ಬುಧವಾರ ಫೆಬ್ರವರಿ 14ರಂದು ದೇಶದಲ್ಲಿ ಕೆಲವು ನಗರಗಳಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರವು ಏರಿಕೆಯಾಗಿದೆ. ರೈತರ ಆಂದೋಲನದ ನಡುವೆ ಬುಧವಾರ ಬೆಳಗ್ಗೆ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಯುಪಿಯ ಹಲವು ನಗರಗಳಲ್ಲಿ ತೈಲ ಬೆಲೆ ಏರಿಕೆಯಾಗಿದೆ.
ಸರ್ಕಾರ ಮತ್ತು ತೈಲ ಕಂಪನಿಗಳು ಇಂದು ಪೆಟ್ರೋಲ್ ಮತ್ತು ಡೀಸೆಲ್‌ನ ಹೊಸ ಬೆಲೆಗಳನ್ನು ಬಿಡುಗಡೆ ಮಾಡಿದ್ದು, ಏರಿಕೆಯಾಗಿರುವುದನ್ನು ನಾವು ಕಾಣಬಹುದು. ಈ ನಡುವೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದುಬಾರಿಯಾಗಿದ್ದು, $ 83 ರಷ್ಟಿದೆ. ಭಾರತದಲ್ಲಿ, ಪೆಟ್ರೋಲ್ ಮತ್ತು ಡೀಸೆಲ್‌ನ ಬೆಲೆಯು ಸರಕು ಸಾಗಣೆ ಶುಲ್ಕಗಳು, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಸ್ಥಳೀಯ ತೆರಿಗೆಯು ಪ್ರಭಾವ ಬೀರುತ್ತದೆ. ಆದ್ದರಿಂದಾಗಿ ವಿಭಿನ್ನ ದರಗಳು ಬೇರೆ ಬೇರೆ ರಾಜ್ಯಗಳಲ್ಲಿ ಇರುತ್ತದೆ.

ಇಂದಿನ ಪೆಟ್ರೋಲ್ ದರ ಬದಲಾವಣೆ
ಸರ್ಕಾರಿ ತೈಲ ಕಂಪನಿಗಳ ಪ್ರಕಾರ, ಇಂದು ಪಂಜಾಬ್‌ನ ಪಟಿಯಾಲಾ ನಗರದಲ್ಲಿ ಪೆಟ್ರೋಲ್ ಬೆಲೆ 48 ಪೈಸೆಗಳಷ್ಟು ಏರಿಕೆಯಾಗಿದ್ದು, ಲೀಟರ್‌ಗೆ 98.62 ರೂಪಾಯಿ ಆಗಿದೆ. ಇಲ್ಲಿ ಡೀಸೆಲ್ ಕೂಡ 45 ಪೈಸೆ ಹೆಚ್ಚಳವಾಗಿದ್ದು, ಲೀಟರ್‌ಗೆ 88.92 ರೂ.ಗೆ ಮಾರಾಟವಾಗುತ್ತಿದೆ.
ಹರಿಯಾಣದ ಸೋನಿಪತ್ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 29 ಪೈಸೆ ಜಿಗಿದು 97.1 ರೂಪಾಯಿಗೆ ಮತ್ತು ಡೀಸೆಲ್ ಲೀಟರ್‌ಗೆ 28 ಪೈಸೆ ಹೆಚ್ಚಾಗಿ 89.99 ರೂಪಾಯಿಗಳಿಗೆ ಏರಿಕೆಯಾಗಿದೆ. ಯುಪಿಯ ಮೀರತ್ ಜಿಲ್ಲೆಯಲ್ಲಿ, ಪೆಟ್ರೋಲ್ ಬೆಲೆ 22 ಪೈಸೆ ಹೆಚ್ಚಳವಾಗಿ ಲೀಟರ್‌ಗೆ 96.63 ರೂ.ಗೆ ತಲುಪಿದೆ. ಡೀಸೆಲ್ ಲೀಟರ್‌ಗೆ 21 ಪೈಸೆ ಹೆಚ್ಚಳವಾಗಿ 89.80 ರೂ.ಗೆ ಮಾರಾಟವಾಗುತ್ತಿದೆ.
ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ
ಮುಂಬೈ: ಫೆಬ್ರವರಿ 14 ರಂದು, ಮುಂಬೈನಲ್ಲಿ ಪೆಟ್ರೋಲ್ ಬೆಲೆ 100 ರೂ.ಗಳನ್ನು ಮೀರಿದೆ, ಪ್ರತಿ ಲೀಟರ್‌ಗೆ 106.31 ರೂ.ಗೆ ತಲುಪಿದೆ, ಆದರೆ ಡೀಸೆಲ್ ಬೆಲೆ ಲೀಟರ್‌ಗೆ 94.27 ರೂಪಾಯಿ ಆಗಿದೆ.
ದೆಹಲಿ: ಫೆಬ್ರವರಿ 14 ರಂದು, ಡೀಸೆಲ್ ಬೆಲೆ ಲೀಟರ್‌ಗೆ 89.62 ರೂಪಾಯಿ ಆಗಿದ್ದು, ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 96.72 ರೂಪಾಯಿ ಆಗಿದೆ.
ಬೆಂಗಳೂರು: ಫೆಬ್ರವರಿ 14 ರಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆಯು 101.94 ರೂಪಾಯಿ ಆಗಿದೆ. ಇನ್ನು ಪ್ರತಿ ಲೀಟರ್ ಡೀಸೆಲ್ ಬೆಲೆಯು 87.89 ರೂಪಾಯಿ ಆಗಿದೆ.


Click it and Unblock the Notifications