ಲಿಕ್ವಿಡಿಟಿ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಬೇಡಿಕೆಯು ವರ್ಷಪೂರ್ತಿ ಹೆಚ್ಚಳವಾಗುತ್ತಲೇ ಇದೆ. ಅತೀ ಅಧಿಕ ಲಾಭವನ್ನು ಹೊಂದಿರುವ ವ್ಯಾಪಾರವನ್ನು ನಡೆಸಲು ನೀವು ಚಿಂತನೆ ನಡೆಸುತ್ತಿದ್ದರೆ, ಅದಕ್ಕೆ ಉತ್ತಮ ಆಯ್ಕೆ ಎಲ್‌ಪಿಜಿ ಗ್ಯಾಸ್ ಏಜೆನ್ಸಿಯನ್ನು ನಡೆಸುವುದು ಆಗಿದೆ.
ಆರಂಭಿಕ ಹೂಡಿಕೆಯು ಕೊಂಚ ಅಪಾಯಕಾರಿಯಾದರೂ ಕೂಡಾ ಆರಂಭಿಕ ಹಂತದಲ್ಲಿ ಸಾಲವನ್ನು ಪಡೆದು ವ್ಯಾಪಾರವನ್ನು ಆರಂಭ ಮಾಡಬಹುದಾಗಿದೆ. ವ್ಯವಹಾರವು ಅಭಿವೃದ್ಧಿ ಹೊಂದುತ್ತಿದ್ದಂತೆ, ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಬಹುದಾಗಿದೆ. ಈ ಎಲ್‌ಪಿಜಿ ಗ್ಯಾಸ್ ಏಜೆನ್ಸಿಯ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

4 ಗ್ಯಾಸ್ ಡಿಸ್ಟ್ರೀಬ್ಯೂಟರ್‌ಗಳ ವಿಧಗಳು
ಎಲ್‌ಪಿಜಿ ಗ್ಯಾಸ್ ಏಜೆನ್ಸಿಯನ್ನು ಸ್ಥಾಪಿಸಲು, ಆರಂಭಿಕ ಹಂತದಲ್ಲಿ ನಾಲ್ಕು ವಿಭಾಗಗಳ ವಿತರಕರ ಪ್ರಕಾರವನ್ನು ಆಯ್ಕೆಮಾಡುವುದನ್ನು ಒಳಗೊಂಡಿರುತ್ತದೆ: ನಗರ, ರೂರ್ಬನ್, ಗ್ರಾಮೀಣ ಮತ್ತು ಪ್ರಾದೇಶಿಕ ಎಂಬ ನಾಲ್ಕು ವಿಭಾಗಗಳು ಇದೆ.
ಅರ್ಜಿ ಸಲ್ಲಿಸುವ ಮೊದಲು, ಏಜೆನ್ಸಿ ಸೆಟಪ್‌ಗೆ ನಿಖರವಾದ ಸ್ಥಳವನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ. ಇದಕ್ಕಾಗಿ ನೀವು ಸಮಗ್ರ ಪ್ರದೇಶ ಸಮೀಕ್ಷೆ ನಡೆಸಿ ಸ್ಥಳವನ್ನು ಆಯ್ಕೆ ಮಾಡಬಹುದು. ಇನ್ನು ನೀವು ಆಯ್ಕೆ ಮಾಡಿದ ಸ್ಥಳ ಎಷ್ಟು ಸೂಕ್ತವಾಗಿದೆ ಎಂದು ನಿರ್ಧರಿಸಲು ಸಮೀಕ್ಷೆಯು ಅತೀ ಮುಖ್ಯವಾಗುತ್ತದೆ.
ನಿಮ್ಮ ನಿರ್ದಿಷ್ಟ ಅರ್ಹತೆ, ಇತರೆ ಮಾಹಿತಿ
* ವಯಸ್ಸು 21 ರಿಂದ 60 ವರ್ಷದೊಳಗಿರಬೇಕು.
* ಅರ್ಜಿದಾರರು ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ ಕನಿಷ್ಠ 10 ನೇ ಅಥವಾ ಎಸ್‌ಎಸ್‌ಎಲ್‌ಸಿಯನ್ನು ಪಡೆದಿರಬೇಕಾಗುತ್ತದೆ.
* ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ತೈಲ ಮಾರ್ಕೆಟಿಂಗ್ ಕಂಪನಿಯಿಂದ (ಐಒಸಿಎಲ್ ಅಥವಾ ಎಚ್‌ಪಿಎಸಿಲ್) ಉದ್ಯೋಗದಲ್ಲಿರಬಾರದು.
* ಮರುಪಾವತಿಸಲಾಗದ ಅರ್ಜಿ ಶುಲ್ಕ 10,000 ರೂಪಾಯಿ ಆಗಿದೆ.
* ಹೆಚ್ಚುವರಿಯಾಗಿ, 15 ಲಕ್ಷ ರೂಪಾಯಿ ಫಂಡ್ ಕಡ್ಡಾಯವಾಗಿದೆ. ಈ ಹಣವನ್ನು ಏಜೆನ್ಸಿ ಕಚೇರಿಗಳ ಸ್ಥಾಪನೆಗೆ ವಿನಿಯೋಗಿಸಲಾಗುತ್ತದೆ.
ಯಾವ ಕಂಪನಿಗಳು ವಿತರಕತ್ವವನ್ನು ಒದಗಿಸುತ್ತವೆ?
ಸರ್ಕಾರಿ ಘಟಕಗಳ ಮೂಲಕ ವಿತರಕ ಅವಕಾಶಗಳು ಲಭ್ಯವಿವೆ: ಭಾರತ್ ಗ್ಯಾಸ್, ಇಂಡೇನ್ ಗ್ಯಾಸ್ ಮತ್ತು ಎಚ್‌ಪಿ ಗ್ಯಾಸ್ ವಿತರಕ ಘಟಕಗಳಾಗಿದೆ. ಈ ಕಂಪನಿಗಳು ಪತ್ರಿಕೆಗಳು ಮತ್ತು ವಿವಿಧ ಮಾಧ್ಯಮ ಚಾನೆಲ್‌ಗಳ ಮೂಲಕ ಅಂತಹ ಅವಕಾಶಗಳನ್ನು ಪ್ರಕಟಿಸುತ್ತದೆ. ಈ ಕಂಪನಿಗಳು ಅಧಿಕೃತ ಅಧಿಸೂಚನೆಗಳನ್ನು ನೀಡಿದಾಗ ಮಾತ್ರ ಅಪ್ಲಿಕೇಶನ್ ಪ್ರಕ್ರಿಯೆಯು ಮಾನ್ಯವಾಗಿರುತ್ತದೆ.
ಪರವಾನಗಿ ಪಡೆಯುವುದು ಹೇಗೆ?
ಮೊದಲಿಗೆ, ಅಧಿಕೃತ ವೆಬ್‌ಸೈಟ್ https://www.lpgvitarakchayan.in/ ನಲ್ಲಿ ನೋಂದಾಯಿಸಿ. ಅದಾದ ಬಳಿಕ ನೀವು ಪ್ರೋಫೈಲ್ ಮಾಡಬೇಕು. ಕಂಪನಿಗಳು ಅರ್ಜಿದಾರರನ್ನು ಸಂದರ್ಶಿಸುವ ಸಾಧ್ಯತೆಯಿದೆ. ಸಂದರ್ಶನ ಪ್ರಕ್ರಿಯೆಯ ನಂತರ, ಅರ್ಜಿದಾರರು ಒದಗಿಸಿದ ವಿವರಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ.
ಸಮಗ್ರ ತನಿಖೆಯ ನಂತರ, ಪತ್ರವನ್ನು ನೀಡಲಾಗುತ್ತದೆ. ಅಭ್ಯರ್ಥಿಯು ವಿತರಕರಿಗಾಗಿ ಆಯ್ಕೆಮಾಡಿದ ಕಂಪನಿಗೆ ಭದ್ರತಾ ಠೇವಣಿ ಸಲ್ಲಿಸಬೇಕಾಗುತ್ತದೆ. ಒಮ್ಮೆ ನೀವು ಅರ್ಹತಾ ಮಾನದಂಡಕ್ಕೆ ಅನುಸಾರವಾಗಿ ಇದ್ದೀರಿ ಎಂದು ತಿಳಿದರೆ, ಗ್ಯಾಸ್ ಏಜೆನ್ಸಿಯನ್ನು ನಿಮ್ಮ ಹೆಸರಿನಲ್ಲಿ ನೋಂದಾಯಿಸಲಾಗುತ್ತದೆ.


Click it and Unblock the Notifications