ಡಿಜಿಟಲೀಕರಣ ಮತ್ತು ಸಾರ್ವಜನಿಕ ಯೋಜನೆಗಳಲ್ಲಿನ ಭ್ರಷ್ಟಾಚಾರ ನಿರ್ಮೂಲನೆಯಲ್ಲಿ ಸರ್ಕಾರ ದೊಡ್ಡ ಸಾಧನೆಯನ್ನು ಮಾಡಿದೆ. ಪ್ರಧಾನ ಮಂತ್ರಿ ಜನ್-ಧನ್ ಯೋಜನೆ ಮೂಲಕ ಫಲಾನುಭವಿಗಳಿಗೆ ಇದುವರೆಗೆ ಸುಮಾರು 25 ಲಕ್ಷ ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ ಅಕ್ಟೋಬರ್ 16 ರಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ 75 ಡಿಜಿಟಲ್ ಬ್ಯಾಂಕಿಂಗ್ ಘಟಕಗಳನ್ನು ಉದ್ಘಾಟಿಸಿದರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ ಕಿಶನ್ ರೆಡ್ಡಿ, "50 ಕೋಟಿ ಜನ್ ಧನ್ ಖಾತೆಗಳಲ್ಲಿ ಅರ್ಧದಷ್ಟು ಮಹಿಳೆಯರಿಗೆ ಸೇರಿದ ಖಾತೆಯಾಗಿದೆ," ಎಂದು ತಿಳಿಸಿದ್ದಾರೆ.
"ನಿಮಗೆಲ್ಲರಿಗೂ ಗೊತ್ತು, ಸರ್ಕಾರ ಜನ್‌ಧನ್ ಖಾತೆಗಳನ್ನು ತೆರೆದಾಗ ನಮ್ಮ ದೇಶದಲ್ಲಿ ಇದರ ಅಗತ್ಯವಿದೆಯೇ ಎಂಬ ಪ್ರಶ್ನೆ ಇತ್ತು. ಇಂದು ನಾವು ಜನ್ ಧನ್ ಖಾತೆಗಳ ಮೂಲಕ ಬಡವರಿಗೆ 25 ಲಕ್ಷ ಕೋಟಿ ರೂಪಾಯಿಗಳನ್ನು ಕಲ್ಯಾಣ ಯೋಜನೆಗಳ ಮೇಲೆ ವಿತರಿಸಿದ್ದೇವೆ. ಇದು ಸಾಧನೆಯಾಗಿದೆ," ಎಂದು ಹೇಳಿದ್ದಾರೆ.

ಜನಧನ ಬ್ಯಾಂಕ್ ಖಾತೆಗೆ ಜನರಿಂದ 1.75 ಲಕ್ಷ ಕೋಟಿ ರೂಪಾಯಿ ಜಮೆ
ಇಂದಿನವರೆಗೆ ಜನ್ ಧನ್ ಬ್ಯಾಂಕ್ ಖಾತೆಗಳಲ್ಲಿ ಬಡವರು 1.75 ಲಕ್ಷ ಕೋಟಿ ರೂಪಾಯಿಗಳನ್ನು ಜಮಾ ಮಾಡಿದ್ದಾರೆ. ಕೆಲವು ರಾಜ್ಯಗಳಲ್ಲಿ ಸುಳ್ಳು ಗುರುತನ್ನು ಬಳಸಿಕೊಂಡು ವಂಚಕರು ಬಡವರ ಕಲ್ಯಾಣ ಕಾರ್ಯಕ್ರಮಗಳು, ಪಿಂಚಣಿಗಳು ಮತ್ತು ಸಬ್ಸಿಡಿಗಳನ್ನು ಕದ್ದ ನಿದರ್ಶನಗಳು ಕೂಡಾ ಇದೆ ಎಂದು ವಿವರಿಸಿದರು.
ನೇರ ಲಾಭ ವರ್ಗಾವಣೆ (ಡಿಬಿಟಿ) ಮತ್ತು ಅದೇ ಸಂಖ್ಯೆಯ ಸುಳ್ಳು ಎಲ್‌ಪಿಜಿ ಸಿಲಿಂಡರ್ ಖಾತೆಗಳ ಅನುಷ್ಠಾನದ ನಂತರ ನಾಲ್ಕು ಕೋಟಿ ನಕಲಿ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದೆ. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಇದ್ದ ಸಂದರ್ಭದಲ್ಲಿ ಕೇಂದ್ರದ 100 ರೂಪಾಯಿ ನೀಡುವಾಗ ಮಧ್ಯವರ್ತಿಗಳ ಜೇಬಿಗೆ ಹಣ ಹೋಗಿ ಜನರಿಗೆ ಕೇವಲ 15 ರೂ.ಗಳು ಮಾತ್ರ ಜನರಿಗೆ ತಲುಪುತ್ತಿದೆ ಎಂದು ಪ್ರತಿಪಾದಿಸಿದ ಕೇಂದ್ರ ಸಚಿವ ಜಿ ಕಿಶನ್ ರೆಡ್ಡಿ ಇಂದು ಕೇಂದ್ರವು 100 ರೂ.ಗಳನ್ನು ಕಳುಹಿಸಿದರೆ ಒಂದು ಪೈಸೆಯು ಕೂಡಾ ಮಿಸ್ ಆಗಲ್ಲ. ಎಲ್ಲ ಹಣ ಬಡವರಿಗೆ ತಲುಪುತ್ತಿದೆ ಎಂದು ಹೇಳಿದರು.
ಶಿಕ್ಷಣ ವೇತನದ ಬಗ್ಗೆ ಮಾಹಿತಿ
300 ಕೋಟಿ ಶಿಷ್ಯವೇತನವನ್ನು ವರ್ಗಾಯಿಸಲು ಆ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಯ ಮಾಹಿತಿಯನ್ನು ತೆಲಂಗಾಣ ಸರ್ಕಾರದ ಬಳಿ ನಾವು ಕೇಳುತ್ತಿದ್ದೇನೆ. ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಕೇಂದ್ರವು ಸಿದ್ಧವಾಗಿದೆ ಎಂದು ತಿಳಿಸಿದರು.


Click it and Unblock the Notifications