ಸರ್ಕಾರಗಳು ವಿವಿಧ ಸಮುದಾಯಗಳಿಗೆ ವಿವಿಧ ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತವೆ. ಬಹಳಷ್ಟು ಯೋಜನೆಗಳ ಬಗ್ಗೆ ಜನಸಾಮಾನ್ಯರಿಗೆ ಅರಿವು ಇರುವುದು ಕಡಿಮೆಯೇ. ಕೇಂದ್ರ ಸರ್ಕಾರ ಕೂಡ ಬಹಳಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲಿ ಪಿಎಂ ಸ್ವನಿಧಿ ಯೋಜನೆಯೂ ಒಂದು.
ಕೋವಿಡ್ ಸಂದರ್ಭದಲ್ಲಿ ದೇಶಕ್ಕೆ ದೇಶವೇ ವಿವಿಧ ಸಮಸ್ಯೆಗಳಿಂದ ನಲುಗಿ ಹೋಗಿತ್ತು. ಅದರಲ್ಲೂ ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು ತತ್ತರಿಸಿಹೋದರು. ಬೀದಿಬದಿ ವ್ಯಾಪಾರಿಗಳು ಬೀದಿಗೆ ಬೀಳುವಂತಾಯಿತು. ಇಂಥ ಸಮುದಾಯದವರು ಮತ್ತೆ ಬದುಕು ಕಟ್ಟಿಕೊಳ್ಳಲು ಸರ್ಕಾರ ಸಾಲ ಸೇರಿದಂತೆ ಕೆಲ ಯೋಜನೆಗಳನ್ನು ಜಾರಿಗೆ ತಂದಿತು. ಪಿಎಂ ಸ್ವನಿಧಿ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ಒದಗಿಸಲಾಗುತ್ತದೆ.
ಇದು ಅಡಮಾನ ಅಗತ್ಯ ಇಲ್ಲದ ಸಾಲವಾಗಿದ್ದು, ಬೀದಿ ಬದಿ ವ್ಯಾಪಾರಿಗಳು 50 ಸಾವಿರ ರೂವರೆಗೂ ಸಾಲ ಪಡೆಯಬಹುದು. 2020ರಲ್ಲಿ ಸ್ವನಿಧಿ ಯೋಜನೆ ಮೊದಲು ಆರಂಭವಾಗಿದ್ದು. ಮೊದಲಿಗೆ ಪ್ರತಿಯೊಬ್ಬ ವ್ಯಾಪಾರಿಗೂ 10 ಸಾವಿರ ರೂ ಸಾಲ ಎಂದು ಘೋಷಿಸಲಾಯಿತು. ಒಟ್ಟು 20 ಲಕ್ಷ ಮಂದಿ ಈ ಸಾಲ ಸೌಲಭ್ಯ ಬಳಸಿಕೊಂಡರು.

ನಂತರ ಹಂತ ಹಂತವಾಗಿ ಷರತ್ತುಗಳ ಆಧಾರದ ಮೇಲೆ 50 ಸಾವಿರ ರೂ ವರೆಗೆ ಸಾಲವನ್ನು ಸರ್ಕಾರ ಕೊಡುತ್ತಿದೆ.
50 ಸಾವಿರ ರೂ ಸಾಲ ಹೇಗೆ ಪಡೆಯುವುದು?
ಪಿಎಂ ಸ್ವನಿಧಿ ಸ್ಕೀಮ್‌ನಲ್ಲಿ ಮೊದಲ ಬಾರಿಗೆ ಸಾಲ ಪಡೆಯುವಾಗ ಸಿಗುವುದು 10 ಸಾವಿರ ರೂ ಮಾತ್ರವೇ. ಒಂದು ವರ್ಷದವರೆಗೆ ಈ ಸಾಲ ಮರುಪಾವತಿಗೆ ಅವಕಾಶ ಇರುತ್ತದೆ. ಈಗ ಆರಂಭಿಕ ಸಾಲದ ಮೊತ್ತವನ್ನು 10 ಸಾವಿರದಿಂದ 20 ಸಾವಿರ ರೂಗೆ ಹೆಚ್ಚಿಸಲು ನಿರ್ಧರಿಸಲಾಗಿದೆ.
ಈಗ ಮೊದಲು ಪಡೆದ ಸಾಲವನ್ನು ಒಂದು ವರ್ಷದಲ್ಲಿ ತೀರಿಸಿದವರು ಮತ್ತೊಮ್ಮೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಆಗ ಅವರಿಗೆ 20 ಸಾವಿರ ರೂ ಸಾಲ ಪಡೆಯುವ ಅವಕಾಶ ಇರುತ್ತದೆ. ಈ ಎರಡನೇ ಸಾಲವನ್ನೂ ತೀರಿಸಿ ಮೂರನೇ ವರ್ಷದಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಿದರೆ 50 ಸಾವಿರ ರೂ ಸಾಲ ಸಿಗುತ್ತದೆ. ಈ ಸಾಲಕ್ಕೆ ವಾರ್ಷಿಕ ಬಡ್ಡಿ ದರ ಶೇ. 7 ಮಾತ್ರ ಇರುತ್ತದೆ. ನೀವು ತಿಂಗಳಿಗೆ ಆನ್‌ಲೈನ್‌ನಲ್ಲೇ ಸಾಲದ ಕಂತು ಕಟ್ಟಿದರೆ ಬಡ್ಡಿಯಲ್ಲೂ ಸಬ್ಸಿಡಿ ಸಿಗುತ್ತದೆ. ವಿವಿಧ ಸಬ್ಸಿಡಿ, ರಿಬೇಟ್ ಇತ್ಯಾದಿ ಗಣಿಸಿದರೆ ಸ್ವನಿಧಿ ಸಾಲ ಬಹುತೇಕ ಬಡ್ಡಿ ರಹಿತ ಸಾಲವಾಗುತ್ತದೆ.

ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?
ಬೀದಿ ಬದಿ ವ್ಯಾಪಾರಿ ನೀವಾಗಿದ್ದರೆ ಸ್ವನಿಧಿ ಸ್ಕೀಮ್‌ಗೆ ಅರ್ಜಿ ಸಲ್ಲಿಸಲು ಮೊದಲು ಎಸ್‌ಬಿಐ, ಕೆನರಾ ಬ್ಯಾಂಕ್ ಇತ್ಯಾದಿ ನಿಮ್ಮ ಖಾತೆ ಇರುವ ಯಾವುದಾದರೂ ಸರ್ಕಾರಿ ಬ್ಯಾಂಕ್‌ಗೆ ಹೋಗಬೇಕು. ಅಲ್ಲಿ ಎಸ್ ಲೋನ್ ಅರ್ಜಿ ಸಿಗುತ್ತದೆ. ಅದನ್ನು ಭರ್ತಿ ಮಾಡಬೇಕು. ಆಧಾರ್ ಕಾರ್ಡ್‌ನ ಒಂದು ಪ್ರತಿಯನ್ನು ಅರ್ಜಿಯೊಂದಿಗೆ ಲಗತ್ತಿಸಿ ಸಲ್ಲಿಸಬೇಕು.
ನಿಮ್ಮ ಸಾಲದ ಅರ್ಜಿಗೆ ಅನುಮೋದನೆ ಸಿಕ್ಕ ಬಳಿಕ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications