್ಕೆ ಅವಶ್ಯಕವಾದ ದಾಖಲೆಗಳನ್ನು ನೀಡದ್ದರೆ
ಸಾಮಾನ್ಯವಾಗಿ 24 ರಿಂದ 48 ಗಂಟೆಗಳಲ್ಲಿ ಸಾಲ ಸಿಗುತ್ತದೆ. ಮನೆ ಸಾಲ ಮತ್ತು ಶಿಕ್ಷಣ ಸಾಲಗಳಿಗೆ ಹೋಲಿಸಿದರೆ, ವೈಯಕ್ತಿಕ ಸಾಲಗಳು ಕಡಿಮೆ ಸಮಯದಲ್ಲಿ ಸಿಗುತ್ತವೆ. ಅಲ್ಲದೆ, ಇದು ಸಿಗುವ ಸಾಧ್ಯತೆ ಕೂಡ ಹೆಚ್ಚು. ಹೀಗಾಗಿ ತುರ್ತು ಪರಿಸ್ಥಿತಿಗಳಿಗೆ ಈ ಆಯ್ಕೆಗೆ ಸೂಕ್ತವಾಗಿದೆ.

ವೈಯಕ್ತಿಕ ಸಾಲದ ಇನ್ನೊಂದು ದೊಡ್ಡ ಅನುಕೂಲವೆಮದರೆ ಈ ಹಣವನ್ನು ಯಾವುದೇ ಆರ್ಥಿಕ ಅಗತ್ಯಗಳಿಗಾಗಿ ಬಳಸಬಹುದು. ಆರೋಗ್ಯ ಸಮಸ್ಯೆಗಳು, ಪ್ರವಾಸ ಅಥವಾ ಹೆಚ್ಚಿನ ವಿದ್ಯಾಭ್ಯಾಸದ ಖರ್ಚುಗಳಿಗಾಗಿ ಇದು ಸಹಾಯ ನೀಡುತ್ತದೆ.ಆದರೆ ಮನೆ ಸಾಲ ಅಥವಾ ವಾಹನ ಸಾಲಗಳು ಕೆಲವೊಂದು ಉದ್ದೇಶಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
ವೈಯಕ್ತಿಕ ಸಾಲಗಳು ಅಸುರಕ್ಷಿತ ಸಾಲಗಳಾಗಿರುವುದರಿಂದ, ಚಿನ್ನ, ಆಸ್ತಿ ಅಥವಾ ಬೇರೆ ಯಾವುದೇ ಬೆಲೆಬಾಳುವ ವಸ್ತುಗಳನ್ನು ಅಡವಿಡುವ ಅವಶ್ಯಕತೆ ಇರುವುದಿಲ್ಲ.ಇದು ನಿಮ್ಮ ಆಸ್ತಿಯನ್ನು ಸುರಕ್ಷಿತವಾಗಿ ಇಡುತ್ತದೆ. ಆದ್ರೆ ಮೇಲಾಧಾರವಿಲ್ಲದ ಸಾಲಗಳ ಬಡ್ಡಿ ದರಗಳು ಸ್ವಲ್ಪ ಹೆಚ್ಚಾಗಿರುತ್ತವೆ ಅನ್ನೋದು ನೆನಪಿನಲ್ಲಿರಬೇಕು.
ಹೆಚ್ಚಿನ ವೈಯಕ್ತಿಕ ಸಾಲಗಳು ಸ್ಥಿರ ಬಡ್ಡಿ ದರಗಳನ್ನು ಹೊಂದಿರುತ್ತದೆ. ಇದರಿಂದಾಗಿ ಪ್ರತಿ ತಿಂಗಳು ಕಟ್ಟಬೇಕಾದ ಇಎಂಐ ಮೊತ್ತ ಒಂದೇ ಆಗಿರುತ್ತದೆ. ಇದು ಬಜೆಟ್ ಹಾಕಲು ಸಹಾಯ ಮಾಡುತ್ತದೆ. ಕ್ರೆಡಿಟ್ ಕಾರ್ಡ್‌ಗಳ ಬಡ್ಡಿ ದರಗಳು ಬದಲಾಗುತ್ತಿರುತ್ತವೆ. ಆದ್ದರಿಂದ, ವೈಯಕ್ತಿಕ ಸಾಲಗಳು ಹೆಚ್ಚು ಅನುಕೂಲಕರ. ನಿಮ್ಮ ಮಾಸಿಕ ಆದಾಯದ ಶೇಕಡಾ 40ಕ್ಕಿಂತ ಹೆಚ್ಚು ಇಎಂಐ ಇರಬಾರದು.
ನೀವು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಕಡಿಮೆ ದಾಖಲೆಗಳು ಮಾತ್ರ ಅವಶ್ಯಕತೆ ಇರುತ್ತದೆ. ನಿಮ್ಮ ವೈಯತ್ತಿಕ ಸಾಲಕ್ಕಾಗಿ ಸಾಮಾನ್ಯವಾಗಿ ಗುರುತಿನ ಚೀಟಿ, ಆದಾಯದ ಪುರಾವೆ ಮತ್ತು ವಿಳಾಸದ ದಾಖಲೆಗಳುಬೇಕಾಗಬಹುದು. ಯಾವುದೇ ಮೇಲಾಧಾರ ಪ್ರಮಾಣಪತ್ರ ಅಥವಾ ಆಸ್ತಿ ದಾಖಲೆಗಳ ಅಗತ್ಯವಿರುವುದಿಲ್ಲ.
ಸರಿಯಾದ ಸಮಯಕ್ಕೆ ಇಎಂಐಗಳನ್ನು ಪಾವತಿಸುವುದರಿಂದ ನಿಮ್ಮ ಕ್ರೆಡಿಟ್ ಹಿಸ್ಟರಿ ಕೂಡ ಉತ್ತಮವಾಗಿರುತ್ತದೆ.ಇದು ನಿಮ್ಮಗೆ ಕ್ರೆಡಿಟ್ ಸ್ಕೋರ್ ಅನ್ನು ಹೆಚ್ಚಳ ಮಾಡಲು ಸಾಧ್ಯವಾಗುತ್ತದೆ. ಇದು ಆದ ನಂತರ ಮುಂದೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ, 750ಕ್ಕಿಂತ ಹೆಚ್ಚಿನ ಸ್ಕೋರ್ ಅನ್ನು ಬ್ಯಾಂಕುಗಳು ಒಳ್ಳೆಯದು. ಉತ್ತಮ ಕ್ರೆಡಿಟ್ ಹೊಂದಿರುವವರಿಗೆ, ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ದರ ಕ್ರೆಡಿಟ್ ಕಾರ್ಡ್‌ಗಳಿಗಿಂತ ಕಡಿಮೆಯಿರುತ್ತದೆ.
ಕ್ರೆಡಿಟ್ ಕಾರ್ಡ್‌ನಿಂದ ಹಣ ತೆಗೆದರೆ ಬಡ್ಡಿ ದರ ಜಾಸ್ತಿ ಇರುತ್ತದೆ. ಸರಾಸರಿ ವಾರ್ಷಿಕ ಬಡ್ಡಿ ದರ ಶೇಕಡಾ 30 ರಿಂದ 42 ರವರೆಗೆ ಇರುತ್ತದೆ. ಆದರೆ ವೈಯಕ್ತಿಕ ಸಾಲಗಳನ್ನು ಬ್ಯಾಂಕ್ ಅಥವಾ NBFC ಗಳು ಒಂದು ನಿರ್ದಿಷ್ಟ ಅವಧಿಗೆ ಮತ್ತು ಮೊದಲೇ ನಿರ್ಧರಿಸಿದ ಬಡ್ಡಿ ದರದಲ್ಲಿ ನೀಡುತ್ತವೆ. ಈ ಬಡ್ಡಿ ದರಗಳು ಸಾಮಾನ್ಯವಾಗಿ ಶೇಕಡಾ 10 ರಿಂದ 16 ರವರೆಗೆ ಇರಬಹುದು.


Click it and Unblock the Notifications